ಗಂಡಸಿಗೆ ವರ್ಷ 90 ಆದರೂ ಅಪ್ಪ ಆಗಲೇನೂ ಅಡ್ಡಿ ಇಲ್ಲ! ಆದರೆ....

ಪುರುಷ ತೊಂಭತ್ತು ವರ್ಷದವರೆಗೂ ತಂದೆ ಆಗಬಹುದು. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅದೇನು ಗೊತ್ತಾ?

A Man can become a father till the age of 90 but there is one problem

'ಇಪ್ಪತ್ತು ವರ್ಷಕ್ಕೆಲ್ಲ ಮದುವೆಯಾಗಿ, ಮೂವತ್ತು ವರ್ಷದೊಳಗೆ ನಾನು ಮೂರು ಮಕ್ಕಳ ತಾಯಿಯಾಗಿದ್ದೆ,' ಎಂದು ನಿಮ್ಮ ಅಜ್ಜಿಯೋ, ಅಮ್ಮನೋ ಹೇಳುವುದನ್ನು ನೀವು ಕೇಳಿರಬಹುದು. ನಮ್ಮ ಕಾಲಕ್ಕೆ ಇದು ಬದಲಾಗಿದೆ. ಇಂದು ಕೆರಿಯರ್‌ ಕಡೆಗೆ ಗಮನ ಹೆಚ್ಚು. ಮೂವತ್ತೈದರ ನಂತರವೇ ಮದುವೆಯಾಗಿ, ನಲುವತ್ತು ಆದರೂ ಇನ್ನೂ ಮಕ್ಕಳು ಮಾಡಬೇಕೋ ಬೇಡವೋ ಎಂದು ಚಿಂತಿಸುವವರೇ ಹೆಚ್ಚು. ಆ ವಿಷಯ ಹಾಗಿರಲಿ, ಮಗು ಮಾಡಿಕೊಳ್ಳುವುದಕ್ಕೆ ಸರಿಯಾದ ಆರೋಗ್ಯಕರ ವಯಸ್ಸು ಅಂತ ಒಂದಿದೆಯೆ? ಇದ್ದರೆ ಯಾವುದು?

ಮಹಿಳೆಯ ಗರಿಷ್ಠ ಸಂತಾನೋತ್ಪತ್ತಿ ಸಾಮರ್ಥ್ಯದ ವರ್ಷಗಳು ಹದಿಹರೆಯದ ಕೊನೆಯಲ್ಲಿ ಅಂದರೆ 19ರ ನಂತರ ಮತ್ತು 30ರ ದಶಕದ ಅಂತ್ಯದ ನಡುವೆ ಇರುತ್ತದೆ. 30ನೇ ವಯಸ್ಸಿನಲ್ಲಿ ಫಲವತ್ತತೆ (ಗರ್ಭಿಣಿಯಾಗುವ ಸಾಮರ್ಥ್ಯ) ಕ್ಷೀಣಿಸಲು ಪ್ರಾರಂಭವಾಗುತ್ತದೆ. 30ರ ದಶಕ ಮಧ್ಯದಲ್ಲಿ ಈ ಕುಸಿತ ವೇಗವಾಗಿ ಸಂಭವಿಸುತ್ತದೆ. 45ರ ಹೊತ್ತಿಗೆ ಫಲವತ್ತತೆ ತುಂಬಾ ಕಡಿಮೆಯಾಗಿರುತ್ತದೆ. ಆಗ ನೈಸರ್ಗಿಕವಾಗಿ ಗರ್ಭಿಣಿಯಾಗುವುದು ಅಸಂಭವ.

ಹೀಗೆಯೇ ಪುರುಷರಿಗೂ ತಂದೆಯಾಗುವುದಕ್ಕೆ ಸರಿಯಾದ ವಯಸ್ಸು ಅಂತ ಇದೆ. ಆದರೆ ತುಂಬಾ ಮಂದಿ, ತಾವು 80ರವರೆಗೂ ತಂದೆಯಾಗಬಹುದು ಎಂದು ಭಾವಿಸುತ್ತಾರೆ! ಮಗುವನ್ನು ಹೊಂದುವ ಸಾಮರ್ಥ್ಯದಲ್ಲಿ ತಮ್ಮ ವಯಸ್ಸು ಮಹತ್ವದ ಪಾತ್ರವನ್ನು ವಹಿಸುವುದಿಲ್ಲ ಎಂದು ನಂಬುತ್ತಾರೆ; ಜೈವಿಕ ಗಡಿಯಾರವು ಮಹಿಳೆಯರಿಗೆ ಮಾತ್ರ ಪ್ರಸ್ತುತ ಎಂದು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ವೀರ್ಯಾಣುಗಳ ಸಂಖ್ಯೆ ಮತ್ತು ಅದರ ಗುಣಮಟ್ಟ ವಯಸ್ಸಿನೊಂದಿಗೆ ಕುಸಿಯುತ್ತದೆ. ಜೈವಿಕ ದೃಷ್ಟಿಕೋನದಿಂದ, ಪುರುಷರು ತಮ್ಮ 20ರ ದಶಕದ ಅಂತ್ಯದಿಂದ 30ರ ದಶಕದ ಆರಂಭದಲ್ಲಿ ಪಿತೃತ್ವ ಪಡೆಯುವುದು ಸೂಕ್ತವೆಂದು ತಜ್ಞರು ಶಿಫಾರಸು ಮಾಡುತ್ತಾರೆ.

ಪತಿ ಮಾಡೋ ಈ ತಪ್ಪನ್ನು… ಯಾವ ಹೆಂಡತಿಯೂ ಕ್ಷಮಿಸೋದಿಲ್ಲ!

ಪುರುಷರು ತಮ್ಮ 50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲೂ ಮಗುವಿಗೆ ತಂದೆಯಾಗಬಹುದು. ಆದರೆ ತಂದೆಯ ವಯಸ್ಸು ದಂಪತಿಗಳ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು. 92 ವರ್ಷ ವಯಸ್ಸಿನ ವ್ಯಕ್ತಿ ಮಗುವಿಗೆ ಜೈವಿಕವಾಗಿ ತಂದೆಯಾದ ಅತ್ಯಂತ ಹಿರಿಯ ವ್ಯಕ್ತಿಯ ಪ್ರಾಯ ಎಂದು ಗಿನ್ನೆಸ್ ವಿಶ್ವ ದಾಖಲೆಗಳು ಉಲ್ಲೇಖಿಸುತ್ತವೆ. ಅದೇನೇ ಇದ್ದರೂ, 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ತಮ್ಮ ಸಂಗಾತಿಗೆ ಗರ್ಭಧಾರಣೆ ಸಾಧಿಸುವಲ್ಲಿ ಕಡಿಮೆ ಪ್ರಮಾಣದ ಯಶಸ್ಸು ಹೊಂದುತ್ತಾರೆ.

ವಾಸ್ತವವಾಗಿ, ಪುರುಷರು ಸಾಮಾನ್ಯವಾಗಿ ತಮ್ಮ ಜೀವನದುದ್ದಕ್ಕೂ ವೀರ್ಯವನ್ನು ಉತ್ಪಾದಿಸುತ್ತಾರೆ. ಆದರೆ ಪುರುಷರಿಗೆ ವಯಸ್ಸಾದಂತೆ ವೀರ್ಯದ ಗುಣಮಟ್ಟದಲ್ಲಿ ಇಳಿಕೆಯಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಎಣಿಕೆ, ಆಕಾರ ಮತ್ತು ಚಲನೆಯನ್ನು ಗಮನಿಸಿ ಆರೋಗ್ಯಕರ ವೀರ್ಯದ ಮಾನದಂಡಗಳನ್ನು ತಿಳಿಸಿದೆ. ಸುಮಾರು 35 ವರ್ಷ ವಯಸ್ಸಿನಲ್ಲಿ, ಪುರುಷರು ಈ ವೀರ್ಯ ಗುಣಮಟ್ಟದಲ್ಲಿ ಕ್ಷೀಣಿಸುವಿಕೆಯನ್ನು ಗಮನಿಸಬಹುದು. ವಯಸ್ಸಾದಂತೆ ವೀರ್ಯದ ಗುಣಮಟ್ಟದಲ್ಲಿನ ಈ ಕುಸಿತವು ಫಲವತ್ತತೆ ಮೇಲೆ ಪರಿಣಾಮ ಬೀರಬಹುದು.

ವೀರ್ಯದ ಆರೋಗ್ಯವು ಫಲವತ್ತತೆಯ ಮೇಲೆ ಪರಿಣಾಮ ಬೀರುವ ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಒಂದು ಸ್ಖಲನದಲ್ಲಿ ಪ್ರತಿ ಮಿಲಿಲೀಟರ್ ವೀರ್ಯಕ್ಕೆ ಕನಿಷ್ಠ 15 ಮಿಲಿಯನ್ ವೀರ್ಯವನ್ನು ಹೊಂದಿರುವಾಗ ಫಲವತ್ತತೆಯ ಹೆಚ್ಚಿನ ಸಂಭವನೀಯತೆ ಇರುತ್ತದೆ. ಕಡಿಮೆ ವೀರ್ಯಾಣುಗಳಿರುವುದು ಗರ್ಭಿಣಿಯಾಗಲು ಹೆಚ್ಚು ಸವಾಲು.

ಹಾಲಿವುಡ್‌ ಗೂ ಭಗವದ್ಗೀತೆಗೂ ಏನು ಸಂಬಂಧ? ನಟ ವಿನ್‌ ಡೀಸೆಲ್‌ 'ಪ್ರತಿಫಲ ಬಯಸದೇ ಕರ್ತವ್ಯ ಮಾಡುʼ

ಹಾಗೆಯೇ ವೀರ್ಯದ ಚಲನಶೀಲತೆಗೆ ಸಂಬಂಧಿಸಿದಂತೆ, ಸ್ಖಲನದಲ್ಲಿ 40%ಕ್ಕಿಂತ ಕಡಿಮೆ ವೀರ್ಯವು (sperm) ಚಲನೆಯನ್ನು ಪ್ರದರ್ಶಿಸಿದರೂ ಸಹ ಗರ್ಭಧಾರಣೆ (pregnancy) ಸಾಧ್ಯ. ಆದರೆ, ಹೆಚ್ಚಿನ ಚಲನಶೀಲತೆಯು ಫಲವತ್ತತೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. 40%ಗಿಂತ ಹೆಚ್ಚಿನ ಚಲನಶೀಲತೆ (movement) ಇರಬೇಕು. ಮೂಲಭೂತವಾಗಿ, ಹೆಚ್ಚು ಸಕ್ರಿಯವಾಗಿ ಚಲಿಸುವ ವೀರ್ಯಾಣು, ಯಶಸ್ವಿಯಾಗುತ್ತದೆ.

ಪುರುಷರ ಗರಿಷ್ಠ ಫಲವತ್ತತೆಯ ಅವಧಿಯನ್ನು ಸಾಮಾನ್ಯವಾಗಿ 22ರಿಂದ 25 ವರ್ಷ ಎಂದು ಪರಿಗಣಿಸಲಾಗುತ್ತದೆ. 35 ವರ್ಷಕ್ಕಿಂತ ಮೊದಲು ಮಗು (child) ಮಾಡಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ. ಏಕೆಂದರೆ ಈ ಹಂತದ ನಂತರ ಪುರುಷ ಫಲವತ್ತತೆ ಕ್ಷೀಣಿಸಲು ಪ್ರಾರಂಭಿಸುತ್ತದೆ. ವಯಸ್ಸಾದಂತೆ ವೀರ್ಯಾಣು ರೂಪಾಂತರದ ಅಪಾಯವೂ ಹೆಚ್ಚು. ಇದರಿಂದ ಗರ್ಭಾವಸ್ಥೆಯ ತೊಡಕುಗಳಿಗೂ ಕಾರಣವಾಗಬಹುದು. ಇದಲ್ಲದೆ, ಒಬ್ಬ ಪುರುಷನು 45 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಗರ್ಭಿಣಿಯ ವಯಸ್ಸನ್ನು ಲೆಕ್ಕಿಸದೆ ಗರ್ಭಪಾತವನ್ನು (abortion) ಅನುಭವಿಸುವ ಸಾಧ್ಯತೆಗಳು ಹೆಚ್ಚು. ವಯಸ್ಸಿಗೆ ಸಂಬಂಧಿಸಿದ ಅಂಶಗಳು ಇಬ್ಬರ ಒಟ್ಟಾರೆ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

Latest Videos
Follow Us:
Download App:
  • android
  • ios