ಈ ದಂಪತಿ ಜೀವನದಲ್ಲಿ ಆಲ್ಕೋಹಾಲ್ ವಿಲನ್, ಸಂಸಾರವೇ ನುಚ್ಚು ನೂರು!
ಮದ್ಯಪಾನಿಗಳು ಎಷ್ಟೇ ಸಮರ್ಥನೆ ನೀಡಿದ್ರೂ ಮದ್ಯ ಆರೋಗ್ಯಕ್ಕೆ ಹಾನಿಕರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದ್ರಲ್ಲಿ ಇತಿ – ಮಿತಿ ಸಾಧ್ಯವಿಲ್ಲ. ಪೆಗ್ ಒಳಗೆ ಹೋಗ್ತಿದ್ದಂತೆ ವಿಚಿತ್ರವಾಗಿ ಆಡುವ ಜನರು ತಮ್ಮ ಸುಖ ಸಂಸಾರವನ್ನೇ ಕಳೆದುಕೊಳ್ತಾರೆ.
ದಂಪತಿ ಅಂದ್ರೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರು ಒಂದೇ ಹಾದಿಯಲ್ಲಿ ನಡೆಯಬೇಕು. ಒಬ್ಬರು ಸಂತುಲನ ತಪ್ಪಿದ್ರೂ ಇನ್ನೊಬ್ಬರು ಎಡವಿ ಬೀಳ್ತಾರೆ. ಒಬ್ಬ ಸಂಗಾತಿಯ ಕೆಟ್ಟ ಅಭ್ಯಾಸ ಇಬ್ಬರ ಜೀವನವನ್ನು ಹಾಳು ಮಾಡುತ್ತದೆ. ಆಲ್ಕೋಹಾಲ್ ಇದಕ್ಕೆ ಉತ್ತಮ ನಿದರ್ಶನ. ಮದ್ಯಪಾನದಿಂದ ಅನೇಕ ಸಂಸಾರ ಹಾಳಾಗಿದೆ.
ಮದ್ಯಪಾನ (Alcohol) ವ್ಯಕ್ತಿಯ ಆರೋಗ್ಯ (Health) ವನ್ನು ಮಾತ್ರ ಹಾಳು ಮಾಡೋದಿಲ್ಲ ಆತನ ಸಂಸಾರವನ್ನೇ ನಾಶ ಮಾಡುತ್ತದೆ. ಮಾನಸಿಕ ಹಾಗೂ ದೈಹಿಕ ಸಂತುಲನ ಕಳೆದುಕೊಳ್ಳುವ ಜನರು ತಾವು ದಾರಿ ತಪ್ಪುವುದಲ್ಲದೆ ಇಡೀ ಕುಟುಂಬ ಕಷ್ಟದಲ್ಲಿ ಕೈತೊಳೆಯುಂತೆ ಮಾಡುತ್ತಾರೆ. ಮಹಿಳೆ ಮತ್ತು ಪುರುಷ ಇಬ್ಬರಲ್ಲಿ ಒಬ್ಬರು ಮದ್ಯಪಾನ ಚಟಕ್ಕೆ ಬಿದ್ರೂ ಕಥೆ ಮುಗಿದಂತೆ. ಅನೇಕ ಸಾವು, ವಿಚ್ಛೇದನಕ್ಕೆ ಈ ಆಲ್ಕೋಹಾಲ್ ಕಾರಣವಾಗಿದೆ. ಕೆಲವರು ಆಲ್ಕೋಹಾಲ್ ನಿಂದ ತಮ್ಮ ಜೀವನ ಹೇಗೆ ಹಾಳಾಯ್ತು ಎಂಬುದನ್ನು ಹೇಳಿದ್ದಾರೆ.
ಡಿವೋರ್ಸ್ ಆದ್ಮೇಲೆ ಹಳೆ ಸಂಗಾತಿನೇ ಚೆನ್ನಾಗಿದ್ದರು ಅಂತ ಅನಿಸೋಕೆ ಶುರು ಆಗಿದ್ಯಾ?
ಮದ್ಯಪಾನ ವಿಚ್ಛೇದನ (Divorce) ಕ್ಕೆ ಕಾರಣವಾಯ್ತು : ಈ ದಂಪತಿ ಬೇರೆಯಾಗಲು ಮದ್ಯಪಾನ ಕಾರಣವಾಗಿದೆ. ಜೀವನದಲ್ಲಾದ ಎಲ್ಲ ಏರಿಳಿತಕ್ಕೆ ಗಂಡನ ಮದ್ಯಪಾನ ಚಟ ಕಾರಣವೆಂದು ಈ ಮಹಿಳೆ ಹೇಳ್ತಾಳೆ. ಆಲ್ಕೋಹಾಲ್ ಸೇವನೆ ಮಾಡಿದ ನಂತ್ರ ಭಿನ್ನ ವ್ಯಕ್ತಿಯಾಗ್ತಿದ್ದ ಪತಿ, ಪತ್ನಿ ಮೇಲೆ ಹಲ್ಲೆ ನಡೆಸ್ತಿದ್ದ. ಆತನನ್ನು ಎಂದೂ ಕ್ಷಮಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಪತ್ನಿ ವಿಚ್ಛೇದನದ ನಿರ್ಧಾರ ತೆಗೆದುಕೊಂಡಳು. ವಿಚ್ಛೇದನದ ಸಂದರ್ಭದಲ್ಲಿ ಪತಿಗೆ ಬುದ್ಧಿ ಬಂದಿತ್ತು. ಈಗ ಆತ ಮದ್ಯಪಾನ ಬಿಟ್ಟಿದ್ದಾನೆ ಎನ್ನುವ ಮಹಿಳೆ, ನಾನಾಗ್ಲೇ ಮುಂದಿನ ಜೀವನ ಶುರು ಮಾಡಿದ್ದೇನೆ. ಹಾಗಾಗಿ ಆತನ ಬದಲಾವಣೆ ನನಗೆ ಮಹತ್ವ ನೀಡೋದಿಲ್ಲ ಎನ್ನುತ್ತಾಳೆ.
ಸಾವಿಗೆ ಕಾರಣವಾಯ್ತು ಮದ್ಯಪಾನ : ಈ ಮಹಿಳೆ ಮದ್ಯಪಾನಿ ಗಂಡನನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದಾಳೆ. ಆರಂಭದಲ್ಲಿ ಚಿಕ್ಕದಾಗಿ ಶುರುವಾದ ಕುಡಿತ ಮುಂದೆ ವ್ಯಸನವಾಯ್ತು. ಪ್ರತಿ ದಿನ ಮಿತಿಮೀರಿ ಕುಡಿಯುತ್ತಿದ್ದ ಪತಿ ಸಂಪೂರ್ಣ ದೂರವಾಗಿದ್ದ. ಮನೆಯಲ್ಲಿರುವ ಆಭರಣ, ಹಣವೆಲ್ಲ ಖಾಲಿಯಾಯ್ತು. ಕುಡಿತದ ಚಟಕ್ಕೆ ವಾರದಲ್ಲಿ ಒಮ್ಮೆ ಪತಿ ಆಸ್ಪತ್ರೆ ಸೇರುತ್ತಿದ್ದ ಕಾರಣ ಎರಡು ಮಕ್ಕಳನ್ನು ನೋಡಿಕೊಳ್ಳಲು ಪತ್ನಿ ಕೆಲಸಕ್ಕೆ ಸೇರಬೇಕಾಯ್ತು. ಕುಡಿತ ಬಿಡಲಾಗದೆ ಪತಿ ನಲವತ್ತನೇ ವಯಸ್ಸಿನಲ್ಲೇ ಸಾವನ್ನಪಿದ.
ಪತ್ನಿ ಕುಡಿತದ ಚಟಕ್ಕೆ ಎಲ್ಲ ಖಾಲಿಯಾಯ್ತು : ನಾವು ಮೊದಲೇ ಹೇಳಿದಂತೆ ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ಮದ್ಯವ್ಯಸನಿಗಳಿದ್ದಾರೆ. ಈತನ ಪತ್ನಿ ಕೂಡ ಅದ್ರಲ್ಲಿ ಒಬ್ಬಳು. ಇಡೀ ದಿನ ಮದ್ಯಪಾನ ಮಾಡ್ತಿದ್ದ ಆಕೆ ಎಲ್ಲ ಹಣವನ್ನು ಖಾಲಿ ಮಾಡಿದ್ದಳು. ತಜ್ಞರ ಬಳಿ ಚಿಕಿತ್ಸೆಗೆ ಬರ್ತಿರಲಿಲ್ಲ. ಮಕ್ಕಳ ಮೇಲೆ ಇದು ಕೆಟ್ಟ ಪರಿಣಾಮ ಬೀರಲು ಶುರುವಾಗಿತ್ತು. ಇಡೀ ದಿನ ಮನೆಯಲ್ಲಿ ಮದ್ಯಪಾನ ಮಾಡ್ತಿದ್ದ ಅಮ್ಮನನ್ನು ನೋಡಿದ ಮಗ ಒಂದು ದಿನ ತಾನೂ ಮದ್ಯದ ಬಾಟಲಿ ಹಿಡಿದು ಕುಳಿತಿದ್ದ. ಇದನ್ನು ನೋಡಿ ದಂಗಾದ ಮಹಿಳೆ ಮಗನ ಉತ್ತಮ ಭವಿಷ್ಯಕ್ಕೆ ಪಣತೊಟ್ಟಳು. ಸಂಪೂರ್ಣ ವ್ಯಸನಿಯಾಗಿದ್ದ ಮಹಿಳೆ ಐದು ವರ್ಷದಿಂದ ಒಂದು ಸಿಪ್ ಆಲ್ಕೋಹಾಲ್ ಸೇವಿಸಿಲ್ಲ ಎನ್ನುತ್ತಾನೆ ಈತ.
30 ವರ್ಷಕ್ಕೆ ಮಕ್ಳು ಮಾಡ್ಕೊಳ್ಳೋ ಪ್ಲ್ಯಾನ್ ಹಾಕಿದ್ದ ನಟಿ ತಮನ್ನಾ ಮದ್ವೆ ಫಿಕ್ಸ್? ವರನಾರು ಗೊತ್ತಾ?
ಕೊನೆಗೂ ಆಲ್ಕೋಹಾಲ್ ಬಿಟ್ಟ ಪತ್ನಿ : ಮದ್ಯವ್ಯಸನ ಬಿಟ್ಟರೆ ಜೀವನ ಮತ್ತೆ ಸುಧಾರಿಸುತ್ತದೆ. ಆದ್ರೆ ಈ ಸುಧಾರಣೆಗೆ ಜನರು ಸಿದ್ಧರಿರಬೇಕು. ಈ ಮಹಿಳೆ ಮದ್ಯ ಬಿಡಲು ಸಾಕಷ್ಟು ಥೆರಪಿ ತೆಗೆದುಕೊಂಡು ಯಶಸ್ವಿಯಾಗಿದ್ದಾಳೆ. ಮೂರು ವರ್ಷ ಸಾಕಷ್ಟು ಕಷ್ಟ ಅನುಭವಿಸಿದ್ದ ದಂಪತಿ ಮತ್ತೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಅವರ ಜೀವನದಲ್ಲಿ ದುಃಖಕ್ಕೆ ಕಾರಣವಾಗಿದ್ದು ಆಲ್ಕೋಹಾಲ್ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.