ತಾಜ್‌ಮಹಲ್ ನೋಡಲು ಸ್ಟ್ರೆಚರ್‌ನಲ್ಲಿ ಅಮ್ಮನ ಕರೆತಂದ ಮಗ
ರಾಮಾಯಣ ಕಾಲದಲ್ಲಿ ಶ್ರವಣಕುಮಾರ ನಡೆಯಲಾಗದ ತನ್ನ ತಂದೆ ತಾಯಿಯನ್ನು ಬುಟ್ಟಿಗಳಲ್ಲಿ ಹೊತ್ತುಕೊಂಡು ಹೋಗಿ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ ಕತೆ ನೀವು ಓಡಿರಬಹುದು. ಹಾಗೆಯೇ ಇಲ್ಲೊಬ್ಬರು ಆಧುನಿಕ ಶ್ರವಣಕುಮಾರ ವಿಶ್ವ ಪ್ರಸಿದ್ಧ ತಾಜ್‌ಮಹಲ್ ನೋಡಲು ತಮ್ಮ ತಾಯಿಯನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ಕರೆತಂದಿದ್ದಾರೆ.
ನವದೆಹಲಿ: ರಾಮಾಯಣ ಕಾಲದಲ್ಲಿ ಶ್ರವಣಕುಮಾರ ನಡೆಯಲಾಗದ ತನ್ನ ತಂದೆ ತಾಯಿಯನ್ನು ಬುಟ್ಟಿಗಳಲ್ಲಿ ಹೊತ್ತುಕೊಂಡು ಹೋಗಿ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ ಕತೆ ನೀವು ಓಡಿರಬಹುದು. ಹಾಗೆಯೇ ಇಲ್ಲೊಬ್ಬರು ಆಧುನಿಕ ಶ್ರವಣಕುಮಾರ ವಿಶ್ವ ಪ್ರಸಿದ್ಧ ತಾಜ್‌ಮಹಲ್ ನೋಡಲು ತಮ್ಮ ತಾಯಿಯನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ಕರೆತಂದಿದ್ದಾರೆ. ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದ ತಮ್ಮ 85 ವರ್ಷದ ತಾಯಿಯನ್ನು ತಾಜ್‌ಮಹಲ್ ನೋಡಲು ಕರೆತಂದಿದ್ದು, ಸ್ಟ್ರೆಚರ್‌ನಲ್ಲಿ ಮಲಗಿಕೊಂಡು ತಾಯಿ ವಿಶ್ವದ ಅದ್ಭುತವನ್ನು ನೋಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರನ್ನು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
ವಿಶ್ವ ಪ್ರಸಿದ್ಧ ತಾಜ್‌ಮಹಲ್ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅನೇಕರಿಗೆ ಸಾಯುವ ಮೊದಲು ದೇಶ ಪ್ರಪಂಚ ಸುತ್ತಬೇಕು ಎಂಬ ಆಸೆ ಇದೆ. ಮತ್ತೆ ಕೆಲವರು ಪೋಷಕರನ್ನು ಕೂಡ ಜೊತೆ ಜೊತೆಯಲ್ಲಿ ಕರೆದುಕೊಂಡು ಹೋಗಿ ಅವರ ಆಸೆ ಈಡೇರಿಸುತ್ತಾರೆ. ಅದೇ ರೀತಿ ಇಲ್ಲಿ ಕಚ್ (Kutch) ಮೂಲದ ವ್ಯಕ್ತಿಯೊಬ್ಬರು ತಮ್ಮ 85 ವರ್ಷದ ವೃದ್ಧತಾಯಿಯನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ತಾಜ್‌ಮಹಲ್ ವೀಕ್ಷಿಸಲು ಕುಟುಂಬದೊಂದಿಗೆ ಕರೆತಂದಿದ್ದಾರೆ. ಸ್ಟ್ರೆಚರ್‌ನಲ್ಲಿರುವ ತಾಯಿಯ ಜೊತೆ ತಾಜ್‌ಮಹಲ್ ಮುಂದೆ ಈ ಕುಟುಂಬ ಫೋಟೋ ತೆಗೆಸಿಕೊಂಡಿದೆ.
Abandoned Parents : ಒಂಭತ್ತು ಮಕ್ಕಳಿದ್ದರೂ ಒಂಟಿಯಾದ 85 ವರ್ಷದ ವೃದ್ಧೆ!
ಗುಜರಾತ್‌ನ (Gujarat) ಕಚ್ ನಿವಾಸಿ ಇಬ್ರಾಹಿಂ ಅವರ 85 ವರ್ಷದ ತಾಯಿ ತಮ್ಮ ಮಗನೊಂದಿಗೆ ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪ್ರಸಿದ್ಧ ತಾಜ್‌ಮಹಲ್ ಅನ್ನು ವೀಕ್ಷಿಸಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಕಳೆದ 32 ವರ್ಷಗಳಿಂದ ಹಾಸಿಗೆ ಹಿಡಿದವರಾಗಿದ್ದು, ಅವರಿಗೆ ನಡೆಯಲಾಗುತ್ತಿರಲಿಲ್ಲ ಹೀಗಾಗಿ ಮಗ ಇಬ್ರಾಹಿಂ ಅಮ್ಮನ ಆಸೆ ಈಡೇರಿಸುವ ಸಲುವಾಗಿ ಸ್ಟ್ರೆಚರ್‌ನಲ್ಲಿ ಅಮ್ಮನನ್ನು ತಾಜ್‌ಮಹಲ್‌ಗೆ ಕರೆದುಕೊಂಡು ಬಂದಿದ್ದಾರೆ.
ತಾಜ್ ಮಹಲ್ ಒಳಗೆ ಗಾಲಿಕುರ್ಚಿಯಲ್ಲಿ ತೆರಳುವುದಕ್ಕೆ ಜನರಿಗೆ ಅನುಮತಿ ಇದೆ. ಆದರೆ ಸ್ಟ್ರೆಚರ್‌ನಲ್ಲಿ ತೆರಳುವವರಿಗೆ ಅವಕಾಶವಿಲ್ಲ ಎಂದು ತಾಜ್‌ಮಹಲ್‌ನಲ್ಲಿ ಅಧಿಕಾರಿಗಳು ಹೇಳಿದಾಗ, ಇಬ್ರಾಹಿಂ (wheelchair) ಅವರು ನನ್ನ ತಾಯಿ ಸ್ಟ್ರಚರ್‌ನಲ್ಲಿದ್ದಾರೆ ಆದರೆ ಅವರು ಗಾಲಿಕುರ್ಚಿಯನ್ನೇ ಸ್ಟ್ರೆಚರ್ ಆಗಿ ಬಳಸುತ್ತಾರೆ ಎಂದು ಹೇಳಿದಾಗ ಅಧಿಕಾರಿಗಳು ನಮಗೆ ಪ್ರವೇಶಿಸಲು ಅವಕಾಶ ನೀಡಿದರು ಎಂದು ಹೇಳಿದ್ದಾರೆ.
ಹೆತ್ತ ತಾಯಿಯ ಎತ್ತಿ ಬಿಸಾಕಿದ: ವೃದ್ಧ ತಾಯಿಗೆ ಮಗ, ಮೊಮ್ಮಗನಿಂದ ಅಮಾನುಷ ಹಲ್ಲೆ
ತಾಜ್‌ಮಹಲ್‌ಗೆ ಭೇಟಿ ನೀಡುವುದು 85 ವರ್ಷದ ತಾಯಿಯ ಮನದಾಸೆ ಆಗಿತ್ತು. ಇದಕ್ಕಾಗಿ ಆಕೆಯ ಮಗ ಆಕೆಯನ್ನು ಗುಜರಾತ್‌ನಿಂದ ಆಗ್ರಾಗೆ ಕರೆತಂದ ಎಂದು ಬರೆದು, ವೃದ್ಧ ತಾಯಿ ಸ್ಟ್ರೆಚರ್‌ನಲ್ಲಿ ಮಲಗಿಕೊಂಡು ತಾಜ್ ಮಹಲ್ (Taj Mahal) ಮುಂದೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅನೇಕರು ಇಬ್ರಾಹಿಂ (Ibrahim) ಅವರನ್ನ ಅಧುನಿಕ ಕಾಲದ ಶ್ರವಣ ಕುಮಾರ (Shravan Kumar) ಎಂದು ಕರೆಯುತ್ತಿದ್ದಾರೆ.