Asianet Suvarna News Asianet Suvarna News

ಮಂಗಳೂರಿನ ಅಜ್ಜಿ ಪುಳ್ಳಿ: ಅಗಲಿದ ಮುದ್ದಿನ ಅಜ್ಜಿಯ ನೆನೆದು ಭಾವುಕರಾದ ಪೂಜಾ ಹೆಗ್ಡೆ

ನಟಿ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಅಜ್ಜಿಯ ನೆನಪು ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ತೀರಿದ ತನ್ನ ಅಜ್ಜಿಯ ನೆನೆದ ಪೂಜಾ ಹೆಗ್ಡೆ  ಉದ್ದನೇಯ ಪತ್ರ ಬರೆದಿದ್ದು, ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಜ್ಜಿಯ ಜೊತೆ ಕಳೆದ ದಿನಗಳ ನೆನಪು ಮಾಡಿಕೊಳ್ಳುವ ಜೊತೆ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

Actress Pooja hegde remembers Her late grandma writes emotional Note akb
Author
First Published Jan 15, 2024, 3:12 PM IST

ಬಾಲ್ಯ , ಹಳ್ಳಿಯ ಜೀವನ, ಮುದ್ದಿನ ಅಜ್ಜ ಅಜ್ಜಿ ಇವು ಬಹುತೇಕರಿಗೆ ಬಹುವಾಗಿ ಕಾಡುವ ಸದಾ ನೆನಪಿರುವ ಸಿಹಿ ನೆನಪುಗಳು. ಬಹುತೇಕರಿಗೆ ಅಜ್ಜಿಯ ಜೊತೆ ಭಾವುಕವಾದ ಅವಿನಾಭಾವ ಸಂಬಂಧವಿರುತ್ತದೆ. ರಜಾ ದಿನಗಳಲ್ಲಿ ಮನೆಗೆ ಬರುವ ಮೊಮ್ಮಕ್ಕಳಿಗೆ ಅಜ್ಜಿ ತನ್ನಿಂದಾದ ತಿನಿಸುಗಳನ್ನು ಮಾಡಿ ತಿನ್ನಿಸಿ ಮುದ್ದು ಮಾಡಿ ಆರೈಕೆ ಮಾಡುತ್ತಾರೆ. ಅದೇ ರೀತಿ ಈಗಬಹುಭಾಷಾ ನಟಿ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಅಜ್ಜಿಯ ನೆನಪು ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ತೀರಿದ ತನ್ನ ಅಜ್ಜಿಯ ನೆನೆದ ಪೂಜಾ ಹೆಗ್ಡೆ  ಉದ್ದನೇಯ ಪತ್ರ ಬರೆದಿದ್ದು, ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಜ್ಜಿಯ ಜೊತೆ ಕಳೆದ ದಿನಗಳ ನೆನಪು ಮಾಡಿಕೊಳ್ಳುವ ಜೊತೆ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಪೂಜಾ ಪತ್ರದಲ್ಲೇನಿದೆ?
ಅಜ್ಜಿಯ ಪ್ರೀತಿ ಎಂದರೆ ಅದು ಆಹಾರ.  ಅವರೊಬ್ಬರು ಅತ್ಯುತ್ತಮ ಪಾಕ ತಜ್ಞೆ. ಆಕೆ ಮನೆಗೆ ಬಂದ ಒಬ್ಬರನ್ನು ಬರಿಗೈಲಿ ಕಳಿಸಿದವಳಲ್ಲ, ಆಕೆಯಿದ್ದಾಗ ಮನೆಯಿಂದ ಯಾರು ಊಟ ಮಾಡದೇ ಹೋದವರಿಲ್ಲ, ಮನೆಯಲ್ಲಿ ತನಗೆ ಊಟ ಕಡಿಮೆ ಇದ್ದರೂ  ಆಕೆ ಯಾರನ್ನು ಹಾಗೆಯೇ ಕಳಿಸಿಲ್ಲ,  ಆಕೆ ಅಲಂಕರಿಸಿಕೊಳ್ಳುವುದನ್ನು ಕೂಡ ಇಷ್ಟಪಡುತ್ತಿದ್ದಳು.  ಸುಂದರವಾಗಿ ಸೀರೆಯುಟ್ಟು ಚಿನ್ನಾಭರಣ ಹಾಕಿ ಮುಖಕ್ಕೆ ಪೌಡರ್ ಹಾಕುತ್ತಿದ್ದಳು.  ಬಳಿಕ ನಿನ್ನೆ ಕನ್ನಡಿಗೆ ಅಂಟಿಸಿದ್ದ ಬಿಂದಿಯನ್ನು ಮತ್ತೆ ಹಣೆಗಿಡುತ್ತಿದ್ದಳು. ಬಳಿಕ ಮನೆ ಕೆಲಸವನ್ನು ಮಾಡಲು ಶುರು ಮಾಡುತ್ತಿದ್ದಳು. ಮನೆಯನ್ನು ನೀಟಾಗಿ ಇಡಲು ಶ್ರಮಿಸುತ್ತಿದ್ದಳು.  ತನಗಾದ ನೋವು ಗಾಯಗಳ ಬಗ್ಗೆ ಆಕೆ ಯಾವತ್ತೂ ದೂರಿದಿಲ್ಲ,  ಇದೆಲ್ಲದರ ಆಚೆಗೆ ಆಕೆಯ ಮುಖದಲ್ಲಿ ಸದಾ ನಗುವಿರುತ್ತಿತ್ತು. ಯಾವಾಗಲೂ ತಮಾಷೆ ಮಾಡುತ್ತಿದ್ದಳು, ತನ್ನ ಪ್ರಮಾಣಿಕತೆಯಿಂದಲೇ ಆಕೆ ಕೆಲವೊಮ್ಮ ನಮ್ಮನ್ನ ರೋಸ್ಟ್ ಮಾಡ್ತಿದ್ದಳು.  ಆಕೆ ಆಸೆ ನಿಯಂತ್ರಿಸಿಕೊಳ್ಳಲಾಗದ ಒಂದು ವಿಚಾರವೆಂದರೆ ಸಿಹಿ ತಿನಿಸು ಹಾಗೂ ಮೀನಿನ ಸಾರು. ಈ ಗುಣ ನನಗೂ ಬಂದಿದೆ ಎಂಬುದಕ್ಕೆ ಹೆಮ್ಮೆಯಿದೆ.  ಅಜ್ಜಿ ಹಾಗೂ  ಪುಳ್ಳಿ ( ತುಳು ಭಾಷೆಯಲ್ಲಿ ಪುಳ್ಳಿ ಎಂದರೆ ಮೊಮ್ಮಗಳು) ಇದು ನಾನು ಅಜ್ಜಿಯನ್ನು ನೆನಪು ಮಾಡಿಕೊಳ್ಳುವ ರೀತಿ. ನೀವು ಧೈರ್ಯವಂತೆಯಾಗಿ ಹೆಣ್ಣುಮಗಳನ್ನ ಬೆಳೆಸಿದ್ದೀರಿ, ನೀವು ನಮಗೆ ಮಾಡಿದ ಪ್ರತಿಯೊಂದಕ್ಕೂ ಧನ್ಯವಾದಗಳು ಲವ್ ಯೂ ಎಂದು ಬರೆದುಕೊಂಡಿದ್ದಾರೆ ಪೂಜಾ ಹೆಗ್ಡೆ.  ಪೂಜಾ ಹೆಗ್ಡೆಯ ಈ ಬರಹ ಹಲವರಿಗೆ ತಮ್ಮಜ್ಜಿಯ ನೆನಪು ಮಾಡಿಸಿದೆ. 

ಅಣ್ಣನ ಮದ್ವೆಲ್ಲಿ ಪೂಜಾ ಹೆಗ್ಡೆ ಫುಲ್ ಮಿಂಚಿಂಗ್: ಭಾವುಕ ಬರಹದ ಮೂಲಕ ಅತ್ತಿಗೆಗೆ ಸ್ವಾಗತ

ಮೂಲತಃ ಮಂಗಳೂರಿನವರಾದ ಪೂಜಾ ಹೆಗ್ಡೆ ಅವರು ತೆಲುಗು, ತಮಿಳು ಹಾಗೂ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿದ್ದಾರೆ. ಸಲ್ಮಾನ್ ಜೊತೆ ಇತ್ತೀಚೆಗೆ ಕಿಸಿ ಕಾ ಬಾಯ್ ಕಿಸಿ ಕಾ ಜಾನ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ತೆಲುಗಿನ ಮಹರ್ಷಿ, ಆಚಾರ್ಯ, ಅಲ ವೈಕುಂಠಪುರಂಲೊ, ಡಿಜೆ ದುವ್ವಾಡ ಜಗನ್ನಾಥ, ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಪೂಜಾ ಅವರು ಶಾಹಿದ್ ಕಪೂರ್ ಜೊತೆ ದೇವ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  ಈ ಸಿನಿಮಾವನ್ನು ರೋಷನ್ ಆಂಡ್ರಿವ್ ಅವರು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ನಿರ್ಮಾಣದ ಹೊಣೆಯನ್ನು ಸಿದ್ಧಾರ್ಥ ರಾಯ್ ಕಪೂರ್ ಹಾಗೂ ಜೀ ಸ್ಟುಡಿಯೋ ಹೊತ್ತುಕೊಂಡಿದೆ.  ಕಳೆದ ವರ್ಷ ಸ್ವತಃ ಪೂಜಾ ಅವರೇ ಮುಂದೆ ನಿಂತು ಅವರ ಸೋದರನ ವಿವಾಹವನ್ನು ಮಾಡಿದ್ದರು. 

ತೆಂಗಿನ ಮರಗಳ ಮಧ್ಯೆ ಲೆಹೆಂಗಾದಲ್ಲಿ ಮಿಂಚಿದ ಪೂಜಾ ಹೆಗ್ಡೆ: ಇದು ನಮ್ಮ ತುಳುನಾಡು ಎಂದ ಫ್ಯಾನ್ಸ್‌!
 

 
 
 
 
 
 
 
 
 
 
 
 
 
 
 

A post shared by Pooja Hegde (@hegdepooja)

 

Follow Us:
Download App:
  • android
  • ios