Asianet Suvarna News

ಪೌಲೋ ಕೊಯೆಲೋ ಬದುಕಿನ ಬಗ್ಗೆ ಹೇಳುವ 8 ಇಂಟೆರೆಸ್ಟಿಂಗ್‌ ವಿಚಾರ!

Don't waste your time with explanations.People only hear what they want to hear - Paulo Coelho

8 powerful life lesson from  paulo coelho
Author
Bangalore, First Published May 19, 2020, 10:25 AM IST
  • Facebook
  • Twitter
  • Whatsapp

1. ನಿಮಗೆ ಹೇಗಿರಬೇಕು ಅಂತನಿಸುತ್ತೋ ಹಾಗೇ ಇರಿ. ನಿಮಗೆ ನೀವೊಬ್ಬ ಕೃಷಿಕಳಾಗಬೇಕು ಅಂತಿರುತ್ತೆ. ಆದರೆ ಮಿಡ್ಲ್‌ ಕ್ಲಾಸ್‌ ಫ್ಯಾಮಿಲಿ. ಅಪ್ಪ, ಬೇಡ ಮಗಳೇ, ಯುನಿವರ್ಸಿಟಿಗೆ ಹೋಗು, ಓದು. ಬೇಕಿದ್ರೆ ವೀಕೆಂಡ್‌ನಲ್ಲಿ ನೀನು ಗಾರ್ಡನಿಂಗ್‌ ಮಾಡಬಹುದು ಅಂತಾನೆ. ಆದರೆ ನನಗೆ ಮಣ್ಣು, ಗಿಡಗಳು ಇಷ್ಟ. ಆದರೆ ಎಂಡ್‌ ಆಫ್‌ ದಿ ಡೇ ಅಪ್ಪ ನಮ್ಮನ್ನು ಕನ್ವಿನ್ಸ್‌ ಮಾಡ್ತಾನೆ, ನಾವು ನಮ್ಮನ್ನೇ ಕನ್ವಿನ್ಸ್‌ ಮಾಡ್ತೀವಿ. ಆಮೇಲೆ ನಮ್ಮ ಸುತ್ತ ನಾವೇ ಒಂದು ಅಸಹನೆಯ ಪದರ ನಿರ್ಮಿಸಿಕೊಳ್ಳುತ್ತೇವೆ.

ಕೃಷ್ಣ ಹೇಳುವ ಈ ಐದು ಮಾತು ನಮಗೆ ಸ್ಪೂರ್ತಿಯಾಗಲಿ!

2. ನಾನ್ಯಾರು ಅನ್ನುವ ಪ್ರಶ್ನೆ ಹಲವರಿಗೆ ಬಂದಿರುತ್ತೆ. ಹೆಚ್ಚಿನವರ ಪ್ರಕಾರ ನಾನು ಅಂದರೆ ಬದುಕಿನ ಈ ವರೆಗಿನ ಅನುಭವಗಳ ಒಟ್ಟು ಮೊತ್ತ. ಆದರೆ ನನಗೆ ಹಿಂದೆ ನೋಡೋದಕ್ಕೆ ಇಷ್ಟಇಲ್ಲ. ಹೇಗಿದ್ದವನು ಹೇಗಾದೆ ಅಂತ ಮುಟ್ಟಿನೋಡ್ಕೊಳ್ಳೋದು ಬೇಡ ಅನಿಸುತ್ತೆ. ನಾನು ಇಲ್ಲಿ ಈ ಕ್ಷಣದಲ್ಲಿ ಇದ್ದೀನಷ್ಟೇ. ನನ್ನ ಬದುಕಿನ ಈ ಕ್ಷಣವನ್ನು ನಾನು ಜೀವಿಸಬೇಕು ಅದಷ್ಟೇ ನನ್ನ ಆಸೆ.

3. ನಾನು ಆಧ್ಯಾತ್ಮ ಚಿಂತಕನೂ ಅಲ್ಲ, ಏನೂ ಅಲ್ಲ. ಬದುಕಿನ ಪಯಣದಲ್ಲೊಬ್ಬ ಕುತೂಹಲಿ ದಾರಿಹೋಕ. ಈ ಹಾದಿಯಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳೋದು ನನಗೆ ಮುಖ್ಯ ಅನಿಸುತ್ತೆ. ನನಗೇನು ಗೊತ್ತೋ ಅದನ್ನು ಹಂಚಿಕೊಳ್ಳುತ್ತಿದ್ದೇನೆ. ಜನ ಅವರ ಅನುಭವದ ಹಿನ್ನೆಲೆಯಲ್ಲಿ ಅದನ್ನು ಗ್ರಹಿಸುತ್ತಾರೆ.

4. ಪುಸ್ತಕ ಬರೆಯುವಾಗ ನಾನು ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಯಾಕೆಂದರೆ ಹೀಗೆ ಶೇರ್‌ ಮಾಡಿಕೊಳ್ಳದ ಹೊರತು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳೋದು ಕಷ್ಟ. ನಮ್ಮನ್ನು ನಾವು ಅರಿತುಕೊಳ್ಳೋದು ಅಂದುಕೊಂಡಷ್ಟುಸುಲಭ ಅಲ್ಲ.

ಈ ರಾಶಿಯವ್ರಿಗೆ ಕೈಯಲ್ಲಿ ಹಣ ಉಳಿಯೋದು ಕಷ್ಟವಿದೆ!

5. ನನಗೆ ಬರೆಯೋ ಮುಂಚೆ ಏನು ಬರೆಯುತ್ತೇನೆ ಅನ್ನುವ ಬಗ್ಗೆ ನಿಖರವಾದ ಐಡಿಯಾಗಳಿರೋದಿಲ್ಲ. ಕೆಲವೊಮ್ಮೆ ನನ್ನೊಳಗಿನ ನನಗೇ ಗೊತ್ತಿಲ್ಲದ ಅಪರಿಚಿತನೊಬ್ಬ ನನ್ನಿಂದ ಏನೇನನ್ನೋ ಬರೆಸುತ್ತಾನೆ. ನಾನೇನು ಅನ್ನುವುದರ ಹುಡುಕಾಟಕ್ಕೆ ಇದು ಸಹಾಯ ಮಾಡುತ್ತದೆ.

6. ಬಹಳ ಚಿಕ್ಕವನಿದ್ದಾಗ ಒಂದು ಕಿತ್ತಳೆ ಮರದ ಕೆಳಗೆ ನಿಂತಿದ್ದೆ. ತಕ್ಷಣ ನನಗೆ ಹೊಳೆಯಿತು, ನಾನೀಗ ಬದುಕಿದ್ದೇನೆ ಅಂತ. ನಿಮ್ಮ ಬದುಕಿನಲ್ಲೂ ಇಂಥದ್ದೊಂದು ಗಳಿಗೆ ಬಂದಿರುತ್ತೆ, ಸಡನ್ನಾಗಿ ನಿಮಗೆ ಅರೆ, ನಾನು ಬದುಕಿದ್ದೇನೆ ಅಂತ ಅನಿಸೋದಕ್ಕೆ ಶುರುವಾಗುತ್ತೆ. ಆ ರಿಯಲೈಸೇಶನ್‌ ಬಳಿಕ ನನ್ನ ಬಾಲ್ಯದ ಘಟನೆಗಳಿಂದಾಚೆಗೆ ಏನೇನೋ ಅನುಭವಗಳಾಗುತ್ತಿದ್ದವು. ನಾನು ಆ ಅನುಭವಗಳ ಹಿಂದೆ ಬಿದ್ದೆ. ಹೀಗೆ ನಾನು ಉಳಿದುಕೊಂಡಿದ್ದು.

7. ಲೈಫ್‌ನಲ್ಲಿ ರಿಸ್ಕ್‌ ತೆಗೆದುಕೊಳ್ಳದಿದ್ದರೆ ಮುಂದೆ ಹೋಗೋದಕ್ಕೆ ಆಗಲ್ಲ. ಇದ್ದಲ್ಲೇ ಇದ್ದು ಬಿಡ್ತೀರಿ. ಇದರಿಂದ ಹೆಚ್ಚಿನದೇನನ್ನೂ ಕಲಿಯಲಿಕ್ಕೆ ಆಗಲ್ಲ. ಈ ಕಂಫರ್ಟ್‌ ವಲಯದಿಂದ ಮೊದಲು ಹೊರಬರಬೇಕು.

8. ನೀವು ಒಬ್ಬ ಲೇಖಕ ಆಗ್ಬೇಕು ಅಂದುಕೊಂಡಿದ್ದಿರಿ. ಶುರುವಿನಲ್ಲಿ ಸಕ್ಸಸ್‌ ಆಗುತ್ತೋ ಬಿಡುತ್ತೋ, ಬರೀತಾ ಹೋಗ್ತೀರಿ. ನಿಮ್ಮ ಮೂರು ನಾಲ್ಕು ಪುಸ್ತಕಗಳು ಹೊರಬಂದ ಮೇಲೆ ಒಂದು ಹಂತದಲ್ಲಿ ಸಡನ್ನಾಗಿ ನಿಮಗೆ ಅನಿಸುತ್ತೆ, ಅರೆ, ನಾನು ಒಂದಿಷ್ಟುಪುಸ್ತಕ ಬರೆದೆ. ಜನ ನನ್ನ ಪುಸ್ತಕ ಓದುತ್ತಲೂ ಇದ್ದಾರೆ.. ಈಗ ನಿಮಗೆ ಯಶಸ್ಸಿನ ಭಯ ಆವರಿಸಿಕೊಂಡು ಬಿಡುತ್ತೆ. ಅರೆ, ನಾನು ಇನ್ನೊಂದು ಪುಸ್ತಕ ಬರೀಬೇಕಲ್ವಾ, ಆ ಪುಸ್ತಕವನ್ನು ಜನ ಹೇಗೆ ನೋಡಬಹುದು, ನನ್ನನ್ನು ಆ ಮೂಲಕ ಜಡ್ಜ್‌ ಮಾಡಬಹುದಾ.. ಅಂತೆಲ್ಲ. ಇಂಥ ಯೋಚನೆಗಳನ್ನು ಅದರಷ್ಟಕ್ಕೇ ಬಿಟ್ಟು ನೀವು ಕೃತಿಯಲ್ಲಿ ಜೀವಿಸಿ.

Follow Us:
Download App:
  • android
  • ios