Asianet Suvarna News Asianet Suvarna News

ಈ ಐದು ರಹಸ್ಯಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ; ನಿಮ್ಮ ನಗುವೇ ಮಾಯ ಆಗುತ್ತೆ!

ಎಲ್ಲರ ಭಾವನೆಗಳು, ಆಲೋಚನಾ ಶಕ್ತಿ ಬೇರೆ  ಬೇರೆಯಾಗಿರುತ್ತವೆ. ಹಾಗಾಗಿ ನಮ್ಮ ಭಾವನೆಗಳನ್ನು ಅಥವಾ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದಿರಬೇಕು.

Don t share these five secrets mrq
Author
First Published May 19, 2024, 6:21 PM IST

ಪ್ರತಿಯೊಬ್ಬ ವ್ಯಕ್ತಿಗೆ ಅವರದ್ದೇ ಆದ ಖಾಸಗಿ ಜೀವನ ಇರುತ್ತದೆ. ಖಾಸಗಿ ಮತ್ತು ವೃತ್ತಿ ಬದುಕಿನ ಜೀವನವನ್ನು ಮಿಕ್ಸ್ ಮಾಡಬಾರದು ಎಂದು ಹೇಳುತ್ತಾರೆ. ಇದರೊಂದಿಗೆ ನಮ್ಮ ಜೀವನದ ವೈಯಕ್ತಿಯ ವಿಷಯಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಬಾರದು. ನೀವು ಓಪಮ್ ಮೈಂಡ್ ತರಹದ ವ್ಯಕ್ತಿಯಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. 

ಮಾತನಾಡುವಾಗ ನಾವು ಏನು ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ಮಾತನಾಡುವ ಉತ್ಸಾಹದಲ್ಲಿ ಏನೇನು ಹೇಳಬಾರದರು. ನಿಮ್ಮ ಎದುರು ಇರೋ ವ್ಯಕ್ತಿ ಯಾರು? ಅತನಿಗೂ ಮತ್ತು ನಿಮಗೂ ಏನು ಸಂಬಂಧ? ಆತನ ಜೊತೆ ಯಾವ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೀರಿ ಎಂಬಿತ್ಯಾದಿ ಅಂಶಗಳ ಮೇಲೆ ನಿಮ್ಮ ಗಮನಕ್ಕೆ ಇರಬೇಕಾಗುತ್ತದೆ.
 
ಎಲ್ಲರ ಭಾವನೆಗಳು, ಆಲೋಚನಾ ಶಕ್ತಿ ಬೇರೆ  ಬೇರೆಯಾಗಿರುತ್ತವೆ. ಹಾಗಾಗಿ ನಮ್ಮ ಭಾವನೆಗಳನ್ನು ಅಥವಾ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಕೆಲವು ಸನ್ನಿವೇಶಗಳಲ್ಲಿ ನಮ್ಮ ಭಾವನೆಗಳನ್ನು ಬೇರೆಯವರು  ತಮ್ಮ ಲಾಭಕ್ಕೆ ಅಥವಾ ನಮ್ಮನ್ನು ತುಳಿಯಲು ಬಳಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೆಳಗಿನ ಈ ಐದು ವಿಷಯಗಳನ್ನು ಯಾರೊಂದಿಗೆ ಹಂಚಿಕೊಳ್ಳಬಾರದು. 

1.ಭವಿಷ್ಯದ  ಯೋಜನೆಗಳು

ನಮ್ಮ ಮುಂದಿನ ಯೋಜನೆಗಳನ್ನು ಯಾರೊಂದಿಗೂ ಶೇರ್ ಮಾಡಿಕೊಳ್ಳಬಾರದು. ಭವಿಷ್ಯದ ಯೋಜನೆಗಳು ಅಂದ್ರೆ  ಮನೆ ಖರೀದಿ, ಆರ್ಥಿಕವಾಗಿ ಸಬಲರಾಗಲು ನೀವು ಅನುಸರಿಸುತ್ತಿರುವ ತಂತ್ರಗಳು ನಿಮ್ಮಲ್ಲಿಯೇ  ರಹಸ್ಯವಾಗಿರಬೇಕು. ನೀವು ಯಶಸ್ಸು ಆದ ನಂತರ ಸಂತೋಷವನ್ನು ವಿನಿಮಯ ಮಾಡಿಕೊಳ್ಳಬಹುದು. ನೀವು  ಮೊದಲೇ ನಿಮ್ಮ ಗುರಿ ಅಥವಾ ಯೋಜನೆ ಘೋಷಿಸಿಕೊಂಡು ಅದನ್ನು ತಲುಪುವಲ್ಲಿ ವಿಫಲರಾದ್ರೆ ನೀವು ಅಪಹಾಸ್ಯಕ್ಕೆ ಒಳಗಾಗಬೇಕಾಗುತ್ತದೆ.

ಪಬ್ಲಿಕ್ ಸರ್ವೀಸ್ ಎಕ್ಸಾಂ ಪಾಸ್ ಮಾಡಿದ ವಿಶೇಷ ಚೇತನ, 25 ವರ್ಷದ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಮಾಲಾ!

2.ನಿಮ್ಮ ದೌರ್ಬಲ್ಯಗಳು 

ಒಬ್ಬ ವ್ಯಕ್ತಿಯಲ್ಲಿ ಸಕರಾತ್ಮಕ ಮತ್ತು ನಕರಾತ್ಮಕ ಗುಣಗಳಿರುತ್ತವೆ. ನಿಮ್ಮಲ್ಲಿರುವ  ದೌರ್ಬಲ್ಯಗಳನ್ನು ನೀವು ಶೇರ್ ಮಾಡಿಕೊಂಡ್ರೆ ಅದನ್ನು ನಿಮ್ಮ ವಿರುದ್ಧವೇ ಬಳಸೋ ಸಾಧ್ಯತೆ ಇರುತ್ತದೆ. ನಿಮ್ಮ ದೌರ್ಬಲ್ಯಗಳನ್ನು ಇತರರಿಗೆ ತಿಳಿಸಿ ನಿಮ್ಮನ್ನು ಅವಮಾನಿಸುವ ಸಾಧ್ಯತೆ ಇರುತ್ತದೆ.

3.ವೈಫಲ್ಯಗಳನ್ನು ರಹಸ್ಯವಾಗಿರಿಸಿಕಕೊಳ್ಳಿ 

ನಿಮ್ಮ ಜೀವನದಲ್ಲಿ ಅನುಭವಿಸಿದ ಸೋಲು ಅಥವಾ ವೈಫಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಈ  ವಿಷಯ ತಿಳಿದರೆ ಪದೇ ಪದೇ ನಿಮ್ಮ ವೈಫಲ್ಯಗಳನ್ನು ಎಲ್ಲರ ಮುಂದೆ ಹೇಳಿ ಗೇಲಿ ಮಾಡುವ ಸಾಧ್ಯತೆ ಇರುತ್ತದೆ. ಕೆಲವು ಸನ್ನಿವೇಶಗಳಲ್ಲಿ ವೈಫಲ್ಯಗಳು ನಿಮ್ಮ ದೌರ್ಲಬ್ಯಗಳಾಗಿರುತ್ತವೆ.

4.ಕುಟುಂಬದ ಖಾಸಗಿ ವಿಷಯಗಳು 

ಎಲ್ಲಾ ಸ್ನೇಹಿತರು, ಸಹೋದ್ಯೋಗಿಗಳ ಜೊತೆಯಲ್ಲಿ ಕುಟುಂಬದ ಖಾಸಗಿ ವಿಷಯಗಳನ್ನು ಜೊತೆ ಹಂಚಿಕೊಳ್ಳಬಾರದು. ಭವಿಷ್ಯದಲ್ಲಿ ಈ ವಿಷಯಗಳನ್ನೇ  ಬಳಸಿಕೊಂಡ  ಮೂರನೇ ವ್ಯಕ್ತಿ ನಿಮ್ಮ ಕುಟುಂಬದಲ್ಲಿ ಪ್ರವೇಶ ಮಾಡುವ ಸಾಧ್ಯತೆ ಇರುತ್ತದೆ. ಕುಟುಂಬದ ವಿಷಯಗಳು ಕುಟುಂಬಸ್ಥರ ನಡುವೆಯೇ ಇರಬೇಕು.

ಸಂಬಂಧ ಚೆನ್ನಾಗಿರ್ಬೇಕು ಅಂದ್ರೆ ಬೆಡ್‌ರೂಂನಲ್ಲಿ ಈ ತಪ್ಪು ಖಂಡಿತಾ ಮಾಡ್ಬೇಡಿ

5.ಹಣಕಾಸಿನ ವಿಷಯಗಳು 

ನಮ್ಮ ಹಣಕಾಸಿನ ವಿಷಯಗಳನ್ನು ಗೌಪ್ಯವಾಗಿರಿಸಿಕೊಳ್ಳಬೇಕು. ಇಂತಹ ವಿಷಯಗಳು ರಹಸ್ಯವಾಗಿ ಉಳಿಯದಿದ್ರೆ ನಿಮ್ಮ ಜೀವಕ್ಕೂ ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಷ್ಟೇ ಆಪ್ತರಿದ್ರೂ ಹಣಕಾಸಿನ ವಿಷಯ ಸಂಬಂಧಿಸಿದ ಕೋಡ್, ಪಿನ್, ಪಾಸ್‌ವರ್ಡ್‌ ಸಹ ವಿನಿಮಯ ಮಾಡಿಕೊಳ್ಳೋದು ತಪ್ಪು.

Latest Videos
Follow Us:
Download App:
  • android
  • ios