ಎಲ್ಲರಿಗೂ ರಾಧಿಕಾ ಸೊಂಟವೇ ಏಕೆ ಬೇಕು? ಮುಖೇಶ್ ನಂತ್ರ ಆಕಾಶ್ ವರ್ತನೆ ಟ್ರೋಲ್

ಮುಖೇಶ್ ಅಂಬಾನಿ ಕೊನೆ ಸೊಸೆ ರಾಧಿಕಾ ಮೆರ್ಚೆಂಟ್ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರ್ತಾರೆ. ಈಗ ಆಕಾಶ್ ಅಂಬಾನಿ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ಅಂಬಾನಿ ಕುಟುಂಬದ ಪುರುಷರ ಕೆಲಸ ನೆಟ್ಟಿಗರಿದೆ ಇಷ್ಟವಾಗ್ತಿಲ್ಲ.  
 

Akash Ambani trolled by putting his hand on Radhika waist roo

ಅಂಬಾನಿ ಕುಟುಂಬ (Ambani family ) ದ ಕೊನೆ ಸೊಸೆ ರಾಧಿಕಾ ಮರ್ಚೆಂಟ್ (Radhika Merchant) ಮದುವೆ ಆದ್ಮೇಲೆ ಎಲ್ಲ ಕಡೆ ಟ್ರೋಲ್ ಆಗ್ತಿದ್ದಾರೆ. ಅದಕ್ಕೆ ಕಾರಣ ರಾಧಿಕಾ ಅಲ್ಲ. ಅಂಬಾನಿ ಫ್ಯಾಮಿಲಿ ಪುರುಷರು. ಮುಖೇಶ್ ಅಂಬಾನಿ (Mukesh Ambani) ನಂತ್ರ ಈಗ ಆಕಾಶ್ ಅಂಬಾನಿ (Akash Ambani) ಸರದಿ. ಇಶಾ, ಶ್ಲೋಕಾ, ರಾಧಿಕಾ, ಆಕಾಶ್, ಅನಂತ್ ಅಂಬಾನಿ ಇರುವ ವಿಡಿಯೋ ಒಂದು ವೈರಲ್ ಆಗಿದೆ. ಇದ್ರಲ್ಲಿ ಆಕಾಶ್ ವರ್ತನೆ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಎಲ್ಲರಿಗೂ ರಾಧಿಕಾ ಏಕೆ ಬೇಕು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ.

ರಾಧಿಕಾ ಅಂಬಾನಿ ಫ್ಯಾನ್ಸ್ ಕ್ಲಬ್ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಚೆಂದದ ಡ್ರೆಸ್ ಧರಿಸಿ, ಇಶಾ, ಶ್ಲೋಕಾ, ರಾಧಿಕಾ, ಆಕಾಶ್ ಹಾಗೂ ಅನಂತ್ ಅಂಬಾನಿ ನಿಂತಿದ್ದಾರೆ. ರಾಧಿಕಾ ಪಕ್ಕದಲ್ಲಿ ನಿಂತಿರುವ ಆಕಾಶ್ ಅಂಬಾನಿ, ರಾಧಿಕಾ ಸೊಂಟದ ಮೇಲೆ ಕೈ ಇಟ್ಟಿದ್ದಾರೆ. ಇದನ್ನು ನೋಡಿದ ರಾಧಿಕಾ ಫ್ಯಾನ್ಸ್ ಕಣ್ಣು ಕೆಂಪು ಮಾಡಿದ್ದಾರೆ. ಅಂಬಾನಿ ಫ್ಯಾಮಿಲಿ ಪುರುಷರು, ರಾಧಿಕಾ ಮನವೊಲಿಸುವ ಪ್ರಯತ್ನದಲ್ಲಿ ಇದ್ದಂತೆ ಕಾಣುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಯಾಕೋ ರಾಧಿಕಾ ಎಲ್ಲರ ಮಧ್ಯೆ ಪಾಪವಾಗ್ತಿದ್ದಾರೆ ಎಂಬ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸಿದ್ದಾರೆ.  ಪತಿ, ಪತ್ನಿ ಅಕ್ಕಪಕ್ಕದಲ್ಲಿ ನಿಲ್ಲೋದು ಬಿಟ್ಟು, ಹೀಗ್ಯಾಕೆ ಅದಲು ಬದಲಾಗಿ ನಿಂತಿದ್ದಾರೆ, ಪತ್ನಿ ಸೊಂಟ ಮುಟ್ಟುವ ಅಧಿಕಾರ ಪತಿಗೆ ಮಾತ್ರ ಇದೆ, ಅಂಬಾನಿ ಕುಟುಂಬ ಕೆಟ್ಟದಾಗಿ ನಡೆದುಕೊಳ್ತಿದೆ, ಇದು ಮಾಡರ್ನ್ ಅಲ್ಲ, ಕೆಟ್ಟದ್ದು, ಶ್ರೀಮಂತ ಕುಟುಂಬದಲ್ಲಿ ಮಾತ್ರ ಇಂಥದ್ದೆಲ್ಲ ಸಾಧ್ಯ, ಅನಂತ್ ಅಂಬಾನಿ ಬಿಟ್ಟು ಎಲ್ಲರೂ ರಾಧಿಕಾಗೆ ಹತ್ತಿರವಾಗ್ತಿದ್ದಾರೆ, ಹೀಗೆ ನಾನಾ ಕಮೆಂಟ್ ಗಳನ್ನು ಇನ್ಸ್ಟಾದಲ್ಲಿ ನೋಡ್ಬಹುದು.

ಕಿರಾಣಿ ಖರೀದಿದಾರರಿಗೆ ದೀಪಾವಳಿ ಗಿಫ್ಟ್‌ ನೀಡಿದ ಮುಖೇಶ್‌ ಅಂಬಾನಿ

ಆಕಾಶ್ ಅಂಬಾನಿ, ರಾಧಿಕಾ ಪರ ಮಾತನಾಡಿದವರ ಸಂಖ್ಯೆ ಕೂಡ ಕಡಿಮೆಯಿಲ್ಲ. ರಾಧಿಕಾ ಚಿಕ್ಕವಳಿರುವಾಗಿನಿಂದ್ಲೂ ಅಂಬಾನಿ ಮನೆಯಲ್ಲಿ ಬೆಳೆದಿದ್ದಾರೆ. ಹಾಗಾಗಿ ಅವರ ಮಧ್ಯೆ ಯಾವುದೇ ಬೇಧವಿಲ್ಲ. ಎಲ್ಲರೂ ಎಲ್ಲರನ್ನು ಸಮಾನವಾಗಿ ನೋಡ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಅಂಬಾನಿ ಫ್ಯಾಮಿಲಿ, ಮನುಷ್ಯನಿಗೆ ಬೆಲೆ ನೀಡುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ರಾಧಿಕಾ ಹಾಗೂ ಅನಂತ್ ಅಂಬಾನಿ ಮದುವೆಯಾಗಿ ಕೆಲ ತಿಂಗಳು ಕಳೆದಿದೆ. ಭಾರತದ ಅತ್ಯಂತ ಅದ್ಧೂರಿ ಮದುವೆಯಲ್ಲಿ ಒಂದಾಗಿದ್ದ ಅನಂತ್ ಮದುವೆಗೆ ದೇಶ, ವಿದೇಶದಿಂದ ಸೆಲೆಬ್ರಿಟಿಗಳು ಬಂದಿದ್ರು. ಮದುವೆ ನಂತ್ರ ಅನಂತ್ ಹಾಗೂ ರಾಧಿಕಾ ಸುದ್ದಿಯಲ್ಲಿದ್ದಾರೆ. ನಿನ್ನೆಯಷ್ಟೇ ರಾಧಿಕಾ 30ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬವನ್ನು ಅಂಬಾನಿ ಮನೆಯಲ್ಲಿ ಸರಳವಾಗಿ ಆದ್ರೆ ಸುಂದರವಾಗಿ ಆಚರಿಸಲಾಗಿದೆ. ಕೇಕ್ ಕತ್ತರಿಸಿ, ಅನಂತ್ ಅಂಬಾನಿಗೆ ಕೇಕ್ ತಿನ್ನಿಸಿ, ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ರಾಧಿಕಾ.

ಸತ್ತ ಅಪ್ಪನ ಬಗ್ಗೆ ಈತ ಬರೆದ ಪತ್ರ ಓದಿದ್ರೆ ಬಿದ್ದು ಬಿದ್ದು ನಗ್ತೀರಾ!

ಅನಂತ್ ಅಂಬಾನಿ ಜೊತೆ ರಾಧಿಕಾ ಮದುವೆ ಎಂದಾಗಿನಿಂದ್ಲೂ ರಾಧಿಕಾ ಟ್ರೋಲ್ ಆಗ್ತಾನೆ ಬಂದಿದ್ದಾರೆ. ಶ್ರೀಮಂತಿಕೆ ನೋಡಿ ರಾಧಿಕಾ ಮದುವೆ ಆಗ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ನಂತ್ರ ರಾಧಿಕಾ, ಮುಖೇಶ್ ಅಂಬಾನಿ ವಿಷ್ಯಕ್ಕೆ ಚರ್ಚೆಗೆ ಬಂದಿದ್ದರು. ಮುಖೇಶ್ ಅಂಬಾನಿ, ಸದಾ ರಾಧಿಕಾರನ್ನು ಸ್ಪರ್ಶಿಸೋದು ನೆಟ್ಟಿಗರಿಗೆ ಇಷ್ಟವಾಗ್ತಿಲ್ಲ. ಮದುವೆ ಸಮಾರಂಭದಿಂದ ಹಿಡಿದು, ಗಣಪತಿ ಪೆಂಡಾಲ್ ವರೆಗೆ ಎಲ್ಲ ಕಡೆ ಅನಂತ್ ಜೊತೆಗಿದ್ರೂ ಮುಖೇಶ್ ಅಂಬಾನಿ ರಾಧಿಕಾ ರಕ್ಷಣೆಗೆ ಮುಂದಾಗ್ತಾರೆ. ಅವರ ಹೆಗಲ ಮೇಲೆ, ಸೊಂಟಕ್ಕೆ ಕೈ ಹಾಕಿ ಸುದ್ದಿಯಾಗ್ತಿದ್ದಾರೆ. ಮುಖೇಶ್ ಅಂಬಾನಿ, ರಾಧಿಕಾಗೆ ಎಷ್ಟೇ ಕ್ಲೋಸ್ ಇದ್ರೂ ಸ್ಪರ್ಶ ಸರಿಯಲ್ಲ ಎಂಬ ಕಮೆಂಟ್ ಬಂದಿದೆ.   
 

Latest Videos
Follow Us:
Download App:
  • android
  • ios