ಮಕ್ಕಳ ಪಾಲನೆ ಬಗ್ಗೆ ಅಭಿಷೇಕ್ ಬಚ್ಚನ್ ಕಿವಿ ಮಾತು, ಮಗಳು ಆರಾಧ್ಯ ನೋಡಿಕೊಳ್ಳೋದು ಯಾರು?
ಸೂಪರ್ ಸ್ಟಾರ್ ಮಕ್ಕಳಿರಲಿ, ಸಾಮಾನ್ಯರ ಮಕ್ಕಳಿರಲಿ ಹದಿಹರೆಯ ಮಕ್ಕಳನ್ನು ಸಂಭಾಳಿಸೋದು ಬಹಳ ಜವಾಬ್ದಾರಿ ಕೆಲಸ. ಒಂದು ಹೇಳಿದ್ರೆ ಕಡಿಮೆ, ಎರಡು ಮಾತನಾಡಿದ್ರೆ ಹೆಚ್ಚು ಎನ್ನುವ ಮನಸ್ಥಿತಿಯಲ್ಲಿ ಮಕ್ಕಳಿರ್ತಾರೆ. ಅವರನ್ನು ಹೇಗೆ ನೋಡಿಕೊಳ್ಳೋದು ಎಂಬ ಪ್ರಶ್ನೆಗೆ ಅಭಿಷೇಕ್ ಬಚ್ಚನ್ ಉತ್ತರ ನೀಡಿದ್ದಾರೆ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಆದರ್ಶ ದಂಪತಿ. ಮಗಳು ಆರಾದ್ಯ ಪಾಲನೆ – ಪೋಷಣೆ ವಿಷ್ಯದಲ್ಲೂ ಇವರು ಆಗಾಗ ಸುದ್ದಿಯಾಗ್ತಿರುತ್ತಾರೆ. ಈಗ ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ಹದಿಹರೆಯದ ಮಗಳಿಗೆ ತಂದೆಯಾಗ್ತಿದ್ದಾರೆ. ಆರಾಧ್ಯಾ ಇದೇ ನವಂಬರ್ ನಲ್ಲಿ 13ನೇ ವಯಸ್ಸಿಗೆ ಕಾಲಿಡ್ತಿದ್ದಾಳೆ. ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅಭಿಷೇಕ್ ಬಚ್ಚನ್ ಗೆ ಬಂಡಾಯದ ಹದಿಹರೆಯದವರನ್ನು ಹೇಗೆ ಸಂಭಾಳಿಸೋದು ಎಂದು ಪ್ರಶ್ನೆ ಮಾಡಲಾಗಿದೆ.
ಪ್ರಶ್ನೆಗೆ ಸುದೀರ್ಘ ಉತ್ತರ ನೀಡಿದ ಅಭಿಷೇಕ್ (Abhishek) ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮಗಳ ಪಾಲನೆ ವಿಷ್ಯ ಬಂದಾಗ ನಾನು ಹೆಚ್ಚು ಜವಾಬ್ದಾರಿ ಹೊರಲು ಹೋಗೋದಿಲ್ಲ ಎಂದ ಅಭಿಷೇಕ್, ಪತ್ನಿ ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ಈ ಎಲ್ಲ ಕೆಲಸ ಮಾಡ್ತಾರೆ, ಹಾಗಾಗಿ ನನ್ನ ಕೆಲಸ ಮಾಡಲು ನನಗೆ ಅವಕಾಶ ಸಿಗುತ್ತದೆ ಎಂದಿದ್ದಾರೆ.
ಮಗಳು ಬೇಕೆಂದು 9 ಮಕ್ಕಳನ್ನು ಹೆತ್ತ ಅಮ್ಮ, ಕಡೆಗಾದರೂ ಹುಟ್ಟಿತಾ ಹೆಣ್ಣು!?
ಪಾಲಕರಿಗೆ ಯಾವುದಾದ್ರೂ ಟಿಪ್ಸ್ (Tips) ನೀಡ್ತೀರಾ ಎಂದು ಸಂದರ್ಶನಕಾರರು ಕೇಳಿದಾಗ ಅದಕ್ಕೆ ಉತ್ತರ ನೀಡಿದ ಅಭಿಷೇಕ್ ಬಚ್ಚನ್, ಪ್ರತಿ ಪೀಳಿಗೆಯೂ (Generation) ವೇಗವಾಗಿ ಪಕ್ವವಾಗುತ್ತದೆ. ಪ್ರಾಯಶಃ, ನಾವು ಮಕ್ಕಳಾಗಿದ್ದಾಗ, ನಮ್ಮ ಪೋಷಕರು ನಾವು ತುಂಬಾ ವೇಗವಾಗಿ ಬೆಳೆಯುತ್ತಿದ್ದೇವೆ ಎಂದು ಭಾವಿಸಿದ್ದರು. ಈ ಪೀಳಿಗೆಯ ಜನರು ನಮಗಿಂತ ಬಹಳಷ್ಟು ಮುಂದಿದ್ದಾರೆ. ನಾವು ಈ ಮಟ್ಟಕ್ಕೆ ತಲುಪಲು ತೆಗೆದುಕೊಂಡ ಪ್ರಕ್ರಿಯೆಯನ್ನು ಅವರು ನೋಡಲೇ ಇಲ್ಲ. ಅದಕ್ಕೊಂದು ಉದಾಹರಣೆ ನೀಡ್ತೇನೆ ಎನ್ನುವ ಅಭಿಷೇಕ್, ನನಗೆ ಒಬ್ಬ ಸೋದರಳಿಯ ಮತ್ತು ಸೊಸೆ ಇದ್ದಾರೆ. ಅವರಿಗೆ 10 ವರ್ಷವಾದಾಗ ಮೊಬೈಲ್ ಫೋನ್ ನೀಡಲಾಗಿತ್ತು ಎಂದಿದ್ದಾರೆ.
ಮನೆ ಕೆಲ್ಸದ ಜವಾಬ್ದಾರಿ ಕಂಪ್ಲೀಟ್ ಹೆಂಡ್ತೀದೆ ಅನ್ನೋ ಮನಸ್ಥಿತಿ ಬಿಟ್ಬಿಡಿ; ಕೋರ್ಟ್ ಹೇಳಿದ್ದೇನು ನೋಡಿ
10ನೇ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ನೀಡಿದ ವೇಳೆ ಅಭಿಷೇಕ್ ಬಚ್ಚನ್ ತಮ್ಮ ಸಹೋದರಿ ಶ್ವೇತಾ ಬಚ್ಚನ್ ಗೆ ಪ್ರಶ್ನೆ ಮಾಡಿದ್ದರಂತೆ. ಆಗ ಶ್ವೇತಾ, ನೀನು ಎಷ್ಟನೇ ವಯಸ್ಸಿನಲ್ಲಿ ಮೊಬೈಲ್ ಪಡೆದೆ, ನಿಮ್ಮ ತಂದೆ ಅಮಿತಾಬ್ ಬಚ್ಚನ್ ಎಷ್ಟನೇ ವಯಸ್ಸಿನಲ್ಲಿ ಮೊಬೈಲ್ ಪಡೆದ್ರು ಎಂಬುದು ಗೊತ್ತಾ ಎಂದು ಕೇಳಿದ್ದಲ್ಲದೆ, ನೀನು 22ನೇ ವಯಸ್ಸಿನಲ್ಲಿ ಮೊಬೈಲ್ ಫೋನ್ ಪಡೆದಿದ್ದಕ್ಕೆ ಅವರು ಕೋಪಗೊಂಡಿದ್ದರು ಎಂದೂ ಹೇಳಿದ್ದರಂತೆ. ಅಭಿಷೇಕ್ ಬಚ್ಚನ್ ಪ್ರಕಾರ, ಈ ಹೊಸ ಪೀಳಿಗೆಗೆ ಉತ್ತಮ ತಿಳುವಳಿಕೆ ಇದೆ. ಎಲ್ಲಾ ಮಾಹಿತಿ ಬೆರಳ ತುದಿಯಲ್ಲಿರುವ ಜಗತ್ತಿನಲ್ಲಿ ಅವರು ಜನಿಸಿದ್ದಾರೆ. ನಾನು ಮೊದಲ ಬಾರಿಗೆ ತಾಜ್ ಮಹಲ್ ನೋಡಿದ್ದು ನನಗೆ ಇನ್ನೂ ನೆನಪಿದೆ. ಆದರೆ ಈಗಿನ ಪೀಳಿಗೆಗೆ ಅದು ವಿಶೇಷವಲ್ಲ. ಅವರು ಇಂಟರ್ನೆಟ್ ನಲ್ಲಿಯೇ ತಾಜ್ ಮಹಲ್ ನೋಡ್ತಾರೆ. ಹಾಗಂತ ಅವರು ಅಸಂಬದ್ಧರಲ್ಲ. ಅವರು ಹೆಚ್ಚು ಉತ್ತಮವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಆದ್ದರಿಂದ ಅವರ ಆಶ್ಚರ್ಯವು ನಮ್ಮ ಮಟ್ಟಕ್ಕಿಂತ ಹೆಚ್ಚಿದೆ ಎನ್ನುತ್ತಾರೆ ಅಭಿಷೇಕ್.
ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಎನ್ನುತ್ತಾರೆ ಅಭಿಷೇಕ್ ಬಚ್ಚನ್. ತಾಯಿ ಎನ್ನುವ ಕಾರಣಕ್ಕೆ ಅವರು ಹೇಳಿದ್ದೆಲ್ಲ ಸರಿ ಎಂದು ಒಪ್ಪಿಕೊಳ್ಳುವ ಪೀಳಿಗೆ ಇದಲ್ಲ. ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಅವರಿರುವ ಕಾರಣ ಅವರ ಪ್ರಶ್ನೆಗೆ ಪಾಲಕರು ಉತ್ತರಿಸಬೇಕು ಎನ್ನುತ್ತಾರೆ.
ಮಕ್ಕಳ ಘನತೆ ಗೌರವಿಸಿ (Respect the Dignity of Kids) : ಗಂಭೀರವಾದ ವಿಷ್ಯವೊಂದನ್ನು ಹೇಳಿದ ಅಭಿಷೇಕ್, ಮಕ್ಕಳ ಘನತೆಯನ್ನು ಗೌರವಿಸಿ ಎಂದಿದ್ದಾರೆ. ಯಾರಿಗಾದರೂ ನೀಡಬಹುದಾದ ಏಕೈಕ ಪೋಷಕರ ಸಲಹೆಯೆಂದರೆ ನಿಮ್ಮ ಮಗುವಿನ ಘನತೆಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಮಕ್ಕಳನ್ನು ಬೈಯುವಾಗ ನಾವು ಹೀಗೆ ಬೆಳೆದಿದ್ದೇವೆ, ಹಾಗೆ ಬೆಳೆದಿದ್ದೇವೆ ಎನ್ನಬೇಡಿ. ನಮಗೆ ಬಾಲ್ಯದಲ್ಲಿ ಹೀಗೆಯೇ ಬೈಯುತ್ತಿದ್ದರು ಮತ್ತು ಶಿಸ್ತುಬದ್ಧರಾಗಿ ನಡೆದುಕೊಳ್ತಿದ್ದರು. ಆದರೆ, ಬಹುಶಃ ನಮ್ಮ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿ ನೋಡಿದ ಪ್ರಕ್ಷುಬ್ಧತೆಯನ್ನು ಅವರು ನೋಡದ ಕಾರಣ ಈ ಪೀಳಿಗೆ ಜನರು ಹೆಚ್ಚು ಸಂವೇದನಾಶೀಲವಾಗಿದೆ. ಗದರಿಸುವಾಗ ಅವರ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ಅಭಿಷೇಕ್ ಬಚ್ಚನ್.