Asianet Suvarna News Asianet Suvarna News

Relationship : ನಿದ್ರೆಯಲ್ಲಿ ಸಂಭೋಗ, ಸಂಬಂಧ ಹಾಳಾಗಲು ಸಾಕಿದು ಕಾರಣ

ಒಪ್ಪಿಗೆಯಿಲ್ಲದ ಅಪ್ಪಿಗೆ ಉಸಿರುಗಟ್ಟಿಸುತ್ತದೆ. ಪ್ರತಿ ದಿನ, ಪ್ರತಿ ಕ್ಷಣ ಜೊತೆಗಿದ್ದರೂ,ಲೈಂಗಿಕ ಸಂಬಂಧದ ವೇಳೆ ಇಬ್ಬರ ಒಪ್ಪಿಗೆ ಮುದ್ರೆ ಬೇಕು. ಕಾರಣ ಯಾವುದೇ ಇರಲಿ, ನಿದ್ರೆಯಲ್ಲಿರುವಾಗ ಸಂಭೋಗ ಬೆಳೆಸುವುದು ಸಂಬಂಧ ಹಾಳು ಮಾಡುತ್ತದೆ. 

A Woman Feeling Used And Abused As Husband Sex With Her Due To Rare Sleeping Disorder
Author
Bangalore, First Published Jan 7, 2022, 5:36 PM IST

ದಂಪತಿ (Couple) ಎಷ್ಟೇ ಅನ್ಯೂನ್ಯವಾಗಿದ್ದರೂ,ಇಬ್ಬರ ಮಧ್ಯೆ ಜೀವಕ್ಕೆ ಜೀವ ಕೊಡುವಷ್ಟು ಪ್ರೀತಿ (Love)ಯಿದ್ದರೂ ಶಾರೀರಿಕ ಸಂಬಂಧ ಬೆಳೆಸುವಾಗ ಇಬ್ಬರ ಒಪ್ಪಿಗೆ ಅತ್ಯಗತ್ಯ. ಒಪ್ಪಿಗೆಯಿಲ್ಲದೆ ನಡೆಸುವ ಸಂಭೋಗ (Intercourse), ಅತ್ಯಾಚಾರ (Rape)ವೆನಿಸಿಕೊಳ್ಳುತ್ತದೆ. ಅನೇಕ ಬಾರಿ ಒಪ್ಪಿಗೆ ಇಲ್ಲದೆ ನಡೆಯುವ ಸಂಭೋಗವನ್ನು ದಂಪತಿ ಮುಚ್ಚಿಡುತ್ತಾರೆ. ಮಹಿಳೆಯೊಬ್ಬಳು ತನ್ನ ಸ್ಥಿತಿಯನ್ನು ವೆಬ್ಸೈಟ್ (Website) ಒಂದರಲ್ಲಿ ಹಂಚಿಕೊಂಡಿದ್ದಾಳೆ. ಆಕೆ ಸಮಸ್ಯೆ ವಿಚಿತ್ರವಾಗಿದೆ. ರಾತ್ರಿ ಆಕೆ ನಿದ್ರೆ (Sleep)ಯಲ್ಲಿರುವಾಗ ಶಾರೀರಿಕ ಸಂಬಂಧ ಬೆಳೆಸುವ ಪತಿಗೆ ಬೆಳಿಗ್ಗೆ ಈ ಸಂಗತಿ ಗೊತ್ತೇ ಇರುವುದಿಲ್ಲವಂತೆ. ಸ್ಲೀಪಿಂಗ್ ಡಿಸಾರ್ಡರ್ ಸಮಸ್ಯೆಯಿಂದ ಬಳಲುತ್ತಿರುವ ಪತಿ ಮಾಡುವುದೇನು? ರಾತ್ರಿ ಇಬ್ಬರ ಮಧ್ಯೆ ನಡೆಯುವುದೇನು ಎಂಬುದನ್ನು ಇಂದು ಹೇಳ್ತೆವೆ.

ಸ್ಲೀಪ್ ಸೆಕ್ಸ್ ಸಮಸ್ಯೆ :
ಪೇರೆಂಟಿಂಗ್ ಫ್ಲಾಟ್ಫಾರ್ಮ್ ಒಂದರಲ್ಲಿ ಮಹಿಳೆಯೊಬ್ಬಳು ತನ್ನ ಕಷ್ಟವನ್ನು ಹಂಚಿಕೊಂಡಿದ್ದಾಳೆ. ಸ್ಲೀಪಿಂಗ್ ಡಿಸಾರ್ಡರ್ ನಿಂದ ಬಳಲುತ್ತಿರುವ ಆಕೆ ಪತಿ  ಸ್ಲೀಪ್ ಸೆಕ್ಸ್ ಸಮಸ್ಯೆಗೆ ಒಳಗಾಗಿದ್ದಾನಂತೆ. ರಾತ್ರಿ ನಿದ್ರೆಯಲ್ಲಿ ಸಂಭೋಗ ಬೆಳೆಸುವುದನ್ನು ಸ್ಲೀಪ್ ಸೆಕ್ಸ್ (Sleep Sex) ಎಂದು ಕರೆಯಲಾಗುತ್ತದೆ.  ಕಳೆದ 10 ವರ್ಷಗಳಿಂದ ಮಹಿಳೆ ಆತನ ಜೊತೆ ಸಂಸಾರ ನಡೆಸುತ್ತಿದ್ದಾಳೆ. ಪ್ರತಿ ದಿನ ರಾತ್ರಿ ಪತಿ ಈ ಕೆಲಸ ಮಾಡುವುದಿಲ್ಲ. ಆಗಾಗ ನಿದ್ರೆಯಲ್ಲಿ ಸಂಗಾತಿ ಜೊತೆ ಸಂಭೋಗ ಬೆಳೆಸುತ್ತಾನಂತೆ. 

ರಾತ್ರಿ ಎಚ್ಚರವಾದಾಗ ಅಸ್ತವ್ಯಸ್ತವಾಗಿರುತ್ತೆ ಬಟ್ಟೆ : 
ಅಪರೂಪದ ಖಾಯಿಲೆಯ ಕಾರಣದಿಂದ ಪತಿ ನಿದ್ರೆಯಲ್ಲಿ ಆಕೆಯ ದೇಹ ಸ್ಪರ್ಶಿಸುತ್ತಾನೆ. ಆಕೆ ಬಟ್ಟೆಗಳನ್ನು ಕಿತ್ತೆಸೆಯುವ ಪ್ರಯತ್ನ ನಡೆಸುತ್ತಾನಂತೆ. ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುತ್ತಾನಂತೆ. ನಿದ್ರೆಯಿಂದ ಎಚ್ಚರಗೊಂಡಾಗ ಅನೇಕ ಬಾರಿ ನನ್ನ ಬಟ್ಟೆಗಳು ಅಸ್ತವ್ಯಸ್ಥಗೊಂಡಿದ್ದವು. ಪತಿ ಕೈಗಳು ನನ್ನ ದೇಹದ ಮೇಲಿತ್ತು. ನಾನು ಎಚ್ಚರಗೊಂಡ ನಂತರ ಆತನನ್ನು ಅನೇಕ ಬಾರಿ ಬಲವಾಗಿ ತಳ್ಳಿದ್ದೇನೆ. ಇದ್ರಿಂದ ಆತನಿಗೆ ಎಚ್ಚರವಾಗುತ್ತದೆ. ಆಗ ಪತಿ ಸಾಮಾನ್ಯ ಸ್ಥಿತಿಗೆ ಮರಳುತ್ತಾನೆ ಎಂದು ಮಹಿಳೆ ಹೇಳಿದ್ದಾಳೆ.    

ಪತಿಯ ಈ ರೋಗ ಆಕೆಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿದೆಯಂತೆ.10 ವರ್ಷಗಳಿಂದ ಆತನ ಜೊತೆಗಿರುವ ನಾನು ಆತನ ಮೇಲೆ ವಿಶ್ವಾಸವಿಟ್ಟಿದ್ದೇನೆ. ಅವನ ಈ ಕೃತ್ಯಗಳು ನನ್ನ ನಂಬಿಕೆಗೆ ಧಕ್ಕೆ ತರುತ್ತವೆ. ಆತ ಸ್ಲೀಪಿಂಗ್ ಡಿಸಾರ್ಡರ್ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂಬುದು ಗೊತ್ತಿದ್ದರೂ ನನ್ನ ಒಪ್ಪಿಗೆ ಇಲ್ಲದೆ ಸೆಕ್ಸ್  ನಡೆಸುವ ಪತಿ ಕೃತ್ಯವನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲವೆಂದು ಮಹಿಳೆ ಹೇಳಿದ್ದಾಳೆ. ನನ್ನ ಮನಸ್ಸಿನಲ್ಲಾಗುವ ನೋವು,ತಳಮಳವನ್ನು ನಾನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಮಹಿಳೆ ನೋವು ತೋಡಿಕೊಂಡಿದ್ದಾಳೆ.

Cheating Wife : ಈ ಎಲ್ಲ ಕಾರಣಕ್ಕೆ ಪತಿಗೆ ಮೋಸ ಮಾಡ್ತಾಳೆ ಪತ್ನಿ

ಇತ್ತೀಚಿನ ದಿನಗಳಲ್ಲಿ ಆಕೆ ಸದಾ ಎಚ್ಚರದಲ್ಲಿರುತ್ತಾಳಂತೆ. ಪತಿ ತನ್ನ ಬಳಿ ಬರುವ ಸಪ್ಪಳ ಆಕೆಯನ್ನು ನಿದ್ರೆಯಿಂದ ಏಳುವಂತೆ ಮಾಡುತ್ತದೆಯಂತೆ. ಮಹಿಳೆ ನೋವು ಆಲಿಸಿದ ಅನೇಕರು ಇದಕ್ಕೆ ತಮ್ಮದೆ ರೀತಿಯಲ್ಲಿ ಸಲಹೆ ಕೂಡ ನೀಡಿದ್ದಾರೆ. ಮಲಗುವ ಕೊಠಡಿ ಬದಲಿಸುವಂತೆ ಬಳಕೆದಾರನೊಬ್ಬ ಸಲಹೆ ನೀಡಿದ್ದಾನೆ. ನಿಮ್ಮ ಗಂಡನಿಗೆ ಇದೆಲ್ಲ ನೆನಪಿದೆಯಾ ? ನನ್ನ ಪತಿ ಕೂಡ ಸ್ಲೀಪ್ ಸೆಕ್ಸ್ ಸಮಸ್ಯೆಗೆ ಒಳಗಾಗಿದ್ದರು. ಬೆಳಿಗ್ಗೆ ಎದ್ದಾಗ ಆತನಿಗೆ ಏನೂ ನೆನಪಿರುತ್ತಿರಲಿಲ್ಲ. ಈ ವಿಷಯ ತಿಳಿದಾಗ ನನಗೆ ತುಂಬಾ ಭಯವಾಯಿತು. ಇದು ನನಗೆ ಅತ್ಯಾಚಾರ ಅನ್ನಿಸಿತು ಎಂದು ಇನ್ನೊಬ್ಬಳು ಕಮೆಂಟ್ ಮಾಡಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, 'ಇಲ್ಲ, ತನ್ನ ಪತಿಗೂ  ಏನೂ ನೆನಪಿರುವುದಿಲ್ಲ ಎಂದಿದ್ದಾಳೆ.  

ಈ ವರ್ಷ ಮದುವೆಯಾಗೋ ಯೋಚನೆ ಇದೆಯೇ? ಹಾಗಿದ್ರೆ ಇದನ್ನ ನೆನಪಿಡಿ

10 ವರ್ಷಗಳಿಂದ ಸಮಸ್ಯೆ ಎದುರಿಸುವ ಬದಲು ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಿತ್ತು ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಪತಿ ನಿದ್ರೆಯಲ್ಲಿರಲಿ ಇಲ್ಲ ಎಚ್ಚರವಾಗಿರಲಿ, ಮೊದಲು ಪರೀಕ್ಷೆ ಅಗತ್ಯವಿದೆ. ಸಂಪೂರ್ಣ ಗುಣಮುಖರಾಗುವವರೆಗೆ ಅವರಿಂದ ದೂರವಿರುವ ಅನಿವಾರ್ಯತೆಯಿದೆ ಎಂದು ಇನ್ನೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.  

Follow Us:
Download App:
  • android
  • ios