Asianet Suvarna News Asianet Suvarna News

90 ವರ್ಷಗಳ ಸುದೀರ್ಘ ದಾಂಪತ್ಯ: ಗ್ರಾನೈಟ್ ವಿವಾಹ ವಾರ್ಷಿಕೋತ್ಸವ ಆಚರಿಸಿದ ವಿಶ್ವದ ಏಕೈಕ ಜೋಡಿ

ಮದುವೆಯ 25ನೇ ವಾರ್ಷಿಕೋತ್ಸವ 50ನೇ ವಾರ್ಷಿಕೋತ್ಸವವನ್ನು ಆಚರಿಸಿರುವುದನ್ನು ನೋಡಿರಬಹುದು. ಆದರೆ ಮದುವೆಯಾಗಿ 90ವರ್ಷಗಳ ಕಾಲ ಜೊತೆಯಾಗಿ ಬಾಳಿದ ಜೋಡಿಯ ಬಗ್ಗೆ ನಿಮಗೆ ಗೊತ್ತೆ. 

90 years Longest Marriage Bond, this Indian Origin couple is the only one who celebrated their 90 year of Marriage Granite Anniversary akb
Author
First Published Oct 12, 2023, 3:52 PM IST

ಯುಕೆ: ಇತ್ತೀಚೆಗೆ ಮದುವೆಯಾದ ಒಂದು ತಿಂಗಳಿಗೆ ನವಜೋಡಿಗಳು ಕೇಕ್‌ ಕತ್ತರಿಸಿ ಮದುವೆಯಾಗಿ ಒಂದು ತಿಂಗಳಾಯಿತು, ಎರಡು ತಿಂಗಳಾಯಿತು ಮೂರು ತಿಂಗಳಾಯಿತು ಎಂದು ಸಂಭ್ರಮಿಸುವುದನ್ನು ನೀವು ಕಾಣಬಹುದು. ವಿಚ್ಛೇದನಗಳು ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಸ್ವತಃ ವಿವಾಹವಾದವರಿಗೂ ಎಷ್ಟು ದಿನ ಜೊತೆಯಾಗಿ ಬಾಳುತ್ತೇವೆ ಎಂಬುದರ ಅರಿವಿರುವುದಿಲ್ಲ, ಹೀಗಾಗಿ ಇಂತಹ ಸಂಭ್ರಮಾಚರಣೆಗಳು ಇಂದು ಮಹತ್ವ ಪಡೆದಿವೆ.  ಇದು ಇತ್ತೀಚಿನ ತಲೆಮಾರಿನ ಕತೆಯಾದರೆ ಇದಕ್ಕಿಂತಲ್ಲೂ ಹಲವು ದಶಕಗಳ ಹಿಂದಿನ ಜೋಡಿಗಳು ತಮ್ಮ ಮದುವೆಯ 25ನೇ ವಾರ್ಷಿಕೋತ್ಸವ 50ನೇ ವಾರ್ಷಿಕೋತ್ಸವವನ್ನು ಆಚರಿಸಿರುವುದನ್ನು ನೋಡಿರಬಹುದು. ಆದರೆ ಮದುವೆಯಾಗಿ 90ವರ್ಷಗಳ ಕಾಲ ಜೊತೆಯಾಗಿ ಬಾಳಿದ ಜೋಡಿಯ ಬಗ್ಗೆ ನಿಮಗೆ ಗೊತ್ತೆ. 

ಹೌದು ಮದುವೆಯಾದ ನಂತರ 25 ವರ್ಷ 50 ವರ್ಷ ಜೊತೆಯಾಗಿ ಬದುಕುವುದು ಮಹಾನ್ ಸಾಧನೆ. ಇವತ್ತಿನ ಮನುಷ್ಯರ ಸರಾಸರಿ ಜೀವಿತಾವಧಿಯೇ 50 ರಿಂದು 60 ವರ್ಷ ಹೀಗಿರುವಾಗ 70 ದಾಟಿದರೆ ದೊಡ್ಡ ಸೆಂಚುರಿ ಹೊಡೆದಂತೆ. ಹೀಗಿರುವಾಗ ಮದುವೆಯಾಗಿಯೇ 90 ವರ್ಷಗಳ ಕಾಲ ಜೊತೆಯಾಗಿ ಕಳೆದಿದ್ದಾರೆ ಎಂದರೆ ಅದನ್ನು ಸಾಧನೆ ಎನ್ನದಿರಲು ಹೇಗೆ ಸಾಧ್ಯ. 
ಪ್ರಸ್ತುತ ಬ್ರಿಟನ್‌ನಲ್ಲಿ ನಿವಾಸಿಗಳಾಗಿರುವ ಭಾರತೀಯ ಮೂಲದ ಕರಮ್ ಚಂದ್ ಹಾಗೂ ಪತ್ನಿ ಕರ್ತಾರಿ ಚಾಂದ್ ಎಂಬುವವರೇ ಮದುವೆಯ ನಂತರ ಇಷ್ಟು ಸುಧೀರ್ಘ ಕಾಲ ಜೊತೆಯಾಗಿ ಜೀವಿಸಿ ದಾಖಲೆ ಬರೆದ ವಿಶೇಷ ಜೋಡಿ.  1925ರ ಡಿಸೆಂಬರ್ 11 ರಂದು ಇವರು ಭಾರತದಲ್ಲಿ ಸಿಖ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಮದುವೆಯ ನಂತರ ಇಷ್ಟು 90 ವರ್ಷಗಳಸುಧೀರ್ಘ ಕಾಲ ಬಾಳಿ ಬದುಕಿದ ಏಕೈಕ ಜೋಡಿ ಇವರೆನಿಸಿದ್ದಾರೆ. 

36 ಕೋಟಿಗೆ ಸೇಲ್ ಆಯ್ತು 13 ಸಾವಿರಕ್ಕೆ ಖರೀದಿಸಿದ್ದ ಈ ಮುಖವಾಡ : ಏನಿದರ ವಿಶೇಷತೆ..?

2016ರಲ್ಲಿ ಕರಮ್ ಚಂದ್ (Karam Chand) ಅವರು ತಮ್ಮ 110ನೇ ವರ್ಷದಲ್ಲಿ ಪ್ರಾಣ ಬಿಟ್ಟರು. ಇವರ ಸಾವಿನೊಂದಿಗೆ 90 ವರ್ಷಗಳ 107 ದಿನ ಸುದೀರ್ಘ ವಿವಾಹವೊಂದು ಅಂತ್ಯವಾಯ್ತು. ನಂತರ ಪತಿಯ ಸಾವಿನ ಮೂರು ವರ್ಷಗಳ ನಂತರ 2019ರಲ್ಲಿ  ಕರ್ತರಿ (Kartari Chand) ಕೂಡ  ಉಸಿರುಚೆಲ್ಲಿದರು. ಕರ್ತರಿ ಹಾಗೂ ಕರಮ್ ಇಬ್ಬರು ಪಂಜಾಬ್‌ನಲ್ಲಿ ಹುಟ್ಟಿದವರಾಗಿದ್ದು, 1965ರಲ್ಲಿ ಯುಕೆಗೆ ವಲಸೆ ಹೋದರು. ಈ ದಂಪತಿ 8 ಮಕ್ಕಳು, 27 ಮರಿಮಕ್ಕಳು, 23 ಮರಿಮೊಮ್ಮಕ್ಕಳನ್ನು ಹೊಂದಿದ್ದರು. ಇವರ 90ನೇ ವರ್ಷದ ವಿವಾಹ ವಾರ್ಷಿಕೋತ್ಸವ ಅಕ್ಟೋಬರ್ 2016ರಲ್ಲಿ ಬಹಳ ಅದ್ದೂರಿಯಾಗಿ  ನಡೆದಿತ್ತು, ಬ್ರಿಟಿಷ್ ಮಾಧ್ಯಮಗಳು ಕೂಡ ಇದನ್ನು ವರದಿ ಮಾಡಿದ್ದರು. 

ಪುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕಿಳಿದು ಬಾಲ್ ಹೊತ್ತೊಯ್ದ ಶ್ವಾನ: ವೈರಲ್ ವೀಡಿಯೋ

ವಿವಾಹ ವಾರ್ಷಿಕೋತ್ಸವದ ಅವಧಿಯನ್ನು ಆಧರಿಸಿ ಒಂದೊಂದು ಸಮಯದ ವಿವಾಹ ವಾರ್ಷಿಕೋತ್ಸವವನ್ನು ಒಂದೊಂದು ರೀತಿಯಲ್ಲಿ ಕರೆಯಲಾಗುತ್ತದೆ. ಅದೇ ರೀತಿ ಇವರ ವಾರ್ಷಿಕೋತ್ಸವಕ್ಕೆ 'ಗ್ರಾನೈಟ್ ವಿವಾಹ ವಾರ್ಷಿಕೋತ್ಸವ' ಎಂದು ಕರೆಯಲಾಗಿತ್ತು. 

ಮದುವೆಯಾದ 1ನೇ ವರ್ಷಕ್ಕೆ 'ಪೇಪರ್ ಆನಿವರ್ಸರಿ' (Paper anniversary) ಎಂದು ಕರೆದರೆ 2ನೇ ವರ್ಷಕ್ಕೆ 'ಕಾಟನ್ ಆನಿವರ್ಸರಿ' (Cotton anniversary), 5ನೇ ವರ್ಷಕ್ಕೆ ವುಡ್ ಆನಿವರ್ಸರಿ (Wood anniversary)  10ನೇ ವರ್ಷಕ್ಕೆ 'ಟಿನ್ ಆನಿವರ್ಸರಿ' (Tin anniversary), 1ನೇ ವರ್ಷಕ್ಕೆ 'ಕ್ರಿಸ್ಟಲ್ ಆನಿವರ್ಸರಿ'(Crystal Anniversary), 25 ನೇ ವರ್ಷಕ್ಕೆ ಸಿಲ್ವರ್‌ ಆನಿವರ್ಸರಿ (Silver Anniversary), 50ನೇ ವರ್ಷಕ್ಕೆ ಗೋಲ್ಡ್ ಆನಿವರ್ಸರಿ (Gold Anniversary) 55ನೇ ವರ್ಷಕ್ಕೆ ಎಮರಾಲ್ಡ್ ಆನಿವರ್ಸರಿ (Gold Anniversary), 60ನೇ ವರ್ಷಕ್ಕೆ ಡೈಮಂಡ್ ಆನಿವರ್ಸರಿ (Diamond Anniversary), 70ನೇ ವರ್ಷಕ್ಕೆ ಪ್ಲಾಟಿನಂ ಆನಿವರ್ಸರಿ (Platinum Anniversary), 80ನೇ ವರ್ಷಕ್ಕೆ  ಓಕ್ ಅನಿವರ್ಸರಿ, ಹಾಗೂ 90ನೇ ವರ್ಷಕ್ಕೆ ಗ್ರಾನೈಟ್ ಅನಿವರ್ಸರಿ (Granite Anniversary) ಎಂದು ಕರೆಯಲಾಗುತ್ತದೆ.

Follow Us:
Download App:
  • android
  • ios