ಸೃಷ್ಟಿಚಕ್ರವನ್ನು ಅರ್ಥ ಮಾಡಿಕೊಳ್ಳಿ.

ಭೂಮಿಗೆ ಬಂದಾಗ ನಮ್ಮನ್ನು ಪೋಷಿಸುವುದು ಪಂಚಭೂತಗಳು, ಸಹ ಜೀವಿಗಳು. ಅವುಗಳಿಂದ ಎಲ್ಲವನ್ನೂ ಪಡೆಯುವ ನಾವು ಇನ್ನಷ್ಟುಬೇಕು ಅನ್ನುತ್ತಾ ಸ್ವಾರ್ಥಿಗಳಾಗಿ ಬದುಕೋದರಲ್ಲಿ ಅರ್ಥ ಇದೆಯಾ.. ಸೃಷ್ಟಿಚಕ್ರವನ್ನು ಅರ್ಥ ಮಾಡಿಕೊಂಡು ನಮ್ಮಿಂದಾದ ಸಹಾಯ, ಸಹಕಾರ ನೀಡುತ್ತಾ ಬದುಕುವುದು ಬಹಳ ಮುಖ್ಯ.

ಅರ್ಜುನ ಸಂಕಟ ಪಡದಿದ್ದರೆ ಭಗವದ್ಗೀತೆ ಹುಟ್ಟುತ್ತಿತ್ತೇ!

ರಾಗ, ದ್ವೇಷಗಳಿಂದ ದೂರವಿರಿ.

ಇಂದ್ರಿಯಗಳು ಮೋಹ, ದ್ವೇಷಗಳತ್ತ ನಮ್ಮನ್ನು ಪ್ರಚೋದಿಸಬಹುದು. ಈ ವ್ಯಾಮೋಹ, ದ್ವೇಷದಿಂದ ನಮ್ಮೆಲ್ಲ ಯೋಚನೆಗಳೂ ಒಂದೇ ವ್ಯಕ್ತಿಯ ಸುತ್ತಲಿರುತ್ತವೆ. ನಮ್ಮ ಬೆಳವಣಿಗೆಗೆ ಇದು ಮಾರಕ.

ಅಜ್ಞಾನದಿಂದ ಜ್ಞಾನ ಮುಚ್ಚಲ್ಪಟ್ಟಿದೆ.

ಕನ್ನಡಿಯನ್ನು ಕೊಳೆ ಮುಚ್ಚಿರುವ ಹಾಗೆ, ಬೆಂಕಿಯನ್ನು ಹೊಗೆ, ಬೂದಿ ಮುಚ್ಚಿರುವ ಹಾಗೆ ಜ್ಞಾನ ಅಜ್ಞಾನದಿಂದ ಮುಚ್ಚಲ್ಪಟ್ಟಿದೆ. ಈ ಅಜ್ಞಾನ ನಮ್ಮನ್ನು ಅಷ್ಟುಬೇಗ ಜ್ಞಾನದತ್ತ ಹೋಗಲು ಬಿಡೋದಿಲ್ಲ. ಆತ್ಮಜ್ಞಾನದಿಂದ ಅಜ್ಞಾನ ತೊಲಗುತ್ತದೆ. ಇದಕ್ಕೆ ಕಠಿಣ ಅಭ್ಯಾಸ, ನಿಗ್ರಹ ಅಗತ್ಯ.

ಕೆಲಸ ಮಾಡಿ, ಫಲದ ಬಗ್ಗೆ ನಿರೀಕ್ಷೆ ಬೇಡ

ಬದುಕೋದಕ್ಕಾಗಿ ದುಡಿಯುವುದು ಅನಿವಾರ್ಯ. ಹಾಗಂತ ಫಲದ ಮೇಲೆ ಕಣ್ಣಿಟ್ಟು ಕೆಲಸ ಮಾಡಿದರೆ ನಿರಾಸೆಯೇ ಹೆಚ್ಚು. ಕೆಲಸವನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಮಾಡಿದರೆ ಫಲ ಇಂದಲ್ಲ ನಾಳೆ ದೊರಕಿಯೇ ದೊರಕುತ್ತದೆ.

Fact Check: ಅರೇಬಿಕ್‌ ‘ಭಗವದ್ಗೀತೆ’ಯನ್ನು ಪ್ರಕಟಿಸಿತಾ ಸೌದಿ ಸರ್ಕಾರ?

ಸುಖಕ್ಕೆ ಹಿಗ್ಗುವುದು, ಕಷ್ಟಕ್ಕೆ ಕುಗ್ಗುವುದು ಬೇಡ

ಬುದ್ಧಿಯಲ್ಲಿ ಸ್ಥಿರತೆ ಇದ್ದರೆ ಸುಖ ಬಂದಾಗ ಹಿಗ್ಗಲ್ಲ, ದುಃಖಕ್ಕೆ ಕುಗ್ಗೋದಿಲ್ಲ. ಏಕೆಂದರೆ ಇವೆರಡೂ ಕ್ಷಣಿಕವೆಂದು ಅವರಿಗೆ ತಿಳಿದಿದೆ.