ಪುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕಿಳಿದು ಬಾಲ್ ಹೊತ್ತೊಯ್ದ ಶ್ವಾನ: ವೈರಲ್ ವೀಡಿಯೋ
ಪುಟ್ಬಾಲ್ ಪಂದ್ಯಾವಳಿ ವೇಳೆ ಶ್ವಾನವೊಂದು ಮೈದಾನಕ್ಕಿಳಿದು ಪುಟ್ಬಾಲ್ ಹೊತ್ತೊಯ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೆಕ್ಸಿಕೋ: ಪುಟ್ಬಾಲ್ ಪಂದ್ಯಾವಳಿ ವೇಳೆ ಶ್ವಾನವೊಂದು ಮೈದಾನಕ್ಕಿಳಿದು ಪುಟ್ಬಾಲ್ ಹೊತ್ತೊಯ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಪ್ಟೆಂಬರ್ 28ರಂದು ಮೆಕ್ಸಿಕೋದಲ್ಲಿ ನಡೆದ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ. ಮೆಕ್ಸಿಕನ್ ತಂಡಗಳಾದ ಅಲೆಬ್ರಿಜೆಸ್ ಓಕ್ಸಾಕಾ ಮತ್ತು ಡೊರಾಡೋಸ್ ನಡುವಿನ ಫುಟ್ಬಾಲ್ ಪಂದ್ಯದ ವೇಳೆ, ನಾಯಿಯೊಂದು ಮೈದಾನಕ್ಕಿಳಿದು ಪುಟ್ಬಾಲ್ ಆಟಗಾರರನ್ನು ಕೆಲ ಕಾಲ ಆಟ ಆಡಿಸಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ವೈರಲ್ ಆಗಿದೆ. ಜೊತೆಗೆ ಮೈದಾನಕ್ಕಿಳಿದ ಈ ಬೀದಿ ನಾಯಿಯನ್ನು ಆ ಪಂದ್ಯಾವಳಿಯಲ್ಲಿ ಗೆದ್ದ ತಂಡವಾದ ಅಲೆಬ್ರಿಜೆಸ್ ಓಕ್ಸಾಕಾ ಈ ಶ್ವಾನವನ್ನು ದತ್ತು ಪಡೆದಿದೆ.
Ted The Stoner ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ಕಂದು ಬಣ್ಣದ ಶ್ವಾನವೊಂದು ಮೈದಾನಕ್ಕಿಳಿದ್ದು, ಆಟಗಾರರನ್ನು ಆಟವಾಡಿಸುತ್ತಿದೆ. ಮೈದಾನಕ್ಕಿಳಿದ ಈ ಶ್ವಾನ ಮೊದಲಿಗೆ ಚೆಂಡು ಹಿಡಿದುಕೊಂಡಿದ್ದವನ ಬಳಿ ಹೋಗಿ ಆತನ ಕೈನಿಂದ ಚೆಂದನ್ನು ಕೆಳಗೆ ಬೀಳಿಸಿದೆ. ನಂತರ ಚೆಂಡಿನಲ್ಲಿ ತಾನೇ ಕೆಲ ಕಾಲ ಆಟವಾಡಿ, ಬಳಿಕ ಬಾಯಲ್ಲಿ ಚೆಂಡನ್ನು ಕಚ್ಚಿಕೊಂಡು ಮೈದಾನದುದ್ದಕ್ಕೂ ಓಡಾಡಿದೆ. ಈ ವೇಳೆ ಮೈದಾನದಲ್ಲಿರುವ ಆಟಗಾರರು ಹಾಗೂ ಮೈದಾನದ ಭದ್ರತಾ ಸಿಬ್ಬಂದಿ ಈ ನಾಯಿಯ ಬಾಯಿಯಿಂದ ಚೆಂಡನ್ನು ವಾಪಸ್ ಪಡೆಯಲು ಅದರ ಹಿಂದೆಯೇ ಓಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ನಿಮಿಷಗಳ ಕಾಲ ಎಲ್ಲರನ್ನು ಮೈದಾನವಿಡೀ ಓಡುವಂತೆ ಮಾಡಿದ ಶ್ವಾನ ನಂತರ ಓರ್ವ ಆಟಗಾರನ ಕೈಗೆ ಸಿಕ್ಕಿದೆ. ಈ ಮೂಲಕ ಶ್ವಾನ ಪಂದ್ಯಾವಳಿ ವೀಕ್ಷಿಸಲು ಮೈದಾನಕ್ಕೆ ಬಂದ ಪುಟ್ಬಾಲ್ ಪ್ರೇಮಿಗಳಿಗೆ ಎಕ್ಸ್ಟ್ರಾ ಮನೋರಂಜನೆ ನೀಡಿದ್ದು, ಈ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
ಇಸ್ರೇಲ್ ಯುದ್ಧ: ಬಾಂಬ್ ಶೆಲ್ಟರ್‌ಗೆ ಬರುತ್ತಿದ್ದಂತೆ ನಾವಿದ್ದ ಮನೆ ಧ್ವಂಸವಾಗಿದ್ದು ತಿಳಿಯಿತು
ಈ ಒಳ್ಳೆ ಹುಡುಗ ಮೆಕ್ಸಿಕನ್ 2ನೇ ವಿಭಾಗೀಯ ಫುಟ್ಬಾಲ್ ಮ್ಯಾಚ್‌ನಲ್ಲಿ ಎಲ್ಲರನ್ನು ಸೆಳೆಯುವುದರ ಜೊತೆಗೆ ಮೈದಾನದಲ್ಲಿ ಕೋಲಾಹಲ ಸೃಷ್ಟಿಗೆ ಕಾರಣನಾದ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ. ಎರಡು ದಿನಗಳ ಹಿಂದೆ ಪೋಸ್ಟ್ ಆದ ಈ ವೀಡಿಯೋವನ್ನು 8 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ವೀಡಿಯೋ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದಾರೆ. ಇದನ್ನು ಸಹಿಸಲಾಗದು...! ಆಟದ ಮಧ್ಯೆ ಮೈದಾನಕ್ಕೆ ನುಗ್ಗಿ ತಪ್ಪು ಮಾಡಿದ ಇವನಿಗೆ ಯೆಲ್ಲೋ ಕಾರ್ಡ್ ನೀಡಿ ಜೊತೆಗೆ ಬೆಲ್ಲಿ ರಬ್ ಮಾಡಿ (ಬೆನ್ನು ಸವರುವುದು) ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಗೋಲರ್ ಶ್ವಾನಕ್ಕೆ ಚೆಂಡನ್ನು ನೀಡಿದ್ದು ಖುಷಿ ಆಯ್ತು, ಅಲ್ಲದೇ ಈ ಶ್ವಾನ ಯಾರಿಗೂ ಅಸಮಾಧಾನ ಮಾಡಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇಸ್ರೇಲ್ ಹಮಾಸ್ ಯುದ್ಧ: ಇಸ್ಲಾಮಿಕ್ ಒಕ್ಕೂಟದ ತುರ್ತು ಸಭೆ
ಇನ್ನು ಈ ಪಂದ್ಯಾವಳಿಯ ನಂತರ ಅಲೆಬ್ರಿಜ್ ಒಕ್ಸಕಾ ತಂಡ ಈ ಮ್ಯಾಚ್‌ನ್ನು ಗೆದ್ದಿದ್ದು, ಅವರು ಈ ಪುಟ್ಬಾಲ್ ಪ್ರೇಮಿ ಶ್ವಾನವನ್ನು ದತ್ತು ತೆಗೆದುಕೊಂಡಿರುವುದಾಗಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಶ್ವಾನದ ಫೋಟೋ ಹಾಕಿ ನಮ್ಮ ಹೊಸ ಬೆಸ್ಟ್‌ಫ್ರೆಂಡ್ ನಮ್ಮ ಜೊತೆ ಚೆನ್ನಾಗಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಗಾಜಾ ಪಟ್ಟಿಯನ್ನ ಟೆಂಟ್ ಸಿಟಿ ಮಾಡ್ತೇವೆ ಎಂದ ಇಸ್ರೇಲ್: ಬಾಹ್ಯ ಸಂಪರ್ಕ ಕಳಕೊಂಡ ಹಮಾಸ್
ಮೈದಾನಕ್ಕಿಳಿದು ಚೆಂಡು ಹೊತ್ತೊಯ್ದ ಶ್ವಾನದ ವೀಡಿಯೋವನ್ನು ನೀವು ನೋಡಿ