ಧನುಸ್

ಈ ರಾಶಿಯವರಿಗೆ ಹಣ ಅಂದರೆ ಕಡಲೆ ಬೀಜ ಇದ್ದ ಹಾಗೆ. ಅದನ್ನು ಉಳಿಸಿಕೊಂಡರೆ ಎಲ್ಲಿ ವೇಸ್ಟ್ ಆಗಿ ಬಿಡುತ್ತೋ ಅಂತ ಚಿಂತೆ. ಕೈಯಲ್ಲಿರುವ ಹಣವನ್ನು ಹೇಗೆ ಖರ್ಚು ಮಾಡಲಿ ಅಂತ ಚಿಂತಿಸುತ್ತಿರುತ್ತಾರೆ. ಹಣ ಕೂಡಿಡಬೇಕು, ಕಷ್ಟ ಕಾಲಕ್ಕೆ ಬೇಕು ಅನ್ನೋದೆಲ್ಲ ಇವರ ಡಿಕ್ಷನರಿಯಲ್ಲೇ ಇಲ್ಲ. ಇವರಿಗೆ ಮಾತೂ ಹೆಚ್ಚು, ಹಣದ ಖರ್ಚೂ ಹೆಚ್ಚು. ಹಾಗಂತ ಧಾರಾಳವಾಗಿ ಹಣ ಚೆಲ್ಲುತ್ತಾರೆ ಅಂತ. ಸಾಕಷ್ಟು ಚರ್ಚೆ ಮಾಡಿಯೇ ಹತ್ತಾರು ಕಡೆ ಹಣ ಚೆಲ್ಲುತ್ತಾರೆ. ಹಣದ ಸಂಪೂರ್ಣ ಪ್ರಯೋಜನವನ್ನೂ ಪಡೆಯುತ್ತಾರೆ. ಆದರೆ ಕೂಡಿಡುವ ಬುದ್ಧಿ ಇಲ್ಲದ ಕಾರಣ ಕಷ್ಟ ಕಾಲ ಬಂದಾಗ ಒದ್ದಾಡುತ್ತಾರೆ. ಈ ರಾಶಿಯವರು ವಿಘ್ನ ವಿನಾಶಕ ಗಣೇಶನನ್ನು ಸ್ತುತಿಸೋದು ಒಳ್ಳೆಯದು. 

ಮೀನ

ಹೃದಯವಂತರು ನೀವು. ಈ ಉದಾರ ಹೃದಯವೇ ನಿಮಗೆ ಸಂಗ್ರಹಿಸೋ ಬುದ್ಧಿ ಒಳ್ಳೆಯದಲ್ಲ ಅಂತ ಬೋಧನೆ ಮಾಡ್ತಾ ಇರುತ್ತೆ. ಆದರೆ ಈ ಬೋಧನೆ ನಿಮ್ಮ ಕಷ್ಟ ಕಾಲದಲ್ಲಿ ನೆರವಿಗೆ ಬರಲ್ಲ. ಕಷ್ಟದಲ್ಲಿರುವವರಿಗೆ ಉದಾರವಾಗಿ ದಾನ ಮಾಡುವ ಈ ರಾಶಿಯವರು ತಮಗೆ ಕಷ್ಟ ಬಂದಾಗ ಚಿಂತಿತರಾಗುತ್ತಾರೆ. ಆದರೆ ಅದೃಷ್ಟವಶಾತ್ ಎಲ್ಲ ಇಕ್ಕಟ್ಟಿನಲ್ಲೂ ಇವರ ಒಳ್ಳೆಯ ಗುಣವೇ ಇವರನ್ನು ಕಾಯುತ್ತದೆ. ವಿಶ್ವಾಸ, ನಂಬಿಕೆಗೆ ಅರ್ಹವಾದ ವ್ಯಕ್ತಿ ಈ ರಾಶಿಯವರಾದ ಕಾರಣ ಇತರರೂ ಇವರಿಗೆ ಸಹಾಯ ಮಾಡಲು ಹಿಂದೇಟು ಹಾಕಲ್ಲ. ಹಾಗಂತ ಎಲ್ಲಾ ಸಮಯದಲ್ಲೂ ಹೀಗೇ ಆಗುತ್ತೆ ಅಂತಲ್ಲ. ಕಷ್ಟವಾದರೂ ನಿಮಗೆ ಒಂದಿಷ್ಟು ಹಣ ತೆಗೆದಿಟ್ಟು ಆಮೇಲೆ ಉಳಿದವರಿಗೆ ಸಹಾಯ ಮಾಡಿ. ದುರ್ಗೆಯನ್ನು ಆರಾಧಿಸಿ. ನಿಮ್ಮ ಕಷ್ಟಗಳಿಗೆ ದೇವಿ ಒದಗಿ ಬರುತ್ತಾಳೆ. 

ರಾಶಿ ಪ್ರಕಾರ, ಪ್ರೀತಿಯಿಂದ ನಿಮ್ಮನ್ನು ದೂರವಿಡುವುದು ಏನು? 

ವೃಶ್ಚಿಕ

ನೀವು ನಿಮ್ಮ ಹವ್ಯಾಸಗಳಿಗೆ ಹಣ ಸುರಿಯಲು ಹಿಂದೆ ಮುಂದೆ ನೋಡಲ್ಲ. ನಿಮಗೆ ಸಂಗೀತದಲ್ಲಿ ಆಸಕ್ತಿ ಅಂದರೆ ಹೊಸ ಹೊಸ ಆಲ್ಬಂ ಖರೀದಿಗೆ ಸಾಕಷ್ಟು ಹಣ ವ್ಯಯಿಸುತ್ತೀರಿ. ಆದರೆ ಹೀಗೆ ಕೊಂಡದ್ದನ್ನು ಸರಿಯಾಗಿ ಬಳಸುವಷ್ಟು ಸಮಯ ನಿಮಗಿಲ್ಲದ ಕಾರಣ ಛೇ ಅಷ್ಟು ಹಣ ಸುರಿದು ಇದೆಲ್ಲ ತರಬೇಕಿತ್ತಾ ಅಂತ ಕೊರಗುತ್ತೀರಿ. ಪದೇ ಪದೇ ಈ ಘಟನೆ ಮರುಕಳಿಸುತ್ತಿದ್ದರೂ ನೀವು ಪಾಠ ಕಲಿಯುವುದಿಲ್ಲ. ಆದರೆ ಇದರಿಂದ ನಿಮ್ಮ ಸಹವರ್ತಿಗಳು ಸಮಸ್ಯೆ ಅನುಭವಿಸುತ್ತಿರುತ್ತಾರೆ. ನಿಮಗೆ ನೀವೇ ಹಣ ಚೆಲ್ಲುವ ಬಗ್ಗೆ ಒಂದಿಷ್ಟು ರಿಸ್ಟ್ರಿಕ್ಷನ್ ಹಾಕಿಕೊಂಡು ಬಿಡಿ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ. ಶಿವನನ್ನು ಪ್ರಾರ್ಥಿಸಿ, ಆತ ನಿಮ್ಮನ್ನು ದೊಡ್ಡ ಕಷ್ಟಗಳಿಂದ ಪಾರು ಮಾಡುತ್ತಾನೆ. 

ಈ ರಾಶಿಯವರು ಭಯಂಕರ ಫ್ಲರ್ಟ್‌ಗಳಂತೆ! 

ಕಟಕ

ನಿಮಗೆ ಭವಿಷ್ಯದ ಬಗ್ಗೆ ಕಾಳಜಿ ಹೆಚ್ಚು. ಮುಂದೆ ಕಷ್ಟ ಬಂದರೆ ಅಂತ ಈಗಲೇ ಹೆಚ್ಚೆಚ್ಚು ಸಂಗ್ರಹದಲ್ಲಿ ತೊಡಗುತ್ತೀರಿ. ಆದರೆ ಅದೃಷ್ಟವಶಾತ್ ಅಂಥಾ ಕಷ್ಟದ ದಿನಗಳು ಬಾರದೇ ನೀವು ತಂದಿಟ್ಟುಕೊಂಡಿದ್ದು ವ್ಯರ್ಥವಾಗುತ್ತದೆ. ಹೀಗಾಗಿ ಖರೀದಿಗಳ ಮೇಲೆ ಮೊದಲು ಹಿಡಿತ ಸಾಧಿಸಿ, ನಿಮ್ಮ ಸಂಗಾತಿಗೆ ಹಣದ ವಿಚಾರದಲ್ಲಿ ಕಿರಿಕಿರಿ ಮಾಡಬೇಡಿ. ಹಣ ಇದ್ದಾಗ ಬೇಕು ಬೇಕಾದಂತೆ ಖರೀದಿಯಲ್ಲಿ ತೊಡಗುವ ನೀವು ಕೈಯಲ್ಲಿ ಹಣ ಕರಗುತ್ತಿದ್ದಂತೆ ಸಿಕ್ಕಾಪಟ್ಟೆ ಟೆನ್ಶನ್ ಗೆ ಒಳಗಾಗುತ್ತೀರಿ. ರಾತ್ರಿ ಹಗಲು ಹೀಗೆ ಚಿಂತಿಸಿ ಜೊತೆಗಿರುವವರ ನೆಮ್ಮದಿಯನ್ನೂ ಹಾಳು ಮಾಡುತ್ತೀರಿ. ನೀವು ಹಣವನ್ನು ಸಾಧ್ಯವಾದಷ್ಟು ಉಳಿಸಲು ಪ್ರಯತ್ನಿಸಿ. ದೇವಿಯನ್ನು ಸ್ತುತಿಸಿ, ಆಕೆ ನಿಮ್ಮ ಚಂಚಲ ಬುದ್ಧಿಯನ್ನು ನಿಗ್ರಹಿಸುವುದನ್ನು ಕಲಿಸುತ್ತಾಳೆ. 

ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತು

ಕನ್ಯಾ

ನೀವು ಪರ್ಫೆಕ್ಷನಿಸ್ಟ್ ಗಳು. ಇದು ಯಾವ ಲೆವೆಲ್ ನದು ಅಂದರೆ ಒಳ ಉಡುಪು ಕೂಡ ಅತ್ಯುತ್ತಮ ಕ್ವಾಲಿಟಿಯ ದುಬಾರಿಯಾದದ್ದೇ ಬೇಕೆಂದು ಬಯಸುತ್ತೀರಿ. ನಿಮ್ಮ ಅಪಿಯರೆನ್ಸ್ ನಲ್ಲಿ ಸಣ್ಣ ಕೊರತೆಯಾಗೋದು ನಿಮನ್ನು ಇರುಸುಮುರಿಸಿಗೆ ದೂಡುತ್ತದೆ. ಆದರೆ ನಿಮ್ಮ ಈ ಬುದ್ಧಿಯೇ ಹಣ ಸಿಕ್ಕಾಪಟ್ಟೆ ಚೆಲ್ಲಲು ಕಾರಣವಾಗುತ್ತದೆ. ಹೊಂದಾಣಿಕೆ ಅನ್ನೋದೂ ಒಂದಿದೆ ಅಂತ ನಿಮಗೆ ಗೊತ್ತಿದ್ದ ಹಾಗಿಲ್ಲ. ನಿಮ್ಮ ಗುಣದಿಂದಲೇ ಹಣ ಕೈಯಲ್ಲಿ ಉಳಿಯಲ್ಲ. ಇದರಿಂದ ಸಮಸ್ಯೆಗಳಾಗಬಹುದು. ಅನಂತ ಪದ್ಮನಾಭನನ್ನು ಧ್ಯಾನಿಸಿ. ನಿಮ್ಮ ದುಬಾರಿ ವೆಚ್ಚಗಳ ಮೇಲೆ ಕಡಿವಾಣ ಬೀಳಬಹುದು.