36 ಕೋಟಿಗೆ ಸೇಲ್ ಆಯ್ತು 13 ಸಾವಿರಕ್ಕೆ ಖರೀದಿಸಿದ್ದ ಈ ಮುಖವಾಡ : ಏನಿದರ ವಿಶೇಷತೆ..?

ನಿಮ್ಸ್‌ನ ಎಂಭತ್ತರ ಹರೆಯದ ದಂಪತಿಗಳು 2021 ರಲ್ಲಿ ಆರ್ಟ್ ಡೀಲರ್ ಒಬ್ಬರಿಗೆ   ಕೇವಲ ಪುಡಿಗಾಸಿಗೆ ಮಾರಾಟ ಮಾಡಿದ್ದ ಈ ಮುಖವಾಡವನ್ನು ಆ ಡೀಲರ್‌ ಬರೋಬ್ಬರಿ  36,86,17320 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾನೆ,

This mask was sold for 36 crores elderly couple from Nimes filed a complaint against auction house for cheating akb

ನಿಮ್ಸ್: ತಮ್ಮ ಬಳಿ ಇದ್ದ ಸಂಪ್ರದಾಯಿಕ ಕಸೂತಿ ಕಲೆಗಳಿದ್ದ ಫಾಂಗ್ ಮಾಸ್ಕ್‌ನ್ನು ತಮ್ಮಿಂದ ಕೇವಲ 13 ಸಾವಿರ ರೂಪಾಯಿಗೆ ಖರೀದಿಸಿ ಬಳಿಕ ಅದನ್ನು 36 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದ ಹರಾಜು ಸಂಸ್ಥೆ ವಿರುದ್ಧ ಹಿರಿಯ ದಂಪತಿಗಳೊಬ್ಬರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ಮೈಲ್ ಆನ್‌ಲೈನ್‌( MailOnline)ಪ್ರಕಾರ, ಫ್ರಾನ್ಸ್‌ನ ನಿಮ್ಸ್‌ನ ಎಂಭತ್ತರ ಹರೆಯದ ದಂಪತಿಗಳು 2021 ರಲ್ಲಿ ತಮ್ಮ ಮನೆಯನ್ನು ತೆರವುಗೊಳಿಸುತ್ತಿದ್ದರು. ಈ ವೇಳೆ ಅವರು ತಮ್ಮ ಬಳಿ ಇದ್ದ  ಅವರು 'ಎನ್‌ಜಿಲ್' (Ngil) ಎಂಬ ಆಫ್ರಿಕನ್ ಮುಖವಾಡವನ್ನು ಮಾರಾಟ ಮಾಡಲು ನಿರ್ಧರಿಸಿದರು.  ಹೀಗಾಗಿ ಮಿಸ್ಟರ್ ಝೆಡ್‌ ಎಂದು ಕರೆಯಲ್ಪಡುವ ಆರ್ಟ್‌ ಡೀಲರ್ ಒಬ್ಬರಿಗೆ ಇದನ್ನು  ಕೇವಲ 129 ಪೌಂಡ್ ಅಂದರೆ 13,208 ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಆದರೆ ಕೆಲವು ತಿಂಗಳ ನಂತರ ಈ ಆರ್ಟ್ ಡೀಲರ್‌ ಈ ಮುಖವಾಡವನ್ನು ಮಾಂಟ್ಪೆಲ್ಲಿಯರ್‌ನಲ್ಲಿ(Montpellier) ಹರಾಜಿನಲ್ಲಿ 3.6 ಮಿಲಿಯನ್ ಪೌಂಡ್ ಅಂದರೆ ಸುಮಾರು  36,86,17320 ಭಾರತೀಯ ರೂಪಾಯಿ ಮೌಲ್ಯಕ್ಕೆ ಮಾರಾಟ ಮಾಡಿದ್ದ. 

ಚಿಕಿತ್ಸೆಗಾಗಿ ಬಾಲಕಿ ಮೆದುಳಿನ ಒಂದು ಭಾಗ ಸ್ವಿಚ್ ಆಫ್ ಮಾಡಿದ ವೈದ್ಯರು!

ಇತ್ತ ಈ ವೃದ್ಧ ದಂಪತಿಗಳಿಗೆ ದಿನಪತ್ರಿಕೆಯಲ್ಲಿ ಈ ವಿಚಾರವನ್ನು ನೋಡುವವರೆಗೂ ತಾವು ಮಾರಿದ್ದ ಈ ಮುಖವಾಡಕ್ಕೆ ಇಷ್ಟೊಂದು ಬೆಲೆ ಇರಬಹುದು ಎಂದು ಗೊತ್ತಿರಲಿಲ್ಲ, ಹೀಗಾಗಿ ಅವರು ಈಗ ತಮ್ಮಿಂದ ಪುಡಿಗಾಸಿನ ಬೆಲೆಗೆ ಮುಖವಾಡ ಖರೀದಿಸಿ ಕೋಟ್ಯಂತರ ಬೆಲೆಗೆ ಅದನ್ನು ಮಾರಾಟ ಮಾಡಿದ ಮಿಸ್ಟರ್ ಜೆಡ್ ವಿರುದ್ಧ ದೂರು ದಾಖಲಿಸಿದ್ದಾರೆ. ಮಿಸ್ಟರ್‌ ಜೆಡ್‌ ಈ ಮುಖವಾಡದಕ್ಕೆ ಇರುವ ನಿಜವಾದ ಮೌಲ್ಯದ ಅರಿವಿದ್ದು, ನಮಗೆ ಪುಡಿಗಾಸು ನೀಡಿ ಮೋಸ ಮಾಡಿದ್ದಾರೆ ಎಂಬುದು ಈ ವೃದ್ಧ ದಂಪತಿಯ ಆರೋಪವಾಗಿದೆ. 

ಇಸ್ರೇಲ್ ಯುದ್ಧ: ಬಾಂಬ್ ಶೆಲ್ಟರ್‌ಗೆ ಬರುತ್ತಿದ್ದಂತೆ ನಾವಿದ್ದ ಮನೆ ಧ್ವಂಸವಾಗಿದ್ದು ತಿಳಿಯಿತು

ದಿ ಮೆಟ್ರೋ ನ್ಯೂಸ್ ಪ್ರಕಾರ, ಈ ಫಾಂಗ್‌ ಮುಖವಾಡವನ್ನು ಅನ್ನು ಮೂಲತಃ ಗ್ಯಾಬೊನ್‌ನ ಫಾಂಗ್ ಜನರಿಂದ ಮೊದಲಿಗೆ ಖರೀದಿಸಲಾಗಿತ್ತು. ಗ್ಯಾಬೊನ್‌ನ ಫಾಂಗ್ ಜನ ಇದನ್ನು ಮದುವೆಗಳು ಮತ್ತು ಅಂತ್ಯಕ್ರಿಯೆಗಳಲ್ಲಿ ಬಳಸುತ್ತಿದ್ದರು. ಆದರೆ ಇದು ಆಫ್ರಿಕನ್‌ ಹೊರತುಪಡಿಸಿ ಉಳಿದ ದೇಶಗಳಲ್ಲಿ ಅಪರೂಪಕ್ಕೆ ಕಾಣಸಿಗುವ ದೃಶ್ಯವಾಗಿದೆ. ಜಗತ್ತಿನಾದ್ಯಂತ ಇರುವ   ವಸ್ತುಸಂಗ್ರಹಾಲಯಗಳಲ್ಲಿ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ ಇವು ಕಂಡು ಬರುತ್ತವೆ. 

ಇಸ್ರೇಲ್ ಹಮಾಸ್ ಯುದ್ಧ: ಇಸ್ಲಾಮಿಕ್‌ ಒಕ್ಕೂಟದ ತುರ್ತು ಸಭೆ

ಈ ಮುಖವಾಡವನ್ನು ತಪಾಸಣೆ ಮಾಡಿದಾಗ 19 ನೇ ಶತಮಾನಕ್ಕೆ ಸೇರಿದ್ದು ಎಂದು ತಿಳಿದು ಬಂದಿದ್ದು, ನ್ಯಾಯಾಲಯದ ದಾಖಲೆಗಳು  ಈ ವಸ್ತುವನ್ನು ಅಪರೂಪದಲ್ಲೇ ಅಸಾಧಾರಣವಾದುದು ಎಂದು ಹೇಳಿದೆ. ಈ ದಂಪತಿಗಳಲ್ಲಿ ಗಂಡನ ಅಜ್ಜ ಆಫ್ರಿಕಾ ವಸಾಹತುಶಾಹಿಗಳ ಹಿಡಿತದಲ್ಲಿದ್ದಾಗ ಗವರ್ನರ್‌ ಆಗಿದ್ದು, ಈ ಹಿನ್ನೆಲೆಯಲ್ಲಿ ಅವರು ಈ ಮುಖವಾಡವನ್ನು ಅವರ ಸುಪರ್ದಿಗೆ ಸಿಕ್ಕಿತ್ತು. ಈ ಬಗ್ಗೆ ಈಗ ಪ್ರಕರಣ ದಾಖಲಾಗಿದ್ದು, ನೈಮ್‌ನ (Nimes) ನ್ಯಾಯಾಲಯ ದಂಪತಿಗಳ ದೂರು ನ್ಯಾಯ ಸಮ್ಮತ ಎಂದು ಪರಿಗಣಿಸಿದೆ ಎಂದು ತಿಳಿದು ಬಂದಿದೆ.

ಗಾಜಾ ಪಟ್ಟಿಯನ್ನ ಟೆಂಟ್ ಸಿಟಿ ಮಾಡ್ತೇವೆ ಎಂದ ಇಸ್ರೇಲ್‌: ಬಾಹ್ಯ ಸಂಪರ್ಕ ಕಳಕೊಂಡ ಹಮಾಸ್‌

Latest Videos
Follow Us:
Download App:
  • android
  • ios