Karma and Love: ನೈಜ ಪ್ರೀತಿ, ಸಂಗಾತಿಗಾಗಿ ಪರಿತಪಿಸುತ್ತೀದ್ದೀರಾ? ನಿಮ್ಮ ಕರ್ಮ ಏನನ್ನುತ್ತೆ ಗೊತ್ತಾ?

ನೈಜವಾದ ಪ್ರೀತಿ ದೊರೆಯದೇ ನಿರಾಶರಾಗಿದ್ದೀರಾ? ಪ್ರೀತಿ ದೊರೆತರೂ ಅದು ಕ್ಷಣಿಕವಾಗುತ್ತಿದೆಯಾ? ಅಥವಾ ನೀವಿನ್ನೂ ಸಿಂಗಲ್ ಆಗಿಯೇ ಉಳಿದಿದ್ದೀರಾ? ಇದಕ್ಕೆ ನಿಮ್ಮ ಕರ್ಮ ಏನನ್ನುತ್ತೆ ಗೊತ್ತಾ? Law of Karma ಪ್ರಕಾರ, ಹಲವು ಅಂಶಗಳಿಂದ ನಿಮಗೆ ನಿಜವಾದ ಸಾಂಗತ್ಯ ದೊರಯದೇ ಇದ್ದಿರಬಹುದು. 
 

According to laws of karma some reasons for still you are single

ಎಂತಹ ಸಂಗಾತಿ ಬೇಕು ಎಂದು ಯಾರನ್ನೇ ಕೇಳಿ, ತಮಗೆ ಸಪೋರ್ಟಿವ್ ಆಗಿರುವ, ತಮ್ಮ ಬಗ್ಗೆ ನೈಜ ಪ್ರೀತಿ ಹೊಂದಿರುವಂಥವರೇ ಸಂಗಾತಿಯಾಗಿ ದೊರೆಯಬೇಕು ಎಂದು ಬಯಸುತ್ತಾರೆ. ಆದರೆ, ಎಲ್ಲರಿಗೂ ತಮಗೆ ಹೊಂದುವ ಸಂಗಾತಿ ದೊರೆಯುವುದಿಲ್ಲ ಅಥವಾ ಕೆಲವರಿಗೆ ಸಂಗಾತಿಯೇ ದೊರಕುವುದಿಲ್ಲ. ಇದಕ್ಕೆ ಸಾಮಾಜಿಕ ಕಾರಣಗಳೂ ಇದ್ದಿರಬಹುದು. ಆದರೆ, ನಮ್ಮ ಕರ್ಮಫಲಗಳೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರೆ ಅಚ್ಚರಿಯಾಗಬಹುದು. ನಿಜವಾದ ಸಾಂಗತ್ಯ ಪಡೆಯಲು ಸಾಧ್ಯವಾಗದೆ, ನೈಜ ಪ್ರೀತಿ ದೊರೆಯದೆ ಕೆಲವೊಮ್ಮೆ ಜೀವನ ಬೇಸರವೆನಿಸಬಹುದು. ಆದರೆ, ಒಂದನ್ನು ನೆನಪಿಡಬೇಕು, ನಾವು ಯಾವುದಕ್ಕೆಲ್ಲ ಅರ್ಹತೆ ಹೊಂದಿದ್ದೇವೋ ಅದನ್ನೆಲ್ಲ ಈ ಬ್ರಹ್ಮಾಂಡ ನಮಗೆ ನೀಡಿದೆ. ನೀವು ಇನ್ನೂ ಏಕಾಂಗಿಯಾಗಿದ್ದೀರಿ ಎಂದರೆ, ನಿಮಗೆ ಹೊಂದುವವರು ದೊರಕುವ ಸಮಯ ಇನ್ನೂ ಬಂದಿಲ್ಲ ಎಂದರ್ಥ. ನಮ್ಮ ಪ್ರೀತಿ ಜೀವನದಲ್ಲಿ ಕರ್ಮಕ್ಕೆ ಸಂಬಂಧಿಸಿದ ಅಂಶಗಳು ಬಹಳಷ್ಟಿರುತ್ತವೆ. ಹೀಗಾಗಿ, ಪ್ರೀತಿಯಲ್ಲಿ ಭರವಸೆ ಕಳೆದುಕೊಳ್ಳಬಾರದು. ಕರ್ಮಫಲಗಳು ವಿಶಿಷ್ಟ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ನೀವು ಯಾವಾಗ ನಿರೀಕ್ಷೆಯನ್ನೇ ಮಾಡುವುದಿಲ್ಲವೋ ಆಗ ನಿಮಗೆ ಸೂಕ್ತ ಸಂಗಾತಿ ದೊರೆಯಬಹುದು. ಒಂದೊಮ್ಮೆ ನಿಮಗಿನ್ನೂ ಪ್ರೀತಿ ದೊರಕಿಲ್ಲ ಎಂದಾದರೆ ಕರ್ಮದ ನಿಯಮದ ಪ್ರಕಾರ ಈ ಕೆಲವು ಕಾರಣಗಳಿರಬಹುದು. ಅದನ್ನು ಅರಿತುಕೊಂಡು ನಿಮ್ಮಲ್ಲಿ ನೀವು ಸೂಕ್ತ ತಿದ್ದುಪಡಿ ತಂದುಕೊಂಡರೆ ಪರಿಣಾಮ ಉತ್ತಮವಾಗಿರುತ್ತದೆ.

•    ಕೀಳರಿಮೆ (Low self Esteem) ಹೊಂದಿದ್ದೀರಾ?
ಸಾಮಾನ್ಯವಾಗಿ ಜನ ಪ್ರೀತಿಗೆ (Love) ತಾವು ಅರ್ಹರು ಎಂದುಕೊಳ್ಳುತ್ತಾರೆ ಹಾಗೂ ಸ್ವೀಕರಿಸುತ್ತಾರೆ. ಆದರೆ, ನೀವು ಸ್ವತಃ ನೆಗೆಟಿವ್ (Negative) ಸ್ವರೂಪ ಹೊಂದಿದ್ದರೆ ಅಂಥದ್ದೇ ಮಾದರಿಯ ಜನರತ್ತ ನೀವು ಆಕರ್ಷಿತರಾಗುತ್ತೀರಿ. ನಿಜವಾದ ಪ್ರೀತಿ ದೊರೆಯಬೇಕೆಂದರೆ ನಿಮ್ಮೊಳಗೆ ಸ್ವಚ್ಛ ಭಾವನೆ ಚಿಲುಮೆಯಂತೆ ಮೂಡಬೇಕು. ನಿಜವಾದ, ಧನಾತ್ಮಕ ಸಂಬಂಧಕ್ಕೆ (Posotive Relationship) ನಾವು ಅರ್ಹ ಎಂದು ಭಾವಿಸಿದಾಗ ಸೂಕ್ತ ಸಂಗಾತಿ ದೊರೆಯುತ್ತಾರೆ. 

Gautam Buddha Story: ಕರ್ಮ ಎಂದರೇನು? ರಾಜನ ಸಾವನ್ನು ಬಯಸಿದ ವ್ಯಾಪಾರಿಯ ಕತೆ!

•    ಸ್ವ ಅರಿವಿಲ್ಲವಿರುವುದು 
ಯಾರಾದರೂ ಬಂದು ನಮ್ಮನ್ನು ಉದ್ಧಾರ ಮಾಡುತ್ತಾರೆ ಎನ್ನುವ ಭಾವನೆ ಹಲವರದ್ದು. ಅವರು ಏಕಾಂಗಿ (Lonely) ಭಾವನೆ ಹೊಂದಿರುತ್ತಾರೆ. ಆದರೆ, ನಿಮ್ಮನ್ನು ನೀವು ಮೊದಲು ಅರಿತುಕೊಳ್ಳಿ ಎನ್ನುತ್ತದೆ ಕರ್ಮ (Karma). ಜೀವನವು (Life) ಸುಂದರವಾಗಿ ನಿಮ್ಮನ್ನು ಆವರಿಸಿಕೊಂಡಿದೆ. ಬದುಕು ಅರ್ಥವತ್ತಾಗಿದೆ ಎನ್ನುವುದು ನಿಮ್ಮೊಳಗೆ ಮೂಡಬೇಕು. ಮತ್ತು ನಿಮ್ಮೊಳಗಿನ ಅಶಾಂತಿ ತೊಲಗಬೇಕು. 

•    ಹಿಂದಿನ ಕರ್ಮಗಳ ನಿವಾರಣೆ
ನೀವಿನ್ನೂ ಸಂಗಾತಿ (Partner) ದೊರೆಯದೆ ಸಿಂಗಲ್ ಆಗಿರುವುದಕ್ಕೆ ಹಿಂದಿನ ಕರ್ಮಗಳು ಇನ್ನೂ ನಿವಾರಣೆಯಾಗಿಲ್ಲ ಎನ್ನುವ ಅರ್ಥವಿರಬಹುದು. ಹಿಂದಿನ ನೋವುಗಳು (Pain), ಇತಿಹಾಸದ ಸಂಬಂಧಗಳ ಭಾವನೆಗಳು ಇನ್ನೂ ನಿಮ್ಮಲ್ಲಿ ಕಳೆದುಹೋಗದೆ ಇರಬಹುದು. Law of Karma ಪ್ರಕಾರ, ಹಿಂದಿನ ಕೆಟ್ಟ ಪ್ರಭಾವ ಹೋಗಬೇಕು. ಮತ್ತು ನೀವು ಸ್ವಯಂ ಪ್ರೀತಿಯಲ್ಲೇ ಮುಳುಗಿಹೋಗಿರಬಹುದು, ಇನ್ನೊಬ್ಬರನ್ನು ಪ್ರೀತಿಸುವ, ಬದ್ಧತೆ ಹೊಂದುವ ಆಸಕ್ತಿ ಆಂತರಿಕವಾಗಿ ನಿಮ್ಮಲ್ಲಿ ಇಲ್ಲದಿರಬಹುದು. ಇದನ್ನೂ ಚೆಕ್ ಮಾಡಿಕೊಳ್ಳಿ. 

•    ನೈಜ ಪ್ರೀತಿ ಬಗ್ಗೆ ನಂಬಿಕೆ ಕಳೆದುಕೊಂಡಿರಬಹುದು
ಹಲವು ಸಂಬಂಧಗಳು, ಸ್ನೇಹಗಳು ವಿಫಲಗೊಂಡ ಪರಿಣಾಮವಾಗಿ ನೀವು ನೈಜ ಪ್ರೀತಿಯಲ್ಲಿ ವಿಶ್ವಾಸ (Trust) ಕಳೆದುಕೊಂಡಿರಬಹುದು. ಆದರೆ, ನಿಮ್ಮ ಹೃದಯವನ್ನು (Heart) ಇಂಥದ್ದೊಂದು ನೋವಿಗೆ ದೂಡದೆ ಇದ್ದರೆ ಖಂಡಿತವಾಗಿ ಸಂತಸ (Happiness) ದೊರೆಯುತ್ತದೆ ಹಾಗೂ ಧನಾತ್ಮಕ ಜನರೊಂದಿಗೆ ಒಡನಾಟ ಸಾಧ್ಯವಾಗುತ್ತದೆ. 

Chanakya Niti : ಎಷ್ಟೇ ಕಷ್ಟಪಟ್ರೂ ಇವು ನಿಮಗೆ ಸಿಗಲು ಅದೃಷ್ಟ ಬೇಕು

•    ನಿಮ್ಮ ಜೀವನಕ್ಕೆ ಮಹತ್ತರ ಉದ್ದೇಶವಿರಬಹುದು (Big Mission)
ನಿಮಗೆ ಸರಿಹೊಂದುವ ಜನರನ್ನು ಎಂದಿಗೂ ಭೇಟಿ ಮಾಡಿಯೇ ಇಲ್ಲ ಎನ್ನುವ ಭಾವನೆ ನಿಮ್ಮಲ್ಲಿದೆಯಾ? ಹಾಗಿದ್ದರೆ ಕರ್ಮಫಲದ ಪ್ರಕಾರ, ಈ ಬ್ರಹ್ಮಾಂಡ (Universe) ನಿಮ್ಮಿಂದ ಮಹತ್ತರ ಕಾರ್ಯ ನಿರೀಕ್ಷೆ ಮಾಡುತ್ತಿರಬಹುದು. ಮತ್ತೊಬ್ಬರ ಜೀವನಕ್ಕೆ ನೆರವಾಗಲು ನಿಮ್ಮನ್ನು ರೂಪಿಸಿರಬಹುದು. ನಿಮ್ಮಲ್ಲಿ ಅಂತಹ ಶಕ್ತಿ ಇರುವುದನ್ನು ಬ್ರಹ್ಮಾಂಡ ಗುರುತಿಸಿರಬಹುದು. 
•    ನೀವು ಕೆಟ್ಟ ಸಂಬಂಧದಲ್ಲಿ (Toxic Relation) ಸಿಲುಕಿರಬಹುದು. ಇದರಿಂದ ಈ ಜಗತ್ತು ನೀಡುವ ಉತ್ತಮ ಫಲಗಳನ್ನು ಅನುಭವಿಸಲು ನಿಮ್ಮಿಂದ ಸಾಧ್ಯವಾಗದಿರಬಹುದು. ಕೆಟ್ಟ ಸಂಬಂಧದಲ್ಲಿರುವಾಗ ಉತ್ತಮ ಕರ್ಮಫಲ ಪಡೆಯಲು ಸಾಧ್ಯವಾಗುವುದಿಲ್ಲ. 
 
 

Latest Videos
Follow Us:
Download App:
  • android
  • ios