ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ರಷ್ಯಾದ ದಿನಾರಾ ಎಂಬ ಮಹಿಳೆ ಭಾರತೀಯ ವರನನ್ನು ಹುಡುಕುತ್ತಿದ್ದಾರೆ. ಮಾಲ್‌ನಲ್ಲಿ 'ಭಾರತೀಯ ಗಂಡನನ್ನು ಹುಡುಕುತ್ತಿದ್ದೇನೆ' ಎಂಬ ಬೋರ್ಡ್ ಹಿಡಿದು ಕ್ಯೂಆರ್ ಕೋಡ್ ನೀಡಿದ್ದಾರೆ. ಕೆಂಪು ಸೀರೆಯುಟ್ಟು ಭಾರತೀಯ ನಾರಿಯಂತೆ ಕಾಣಿಸಿಕೊಂಡಿರುವ ಇವರು, ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಹಾಯ ಕೋರಿದ್ದಾರೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ.

ಸೋಷಿಯಲ್‌ ಮೀಡಿಯಾದ ಮೂಲಕ ಗಮನ ಸೆಳೆಯಲು ಇಂದು ಏನೆಲ್ಲಾ ಸರ್ಕಸ್‌ ಮಾಡಲಾಗುತ್ತದೆ. ಹೆಚ್ಚೆಚ್ಚು ಲೈಕ್ಸ್‌, ಕಮೆಂಟ್ಸ್‌, ಶೇರ್‌ ಪಡೆದುಕೊಳ್ಳಲು ಇನ್ನಿಲ್ಲದ ಸರ್ಕಸ್‌ ನಡೆಸಲಾಗುತ್ತದೆ. ಇದೀಗ ರಷ್ಯನ ಬೆಡಗಿಯೊಬ್ಬಳು ಇದೇ ರೀತಿ ಎಲ್ಲರ ಗಮನ ಸೆಳೆಯಲು ಭಾರತದ ಯುವಕರಿಗೆ ಒಂದೊಳ್ಳೆ ಆಫರ್‌ ಕೊಟ್ಟಿದ್ದಾಳೆ. ಅದು ಅಂತಿಂಥ ಆಫರ್‌ ಅಲ್ಲ, ಕೇಳಿದ್ರೆ ಸುಸ್ತಾಗಿ ಹೋಗುವಂಥ ಆಫರ್‌. ಕ್ಯೂಆರ್‌ ಕೋಡ್‌ ಹಿಡಿದು ನಿಂತಿರುವ ಈ ಬೆಡಗಿ ಕೊಟ್ಟಿರುವ ಆಫರ್‌ ಏನೆಂದ್ರೆ, ಆಕೆಗೆ ಭಾರತೀಯ ಯುವಕರು ಬೇಕಂತೆ! ನಿಜ. ಮದುವೆಯಾಗಲು ಈಕೆ ಭಾರತದ ಯುವಕರನ್ನು ಹುಡುಕುತ್ತಾ ಇದ್ದಾಳಂತೆ. ಹೀಗಂತ ಬೋರ್ಡ್‌ ಹಿಡಿದು ಮಾಲ್‌ ಒಂದರಲ್ಲಿ ನಿಂತಿದ್ದು ಅದರ ವಿಡಿಯೋ ವೈರಲ್‌ ಆಗಿದೆ. 

ವಧು-ವರ ಬೇಕಾಗಿದ್ದಾರೆ ಎಂದು ವಿವಿಧ ರೀತಿಯ ಜಾಹೀರಾತನ್ನು ನೋಡಿರುತ್ತೇವೆ. ಇದಕ್ಕಾಗಿ ಅನ್ವೇಷಣಾ ಕೇಂದ್ರಗಳೂ ಇವೆ, ಆನ್‌ಲೈನ್‌ನಲ್ಲಿಯೂ ಸಾಕಷ್ಟು ಸೈಟ್‌ಗಳು ಇವೆ. ಇದರ ಹೊರತಾಗಿಯೂ ಈ ಬೆಡಗಿ ಸೋಷಿಯಲ್‌ ಮೀಡಿಯಾದಲ್ಲಿ ಈ ರೀತಿ ಪೋಸ್ಟ್‌ ಮಾಡುವ ಮೂಲಕ ಭಾರತದ ಯುವಕರ ಅಟೆನ್ಷನ್‌ ಗಳಿಸಿದ್ದಾಳೆ. 'ಭಾರತೀಯ ಗಂಡನನ್ನು ಹುಡುಕುತ್ತಿದ್ದೇನೆ' ಎಂದು ಪೋಸ್ಟರ್‌ ಹಿಡಿದುಕೊಂಡಿದ್ದಾಳೆ. ಆರು ಇಂಚಿನ, ಪ್ರವಾಸ ಮತ್ತು ಸಂಗೀತ ಇಷ್ಟಪಡುವ ಭಾರತೀಯ ಯುವಕ ಬೇಕು ಎನ್ನುವುದು ಈಕೆಯ ಕನಸು. 

ಗೊಂಬೆ ಜೊತೆ ಮದ್ವೆಯಾದ ಮಹಿಳೆ ಈಗ ಎರಡು ಮಕ್ಕಳ ತಾಯಿ! ವಿಚಿತ್ರ ಎನಿಸಿರೋ ಈ ಸ್ಟೋರಿ ಕೇಳಿ....

ಅಂದಹಾಗೆ ಈಕೆ ಮಾಲ್‌ ಒಂದರಲ್ಲಿ ನಿಂತಿರುವುದನ್ನು ನೋಡಬಹುದು. ಇಬ್ಬರು ಪುರುಷರ ಬೊಂಬೆಗಳ ಪಕ್ಕದಲ್ಲಿ ನಿಂತಿರುವ ಈಕೆ, ಭಾರತದ ಯುವಕರು ಬೇಕಾಗಿದ್ದಾರೆ ಎಂದು ಬರೆದುಕೊಂಡಿದ್ದಾಳೆ. ಅದರ ಕೆಳಗೆ ಕ್ಯೂಆರ್‌ ಕೋಡ್‌ ಇದೆ. ಆ ಕ್ಯೂಆರ್‌ ಕೋಡ್‌ನಲ್ಲಿ ಏನಿದೆ ಎನ್ನುವುದು ಮಾತ್ರ ಗೊತ್ತಿಲ್ಲ!

ಅಂದಹಾಗೆ ಈಕೆಯ ಹೆಸರು ದಿನಾರಾ. ಕೆಂಪು ಸೀರೆಯನ್ನು ಧರಿಸಿ ಭಾರತೀಯ ನಾರಿಯಂತೆ ಕಾಣಿಸಿಕೊಂಡಿದ್ದಾಳೆ ಈಕೆ. ಮಾಸ್ಕೋದ ನಿವಾಸಿ ಈಕೆ. ತನ್ನ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ವರನನ್ನು ಹುಡುಕಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ. ಆಕೆ ಯಾಕೆ ಹಾಕಿದ್ದಾಳೋ ಗೊತ್ತಿಲ್ಲ, ಆದರೆ, ಇದಕ್ಕೆ ಹತ್ತು ಲಕ್ಷಕ್ಕೂ ಅಧಿಕ ವ್ಯೂಸ್‌ ಬಂದಿದ್ದು, ಸಹಸ್ರಾರು ಮಂದಿ ಕಮೆಂಟ್‌ ಮಾಡಿದ್ದಾರೆ. ಇಷ್ಟು ಮಂದಿಯಲ್ಲಿ ಭಾರತದ ಯುವ ಈಕೆಗೆ ಸಿಕ್ಕನೋ, ಇಲ್ಲವೋ ಎನ್ನುವುದು ಮಾತ್ರ ತಿಳಿದಿಲ್ಲ!

ಕುಂಭಮೇಳದಲ್ಲಿ ಪ್ರೇತಗಳ ಸ್ನಾನ ಸಿಸಿಟಿವಿಯಲ್ಲಿ ಸೆರೆ? ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ ಈ ವೈರಲ್​ ವಿಡಿಯೋ!

View post on Instagram