Asianet Suvarna News Asianet Suvarna News

70ರ ಅಜ್ಜ ಮದುವೆಯಾಗೋದಾಗಿ ಲವ್‌ ಮಾಡಿ ಕೈಕೊಟ್ಟ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಜ್ಜಿ

70ರ ವಯಸ್ಸಿನ ಅಜ್ಜ ನನ್ನನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆಂದು 63 ವಯಸ್ಸಿನ ಅಜ್ಜಿ ಪೊಲೀಸ್‌ ಠಾಣೆಯ ಮೆಟ್ಟಿಲನ್ನೇರಿದ್ದಾರೆ.

70 year old old man and 63 year old woman love story came to Bengaluru Police station sat
Author
First Published Aug 21, 2023, 10:55 AM IST

ವರದಿ : ಚೇತನ್ ಮಹಾದೇವ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಆ.21): ಪ್ರೀತಿಗೆ ವಯಸ್ಸಿನ ಮಿತಿಯೂ ಇಲ್ಲ ಎನ್ನುವದನ್ನು ನಾವು ಹಲವು, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನೋಡಿದ್ದೇವೆ. ಆದರೆ, ಬೆಂಗಳೂರಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, 70 ವಯಸ್ಸಿನ ಅಜ್ಜ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆಂದು 63 ವಯಸ್ಸಿನ ಅಜ್ಜಿ ಪೊಲೀಸ್‌ ಠಾಣೆಯ ಮೆಟ್ಟಿಲನ್ನೇರಿದ್ದಾರೆ.

ಹೌದು, ಪೊಲೀಸ್ ಠಾಣೆ ಮೆಟ್ಟಿಲೇರಿದ ಅಜ್ಜ ಅಜ್ಜಿ ಲವ್ ಸ್ಟೋರಿ. 70ರ ಅಜ್ಜ ಮೋಸ ಮಾಡಿದಾನೆಂದು 63 ವರ್ಷದ ವೃದ್ಧೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನನ್ನು ಪ್ರೀತಿಸಿ ಮದ್ವೆಯಾಗೋದಾಗಿ ವಂಚಿಸಿದ್ದಾನೆಂದು ಅಜ್ಜಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾರ್ವಜನಿಕರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮುಂದೆ ವೃದ್ಧೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ದಯವಾಣಿ (63) ಎನ್ನುವ ವೃದ್ದೆಗೆ ಪ್ರೀತಿಸಿ ವಂಚನೆ ಆಗಿದೆಯೆಂದು ದೂರು ನೀಡಿದವರಾಗಿದ್ದಾರೆ. ಮತ್ತೊಂದೆಡೆ, ಲೋಕನಾಥನ್ ಎಂಬ ವೃದ್ಧ ಪ್ರೀತಿಸಿ ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಎನ್‌ಸಿಎಂಸಿ ಕಾರ್ಡ್‌ ಸೇವೆ, ಕಾರ್ಡ್ ಪಡೆಯುವುದು ಹೇಗೆ?

ಸಿನಿಮಾ, ಪಾರ್ಕ್‌ಗಳನ್ನು ಸುತ್ತಾಡಿದ ವೃದ್ಧ ಲವರ್ಸ್: ಇನ್ನು ಆರಂಭದಲ್ಲಿ ವೃದ್ಧರಿಬ್ಬರು ವಾಯ ವಿಹಾರ ಮಾಡುವಾಗ ಪರಿಚಯ ಆಗಿತ್ತಂತೆ. ಇತ್ತೀಚಿನ ಹಲವು ಸಿನಿಮಾ, ಧಾರವಾಹಿಗಳನ್ನು ನೋಡಿ ಇಬ್ಬರ ಪರಿಚಯವೂ ಪ್ರೀತಿಗೆ ತಿರುಗಿತ್ತು. ಹಲವು ತಿಂಗಳು ಪ್ರೇಮಿಗಳಂತೆ ಸಿನಿಮಾ, ಪಾರ್ಕ್ ಎಂದು ವೃದ್ಧ ಪ್ರೇಮಿಗಳು ಓಡಾಟ ಮಾಡಿದ್ದಾರೆ. ನಂತರದ ದಿನಗಳಲ್ಲಿ ವೃದ್ದ ಲೋಕನಾಥನ್ ದಯಾಮಣಿಯನ್ನ ಅವಾಯ್ಡ್ ಮಾಡುತ್ತಿದ್ದಾರೆ. ಈ ಸಂಬಂಧ ಪ್ರಶ್ನೆ ಮಾಡಿದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಜ್ಜ ಕರೆದಾಗ ಹೋಗಿಲ್ಲವೆಂದು, ಅವ್ಯಾಚ್ಯ ಪದಗಳಿಂದ ನಿಂದನೆ: ಇದಾದ ನಂತರ ವೃದ್ದ ಲೋಕನಾಥನ್‌ ಕರೆದಾಗ ಅಜ್ಜಿ ಅವರ ಬಳಿಗೆ ಹೋಗಿಲ್ಲ ಎಂಬ ಕಾರಣಕ್ಕೆ ಕೆಟ್ಟ ಶಬ್ಧ ಬಳಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನಂತೆ. ಆದರೆ, ಈಗ ಸದ್ಯ ಮದ್ವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ವೃದ್ದನ ವಿರುದ್ದ ದೂರು ದಾಖಲಿಸಲಾಗಿದೆ. ಈ ಸಂಬಂಧ ಈಸ್ಟ್ ಝೋನ್ ವುಮೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದ್ದು, ಪೊಲೀಸರಿಗೆ ಈ ಪ್ರಕರಣದ ವಿಚಾರಣೆಯೇ ಹಾಗೂ ನ್ಯಾಯ ಕೊಡಿಸುವುದೇ ದೊಡ್ಡ ತಲೆನೋವಾಗಿದೆ.

ವಿಮಾನದ ಗಗನಸಖಿಗೆ ನಿನ್ನ ರೇಟ್‌ ಎಷ್ಟು? ಡಾಲರ್‌ ಕೊಟ್ರೆ ಬರ್ತಿಯಾ ಎಂದವನಿಗೆ ಸಿಕ್ಕಿದ್ದೇನು ಗೊತ್ತಾ?

ಐದು ವರ್ಷಗಳಿಂದ ಲವ್‌ ಮಾಡ್ತಿದ್ದ ವೃದ್ಧರು: ಅಜ್ಜ ಅಜ್ಜಿ ಇಬ್ಬರೂ ಒಂದೇ ಏರಿಯಾದವರು. ಕಳೆದ ಐದು ವರ್ಷಗಳಿಂದಲೂ ಪ್ರೀತಿಸ್ತಿದ್ದ ಅಜ್ಜ-ಅಜ್ಜಿ. ಈ ಪೈಕಿ ವೃದ್ಧ ಲೋಕನಾಥ್‌ ಮಗನಿಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು. ಮಗನಿಗೆ ಮತ್ತೆ ಮದುವೆ ಮಾಡೋಣ ಅಂತಾ ದಯಾಮಣಿ ಬಳಿ ಲೋಕನಾಥ್ ಕೇಳಿದ್ದರು. ದಯಾಮಣಿ ಲೋಕನಾಥ್ ಮಗನ ಮತ್ತೊಂದು ಮದುವೆಗೆ ಹಣ್ಣು ಹುಡುಕಿದ್ದಳು. ಮುಂದಿನ ತಿಂಗಳು ಮದುವೆಗೆ ಎಲ್ಲಾ ಸಿದ್ಧತೆ ನಡೀತಿತ್ತು. ಈ ನಡುವೆ ನಾವೂ ಮದುವೆಯಾಗೋಣ ಅಂತಾ ಹೇಳಿದ್ದ ತಾತನಿಗೆ ದಯಾಮಣಿ ಹೇಳಿದ್ದಾಳೆ. ಈ ವೇಳೆ ಲೋಕನಾಥ್ ಮದುವೆಗೆ ತಿರಸ್ಕರಿಸಿದ್ದಾನೆ. ಮಗನ‌ ಮದುವೆ ಆಗ್ಲಿ, ನಮ್ಮ ಮದುವೆ ಬೇಡ ಎಂದಿದ್ದನು. ಅಲ್ಲದೇ ಕೆಲ ದಿನಗಳಿಂದ ದಯಾಮಣಿಯನ್ನ ಅವೈಡ್ ಮಾಡಲು ಶುರು ಮಾಡಿದ್ದನು. ಇದರಿಂದ ಮನನೊಂದು ದಯಾಮಣಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios