ಸಂಭ್ರಮದ ಕ್ರಿಸ್‌ಮಸ್‌ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಎಲ್ಲರೂ ಕ್ರಿಸ್‌ಮಸ್ ಟ್ರೀ, ಜಿಂಗಲ್‌ ಬೆಲ್‌ಗಳನ್ನು ಸಿದ್ಧಪಡಿಸಿ ಗಿಫ್ಟ್‌ಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ಇಲ್ಲೊಬ್ಬ ಮುಗ್ಧ ಬಾಲಕಿ ಕ್ರಿಸ್‌ಮಸ್‌ಗೆ ಅಪ್ಪ-ಅಮ್ಮನಿಗೆ ತುಂಬಾ ಹಣ ತನ್ನಿ ಎಂದು ಸಾಂತಾ ಕ್ಲಾಸ್‌ಗೆ ಮನವಿ ಮಾಡಿದ್ದಾಳೆ.

ಇಡೀ ವಿಶ್ವದಲ್ಲಿಯೇ ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡುವ ಹಬ್ಬವೆಂದ್ರೆ ಕ್ರಿಸ್ಮಸ್. ಡಿಸೆಂಬರ್ 25ರಂದು ನಡೆಯುವ ಕ್ರಿಸ್ಮಸ್ ಸಂಭ್ರಮಾಚರಣೆಗೆ ಸಿದ್ಧತೆ (Preparation) ಜೋರಾಗಿ ನಡೆದಿದೆ. ಕ್ರೈಸ್ತ ಸಮುದಾಯದವರು ಮಾತ್ರವಲ್ಲದೆ ಹಿಂದುಗಳು ಕೂಡ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ. ಮನೆ ಮುಂದೆ ಕ್ರಿಸ್ಮಸ್ ಟ್ರೀ ಹಾಕಿ, ಅದಕ್ಕೆ ಬಣ್ಣ ಬಣ್ಣದ ಲೈಟ್ ಹಾಕಿ, ಪರಸ್ಪರ ಉಡುಗೊರೆ ನೀಡಿ, ಕೇಕ್ ಕತ್ತರಿಸಿ ಹಬ್ಬ ಆಚರಿಸುವವರಿದ್ದಾರೆ. ಕ್ರೈಸ್ತ ಸಮುದಾಯದವರು ಚರ್ಚ್ ನಲ್ಲಿ ಹಬ್ಬ (Festival)ವನ್ನು ಅದ್ಧೂರಿ (Grand) ಯಾಗಿ ಆಚರಿಸ್ತಾರೆ. ಬರೀ ಮನೆ (Home)ಗಳಲ್ಲಿ ಮಾತ್ರವಲ್ಲ ಕ್ರಿಸ್ಮಸ್ ದಿನ ಅನೇಕ ಕಡೆ ಪಾರ್ಟಿಗಳು ನಡೆಯುತ್ತವೆ. 

ಕ್ರಿಸ್‌ಮಸ್‌ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಈಗಾಗ್ಲೇ ಎಲ್ಲೆಡೆ ಸಂಭ್ರಮ (Celebration) ಶುರುವಾಗಿದೆ. ಮಾನವೀಯತೆ (Humanity),ಕರುಣೆ ಮತ್ತು ಸಹಾನುಭೂತಿಯ ಪ್ರತೀಕವಾದ ಯೇಸು ಕ್ರಿಸ್ತನ ಜನ್ಮದಿನವನ್ನು ಕ್ರಿಸ್ಮಸ್ ಎಂದು ಆಚರಿಸಲಾಗುತ್ತದೆ. ಈ ದಿನ ಟೇಸ್ಟೀ ಕೇಕ್‌, ಕುಕೀಸ್‌ಗಳನ್ನು ತಯಾರಿಸಿ ಸವಿಯುತ್ತಾರೆ. ಮಾತ್ರವಲ್ಲ ಕ್ರಿಸ್‌ಮಸ್ ಟ್ರೀ, ಜಿಂಗಲ್‌ ಬೆಲ್‌ಗಳನ್ನು ಸಿದ್ಧಪಡಿಸುತ್ತಾರೆ. ಇವಲ್ಲದೆ ಕ್ರಿಸ್‌ಮಸ್‌ ಸಾಂತಾ ತರುವ ಗಿಫ್ಟ್ ಎಲ್ಲಕ್ಕಿಂತಲೂ ಸ್ಪೆಷಲ್ ಆಗಿರುತ್ತದೆ. ಅದಕ್ಕಾಗಿಯೇ ಸಾಂತಾ ಕ್ಲಾಸ್‌ಗೆ ಮೊದಲೇ ಪತ್ರ (Letter)ಗಳನ್ನು ಬರೆಯಲಾಗುತ್ತದೆ. 

ಕ್ರಿಸ್‍ಮಸ್ ಸಾಂತಾ ಏನೆಲ್ಲ ಗಿಫ್ಟ್ ನೀಡಬಹುದು ಗೊತ್ತಾ?

ಸಾಂತಾ ಕ್ಲಾಸ್‌ಗೆ ಪತ್ರಗಳನ್ನು ಬರೆಯುವುದು ಕ್ರಿಸ್‌ಮಸ್‌ನಲ್ಲಿ ಬಹಳ ಹಿಂದಿನಿಂದಲೂ ರೂಢಿಯಲ್ಲಿರುವ ಸಂಪ್ರದಾಯ (Tradition). ಕ್ರಿಸ್‌ಮಸ್‌ ಆಚರಣೆ ಸುಂದರವಾಗಿದ್ದರೆ, ಸಾಂತಾ ಜನರ ಟಿಪ್ಪಣಿಗಳನ್ನು ಓದುತ್ತಾನೆ ಮತ್ತು ಅವರ ಆಸೆಗಳನ್ನು ಪೂರೈಸುತ್ತಾನೆ ಎಂಬ ಕಲ್ಪನೆಯಿದೆ. ಹೀಗಿರುವಾಗ ಎಂಟು ವರ್ಷದ ಬಾಲಕಿ (Girl)ಯೊಬ್ಬಳು ಸಾಂತಾಕ್ಲಾಸ್‌ಗೆ ಬರೆದ ಭಾವನಾತ್ಮಕ ಪತ್ರ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಯುನೈಟೆಡ್ ಕಿಂಗ್‌ಡಮ್‌ನ ಮಹಿಳೆ (Women)ಯೊಬ್ಬರು ಇತ್ತೀಚೆಗೆ ತಮ್ಮ ಸೊಸೆಯ ಕ್ರಿಸ್ಮಸ್ ಪತ್ರದ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್‌ನ ಶೀರ್ಷಿಕೆಯಲ್ಲಿ, ಅವರು 'ಸಾಂತಾಗೆ ಎಂಟು ವರ್ಷದ ಮಗಳು ಬರೆದ ಪತ್ರ ಸಿಕ್ಕಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಹೀಗೆ ಯೋಚಿಸುತ್ತಾರೆಂದು ತಿಳಿದು ಖುಷಿ (Happy) ಮತ್ತು ಆಶ್ಚರ್ಯವಾಗುತ್ತಿದೆ' ಎಂದು ತಿಳಿಸಿದ್ದಾರೆ.

ಪುಟ್ಟ ಹುಡುಗಿ ಕ್ರಿಸ್‌ಮಸ್‌ಗೆ ಸಾಂತಾಗೆ ಬರೆದಿರುವ ಪತ್ರದಲ್ಲಿ ತನಗಾಗಿ ಏನನ್ನೂ ಕೇಳಲಿಲ್ಲ. ಬದಲಿಗೆ, ತನ್ನ ಹೆತ್ತವರ ಹೆಚ್ಚುತ್ತಿರುವ ಸಾಲಗಳು ಮತ್ತು ಅಡಮಾನ ಪಾವತಿಗಳ ಹೊರೆಯನ್ನು ಕಡಿಮೆ ಮಾಡಲು ಸಾಂತಾಗೆ ಮನವಿ ಮಾಡಿದ್ದಾಳೆ. ಈ ಪತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಾಲಕಿಯ ಉತ್ತಮ ಹೃದಯಕ್ಕೆ ನೆಟ್ಟಿಗರು ಮೆಚ್ಚುಗೆ (Compliments) ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ಬಾಲಕಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪೋಷಕರ ಆರ್ಥಿಕ ಸ್ಥಿತಿಯ ಬಗ್ಗೆ ಯೋಚಿಸುತ್ತಿರುವುದು ಅಚ್ಚರಿ ತರಿಸುತ್ತಿದೆ' ಎಂದು ಹೇಳಿದ್ದಾರೆ.

Christmas 2022: ಕ್ರಿಸ್‌ಮಸ್‌ ದಿನ ರಹಸ್ಯ ದಾನ ಮಾಡಿದ್ರೆ ಏನು ಫಲ? ಯೇಸು ನೀಡಿದ್ದ ಸಂದೇಶವೇನು?

ಇನ್ನೊಂದೆಡೆ ತಾಯಿಯೊಬ್ಬರು ತನ್ನ ಎಂಟು ವರ್ಷದ ಮಗಳು ಸಾಂತಾಗೆ ಬರೆದ ಪತ್ರವನ್ನು ಬಹಿರಂಗಪಡಿಸಿದ್ದು, ಅದರಲ್ಲಿ, ಹುಡುಗಿ 
'ದುಬಾರಿ ಮಿನಿ ಪಿಂಕ್ ಐಪ್ಯಾಡ್ , ಆಪಲ್ ಪೆನ್ಸಿಲ್ ಮತ್ತು ಐಫೋನ್ 12'ಗೆ ಬೇಡಿಕೆಯಿಟ್ಟಿದ್ದಾಳೆ. ಜೊತೆಗೆ ನನ್ನ ಸ್ನೇಹಿತರು (Friends) ನನ್ನನ್ನು ಕಡಿಮೆ ಟೀಝ್‌ ಮಾಡುವಂತಾಗಲಿ ಎಂದು ಕೇಳಿಕೊಂಡಿದ್ದಾಳೆ. ಮಗುವಿನ ಸ್ಥಿತಿಗೆ ಹಲವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಅದೇನೆ ಇರ್ಲಿ, ಹಬ್ಬದ ಹೆಸರಿನಲ್ಲಿ ಮಕ್ಕಳ ಭಾವನೆಗಳನ್ನು (Feelings) ಜೀವಂತವಿಡುವ ಸಾಂತಾ ಕ್ಲಾಸ್‌ಗೆ ನಿಜಕ್ಕೂ ಮೆಚ್ಚುಗೆ ಸೂಚಿಸಲೇಬೇಕು.

Scroll to load tweet…