ಆ್ಯಪ್ ಮೂಲಕ ಡೇಟಿಂಗ್ ಮಾಡುತ್ತೀರಾ? ಆನ್‌ಲೈನ್ ಡೇಟಿಂಗ್ ಕ್ಲಿಕ್ ಆಗೋಕೆ ಏನು ಮಾಡಬೇಕು?
ಆನ್‌ಲೈನ್ ಡೇಟಿಂಗ್ ಇಂದಿನ ಕಾಲದ ಪ್ರೀತಿ-ಪ್ರೇಮದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಆದರೆ, ಏನು ಮಾಡಬೇಕು, ಏನು ಮಾಡಬಾರದು ಅಂತ ಗೊತ್ತಿದ್ರೆ ಶಾಶ್ವತ ಸಂಬಂಧಗಳನ್ನು ಕಟ್ಟಿಕೊಳ್ಳಬಹುದು.

ಇಂಟರ್ನೆಟ್ ಡೇಟಿಂಗ್ ನಮ್ಮ ಸಂಗಾತಿಯನ್ನು ಭೇಟಿಯಾಗುವ ವಿಧಾನವನ್ನೇ ಬದಲಾಯಿಸಿದೆ. ಆನ್‌ಲೈನ್‌ನಲ್ಲಿ ಗೌರವದಿಂದ ವರ್ತಿಸಿದರೆ ಉತ್ತಮ ಸಂಬಂಧ ಹೊಂದಬಹುದು. ಹೊಸಬರಾಗಿದ್ದರೆ ಅಥವಾ ಉತ್ತಮ ಅನುಭವ ಹುಡುಕುತ್ತಿದ್ದರೆ, ಈ ಸಲಹೆಗಳು ಸಹಾಯಕ.
1. ನಿಜವಾಗಿಯೇ ಇರಿ, ಪ್ರಾಮಾಣಿಕರಾಗಿರಿ
ಯಾವುದೇ ಸಂಬಂಧದ ಬುನಾದಿ ಪ್ರಾಮಾಣಿಕತೆ. ನಿಮ್ಮ ಪ್ರೊಫೈಲ್, ಫೋಟೋಗಳು ಅಥವಾ ಮಾತುಕತೆಗಳ ಮೂಲಕ ನಿಮ್ಮನ್ನು ನಿಜವಾಗಿಯೇ ತೋರಿಸಿಕೊಳ್ಳಿ. ನಿಜವಾದ ಪ್ರೀತಿಗೆ ಇದು ದಾರಿ ಮಾಡಿಕೊಡುತ್ತದೆ.
2. ನಿಮ್ಮ ಉದ್ದೇಶ ಸ್ಪಷ್ಟವಾಗಿರಲಿ
ಕ್ಯಾಶುಯಲ್ ಡೇಟಿಂಗ್, ಫ್ರೆಂಡ್‌ಶಿಪ್ ಅಥವಾ ಗಂಭೀರ ಸಂಬಂಧ - ನಿಮಗೆ ಏನು ಬೇಕು ಎಂದು ನಿರ್ಧರಿಸಿ. ಸ್ಪಷ್ಟವಾಗಿ ಹೇಳುವುದರಿಂದ ನಿಮ್ಮಂತೆಯೇ ಯೋಚಿಸುವವರನ್ನು ಆಕರ್ಷಿಸಬಹುದು.
3. ಗೌರವಯುತವಾಗಿ ಮಾತನಾಡಿ
ಆನ್‌ಲೈನ್‌ನಲ್ಲಿ ಎಲ್ಲರೊಂದಿಗೂ ಗೌರವದಿಂದ ವರ್ತಿಸಿ. ಪರಿಗಣನೆ, ಸಹಾನುಭೂತಿಯುಳ್ಳ ಸಂಭಾಷಣೆ ಮತ್ತು ನಿಮ್ಮ ಸಂಗಾತಿಗೆ ಗಮನ ಕೊಡುವುದು ನಿಜವಾದ ಸಂಬಂಧವನ್ನು ಬೆಳೆಸುತ್ತದೆ.
4. ಸುರಕ್ಷತೆ ಮತ್ತು ಗೌಪ್ಯತೆಯನ್ನು ನೆನಪಿನಲ್ಲಿಡಿ
ಆನ್‌ಲೈನ್ ಡೇಟಿಂಗ್ ಖುಷಿ ಕೊಡಬಹುದು, ಆದರೆ ಎಚ್ಚರಿಕೆಯೂ ಮುಖ್ಯ. ನಿಮ್ಮ ಬಗ್ಗೆ ಹೆಚ್ಚು ಹೇಳಿಕೊಳ್ಳಬೇಡಿ. ಮೊದಲ ಭೇಟಿ ಸಾರ್ವಜನಿಕ ಸ್ಥಳದಲ್ಲಿರಲಿ.
5. ತಾರತಮ್ಯ ಮಾಡಬೇಡಿ, ಮುಕ್ತ ಮನಸ್ಸಿನಿಂದಿರಿ
1. ಹೆಚ್ಚು ಮಾಹಿತಿ ಹಂಚಿಕೊಳ್ಳಬೇಡಿ
ಒಬ್ಬ ವ್ಯಕ್ತಿಯನ್ನು ತಿಳಿದಾಗ, ವೈಯಕ್ತಿಕ ಅಥವಾ ನಿಕಟ ಮಾಹಿತಿಯನ್ನು ಬೇಗ ಹಂಚಿಕೊಳ್ಳಬೇಡಿ. ವ್ಯಕ್ತಿ ಉತ್ತಮ ಉದ್ದೇಶವನ್ನು ತೋರಿಸುವವರೆಗೆ ಕಾಯಿರಿ.
2. ಕೇವಲ ಮೆಸೇಜ್ ಮಾಡಬೇಡಿ
ಮೆಸೇಜ್ ಚೆನ್ನಾಗಿದೆ, ಆದರೆ ಕೇವಲ ಮೆಸೇಜ್‌ನಿಂದ ತಪ್ಪು ತಿಳುವಳಿಕೆ ಉಂಟಾಗಬಹುದು. ಒಳ್ಳೆಯ ಸಂಪರ್ಕಕ್ಕಾಗಿ ವಿಡಿಯೋ ಅಥವಾ ಕರೆಗಳನ್ನು ಬಳಸಿ.
3. ಹಳೆಯ ಅಥವಾ ನಕಲಿ ಫೋಟೋಗಳನ್ನು ಹಂಚಬೇಡಿ
ನಿಜವಾದ ನೀವೇ ಆಗಿರಿ. ಹಳೆಯ ಅಥವಾ ನಕಲಿ ಫೋಟೋಗಳನ್ನು ಬಳಸುವುದರಿಂದ ತಪ್ಪು ನಿರೀಕ್ಷೆಗಳು ಉಂಟಾಗಬಹುದು.
4. ಪರಿಪೂರ್ಣತೆಯ ಬಲೆಗೆ ಬೀಳಬೇಡಿ
ಆನ್‌ಲೈನ್ ಡೇಟಿಂಗ್ ಕೆಲವೊಮ್ಮೆ ತಪ್ಪು ನಿರೀಕ್ಷೆಗಳಿಗೆ ಕಾರಣವಾಗಬಹುದು. ಪರಿಪೂರ್ಣತೆಗಿಂತ ಹೊಂದಾಣಿಕೆ, ಹಂಚಿಕೆಯ ಮೌಲ್ಯಗಳನ್ನು ನೋಡಿ.
5. ಆಶಾವಾದ ಒಳ್ಳೆಯದು, ಆದರೆ ಕೆಟ್ಟ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಮನಸ್ಸಿನ ಮಾತಿಗೆ ಕಿವಿಗೊಡಿ.