ಪತಿ ಮಾಡೋ ಈ ತಪ್ಪನ್ನು… ಯಾವ ಹೆಂಡತಿಯೂ ಕ್ಷಮಿಸೋದಿಲ್ಲ!
ಗಂಡ ಮತ್ತು ಹೆಂಡತಿ ಸಂಬಂಧ ದೀರ್ಘಕಾಲದವರೆಗೆ ನಡೆಯಬೇಕಾದರೆ, ಪರಸ್ಪರರ ಅನೇಕ ವಿಷಯಗಳನ್ನು ಇಗ್ನೋರ್ ಮಾಡಬೇಕಾಗುತ್ತೆ. ಹೆಂಡತಿಯರು ಈ ಕೆಲಸವನ್ನು ಚೆನ್ನಾಗಿ ಮಾಡಿದರೂ, ಪುರುಷರು ಮಾಡುವ ಕೆಲವು ತಪ್ಪುಗಳಿಂದ ಮಹಿಳೆಯರ ಹೃದಯ ಕಲ್ಲಾಗುತ್ತೆ. ಮತ್ತ ಅವರು ಯಾವತ್ತೂ ನಿಮ್ಮನ್ನು ಕ್ಷಮಿಸೋದಿಲ್ಲ.
ಯಾರೂ ಪರ್ಫೆಕ್ಟ್ ಆಲ್ಲ, ಪರಿಪೂರ್ಣರಾಗೋದಿಕ್ಕೂ (perfect person) ಸಾಧ್ಯ ಇಲ್ಲ. ತಪ್ಪುಗಳು ಸಂಭವಿಸುತ್ತವೆ. ಆದ್ದರಿಂದ, ಸಂಬಂಧವನ್ನು ನಡೆಸಲು ಕ್ಷಮಿಸುವುದು ಮತ್ತು ಅದನ್ನು ಮರೆಯುವುದು ಅವಶ್ಯಕ ಎಂದು ನಂಬಲಾಗಿದೆ. ಆದರೆ ಪದೇ ಪದೇ ಒಂದೇ ತಪ್ಪನ್ನು ಮಾಡುತ್ತಾ ಬಂದರೆ, ಅದನ್ನು ಕ್ಷಮಿಸೋಕೆ ಸಾಧ್ಯಾನೆ ಇಲ್ಲ. ಏಕೆಂದರೆ ಕೆಲವೊಂದು ತಪ್ಪುಗಳು, ಎದುರಿಗಿರುವ ವ್ಯಕ್ತಿಯ ಹೃದಯವನ್ನೇ ಒಡೆಯುತ್ತೆ.
ಗಂಡ ಮತ್ತು ಹೆಂಡತಿ ಸಂಬಂಧವಾಗಿದ್ದರೆ, ಅದರಲ್ಲಿ ಕ್ಷಮೆ, ಸ್ವೀಕಾರ ಎಲ್ಲವೂ ಮುಖ್ಯ. ಗಂಡ ತಪ್ಪು ಮಾಡಿದಾಗ ಹೆಂಡತಿ ಕ್ಷಮಿಸೋದು, ಹೆಂಡತಿ ತಪ್ಪು ಮಾಡಿದಾಗ ಗಂಡ ಕ್ಷಮಿಸೋದು (forgiveness) ಎಲ್ಲವೂ ಉತ್ತಮ ಬಾಂಧವ್ಯಕ್ಕೆ ದಾರಿ. ಆದರೆ ಪದೇ ಪದೇ ತಪ್ಪು ಮಾಡುತ್ತಿದ್ದರೆ, ಅದು ಸಂಬಂಧಕ್ಕೆ ಭಾರಿಯಾಗುತ್ತದೆ. ಆದರೆ ಈ ದಾಂಪತ್ಯದಲ್ಲಿ ಗಂಡ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ, ಆದರೆ ಆ ತಪ್ಪನ್ನು ಹೆಂಡತಿ ಯಾವತ್ತೂ ಕ್ಷಮಿಸೋದಿಲ್ಲ. ಇದರಿಂದ ಅವರ ಹೃದಯವೇ ಒಡೆದು ಹೋಗುತ್ತೆ, ಅಂತಹ ತಪ್ಪುಗಳು ಯಾವುವು ನೋಡೋಣ.
ಕುಟುಂಬ ಮತ್ತು ಸ್ನೇಹಿತರ ಮುಂದೆ ಅವಮಾನ
ಮುಚ್ಚಿದ ಕೋಣೆಯಲ್ಲಿ ಮಹಿಳೆ ತನ್ನ ಗಂಡನ ನಡವಳಿಕೆಯನ್ನು ಸಹಿಸಿಕೊಂಡರೂ, ಮೂರನೇ ವ್ಯಕ್ತಿಯ ಮುಂದೆ ಗಂಡ ತನಗೆ ಅವಮಾನ (insulting infront of family or friends) ಮಾಡಿದರೆ, ಅದನ್ನು ಎಂದಿಗೂ ಆಕೆ ಮರೆಯುವುದಿಲ್ಲ. ಇದನ್ನು ಮಾಡುವ ಪತಿ ಸಾಮಾನ್ಯವಾಗಿ ತನ್ನ ಹೆಂಡತಿಯಿಂದ ಪ್ರೀತಿ ಮತ್ತು ಗೌರವವನ್ನು ಪಡೆಯುವುದಿಲ್ಲ.
ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ
ಒಬ್ಬ ಮಹಿಳೆ ತನ್ನ ಪುರುಷನ ಪ್ರತಿಯೊಂದು ತಪ್ಪು ಮತ್ತು ಕೆಟ್ಟದ್ದನ್ನು ಸಹಿಸಬಲ್ಲಳು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಇನ್ನೊಬ್ಬ ಮಹಿಳೆಗೆ ಅವಳ ಜೀವನದಲ್ಲಿ ಯಾವುದೇ ಸ್ಥಾನವಿಲ್ಲ. ಇಂದು ಹೆಚ್ಚಿನ ವಿಚ್ಛೇದನಗಳಿಗೆ ಕಾರಣ ವಿವಾಹೇತರ (extra marital affair) ಸಂಬಂಧ. ಗಂಡನಿಂದ ಈ ರೀತಿಯ ದ್ರೋಹವು ಮಹಿಳೆಯನ್ನು ಪುರುಷ ಜನಾಂಗದ ಬಗ್ಗೆ ಅಪನಂಬಿಕೆ, ಕೋಪ ಮತ್ತು ದ್ವೇಷವನ್ನು ಶಾಶ್ವತವಾಗಿ ತುಂಬುತ್ತದೆ.
ಎಲ್ಲರ ಮುಂದೆ ಕೈ ಎತ್ತುವುದು
ತಮ್ಮ ಹೆಂಡತಿಯರ ಮೇಲೆ ಕೈ ಎತ್ತುವ ಗಂಡಂದಿರಿಗೆ ಕ್ಷಮಿಸುವ ಹಕ್ಕಿಲ್ಲ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಸಮಾನವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪತಿ ತನ್ನನ್ನು ಶ್ರೇಷ್ಠನೆಂದು ಭಾವಿಸಿ ತನ್ನ ಹೆಂಡತಿ ಮೇಲೆ ದಬ್ಬಾಳಿಕೆ ಮಾಡಿದರೆ, ಹತ್ತು ಜನರ ಮುಂದೆ ಅವಳನ್ನು ಅಗೌರವಿಸಿದರೆ, ಅವಳು ಯಾವುದೇ ಮಟ್ಟಕ್ಕೆ ಸೇಡು ತೀರಿಸಿಕೊಳ್ಳಬಹುದು. ಇದಕ್ಕಾಗಿ ಅವಳು ತನ್ನ ಗಂಡನನ್ನು ಎಂದಿಗೂ ಕ್ಷಮಿಸುವುದಿಲ್ಲ.
ಅಗತ್ಯವಿದ್ದಾಗ ಒಟ್ಟಿಗೆ ನಿಲ್ಲದಿರುವುದು
ಸಂಗಾತಿ ಎಂದರೆ ಪ್ರತಿಯೊಂದು ಸಂತೋಷ ಮತ್ತು ದುಃಖದಲ್ಲಿ ಪರಸ್ಪರ ಬೆಂಬಲಿಸುವುದು. ಆದರೆ ಒಬ್ಬ ಪುರುಷನು ತನ್ನ ಹೆಂಡತಿಯನ್ನು ದುರ್ಬಲ ಸಮಯದಲ್ಲಿ ಬೆಂಬಲಿಸದಿದ್ದಾಗ (not supporting we she need), ಅವಳು ಈ ವಿಷಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಒಂದು ಘಟನೆಯ ನಂತರ, ಅವಳು ತನ್ನ ಗಂಡನಿಂದ ಸಂಪೂರ್ಣವಾಗಿ ಬೇರ್ಪಡುತ್ತಾಳೆ.
ಗಿಸುವುದು
ಮಹಿಳೆ ಮನಸು ಮಾಡಿದರೆ ಏನೂ ಬೇಕಾದರೂ ಸಾಧಿಸುವ ಛಲ ಆಕೆಗಿದೆ. ಆದರೆ ಹೆಂಡತಿ ಏನು ಮಾಡಲು ಮುಂದೆ ಬಂದರೂ ಸಹ, ಅದನ್ನು ಹಂಗಿಸುತ್ತಾ, ನಿನ್ನ ಕೈಯಿಂದ ಇದನ್ನ ಮಾಡಲು ಸಾಧ್ಯವಿಲ್ಲ, ನೀವು ಹೇಡಿ ಎಂದೆಲ್ಲಾ ಹಂಗಿಸಿದರೆ, ಪತ್ನಿಗೆ ತನ್ನ ಪತಿಯ ಮೇಲೆ ಕೋಪ ಹೆಚ್ಚುತ್ತೆ.