ನಿಮ್ಮ ಪೋಷಕರು ನಿಮ್ಮನ್ನು ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಹಾಗಾಗಿ, ನಿಮ್ಮ ಮಕ್ಕಳನ್ನೂ ನೋಡಿಕೊಳ್ಳಿ ಎಂದು ಹೇಳಿ ಅವರಿಗೆ ಕಷ್ಟ ಕೊಡಲು ನಿಮಗಿಷ್ಟವಿಲ್ಲ. ಅದೂ ಅಲ್ಲದೆ, ಬೇರೆ ಬೇಬಿ ಸಿಟ್ಟರನ್ನು ನೋಡಿ ನಿಮ್ಮ ಸ್ವಾತಂತ್ರ್ಯ ಹಾಗೂ ಅವಲಂಬನೆರಹಿತ ಜೀವನವನ್ನು ಅವರಿಗೆ ಪ್ರೂವ್ ಮಾಡಬೇಕಾಗಿದೆ. ಆದರೆ, ನಿಮ್ಮ ಪೋಷಕರಿಗೇ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಕೇಳುವುದರಿಂದ ನಿಮ್ಮ ಪೋಷಕರಿಗೇ ಆಯಸ್ಸು ಲಾಭವಿದೆ. 

ಎವಲ್ಯೂಶನ್ ಹಾಗೂ ಮಾನವನ ವರ್ತನೆ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮೊಮ್ಮಕ್ಕಳನ್ನು ಕೆಲ ಕಾಲ ನೋಡಿಕೊಂಡ ಹಿರಿಯರು ಇತರೆ ಹಿರಿಯರಿಗಿಂತ ಹೆಚ್ಚು ವರ್ಷ ಬದುಕಿರುತ್ತಾರಂತೆ. ವರ್ಷ 1990 ಹಾಗೂ 2009ರ ನಡುವೆ 70ರಿಂದ 103 ವಯೋಮಾನದ ಸುಮಾರು 500 ಹಿರಿಯರ ಮೇಲೆ ನಡೆಸಿದ ಅಧ್ಯಯನದಿಂದ ಇದು ಸಾಬೀತಾಗಿದೆ. ಬರ್ಲಿನ್ ಏಜಿಂಗ್ ಸೊಸೈಟಿ ನಡೆಸಿದ ಈ ಅಧ್ಯಯನದಲ್ಲಿ ಸ್ವಿಟ್ಜರ್‌ಲೆಂಡ್, ಆಸ್ಟ್ರೇಲಿಯಾ ಹಾಗೂ ಜರ್ಮನ್ ವಿಶ್ವವಿದ್ಯಾಲಯಗಳ ಸಂಶೋಧಕರು ಭಾಗಿಯಾಗಿದ್ದರು. 

ಮಕ್ಕಳಿಗೆ ಕತೆ ಹೇಳೋದ್ರಿಂದ ಏನೆಲ್ಲ ಲಾಭ ಗೊತ್ತಾ?

ಅಧ್ಯಯನ

ಇಲ್ಲಿ ಅಧ್ಯಯನಕ್ಕೆ ಮೊಮ್ಮಕ್ಕಳನ್ನು ಫುಲ್ ಟೈಂ ನೋಡಿಕೊಳ್ಳುವವರಿಗಿಂತ ಕೆಲ ಕಾಲ ನೋಡಿಕೊಳ್ಳುವಂಥ ಹಿರಿಯರನ್ನು ಬಳಸಲಾಗಿತ್ತು. ಮತ್ತು ಮೊಮ್ಮಕ್ಕಳಿಲ್ಲದ ಹಿರಿಯರ ಒಂದು ವರ್ಗವೂ ಇತ್ತು. ಈ ಹಿರಿಯರು ಪೋಷಕರಿಲ್ಲದಾಗ ಮೊಮ್ಮಕ್ಕಳನ್ನು ಎಷ್ಟು ಸಮಯ ನೋಡಿಕೊಳ್ಳುತ್ತಿದ್ದರು, ಹಾಗೂ ಮೊಮ್ಮಕ್ಕಳಿಲ್ಲದವರು ತಮ್ಮ ಮಕ್ಕಳಿಗೆ ಎಷ್ಟು ಬೆಂಬಲವಾಗಿ ನಿಂತಿದ್ದಾರೆ ಎಂಬುದನ್ನೆಲ್ಲ ಅಧ್ಯಯನಕ್ಕೊಳಪಡಿಸಲಾಯಿತು. ಇವರನ್ನು 10 ವರ್ಷಗಳ ಬಳಿಕ ಮತ್ತೆ ಸಂದರ್ಶಿಸಲು ಹೋದಾಗ ತಮ್ಮ ಮೊಮ್ಮಕ್ಕಳನ್ನು ನೋಡಿಕೊಂಡ ಅಜ್ಜಅಜ್ಜಿಯರು ಇನ್ನೂ ಬದುಕಿದ್ದರು. ಅಲ್ಲದೆ, ಮೊಮ್ಮಕ್ಕಳಿಲ್ಲದಿದ್ದರೂ ಮಕ್ಕಳಿಗೆ ಮನೆಗೆಲಸದಲ್ಲಿ ಸಹಾಯ ಮಾಡಿಕೊಂಡಿದ್ದ ಹಿರಿಯರು ಕೂಡಾ ಬದುಕಿದ್ದರು. ಆದರೆ, ಮಕ್ಕಳಿಗಾಗಲಿ, ಮೊಮ್ಮಕ್ಕಳಿಗಾಗಲಿ ಬೆಂಬಲವಾಗದ ಹಿರಿಯರಲ್ಲಿ ಅರ್ಧದಷ್ಟು ಜನರು ಅಧ್ಯಯನ ನಡೆದ ಐದು ವರ್ಷದೊಳಗೇ ಮೃತಪಟ್ಟಿದ್ದರು!

ಈ ಫಲಿತಾಂಶವು ಸ್ವಂತ ಅಜ್ಜಅಜ್ಜಿಯರಿಗಷ್ಟೇ ಸೀಮಿತವಾಗಿಲ್ಲ. ಮಕ್ಕಳಿಲ್ಲದ ಹಿರಿಯರು ಬೇರೆ ಯಾರಿಗೋ ಸಹಾಯ ಮಾಡುವ ಅಭ್ಯಾಸ ಇಟ್ಟುಕೊಂಡವರು ಕೂಡಾ ಹೆಚ್ಚು ಕಾಲ ಬದುಕಿದ್ದರು. 

ಹೀಗೆ ಸಹಾಯ ಮಾಡಿದ್ದವರಲ್ಲಿ ಅರ್ಧದಷ್ಟು ಜನರು ಸರಾಸರಿ ಮತ್ತೂ ಏಳು ವರ್ಷಗಳಷ್ಟು ಕಾಲ ಬದುಕಿದ್ದರೆ, ಸಹಾಯ ಮಾಡದವರು ಸರಾಸರಿ ನಾಲ್ಕು ವರ್ಷ ಮಾತ್ರ ಬದುಕಿದ್ದರು. 

ಬೇಬಿಸಿಟ್ಟಿಂಗ್ ಲಾಭಗಳು

ಬೇಬಿಸಿಟ್ಟಿಂಗ್‌ನಿಂದ ನೇರವಾಗಿ ಆಯಸ್ಸು ಹೆಚ್ಚುತ್ತದೆ ಎಂದು ಈ ಸಂಶೋಧನೆ ಎಲ್ಲೂ ಹೇಳಿಲ್ಲ. ಆದರೆ, ಬೇಬಿಸಿಟ್ಟಿಂಗ್‌ಗೂ ಹೆಚ್ಚಿನ ಆಯಸ್ಸಿಗೂ ಸಂಬಂಧವಿದೆ ಎಂದು ಇದು ತಿಳಿಸಿದೆ. ಹಾಗಾದರೆ ಮೊಮ್ಮಕ್ಕಳನ್ನು ನೋಡಿಕೊಳ್ಳುವುದರಿಂದ ಹೇಗೆಲ್ಲ ಲಾಭಗಳಿವೆ ನೋಡೋಣ.

ಕಾಲ ಕೆಟ್ಟೋಗಿಲ್ಲ ಸ್ವಾಮಿ, ನಮ್ಮ ಕಾಲನೇ ಬೆಸ್ಟ್!

- ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ವಯಸ್ಸಾದವರಿಗೆ ಜೀವನಕ್ಕೊಂದು ಉದ್ದೇಶವಿದೆ, ಅರ್ಥವಿದೆ ಎನಿಸುತ್ತದೆ. ಅಂದರೆ ಅವರು ಪಾಸಿಟಿವ್ ಆಗಿ ಯೋಚಿಸುವುದು ಹೆಚ್ಚುತ್ತದೆ. ಪಾಸಿಟಿವ್ ಥಿಂಕಿಂಗ್‌ನಿಂದಾಗಿ ಹಿರಿಯರು ಹೆಚ್ಚು ಉತ್ಸಾಹದಿಂದ ಬದುಕಬಲ್ಲರು.

- ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ವಯಸ್ಸಾದವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಆ್ಯಕ್ಟಿವ್ ಆಗಿ ಇರಬಲ್ಲರು. ಅಂದರೆ ಅವರಿಗೆ ಎರಡು ರೀತಿಯಲ್ಲೂ ವ್ಯಾಯಾಮ ಸಿಗುತ್ತದೆ. ಇದು ಕೂಡಾ ಅವರ ಆರೋಗ್ಯವನ್ನು ಕಾಪಾಡುತ್ತದೆ.

- ವಯಸ್ಸಾದವರು ಸುಮ್ಮನೆ ಕುಳಿತುಕೊಳ್ಳದೆ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆಂದಾಗ ಪೋಷಕರು ಹಾಗೂ ಮಕ್ಕಳು, ಸೊಸೆ ನಡುವೆ ಸಂಬಂಧ ಹದಗೆಡುವುದು ಕಡಿಮೆಯಾಗುತ್ತದೆ. ಎಲ್ಲರೊಂದಿಗೆ ಸಂಬಂಧ ಚೆನ್ನಾಗಿದ್ದಾಗ ಮಾನಸಿಕವಾಗಿ ನೆಮ್ಮದಿಯಿಂದ ಇರಬಹುದು. ನೆಮ್ಮದಿಯಿದ್ದಲ್ಲಿ ಆರೋಗ್ಯವಿರುತ್ತದೆ. 

- ತಮ್ಮ ಅಗತ್ಯ ಮಕ್ಕಳಿಗಿದೆ, ಮೊಮ್ಮಕ್ಕಳು ತಮ್ಮ ಅನುಭವ ಪಾಠವನ್ನು ಕಲಿಯುತ್ತಿದ್ದಾರೆ ಎಂಬ ವಿಷಯ ಕೂಡಾ ವಯಸ್ಸಾದವರಿಗೆ ಖುಷಿ ನೀಡುತ್ತದೆ. ಇದರೊಂದಿಗೆ ಮೊಮ್ಮಕ್ಕಳೊಂದಿಗೆ ಮತ್ತೆ ಬಾಲ್ಯ ಮರಳಿದಂಥ ಹುಮ್ಮಸ್ಸು ಹಿಂದಿರುಗುತ್ತದೆ. 

ಅಮ್ಮನಾದರೂ ರೊಮ್ಯಾಂಟಿಕ್ ಆಗಿರೋದು ಹೇಗೆ?

- ಮೊಮ್ಮಕ್ಕಳ ವೇಗಕ್ಕೆ ಹೊಂದಲಾಗದೆ ಸುಸ್ತಾಗುತ್ತದೆಯಾದರೂ, ಅವರೊಂದಿಗಿರುವುದು ಮೆದುಳಿಗೆ ಕೆಲಸ ನೀಡುತ್ತದೆ. ಇದರಿಂದ ತಲೆ ಚುರುಕಾಗಿ ಕೆಲಸ ಮಾಡುತ್ತದೆ. ವಯಸ್ಸಾದ ನಂತರ ಬರುವ ಮರೆವಿನ ಕಾಯಿಲೆ ಅಲ್ಜೀಮರ್ಸ್‌ನ್ನು ಇದರಿಂದ ದೂರವಿಡಬಹುದು. 

- ಅಧ್ಯಯನಗಳ ಪ್ರಕಾರ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಹಿರಿಯರಲ್ಲಿ ತಮ್ಮ ಓರಗೆಯವರಿಗೆ ಹೋಲಿಸಿದರೆ ಕಾಯಿಲೆಗಳು ಕಡಿಮೆ.