Asianet Suvarna News Asianet Suvarna News

Chanakya Niti : ಎಷ್ಟೇ ಕಷ್ಟಪಟ್ರೂ ಇವು ನಿಮಗೆ ಸಿಗಲು ಅದೃಷ್ಟ ಬೇಕು

ಚಾಣಕ್ಯ ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಹೇಳಿದ್ದಾರೆ. ಚಾಣಕ್ಯ ನಮ್ಮ ಜನ್ಮ, ಕರ್ಮಗಳ ಬಗ್ಗೆಯೂ ಹೇಳಿದ್ದಾರೆ. ನಮ್ಮ ಈಗಿನ ಬದುಕು ಹಿಂದಿನ ಜನ್ಮದ ಜೊತೆ ಗಾಢ ಸಂಬಂಧ ಹೊಂದಿದೆ ಎನ್ನುವ ಚಾಣಕ್ಯ, ಇಲ್ಲಿ ಏನೇ ಮಾಡಿದ್ರೂ ಕೆಲವೊಂದು ಲಭಿಸೋದಿಲ್ಲ ಎನ್ನುತ್ತಾರೆ. 
 

Chanakya Niti These Five Things People Always Have With Luck
Author
First Published Apr 15, 2023, 6:09 PM IST

ಕಠಿಣ ಪರಿಶ್ರಮವಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.  ಈ ಮಾತನ್ನು ಅನೇಕರು ಹೇಳ್ತಿರುತ್ತಾರೆ. ಇನ್ನು ಕೆಲ ಜನರು ಭಾಗ್ಯವನ್ನು ಹೆಚ್ಚಾಗಿ ನಂಬುತ್ತಾರೆ. ಯಾವುದೇ ಕೆಲಸ ಆಗ್ಲಿ, ಬಿಡಲಿ ಅದೃಷ್ಟ ಸರಿಯಿಲ್ಲ, ನನಗೆ ಭಾಗ್ಯವಿಲ್ಲ ಎನ್ನುತ್ತಾರೆ. ಆಚಾರ್ಯ ಚಾಣಕ್ಯ ಕೂಡ  ಕೆಲವೊಂದು ವಿಷ್ಯಕ್ಕೆ ಭಾಗ್ಯ ಬಹಳ ಮುಖ್ಯ ಎನ್ನುತ್ತಾರೆ. ನೀವು ಎಷ್ಟೇ ಕಷ್ಟಪಟ್ಟರೂ ಬಯಸಿದ್ದು ಲಭಿಸೋದಿಲ್ಲ. ಅದು ಅದೃಷ್ಟದಿಂದ ಮಾತ್ರ ಸಿಗೋದು ಎಂದಿದ್ದಾರೆ. 

ಆಚಾರ್ಯ ಚಾಣಕ್ಯ (Chanakya), ಉತ್ತಮ ಜೀವನಕ್ಕಾಗಿ ಅನೇಕ ಸಲಹೆಗಳನ್ನು ನೀಡಿದ್ದಾರೆ. ಆಚಾರ್ಯ ಚಾಣಕ್ಯ ಅದ್ಭುತ ಅರ್ಥಶಾಸ್ತ್ರಜ್ಞ (Economist) ಮಾತ್ರವಲ್ಲ ಸಮಾಜಶಾಸ್ತ್ರಜ್ಞ. ಆಚಾರ್ಯ ಚಾಣಕ್ಯರ ನೀತಿಗಳನ್ನು ಅನುಸರಿಸುವ ವ್ಯಕ್ತಿ, ತನ್ನ ಜೀವನದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸಬೇಕಾಗಿಲ್ಲ. ಚಾಣಕ್ಯರನ್ನು ನಂಬಿದ ವ್ಯಕ್ತಿ ತೊಂದರೆಗೆ ಸಿಲುಕಿದ್ರೆ ಅದ್ರಿಂದ ಹೇಗೆ ಹೊರಗೆ ಬರಬೇಕೆಂಬುದು ಕೂಡ ಅರಿತಿರುತ್ತಾನೆ. ಚಾಣಕ್ಯ ಹೇಳುವಂತೆ, ನಮ್ಮ ಜೀವನದಲ್ಲಿ ಐದು ವಿಷ್ಯಗಳು ಅದೃಷ್ಟದಿಂದ ಲಭಿಸುತ್ತವಂತೆ. ಏನೆಲ್ಲ ನಮಗೆ ಅದೃಷ್ಟ (Good Luck) ದಿಂದ ಸಿಗುತ್ತೆ ಎಂಬುದನ್ನು ನಾವಿಂದು ಹೇಳ್ತೇವೆ.

ನಿಮ್ಮ ಅಂಗೈಯಲ್ಲಿ ಈ ರೇಖೆಗಳಿವೆಯೇ? ಹಾಗಿದ್ರೆ ನೀವು ರಾಜರಂತೆ ಬದುಕುತ್ತೀರಿ!

ಮನುಷ್ಯ ಜನ್ಮ : ಮನುಷ್ಯ ಜನ್ಮ ಎಲ್ಲರಿಗೂ ಲಭಿಸುವಂತಹದ್ದ.  ಮನುಷ್ಯನಾಗಿ ಹುಟ್ಟಿದ್ದು ಪುಣ್ಯ ಎಂಬುದನ್ನು ನೀವು ಕೇಳಿರ್ತೀರಿ. ಆಚಾರ್ಯ ಚಾಣಕ್ಯ ಕೂಡ ಮನುಷ್ಯ ಜನ್ಮ ನಿಮ್ಮ ಪರಿಶ್ರಮದಿಂದ ಬರೋದಲ್ಲ ಎನ್ನುತ್ತಾರೆ. ಯಾವ ತಾಯಿ ಹೊಟ್ಟೆಯಲ್ಲಿ ನೀವು ಜನಿಸಬೇಕು ಎನ್ನುವುದು ಅದೃಷ್ಟದಿಂದ ಬರುವಂತಹದ್ದು. ನೀವು ಪ್ರಾಣಿ ಹೊಟ್ಟೆಯ ಬದಲು ಮನುಷ್ಯರ ಗರ್ಭ ಸೇರಿದ್ರೆ ಅದನ್ನು ಅದೃಷ್ಟ ಎನ್ನುತ್ತಾರೆ ಚಾಣಕ್ಯ.

ಭಾಗ್ಯದಿಂದ ಸಿಗುತ್ತೆ ಆಯಸ್ಸು : ಆಯಸ್ಸು ಕೂಡ ಭಾಗ್ಯದಿಂದ ಬರುವಂತಹದ್ದು. ಮನುಷ್ಯ ಹುಟ್ಟುವಾಗ್ಲೇ ಆತನ ಆಯಸ್ಸು ಇಷ್ಟೆಂದು ನಿಶ್ಚಯವಾಗಿರುತ್ತದೆ. ಅದನ್ನು ಎಷ್ಟೇ ಕಷ್ಟಪಟ್ಟರೂ, ಹೋರಾಡಿದ್ರೂ ಗೆಲ್ಲಲು ಸಾಧ್ಯವಿಲ್ಲ. ನೀವು ಎಷ್ಟೇ ಹಣವನ್ನು ಗಳಿಸಿದ್ರೂ, ಎಷ್ಟೇ ಹಣ  ನೀಡಿದ್ರೂ ನಿಮ್ಮ ಆಯಸ್ಸು ಹೆಚ್ಚಾಗಲು ಸಾಧ್ಯವಿಲ್ಲ.

ಈ ಬಾರಿಯ ಸೂರ್ಯ ಗ್ರಹಣದಿಂದ ಯಾವೆಲ್ಲಾ ರಾಶಿಗಳಿಗೆ ಶುಭವಾಗಲಿದೆ!

ಸಾವು (Death) : ಈ ವಯಸ್ಸಿನಲ್ಲಿ ವ್ಯಕ್ತಿ ಸಾಯಬೇಕು ಎಂಬುದನ್ನು ತಾಯಿಯ ಗರ್ಭದಲ್ಲಿಯೇ ಬರೆಯಲಾಗಿರುತ್ತದೆ. ಅದಕ್ಕಾಗಿಯೇ ನೀವು ಬಯಸಿದರೂ ಈ ವಿಷಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ಆಚಾರ್ಯ ಚಾಣಕ್ಯರು ಯಾವಾಗಲೂ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡ್ತಾರೆ. ಈಗ ನೀವು ಮಾಡಿದ ಕೆಟ್ಟ ಕರ್ಮಗಳ ಫಲ ಮುಂದಿನ ಜನ್ಮದಲ್ಲಿ  ನಿಮಗೆ ಲಭಿಸುತ್ತದೆ.  

ಕರ್ಮ (Work) : ಆಚಾರ್ಯ ಚಾಣಕ್ಯ ಪ್ರಕಾರ ಕರ್ಮ ಕೂಡ ಪರಿಶ್ರಮದಿಂದ, ಹಣದಿಂದ ಸಿಗುವಂತಹದ್ದಲ್ಲ. ಅದು ಕೂಡ ಭಾಗ್ಯದಿಂದ ಸಿಗುವುದು.  ಕರ್ಮವು ನಿಮ್ಮ ಹಿಂದಿನ ಜನ್ಮವನ್ನು ಅವಲಂಬಿಸಿರುತ್ತದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಕರ್ಮಗಳಿಗೆ ಅನುಗುಣವಾಗಿ ಸುಖ-ದುಃಖಗಳನ್ನು ಅನುಭವಿಸಬೇಕಾಗುತ್ತದೆ.

ಧನ – ಸಂಪತ್ತು (Money and Prosperity) : ಬಡವರು ಶ್ರೀಮಂತಿಕೆ ಕಸನು ಕಾಣ್ತಾರೆ. ಹಗಲಿರುಳು ದುಡಿಯುತ್ತಾರೆ. ಆದ್ರೆ ಎಷ್ಟೇ ಕಷ್ಟಪಟ್ಟರೂ ಕೆಲವೊಮ್ಮೆ ಹಣವಂತರಾಗಲು ಸಾಧ್ಯವಿಲ್ಲ. ಹಗಲು – ರಾತ್ರಿ ಕೆಲಸ ಮಾಡಿದ್ರೂ, ದುಡಿದ ಹಣವನ್ನೆಲ್ಲ ಕೂಡಿಟ್ಟರೂ ಸಂಪತ್ತು ಗಳಿಸಲು ಸಾಧ್ಯವಾಗೋದಿಲ್ಲ. ಚಾಣಕ್ಯ ಪ್ರಕಾರ, ಧನ, ಸಂಪತ್ತು ಕೂಡ ಭಾಗ್ಯದಿಂದ ಸಿಗುವಂತಹದ್ದು. ಜನ್ಮಕ್ಕಿಂತ ಮೊದಲೇ ಇದು ನಿರ್ಧಾರವಾಗುತ್ತದೆ. ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ತನ್ನಲ್ಲಿರುವ ಹಣದಿಂದ ತೃಪ್ತನಾಗಬೇಕು ಎನ್ನುತ್ತಾರೆ ಚಾಣಕ್ಯ.

ಶಿಕ್ಷಣ : ಕೆಲವರಿಗೆ ಏನೇ ಮಾಡಿದ್ರೂ ವಿದ್ಯೆ ಹತ್ತೋದಿಲ್ಲ. ಟ್ಯೂಷನ್ ಗೆ ಹೋಗ್ಲಿ ಇಲ್ಲ ರಾತ್ರಿ ನಿದ್ರೆಗೆಟ್ಟು ಓದಲಿ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುತ್ತದೆ. ಓದಿದ್ದು ನೆನಪಿನಲ್ಲಿ ಉಳಿಯೋದಿಲ್ಲ. 10ನೇ ತರಗತಿ ಪಾಸ್ ಆಗೋದೆ ಕಷ್ಟವಾಗುತ್ತದೆ. ಇನ್ನು ಕೆಲವರಿಗೆ ಸ್ವಲ್ಪ ಓದಿದ್ರೂ ತಲೆಯಲ್ಲಿ ಉಳಿಯುತ್ತದೆ. ಉನ್ನತ ಶಿಕ್ಷಣ ಪಡೆದು ಒಳ್ಳೆ ಹುದ್ದೆ ಸೇರುತ್ತಾರೆ. ಆಚಾರ್ಯ ಚಾಣಕ್ಯ ಪ್ರಕಾರ, ಶಿಕ್ಷಣ ಕೂಡ ಭಾಗ್ಯದಿಂದ ಲಭಿಸುತ್ತದೆಯಂತೆ. 
 

Follow Us:
Download App:
  • android
  • ios