ಮದುವೆ ಆದ ದಂಪತಿಗೆ 12 ಲಕ್ಷ ನೀಡುವ ದೇಶವೊಂದಿದೆ. ಇಲ್ಲಿ ಬರೀ ಮದುವೆಗೆ ಮಾತ್ರವಲ್ಲ, ಮದುವೆ ಮೊದಲು ಹಾಗೂ ನಂತ್ರದ ಕಾರ್ಯಕ್ಕೂ ಹಣ ಸಿಗುತ್ತೆ. ಅದು ಯಾವ ದೇಶ, ಯೋಜನೆ ಏನು ಎಂಬ ಮಾಹಿತಿ ಇಲ್ಲಿದೆ.
ಸಾಲ ಮಾಡಿಯಾದ್ರೂ ತುಪ್ಪ ತಿನ್ಬೇಕು ಎನ್ನುವ ಭಾರತೀಯರು (Indians), ಮದುವೆ (marriage)ಗೆ ಹೆಚ್ಚಿನ ಆದ್ಯತೆ ನೀಡ್ತಾರೆ. ಮದುವೆಗಾಗಿ ಸಾಲದ ಮೇಲೆ ಸಾಲ ಮಾಡ್ತಾರೆ. ಫ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಅಂತ ಅದಕ್ಕೊಂದಿಷ್ಟು ಹಣ ವ್ಯರ್ಥ ಮಾಡ್ತಾರೆ. ಸಂಬಂಧಕರು, ಸ್ನೇಹಿತರಿಂದ ಭೇಷ್ ಎನ್ನಿಸಿಕೊಳ್ಬೇಕು ಎನ್ನುವ ಕಾರಣಕ್ಕೆ ಪರ್ಫೆಕ್ಟ್ ಮದುವೆಗೆ ಸಿಕ್ಕಾಪಟ್ಟೆ ಕಷ್ಟಪಡ್ತಾರೆ. ಉಂಡು, ತಿಂದು ಮಾತನಾಡಿ ಹೋಗುವ ಸಂಬಂಧಿಕರು ನಂತ್ರ ಸಾಲ ತೀರಿಸೋಕೆ ಬರೋದಿಲ್ಲ. ಮದುವೆ ಸಾಲ ಒಂದು ಪಾಲಕರು ಇಲ್ಲ ನವ ದಂಪತಿಗೆ ಹೊಣೆಯಾಗುತ್ತೆ. ಇದು ಭಾರತೀಯ ಕಥೆಯಾದ್ರೆ ಈಗ ನಾವು ಹೇಳ್ತಿರೋ ದೇಶದಲ್ಲಿ ನೀವು ಮದುವೆ ಆದ್ರೆ ಸಾಕು ನಿಮ್ಮ ಖಾತೆಗೆ 12 ಲಕ್ಷ ಬಂದು ಬೀಳುತ್ತೆ. ಬರೀ ಖಾತೆಗೆ ಹಣ ಬರೋದು ಮಾತ್ರವಲ್ಲ ಮದುವೆ ಮೊದಲು ಹಾಗೂ ಮದುವೆ ನಂತ್ರ ಹನಿಮೂನ್ಗೆ ಅಗತ್ಯವಿರುವ ಹಣವನ್ನು ಸರ್ಕಾರ ನಿಮಗೆ ನೀಡುತ್ತದೆ.
ಯಾವ ದೇಶದಲ್ಲಿ ಸಿಗುತ್ತೆ 12 ಲಕ್ಷ? : ದಕ್ಷಿಣ ಕೊರಿಯಾ (South Korea)ದಲ್ಲಿ, ಜನನ ಪ್ರಮಾಣ ಮತ್ತು ಜನಸಂಖ್ಯೆಯ ಕುಸಿತ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಜನಸಂಖ್ಯೆ ಹೆಚ್ಚಳಕ್ಕೆ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದೆ. ಮದುವೆಯಾದ ಜೋಡಿಗೆ ಸರ್ಕಾರ ಲಕ್ಷಾಂತರ ರೂಪಾಯಿ ನೀಡುತ್ತದೆ. ಬರೀ ಮದುವೆಗಲ್ಲ, ಡೇಟಿಂಗ್ನಿಂದ ಹಿಡಿದು ನಿಶ್ಚಿತಾರ್ಥ ಮತ್ತು ಹನಿಮೂನ್ವರೆಗಿನ ವೆಚ್ಚಗಳನ್ನು ಸಹ ಸರ್ಕಾರ ಭರಿಸುತ್ತಿದೆ. ದೇಶದ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಯುವಕರನ್ನು ಮದುವೆಗೆ ಪ್ರೋತ್ಸಾಹಿಸೋದೇ ಈ ಯೋಜನೆ ಗುರಿಯಾಗಿದೆ.
ಮ್ಯಾಚ್ ಮೇಕಿಂಗ್ ಕಾರ್ಯಕ್ರಮ : ದಕ್ಷಿಣ ಕೊರಿಯಾದ ಬುಸಾನ್ ಜಿಲ್ಲೆಯಲ್ಲಿ ವಿಶೇಷ ಮ್ಯಾಚ್ಮೇಕಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮದುವೆಯಾದ ದಂಪತಿಗೆ ಸರ್ಕಾರದಿಂದ ಸುಮಾರು $14,700 ಅಂದ್ರೆ ಸುಮಾರು 12 ಲಕ್ಷ ಸಿಗುತ್ತದೆ. ಹಿಂದಿನ ವರ್ಷ, ಬುನಾಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರ ನವವಿವಾಹಿತ ದಂಪತಿಗೆ 31 ಲಕ್ಷ ರೂಪಾಯಿ ಅಂದರೆ 38000 ಡಾಲರ್ ನೀಡಿತ್ತು. ದಕ್ಷಿಣ ಕೊರಿಯಾ, ವಿಶ್ವದಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಜನನ ಪ್ರಮಾಣವು 2023ರಲ್ಲಿ ರಲ್ಲಿ 0.72 ರಷ್ಟಿತ್ತು, ಇದು 2024 ರಲ್ಲಿ 0.75 ಆಗುವ ಮೂಲಕ ಸ್ವಲ್ಪ ಹೆಚ್ಚಾಗಿದೆ. ಆದ್ರೆ ಇದು ತುಂಬಾ ಕಡಿಮೆ. ದಕ್ಷಿಣ ಕೋರಿಯಾ ಸರ್ಕಾರಕ್ಕೆ ಜನಸಂಖ್ಯೆ ಏರಿಸೋದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಹಣ ನೋಡಿಯಾದ್ರೂ ಯುವಕರು ಮದುವೆ ಮಾಡ್ಕೊಳ್ಳಬಹುದು ಎಂಬ ನಂಬಿಕೆಯಲ್ಲಿ ಸರ್ಕಾರವಿದೆ. ಈ ಯೋಜನೆ ಜನಸಂಖ್ಯಾ ನೀತಿಯ ಭಾಗವಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜನನ ಪ್ರಮಾಣ ಕುಸಿತ ಮತ್ತು ಪ್ರಾದೇಶಿಕ ಜನಸಂಖ್ಯೆ ಕುಸಿತದಂತಹ ಗಂಭೀರ ಸಮಸ್ಯೆಗಳನ್ನು ನಿಭಾಯಿಸುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ.
ಜಪಾನ್ ನಲ್ಲೂ ಇದೇ ಸಮಸ್ಯೆ : ದಕ್ಷಿಣ ಕೊರಿಯಾ ಮಾತ್ರವಲ್ಲದೆ ಜಪಾನ್ ಕೂಡ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಪಾನ್ನ ಜನನ ಪ್ರಮಾಣವು 50 ವರ್ಷಗಳ ದಾಖಲೆಗಿಂತ ಕಡಿಮೆಯಾಗುತ್ತಿದೆ. ಇಲ್ಲಿ ವರ್ಷಕ್ಕೆ 50 ಲಕ್ಷ ಜನನ ಪ್ರಮಾಣವಿತ್ತು, ಅದು ಈಗ ಕೇವಲ 7 ಲಕ್ಷ 60 ಸಾವಿರಕ್ಕೆ ಇಳಿದಿದೆ. ಅದೇ ಸಮಯದಲ್ಲಿ, 2035 ರ ಮೊದಲು ದೇಶವು ಜನಸಂಖ್ಯಾ ಸಮಸ್ಯೆಯನ್ನು ನಿಭಾಯಿಸಬಹುದು ಎಂದು ಸರ್ಕಾರ ಅಂದಾಜಿಸಿದೆ. ಅದಕ್ಕಾಗಿಯೇ ಜಪಾನ್ ಕೂಡ ಯುವಕನ್ನು ಮದುಎವ ಆಗುವಂತೆ ಪ್ರೋತ್ಸಾಹಿಸುತ್ತಿದೆ. ಜೊತೆಗೆ ಮಕ್ಕಳನ್ನು ಪಡೆಯುವಂತೆ ಒತ್ತಾಯ ಮಾಡ್ತಿದ್ದು, ಇದಕ್ಕಾಗಿ ಅನೇಕ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ.
