ರಾತ್ರಿ ವಿಚಿತ್ರವಾಗಿ ಆಡುವ ಪತಿಯಿಂದ ಹಾಳಾಯ್ತು ಮಹಿಳೆ ಸೆಕ್ಸ್ ಲೈಫ್
ದಾಂಪತ್ಯ (Married Life) ಗಟ್ಟಿಯಾಗಿರಬೇಕೆಂದ್ರೆ ಲೈಂಗಿಕ (Sex) ಜೀವನ ಕೂಡ ಮುಖ್ಯ. ಅನೇಕ ಬಾರಿ ಸೆಕ್ಸ್ ಲೈಫ್ ಸರಿಯಾಗಿಲ್ಲವೆಂದ್ರೆ ದಾಂಪತ್ಯ ಹಾಳಾಗುತ್ತದೆ. ತಿಳಿದು, ತಿಳಿಯದೆ ಮಾಡಿದ ತಪ್ಪಿನಿಂದಾಗಿ ಸಂಗಾತಿ (Partner) ಮಧ್ಯೆ ಬಿರುಕು ಮೂಡುತ್ತದೆ. ಇದಕ್ಕೆ ಹವ್ಯಾಸಗಳು ಕಾರಣವಾಗುತ್ತವೆ.
ಜಗತ್ತಿ (World) ನಲ್ಲಿ ಚಿತ್ರವಿಚಿತ್ರ ಜನರಿರ್ತಾರೆ. ವಿಭಿನ್ನ ಅಭ್ಯಾಸ (Practice) ಗಳನ್ನು ಹೊಂದಿರುತ್ತಾರೆ. ಕೆಲವರ ಅಭ್ಯಾಸ ಹಾಗೂ ಹವ್ಯಾಸ (Hobby) ಗಳು ಬೇರೆಯವರಿಗೆ ವಿಚಿತ್ರವೆನ್ನಿಸುತ್ತವೆ. ಅನೇಕ ಬಾರಿ ಇದ್ರಿಂದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೌಟುಂಬಿಕ ಗಲಾಟೆಗೂ ಇದು ಕಾರಣವಾಗಬಹುದು. ವಿಚ್ಛೇದನಕ್ಕೆ ದಾರಿಯಾಗಬಹುದು. ರಾತ್ರಿ ನಿದ್ರೆಯಲ್ಲಿ ಗೊರಕೆ ಹೊಡೆಯುತ್ತಾರೆಂಬ ಕಾರಣಕ್ಕೆ ಬೇರೆಯಾಗುವ ದಂಪತಿಯಿದ್ದಾರೆ. ಹಾಗೆ ಈ ಮಹಿಳೆಯೂ ತನ್ನ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ರಾತ್ರಿ ಗಂಡ ಮಾಡುವ ಕೆಲಸಕ್ಕೆ ಮಹಿಳೆ ಬೇಸತ್ತಿದ್ದಾಳೆ. ಗಂಡನ ವಿಚಿತ್ರ ಅಭ್ಯಾಸದಿಂದಾಗಿ ನಿದ್ರೆ ಕಳೆದುಕೊಂಡಿರುವುದಲ್ಲದೆ ನಮ್ಮಿಬ್ಬರ ಮಧ್ಯೆ ಶಾರೀರಿಕ ಸಂಬಂಧ ಹಾಳಾಗಿದೆ ಎಂದು ಮಹಿಳೆ ಹೇಳಿದ್ದಾಳೆ. ಮಹಿಳೆಯ ಪತಿಯ ಆ ವಿಚಿತ್ರ ಹವ್ಯಾಸವೇನು ಹಾಗೂ ಅದ್ರಿಂದ ಮಹಿಳೆಗೆ ಏನು ಸಮಸ್ಯೆಯಾಗ್ತಿದೆ ಎಂಬುದರ ವಿವರ ಇಲ್ಲಿದೆ.
ಮಹಿಳೆ ಸಮಸ್ಯೆಯೇನು :
ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆ ಹೇಳಿಕೊಂಡಿರುವ ಮಹಿಳೆ ವಿಚ್ಛೇದನದ ಬಗ್ಗೆ ಆಲೋಚನೆ ಮಾಡ್ತಿದ್ದಾಳೆ. ಅಷ್ಟಕ್ಕೂ ಆಕೆ ಗಂಡನಿಗಿರುವ ವಿಚಿತ್ರ ಅಭ್ಯಾಸವೆಂದ್ರೆ ರಾತ್ರಿ ಏಳುವುದು. ಮಧ್ಯರಾತ್ರಿ ಎದ್ದೇಳುವ ಪತಿ ವಿಚಿತ್ರ ಕೆಲಸಗಳನ್ನು ಮಾಡ್ತಾನಂತೆ.
ರಾತ್ರಿ ಎರಡು ಹಂತದಲ್ಲಿ ಮಲಗ್ತಾನೆ ಪತಿ : ನಾವೆಲ್ಲ ರಾತ್ರಿ ಮಲಗಿದ್ರೆ ಬೆಳಿಗ್ಗೆ ಏಳ್ತೇವೆ. ಅನೇಕ ಬಾರಿ ಬೆಳ್ಳಂಬೆಳಿಗ್ಗೆ ಏಳೋದು ಕಷ್ಟವಾಗುತ್ತದೆ. ರಾತ್ರಿ ಶೌಚಾಲಯಕ್ಕೆ ಹೋಗುವ ಅನಿವಾರ್ಯತೆ ಬಂದ್ರೆ ಹಾಸಿಗೆಯಿಂದ ಏಳುವುದು ಬಿಟ್ಟರೆ ಮತ್ತೆ ಯಾವ ಕಾರಣಕ್ಕೂ ಹೇಳುವುದಿಲ್ಲ. ದ್ರೆ ಮಹಿಳೆಯ ಪತಿ ರಾತ್ರಿ ಎರಡು ಹಂತದಲ್ಲಿ ಮಲಗ್ತಾನಂತೆ. ರಾತ್ರಿ ಬೇಗ ನಿದ್ರೆ ಮಾಡುವ ಆತ 4 ಗಂಟೆಗಳ ಕಾಲ ನಿದ್ರೆ ಮಾಡ್ತಾನಂತೆ. ನಂತ್ರ 30 ನಿಮಿಷದಿಂದ 2 ಗಂಟೆಯವರೆಗೆ ಎಚ್ಚರವಾಗಿರುತ್ತಾನಂತೆ. ನಂತ್ರ ಮತ್ತೆ ಮೂರರಿಂದ ನಾಲ್ಕು ಗಂಟೆ ನಿದ್ರೆ ಮಾಡ್ತಾನಂತೆ.
ಚಿಗುರೊಡೆಯುವ ಮುನ್ನ ಕಮರಿದ ಪ್ರೀತಿ, ಸೀನಿಯರ್ ಅಂದುಕೊಂಡರೆ ಉಪನ್ಯಾಸಕರಾಗಿ ಎಂಟ್ರಿ!
ಮಧ್ಯರಾತ್ರಿ ಮಾಡ್ತಾನೆ ಈ ಎಲ್ಲ ಕೆಲಸ : ಒಂದು ನಿದ್ರೆ ಮಾಡಿ ಏಳುವ ವ್ಯಕ್ತಿ ಚಿತ್ರ – ವಿಚಿತ್ರ ಕೆಲಸ ಮಾಡ್ತಾನೆ. ಕೆಲವೊಮ್ಮೆ ಪುಸ್ತಕ ಓದಿದ್ರೆ ಮತ್ತೆ ಕೆಲವೊಮ್ಮೆ ರನ್ನಿಂಗ್ ಮಾಡಲು ಹೋಗ್ತಾನಂತೆ. ಇನ್ನೂ ಕೆಲವು ದಿನ ಟೀ ಕುಡಿಯುತ್ತಾ ಕುಳಿತುಕೊಳ್ತಾನಂತೆ.
ಮದುವೆಯಾದಾಗ ಸರಿಯಾಗಿದ್ದ ಪತಿ ಈಗ ಈ ರೀತಿ ಆಡ್ತಿದ್ದಾನಂತೆ. ಆರಂಭದಲ್ಲಿ ಪತಿಯ ಈ ಹವ್ಯಾಸವನ್ನು ಮಹಿಳೆ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಳಂತೆ. ರಾತ್ರಿ ಪತಿಗೆ ನಿದ್ರೆ ಬರ್ತಿಲ್ಲ. ನಿದ್ರೆ ಬರಲಿ ಎನ್ನುವ ಕಾರಣಕ್ಕೆ ಹೀಗೆಲ್ಲ ಮಾಡ್ತಿದ್ದಾನೆ. ಎಲ್ಲರಿಗಿಂತ ಭಿನ್ನವಾಗಿ ಆಲೋಚನೆ ಮಾಡ್ತಾನೆ ಎಂದುಕೊಂಡಿದ್ದಾಳಂತೆ. ಆದ್ರೆ ಇದೇ ನಂಬಿಕೆಯಲ್ಲಿ ಒಂದು ವರ್ಷ ಕಳೆದಿತ್ತಂತೆ. ವರ್ಷದ ನಂತ್ರವೂ ಪತಿ ಸುಧಾರಿಸಿಲ್ಲ ಎನ್ನುತ್ತಾಳೆ ಆಕೆ.
ಹಾಳಾದ ಸೆಕ್ಸ್ ಲೈಫ್ : ಪತಿಯ ಈ ಚಟದಿಂದ ಮಹಿಳೆಯ ಸೆಕ್ಸ್ ಲೈಫ್ ಹಾಳಾಗ್ತಿದೆಯಂತೆ. ಮಹಿಳೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೆಲಸ ಮಾಡ್ತಾಳಂತೆ. ಆದ್ರೆ ಪತಿ ಬೇಗ ಮಲಗುವ ಕಾರಣ ಇಬ್ಬರು ಸರಿಯಾಗಿ ಮಾತನಾಡಲು ಆಗುವುದಿಲ್ಲವಂತೆ. ರಾತ್ರಿ ಮಧ್ಯೆ ಎಚ್ಚರಗೊಳ್ಳುವ ಪತಿ, ಅದು ಇದು ಶಬ್ಧ ಮಾಡ್ತಾನಂತೆ. ಇದ್ರಿಂದ ನನಗೆ ಸರಿಯಾಗಿ ನಿದ್ರೆಯಾಗುವುದಿಲ್ಲ ಎನ್ನುತ್ತಾಳೆ ಮಹಿಳೆ. ಅಷ್ಟೇ ಅಲ್ಲ ರನ್ನಿಂಗ್ ಗೆ ಹೋಗಿ ಬರುವ ಪತಿ ಮಧ್ಯ ರಾತ್ರಿ ಶಾರೀರಿಕ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡ್ತಾನಂತೆ. ನಿದ್ರೆಯಲ್ಲಿ ಇದು ಕಷ್ಟವೆನ್ನುತ್ತಾಳೆ ಮಹಿಳೆ. ಇದ್ರಿಂದಾಗಿ ಲೈಂಗಿಕ ಸಂಬಂಧ ಹದಗೆಡುತ್ತಿದೆಯಂತೆ.
ಎಲ್ಲೊ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ..., ಮಧುರ ನೆನಪು!
ಆರ್ಟಿಸ್ಟ್ ಆಗಿರುವ ಪತಿಗೆ ಸಮಯವಿಲ್ಲವಂತೆ. ಆತ ಬೇಕಾದಾಗ ಕೆಲಸ ಮಾಡ್ತಾನೆ. ಇದ್ರಿಂದ ನಿದ್ರೆ ಆತನಿಗೆ ಮಹತ್ವವಲ್ಲ ಎನ್ನುತ್ತಾಳೆ. ಮಹಿಳೆ ಸಮಸ್ಯೆ ಆಲಿಸಿದ ತಜ್ಞರು, ಪತಿಗೆ ಸಮಸ್ಯೆಯನ್ನು ಬಿಡಿಸಿ ಹೇಳುವಂತೆ ಸೂಚಿಸಿದ್ದಾರೆ. ಪತಿ ಮುಂದೆ ಕುಳಿತು ಎಲ್ಲವನ್ನೂ ವಿವರಿಸಿದಾಗ ಆತ ತನ್ನನ್ನು ಸುಧಾರಿಸಿಕೊಳ್ಳಬಹುದು, ಪ್ರಯತ್ನಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.