1. ಸಂಗಾತಿ ಅಂದ್ರೆ ಟೇಕನ್‌ ಫಾರ್‌ ಗ್ರ್ಯಾಂಟೆಡ್‌ ಅಲ್ಲ

ಅವರು ನಿಮ್ಮ ಸಂಗಾತಿಯಾದ ತಪ್ಪಿಗೆ ಅಭಿರುಚಿಯನ್ನೂ ಕಳೆದುಕೊಂಡಿರುತ್ತಾರೆ ಅಂತ ಭಾವಿಸಬಾರದು. ನಿಮ್ಮ ರಿಸೆಪ್ಶನ್‌ ಇದೆ ಅಂದುಕೊಳ್ಳಿ. ಆ ದಿನ ತೊಟ್ಟುಕೊಳ್ಳಬೇಕಾದ ನಿಮ್ಮ ಡ್ರೆಸ್‌ ಅನ್ನು ನೀವು ಸೆಲೆಕ್ಟ್ ಮಾಡೋದರ ಜೊತೆಗೆ ಆ ದಿನ ನಿಮ್ಮ ಪಾರ್ಟನರ್‌ ಹಾಕ್ಕೊಳ್ಳೋ ಡ್ರೆಸ್‌ ಅನ್ನೂ ಅವರ ಬಳಿ ಕೇಳದೇ ನೀವೇ ಆಯ್ಕೆ ಮಾಡ್ತೀರಿ. ಅವರಿಗದು ಇಷ್ಟಆಗದೇ ಇದ್ದರೂ ನಿಮಗೆ ಹರ್ಟ್‌ ಆಗಬಾರದು ಅಂತ ಅವರು ಓಕೆ ಅಂದಿರ್ತಾರೆ. ಆದರೆ ಇದರ ಸೂಕ್ಷ್ಮ ಹೊಡೆತ ಸಂಬಂಧದ ಮೇಲೆ ಬಿದ್ದೇ ಬೀಳುತ್ತದೆ.

2. ಅವ್ನು ಅವನ ಪಾಡಿಗೆ, ನಾನು ನನ್ನ ಪಾಡಿಗೆ

ಮೇಲ್ನೋಟಕ್ಕೆ ಇದು ಸ್ವತಂತ್ರ$ಮನೋಭಾವದ ಥರ ಕಾಣುತ್ತೆ. ಆದರೆ ಇಂಥಾ ಅತಿಯಾದ ಡಿಟ್ಯಾಚ್‌ಮೆಂಟ್‌ ಒಳ್ಳೆಯದಲ್ಲ. ಇಬ್ಬರ ನಡುವೆ ಗ್ಯಾಪ್‌ ಬೇಕು ನಿಜ, ಆದರೆ ಗ್ಯಾಪ್‌ ಹೆಚ್ಚಾದ್ರೂ ಒಳ್ಳೆಯದಲ್ಲ. ಹೀಗಾದಾಗ ಸಾಂಗತ್ಯದಲ್ಲಿ ರಸ ಇರಲ್ಲ. ಸುಖ ದುಃಖದಲ್ಲಿ ಜೊತೆಯಾಗದ ಪಾರ್ಟನರ್‌ ಇದ್ದರೆ ಬದುಕು ನೀರಸವಾಗಬಹುದು. ಒಂದು ಮಟ್ಟಿನ ಸ್ವಾತಂತ್ರ್ಯ ಇಟ್ಟುಕೊಂಡೇ ಇಂಟಿಮೆಸಿಯನ್ನೂ ಅನುಭವಿಸಿ. ಅನಿವಾರ್ಯತೆಗಾಗಿ ಜೊತೆಯಿದ್ದು ಏನು ಪ್ರಯೋಜನ, ಅಲ್ವಾ?

ಸಾವಿನ ಮನೆಯಾಗಿದ್ದ ಇಟಲಿಯಲ್ಲೀಗ ಪ್ರೇಮಿಗಳಿಗೆ ಮಿಲನದ ಸಂಭ್ರಮ! .

3. ಪ್ರೀತಿಗೆ ಫä›ಫ್‌ ಕೇಳ್ಬೇಡಿ

ಇದೊಂಥರ ಅನುಮಾನದ ಪಿಶಾಚಿ. ಪದೇ ಪದೇ ಅವನು ತನ್ನ ಪ್ರೀತಿಯನ್ನು ಪ್ರೂವ್‌ ಮಾಡ್ಬೇಕು ಅಂತ ಹೇಳುತ್ತೆ. ಅವನು ಕೆಲವೊಮ್ಮೆ ಅವನದೇ ಲೋಕದಲ್ಲಿ ಮುಳುಗಿರ್ತಾನೆ, ಆಗ ಅವನ ಬಗ್ಗೆ ಏನೇನೆಲ್ಲ ಅನುಮಾನ ಶುರುವಾಗುತ್ತೆ. ಅವನಿಗೆ ನನ್ನ ಬಗ್ಗೆ ಆಸಕ್ತಿ ಕಡಿಮೆ ಆಗಿರಬಹುದಾ, ಬೇರೆ ಹುಡುಗಿಯನ್ನು ಇಷ್ಟಪಡುತ್ತಿರಬಹುದಾ, ಅವನು ತನ್ನನ್ನು ಮೊದಲಿನ ಥರ ಪ್ರೀತಿಸುತ್ತಿಲ್ಲ ಅಂತ ಅನಿಸಲು ಶುರುವಾಗುತ್ತೆ. ಇಂಥ ಯೋಚನೆಗಳನ್ನು ಬಿಟ್ಬಿಡಿ, ಅವನು ಹಾವನ್ನು ಕಚ್ಚಿ ಸಾಯಿಸಿದ ಕುಡುಕನ ಬಗ್ಗೆ ಯೋಚಿಸ್ತಿರಬಹುದು, ಯಾವನಿಗೊತ್ತು!

4. ಎಲ್ಲಾ ಗುಟ್ಟುಗಳನ್ನು ಬಿಟ್ಟುಕೊಡುವುದು ತಪ್ಪು.

ನಾನು ಅವಳ ಹತ್ರ ಫುಲ್‌ ಓಪನ್‌, ಮನಸ್ಸಲ್ಲಿ ಏನೂ ಇಟ್ಕೊಳಲ್ಲ ಎಲ್ಲಾ ಹೇಳ್ಬಿಡ್ತೀನಿ ಅನ್ನೋ ಆಸಾಮಿಗಳನ್ನು ನೋಡಿರಬಹುದು, ಅವರೇನೋ ಎಲ್ಲ ಹೇಳಿ ಹಗುರಾಗ್ತಾರೆ, ಆದರೆ ಕೇಳಿಸಿಕೊಂಡವರ ಕತೆಯೇನು? ಆ ಹುಡುಗಿ ಏನ್‌ ಸಖತ್ತಾಗಿದ್ದಾಳೆ ಅಂತ ಈತ ಲೈಟ್‌ ಆಗಿ ಹೇಳಿದ್ದನ್ನು ಅವಳು ಬೇರೆ ಥರ ತಿಳ್ಕೊಂಡರೆ? ಸಂಗಾತಿ ಅಂದ ಮಾತ್ರಕ್ಕೆ ಎಲ್ಲ ಗುಟ್ಟುಗಳನ್ನೂ ಬಿಟ್ಟುಕೊಡಬೇಕೆಂದಿಲ್ಲ. ಅವರ ಮನಸ್ಥಿತಿ ಅರಿತು ನಿಮ್ಮ ರಹಸ್ಯಗಳನ್ನ ಹಂಚಿಕೊಳ್ಳಿ.

5. ಪಾರ್ಟನರ್‌ ಬಗ್ಗೆ ದೂರು ಇದ್ದರೆ ಅವರ ಬಳಿಯೇ ಹೇಳಿ

ಸಂಗಾತಿಗಳ ನಡುವಿನ ಸಮಸ್ಯೆಗೆ ಪರಿಹಾರ ಖಂಡಿತಾ ಮೂರನೆಯವರಲ್ಲಿ ಸಿಗಲು ಸಾಧ್ಯವಿಲ್ಲ. ಒಂದು ವೇಳೆ ಸಿಕ್ಕರೂ ಅದು ತಾತ್ಕಾಲಿಕ. ಅವನ ಅಥವಾ ಅವಳ ಬಗ್ಗೆ ನಿಮಗೆ ದೂರುಗಳಿದ್ದರೆ ಅವರ ಬಳಿಯೇ ಹೇಳಿ, ಇತ್ಯರ್ಥ ಮಾಡಲು ಟ್ರೈ ಮಾಡಿ. ಬೇರೆಯವರ ಬಳಿ ಹೇಳಿದರೆ ಅದಕ್ಕೆ ರೆಕ್ಕೆ ಪುಕ್ಕ ಸೇರಿಕೊಂಡು ಆ ಸಣ್ಣ ಸಮಸ್ಯೆ ಬೇರೆಯದೇ ರೂಪ ತಾಳಬಹುದು.

ದೂರವಿದ್ದರೂ ಹತ್ತಿರವಾಗುವ ಪ್ರೀತಿಯ ರೀತಿ ಇದು!

6. ಕಿರಿಕಿರಿ ಮಾಡ್ಬೇಡಿ, ಸ್ವಲ್ಪ ಸೈಲೆಂಟ್‌ ಆಗಿರೋದೂ ಕಲೀರಿ

ಆತ ಪಾರ್ಟನರ್‌ ಅಂದ ಮಾತ್ರಕ್ಕೆ ಕಿರಿಕಿರಿ ಮಾಡೋದು ನಿಮ್ಮ ಹಕ್ಕು ಅಂತ ತಿಳ್ಕೊಂಡರೆ ನಿಮಗೇ ಪ್ರಾಬ್ಲೆಂ. ಜೊತೆಗಿರುವವರಿಗೆ ಕೇಳುವ ಮನಸ್ಸಿದೆಯೋ ಇಲ್ಲವೋ, ಕೆಲವರು ಒಂದೇ ಸವನೆ ಮಾತಾಡುತ್ತಲೇ ಇರುತ್ತಾರೆ. ಅದು ಸಂಗಾತಿಗೆ ನಿಮ್ಮ ಬಗ್ಗೆ ರೇಜಿಗೆ ಹುಟ್ಟಿಸುತ್ತೆ. ಮಾತುಗಳಲ್ಲಿ ಹೇಳಲಾಗದ್ದನ್ನು ಎಷ್ಟೋ ಸಲ ಮೌನ ಕನ್ವೇ ಮಾಡುತ್ತೆ. ಸಂಬಂಧದಲ್ಲಿ ಮೌನಕ್ಕಿರುವಷ್ಟುಆಪ್ತತೆ ಮಾತಿಗಿಲ್ಲ.

7. ಸಂಗಾತಿಯನ್ನು ಗಂಭೀರವಾಗಿ ಪರಿಗಣಿಸದಿರುವುದು

‘ಅವಳನ್ನೇನು ಕೇಳೋದು, ಅವಳಿಗೇನು ಗೊತ್ತಿರುತ್ತೆ?’ ಅನ್ನುವ ಉಡಾಫೆ ಬುದ್ಧಿ ನಮ್ಮಲ್ಲಿ ಹಲವರಿಗೆ ಇದೆ. ತನಗೆ ಎಲ್ಲ ಗೊತ್ತು, ಅವಳಿಗೇನೂ ಗೊತ್ತಿಲ್ಲ ಅನ್ನುವ ನಿಮ್ಮ ಮನಸ್ಥಿತಿ ಸಂಗಾತಿಯನ್ನು ಕುಗ್ಗಿಸುತ್ತಿರುತ್ತದೆ. ನಾನು ತಿಳಿದವ ಅನ್ನುವ ಅಹಂ ಸಂಬಂಧದ ಸರ್ವನಾಶಕ್ಕೆ ಕಾರಣವಾಗುತ್ತೆ. ಅವರು ಅನಿವಾರ್ಯವಾಗಿ ಜೊತೆಗಿದ್ದರೂ ಮಾನಸಿಕವಾಗಿ ಬಹಳ ದೂರ ಉಳಿದುಬಿಡುತ್ತಾರೆ.

8. ಪಾರ್ಟನರ್‌ ಮೇಲೆ ಭರವಸೆ ಕಳೆದುಕೊಳ್ಳೋದು

ಬದುಕು ನಿಂತಿರೋದು ಭರವಸೆಯ ಹಳಿಗಳ ಮೇಲೆ. ಭರವಸೆ ಇಲ್ಲ ಅಂದರೆ ಲೈಫು ಹಳಿ ತಪ್ಪುತ್ತೆ. ಸಂಗಾತಿಯ ಬಗ್ಗೆ ಭರವಸೆ ಇಡಿ. ನೀವು ಅವರ ಬಗ್ಗೆ ಭರವಸೆ ಕಳೆದುಕೊಂಡರೆ ಅವರು ಒಳಗೊಳಗೇ ಕುಸಿಯುತ್ತಾರೆ. ಸಾಧಿಸುವ ಆಸಕ್ತಿ, ಬೆಳೆಯುವ ಛಲ ಇರಲ್ಲ. ಅವರ ಈ ಸಮಸ್ಯೆಯಿಂದ ನೀವೂ ಖುಷಿಯಾಗಿರೋದಿಕ್ಕೆ ಆಗಲ್ಲ. ಜಗತ್ತೇ ಅವರನ್ನು ಕೈ ಬಿಟ್ಟರೂ ನಿಮ್ಮ ಕೈ ಜೊತೆಗಿದ್ದರೆ ಅವರು ಮೇಲೆದ್ದೇ ಏಳುತ್ತಾರೆ.

9. ಅವರ ಬಗ್ಗೆ ಲೂಸ್‌ ಟಾಕ್‌ ಬೇಡ

ನೀವೊಂದಿಷ್ಟುಜನ ಫ್ರೆಂಡ್ಸ್‌ ಸೇರಿರ್ತೀರಿ, ಆಗ ಆತ್ಮೀಯರಲ್ಲಿ ನನ್ನ ಗಂಡನಿಗೆ ಬಾಸ್‌ ಬಗ್ಗೆ ಭಯನೇ ಇಲ್ಲ ಅಂತ ಅಂದು ಬಿಡ್ತೀರಿ. ಯಾರಿಗೊತ್ತು ಮುಂದೆ ಯಾವುದೋ ಪಾಯಿಂಟ್‌ನಲ್ಲಿ ನಿಮ್ಮ ಬಾಸ್‌ ಆ ಆತ್ಮೀಯನ ಜೊತೆಗೆ ಒಂದು ಟೀ ಕುಡೀಬಹುದು. ಆತ ಯಾವುದೋ ಗಳಿಕೆಯಲ್ಲಿ ನೀವಂದ ವಿಷಯ ಬಾಸ್‌ ಗೋ, ಅವರ ಆಪ್ತರಿಗೋ ಹೇಳಬಹುದು, ಆಮೇಲೆ ನಿಮ್ಮ ಗಂಡನ ಕೆರಿಯರ್‌ ಏನಾಗಬಹುದು.. ಲೂಸ್‌ ಟಾಕ್‌ ದಯವಿಟ್ಟು ಬೇಡ.