Weddingಗೂ ಮುನ್ನ ಮಾಡಿದ ಒಪ್ಪಂದವೀಗ ತಂದಿದೆ ತಲೆನೋವು!
ಪ್ರೀತಿಯ ಗುಂಗಿನಲ್ಲಿ ಅಥವಾ ಇನ್ಯಾವುದೋ ಕಾರಣಕ್ಕೆ ಸಂಗಾತಿ ಹೇಳಿದ್ದಕ್ಕೆಲ್ಲ ತಲೆಯಾಡಿಸಿರುತ್ತೇವೆ. ಆದ್ರೆ ಮದುವೆಯಾದ್ಮೇಲೆ ಇದೇ ಗಲಾಟೆಗೆ ಕಾರಣವಾಗುತ್ತದೆ. ಇದು ವಿಚ್ಛೇದನಕ್ಕೂ ಬಂದು ನಿಲ್ಲುತ್ತದೆ. ಮದುವೆಗೆ ಮೊದಲೇ ಒಪ್ಪಂದ ಮಾಡ್ಕೊಂಡ ಪತ್ನಿ ನಡವಳಿಕೆ ಈಗ ಅನುಮಾನ ಮೂಡಿಸಿದೆ.
ಮದುವೆ (Wedding) ಗೆ ಮುನ್ನ ಒಂದು ರೀತಿ ವರ್ತನೆ ಇರುವ ಜೋಡಿ, ಮದುವೆಯಾದ್ಮೇಲೆ ಬದಲಾಗೋದು ಸಹಜ. ಅದ್ರಲ್ಲೂ ಮದುವೆಯಾದ ಮೊದಲ ವರ್ಷ (Year) ಕ್ಕೂ, ಮದುವೆಯಾದ 10ನೇ ವರ್ಷಕ್ಕೂ ತುಂಬಾ ವ್ಯತ್ಯಾಸಗಳಿರುತ್ತವೆ. ಒಂದಾದ್ಮೇಲೆ ಒಂದರಂತೆ ಬರುವ ಜವಾಬ್ದಾರಿಗಳು ಮನುಷ್ಯ (Human) ನನ್ನು ಬದಲಿಸುತ್ತವೆ. ಮನೆ, ಮಕ್ಕಳು, ಕೆಲಸ ಸೇರಿದಂತೆ ವಯಸ್ಸಾದಂತೆ ಬದಲಾಗುವ ಹಾರ್ಮೋನುಗಳು ಜೀವನದಲ್ಲಿ ಬದಲಾವಣೆ ಗಾಳಿ ಬೀಸಲು ಕಾರಣವಾಗುತ್ತದೆ. ಕೆಲವೊಮ್ಮೆ ಸಂಗಾತಿ ವರ್ತನೆ ವಿಚಿತ್ರವೆನ್ನಿಸುತ್ತದೆ. ಅಲ್ಲೊಂದು ದಿನ, ಇಲ್ಲೊಂದು ದಿನ ಮುನಿಸಿಕೊಂಡರೆ ಸರಿ. ಪ್ರತಿ ದಿನ ಮುನಿಸಿಕೊಳ್ಳುವುದಲ್ಲದೆ, ಸದಾ ಕೂಗಾಡ್ತಿದ್ದರೆ, ಕೆರಳುತ್ತಿದ್ದರೆ ಕಿರಿಕಿರಿಯಾಗುವುದು ಸಾಮಾನ್ಯ. ಸಂಗಾತಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ, ನನ್ನ ಮೇಲಿನ ಆಕರ್ಷಣೆ ಕಡಿಮೆಯಾಗಿ ಎಂಬ ಪ್ರಶ್ನೆ ಕಾಡುವುದು ಕೂಡ ಸಹಜ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ಪತ್ನಿಯ ಈ ವರ್ತನೆ ಭಯ ಹಾಗೂ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಆತ ಮದುವೆ ಮೊದಲು ಮಾಡಿಕೊಂಡ ಒಪ್ಪಂದ ಕಾರಣ. ಅಷ್ಟಕ್ಕೂ ಆತ ಮದುವೆಗೆ ಮುನ್ನ ಮಾಡಿದ ಒಪ್ಪಂದವೇನು? ಈಗ್ಯಾಕೆ ಆತ ಒದ್ದಾಡ್ತಿದ್ದಾನೆ ಎಂಬುದನ್ನು ನಾವು ಹೇಳ್ತೇವೆ ಓದಿ. ಅವನಿಗೆ ಮದುವೆಯಾಗಿ ನಾಲ್ಕು ವರ್ಷ ಕಳೆದಿದೆ. ಆರಂಭದಲ್ಲಿ ಚೆನ್ನಾಗಿದ್ದ ಪತ್ನಿ ನಂತ್ರ ಸಂಪೂರ್ಣ ಬದಲಾಗಿದ್ದಾಳೆ. ಪತಿ ಮುಖ ಕಂಡ್ರೆ ಆಗೋದಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾಳೆ. ಸದಾ ಪತಿಯನ್ನು ಬೈತಿರುತ್ತಾಳೆ.
ಮದುವೆ ಮೊದಲ ಒಪ್ಪಂದ ಇದಕ್ಕೆ ಕಾರಣವಾ? : ನಿಮ್ಮಿಂದ ಯಾವುದನ್ನೂ ಮುಚ್ಚಿಡುವುದಿಲ್ಲ ಎಂದ ವ್ಯಕ್ತಿ, ತನ್ನ ನೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಒಪ್ಪಿಕೊಂಡಿದ್ದಾನೆ. ಮದುವೆಗೆ ಮುನ್ನ ಆತ ಪೂರ್ವಭಾವಿ ಒಪ್ಪಂದ ಮಾಡಿಕೊಂಡಿದ್ದನಂತೆ. ಅದಕ್ಕೆ ಪ್ರೆನಪ್ ಎಂದೂ ಕರೆಯುತ್ತಾರೆ. ಇದರಲ್ಲಿ ಸಾವು, ವಿಚ್ಛೇದನ ಅಥವಾ ಬೇರ್ಪಡುವಿಕೆಯ ಸಂದರ್ಭದಲ್ಲಿ ಆಗಬೇಕಾದ ಹಣ ಮತ್ತು ಆಸ್ತಿ ಬಗ್ಗೆ ಮದುವೆಗೆ ಮೊದಲೇ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅಂದ್ರೆ ಪ್ರಿನಪ್ ಒಪ್ಪಂದದ ಸಂದರ್ಭದಲ್ಲಿ ಹಣಕಾಸಿನ ಹೊಣೆಗಾರಿಕೆಗಳನ್ನು ಮೊದಲೇ ನಿರ್ಧರಿಸಲಾಗುತ್ತದೆ. ಈ ಒಪ್ಪಂದವೇ ತನ್ನ ಕುಟುಂಬದಲ್ಲಿ ಗಲಾಟೆಗೆ ಕಾರಣವಾಗ್ತಿದೆ ಎಂದು ವ್ಯಕ್ತಿ ಅನುಮಾನ ವ್ಯಕ್ತಪಡಿಸಿದ್ದಾನೆ. ಈ ಒಪ್ಪಂದದಿಂದಾಗಿಯೇ ಪತ್ನಿ ತನ್ನನ್ನು ಬೇಗ ಬಿಟ್ಟು ಹೋಗುವ ತಯಾರಿ ನಡೆಸಿದ್ದಾಳೆಂದು ಆತ ಅನುಮಾನ (Doubt) ವ್ಯಕ್ತಪಡಿಸಿದ್ದಾನೆ.
ಮಕ್ಕಳಿಗಾಗಿ ಒಂದಾಗ ಬಯಸಿದ್ದ ವಿಚ್ಛೇದಿತ ದಂಪತಿಯ ಬದುಕಲ್ಲಿ ವಿಧಿಯಾಟ
ತಜ್ಞರ ಸಲಹೆ : ನೀವು ಮದುವೆಗೆ ಮುನ್ನ ಪೂರ್ವಭಾವಿ ಒಪ್ಪಂದಕ್ಕೆ (Pre-Wedding Agreement) ಸಹಿ ಹಾಕಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೀವು ಹೇಳಲಿಲ್ಲ. ಆದ್ರೆ ವೈವಾಹಿಕ ಜೀವನದಿಂದ ನೀವು ಏನು ಬಯಸುತ್ತೀರಿ? ಅವಳು ಏನು ಬಯಸುತ್ತಿದ್ದಾಳೆ? ಅವರ ಉದ್ದೇಶಗಳೇನು? ಅವರು ನಿಮ್ಮೊಂದಿಗೆ ಯಾವ ರೀತಿಯ ಸಂಬಂಧವನ್ನು ಬಯಸುತ್ತಾಳೆ? ಈ ಎಲ್ಲ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ಈ ಎಲ್ಲ ಪ್ರಶ್ನೆಗಳನ್ನು ನಿಧಾನವಾಗಿ ಬಿಡಿಸ್ತಾ ಬನ್ನಿ. ಪತ್ನಿ ಜೊತೆ ಉತ್ತಮ ಪ್ರಣಯ ಮತ್ತು ದೀರ್ಘ ದಾಂಪತ್ಯ ಜೀವನವನ್ನು ಬಯಸಿದ್ದರೆ, ಮೊದಲು ನಿಮ್ಮ ಹೆಂಡತಿ ಯಾಕೆ ಹೀಗೆ ವರ್ತಿಸುತ್ತಾಳೆ ಎಂದು ತಿಳಿಯಬೇಕು ಎನ್ನುತ್ತಾರೆ ತಜ್ಞರು.
ಅಸಂಬದ್ಧವಾಗಿ ಯೋಚಿಸುವುದನ್ನು ನಿಲ್ಲಿಸಿ : ಪತ್ನಿ ಬಿಟ್ಟು ಹೋಗ್ತಾಳೆ ಎಂದು ವಿನಃ ಕಾರಣ ಭಯಪಡುವುದನ್ನು ನಿಲ್ಲಿಸಿ. ಕಾರಣವನ್ನು ತಿಳಿಯದೆ ಅನವಶ್ಯಕವಾಗಿ ಚಿಂತಿಸುವುದು ಸಂಪೂರ್ಣವಾಗಿ ಅರ್ಥಹೀನವ. ನೀವು ಏನು ಯೋಚನೆ ಮಾಡ್ತಿದ್ದೀರಿ ಅದು ಆಗದೆ ಇರಬಹುದು ಎನ್ನುತ್ತಾರೆ ತಜ್ಞರು.
ಇನ್ನೂ ವಯಸ್ಸಾಗಲಿ ಅಂತ ಕಾಯ್ಬೇಡಿ, 30 ಆಗುತ್ತಿದ್ದಂತೆ ಇವನ್ನೆಲ್ಲಾ ಬಿಟ್ಬಿಡಿ!
ಮುಂದಿನ ಕೆಲಸ : ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ಹೋಗಬಾರದು ಎಂದು ನೀವು ಬಯಸಿದರೆ, ನೀವು ಅವಳೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಬೇಕು. ನೀವು ಒಟ್ಟಿಗೆ ರಜೆಗೆ ಪ್ಲಾನ್ ಮಾಡ್ಬೇಕು. ಒಟ್ಟಿಗೆ ಕಳೆದ ಒಳ್ಳೆಯ ಸಮಯವನ್ನು ನೆನಪು ಮಾಡಿಕೊಳ್ಳಬೇಕು. ಇದು ನಿಮ್ಮಲ್ಲಿರುವ ಚಿಂತೆ ದೂರ ಮಾಡುವುದಲ್ಲದೆ, ನೀವಿಬ್ಬರು ಪರಸ್ಪರ ಮನಸ್ಸು ಬಿಚ್ಚಿ ಮಾತನಾಡಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.