jyothi Rai ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ನಟಿ ಜ್ಯೋತಿ ರೈ ಕೊಂಚ ವಿಚಲಿತರಾದಂತೆ ಕಂಡಿದ್ದರೂ, ಈಗ ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ಫಾರ್ಮ್‌ಗೆ ಬಂದಿದ್ದಾರೆ. ಬರ್ತ್‌ಡೇ ಸಂದರ್ಭದಲ್ಲಿ ಕೆಲವು ಹಾಟ್‌ ಫೋಟೋಗಳನ್ನ ಅವರು ಹಂಚಿಕೊಂಡಿದ್ದಾರೆ.

ಬೆಂಗಳೂರು (ಜು.5): ಕನ್ನಡದ ಪ್ರಖ್ಯಾತ ಸೀರಿಯಲ್‌ಗಳಾದ ಬಂದೇ ಬರತಾವ ಕಾಲ, ಜೋಗುಳ, ಕಿನ್ನರಿ, ಗೆಜ್ಜೆಪೂಜೆ, ಮೂರುಗಂಟು, ಲವಲವಿಕೆ, ಅನುರಾಗ ಸಂಗಮ, ಕನ್ಯಾದಾನ, ಪ್ರೇರಣ, ಕಸ್ತೂರಿ ನಿವಾಸ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್‌ ಆಗಿದ್ದ ಜ್ಯೋತಿ ರೈ ಯಾವಾಗ ಪಕ್ಕದ ತಮಿಳುನಾಡು, ಆಂಧ್ರಪ್ರದೇಶಕ್ಕೆ ಹೋದರು ಅನ್ನೋದೇ ಗೊತ್ತಾಗಲಿಲ್ಲ. ತೆಲುಗು, ತಮಿಳು ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಜ್ಯೋತಿ ರೈ ಕಾಲಕಾಲಕ್ಕೆ ಕನ್ನಡದ ಕೆಲವು ಸಿನಿಮಾಗಳನ್ನೂ ನಟಿಸುವ ಮೂಲಕ ತವರುಮನೆಯ ನಂಟು ಉಳಿಸಿಕೊಂಡಿದ್ದರು. ಸಿನಿಮಾ ಹಾಗೂ ಸೀರಿಯಲ್‌ನಲ್ಲಿ ಸೀರೆಯಿಟ್ಟು ಸುಂದರಾಗನೆಯಾಗಿ ಕಾಣಸಿಕೊಳ್ಳುತ್ತಿದ್ದ ಜ್ಯೋತಿ ರೈ ಅವರ ಇನ್ನೊಂದು ಅವತಾರ ಸೋಶಿಯಲ್‌ ಮೀಡಿಯಾಗಳಲ್ಲಿ ಅನಾವರಣವಾಗುತ್ತಿತ್ತು. ಸೀರಿಯಲ್‌ಗಳಲ್ಲಿ ಅಮ್ಮನ ಪಾತ್ರದಲ್ಲಿ ನಟಿಸುತ್ತಿದ್ದ ಜ್ಯೋತಿ ರೈ ಫೋಟೋಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ನೋಡಿದ್ರೆ, 'ಅಮ್ಮಮ್ಮ..' ಎನ್ನುವಂತೆ ಇರುತ್ತಿದ್ದವು. ಇದೆಲ್ಲದರ ನಡುವೆ ಇತ್ತೀಚೆಗೆ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಅನಾಮಿಕನೊಬ್ಬ ಸೋಶಿಯಲ್‌ಮೀಡಿಯಾದಲ್ಲಿ ಹರಿಬಿಟ್ಟಿದ್ದ.

ಜ್ಯೋತಿ ರೈ 20ನೇ ವಯಸ್ಸಲ್ಲೆ ಪದ್ಮನಾಭ್ ರೈ ಎಂಬುವವರನ್ನು ಮದುವೆ ಆಗಿದ್ದರು. ಆದರೆ, 2023ರಲ್ಲಿ ತೆಲುಗಿನ ನಿರ್ದೇಶಕ ಸುರೇಶ್‌ ಕುಮಾರ್‌ ಪೂರ್ವಜ್‌ ಜೊತೆ ಎರಡನೇ ಮದುವೆಯಾಗಿದ್ದಾರೆ. ಅವರ ಜೊತೆಗಿನ ಅಶ್ಲೀಲ ವಿಡಿಯೋ ಇದು ಎಂದು ಹೇಳಲಾಗಿತ್ತು. ಆದರೆ, ಜ್ಯೋತಿ ರೈ ಮಾತ್ರ ಈ ವಿಡಿಯೋಗೂ ನನಗೂ ಸಂಬಂಧವೇ ಇಲ್ಲ. ನನಗೆ ಈ ವಿಡಿಯೋವನ್ನು ಕಳಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಸೈಬರ್‌ ಪೊಲೀಸ್‌ಗೆ ದೂರು ನೀಡಿದ್ದರು. ಇಷ್ಟೆಲ್ಲಾ ವಿಚಾರಗಳಾದ ಮೇಲೆ ಸೋಶಿಯಲ್‌ ಮೀಡಿಯಾದಲ್ಲಿ ಜ್ಯೋತಿ ರೈ ತಣ್ಣಗಾಗಿದ್ದರು.

ಜುಲೈ 4 ರಂದು ತಮ್ಮ 40ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿರುವ ಜ್ಯೋತಿ ರೈ ಇದರ ಹಿನ್ನಲೆಯಲ್ಲಿ ಮತ್ತೊಂದಿಷ್ಟು ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಎಲ್ಲಾ ಫೋಟೋಗಳಿಗೂ ಸಾಕಷ್ಟು ಲೈಕ್ಸ್‌ಗಳು ಹಾಗೂ ಕಾಮೆಂಟ್‌ಗಳು ಬಂದಿವೆ. ಫೈನ್‌ ಫ್ರೇಮ್‌ ಫಿಲ್ಮ್ಸ್‌ ನಿರ್ಮಾಣದ ಹೊಸ ಸಿನಿಮಾದಲ್ಲಿ ಜ್ಯೋತಿ ರೈ ನಟಿಸುತ್ತಿದ್ದಾರೆ. ಅದರೊಂದಿಗೆ ಅವರ ಬಹುನಿರೀಕ್ಷಿತ ಪ್ರೆಟಿ ಗರ್ಲ್‌ ಹಾಗೂ ನೋ ಮೋರ್‌ ಸೀಕ್ರೆಟ್ಸ್‌ ಎನ್ನುವ ವೆಬ್‌ ಸಿರೀಸ್‌ಗಳೂ ಕೂಡ ಬಿಡುಗಡೆಗೆ ಸಜ್ಜಾಗಿದೆ. ಈ ಎರಡೂ ವೆಬ್‌ ಸಿರೀಸ್‌ಗಳಲ್ಲಿ ಜ್ಯೋತಿ ರೈ ಹಿಂದೆಂದೂ ಕಾಣದಷ್ಟು ಬೋಲ್ಡ್‌ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. 

ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್‌ ಮಾಡಿದ್ಯಾರು? ಉದ್ದೇಶವೇನು..

ಹೀಗಿರುವಾಗ ಎರಡು ದಿನಗಳ ಹಿಂದೆ ಇನ್ಸ್‌ಟಾಗ್ರಾಮ್‌ನಲ್ಲಿ ಎದೆಯುಬ್ಬಿಸಿ ನಿಂತಿರುವ ಫೋಟೋಗಳನ್ನು ಹಂಚಿಕೊಂಡಿರುವ ಜ್ಯೋತಿ ರೈ, 'ಜಾರ್ಜಿಯಸ್‌ ಆಗಿದ್ರೂ ಉಗ್ರ ರೂಪ. ತನ್ನ ಚಿನ್ನದಂಥ ಹೃದಯದಿಂದ ದೃಢ ನಿರ್ಧಾರದಿಂದ ಕಾನೂನನ್ನು ಜಾರಿ ಮಾಡುವಾಕೆ..' ಎಂದು ನೋ ಮೋರ್‌ ಸೀಕ್ರೆಟ್ಸ್‌ ವೆಬ್‌ ಸಿರೀಸ್‌ನ ಸಾಲುಗಳನ್ನು ಅವರು ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರಕ್ಕೆ ನಾನು ನೀಡಿರುವ ಕ್ಯಾಪ್ಶನ್‌ ಇದು. ಈ ಫೋಟೋಗಳನ್ನು ನೋಡಿದ ಬಳಿಕ ಇದಕ್ಕೆ ನಿಮ್ಮ ಕ್ಯಾಪ್ಶನ್‌ ಏನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದು ರಿಯಲ್‌, ವೈರಲ್‌ ಮಾಡೋ ಧೈರ್ಯ ನಿಮ್ಮಲಿದ್ಯಾ? ಅಶ್ಲೀಲ ವಿಡಿಯೋ ಬೆನ್ನಲ್ಲೇ ಜ್ಯೋತಿ ರೈ ಚಾಲೆಂಜ್‌!

ಜ್ಯೋತಿ ರೈ ಯಾವ ಉದ್ದೇಶಕ್ಕಾಗಿ ಫೋಟೋ ಹಾಕಿದ್ದರೂ ಆ ಉದ್ದೇಶ ಈಡೇರಿದಂತೆ ಕಾಣುತ್ತಿದೆ. ಇಲ್ಲಿಯವರೆಗೂ 35 ಸಾವಿರ ಮಂದಿ ಈ ಫೋಟೋವನ್ನು ವೀಕ್ಷಣೆ ಮಾಡಿದ್ದು, 300ಕ್ಕೂ ಅಧಿಕ ಮಂದಿ ಕಾಮೆಂಟ್‌ ಮಾಡಿದ್ದಾರೆ. ಹೆಚ್ಚಿನ ಮಂದಿ 'ಫೋಟೋ ಸಖತ್‌ ಆಗಿದೆ..' ಎಂದು ಹೇಳಿದ್ದರೆ, ಇನ್ನೂ ಕೆಲವರು ಜ್ಯೋತಿ ರೈ ಅವರ ಶೇಪ್‌ ಹಾಗೂ ಸ್ಟ್ರಚರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋದಲ್ಲಿ ನೀವು ಬಹಳ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದೀರಿ ಎಂದೂ ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.