Asianet Suvarna News Asianet Suvarna News

ವಿಮಾನದ ಗಗನಸಖಿಗೆ ನಿನ್ನ ರೇಟ್‌ ಎಷ್ಟು? ಡಾಲರ್‌ ಕೊಟ್ರೆ ಬರ್ತಿಯಾ ಎಂದವನಿಗೆ ಸಿಕ್ಕಿದ್ದೇನು ಗೊತ್ತಾ?

ವಿಮಾನದಲ್ಲಿ ಬರುವಾಗ ಬೆಂಗಳೂರಿನ ಗಗನಸಖಿ ಚೆನ್ನಾಗಿದ್ದಾಳೆಂದು ನಿನ್ನ ರೇಟ್‌ ಎಷ್ಟು? ಎಷ್ಟು ಡಾಲರ್‌ ಕೊಟ್ರೆ ಬರ್ತಿಯಾ ಎಂದವನಿಗೆ ಸಿಕ್ಕಿದ್ದೇನು ಗೊತ್ತಾ?

Maldivian citizen sexually assaulted an air hostess on Bengaluru flight sat
Author
First Published Aug 21, 2023, 11:57 AM IST

ಬೆಂಗಳೂರು (ಆ.21): ಸಾಮಾನ್ಯವಾಗಿ ದೇಶದಿಂದ ದೇಶಗಳಿಗೆ ಪ್ರವಾಸ ಮಾಡುವ ವೇಳೆ ಪುಂಡಾಟ ಮಾಡದೇ ಪ್ರಯಾಣ ಮಾಡಿಕೊಂಡು ಬರಬೇಕು. ಆದರೆ, ಇದನ್ನೂ ಮೀರಿ ವಿಮಾನಗಳಲ್ಲಿ ಹಲವು ಪುಂಡಾಟಗಳನ್ನು ಮಾಡಿದ ಹಲವು ಘಟನೆಗಳನ್ನು ನೋಡಿದ್ದೇವೆ. ಇನ್ನು ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬ ವಿಮಾನದಲ್ಲಿಯೇ ಗಗನಸಖಿಗೆ ಮೈ ಮುಟ್ಟಿ ನಿನ್ನ ರೇಟ್‌ ಎಷ್ಟು? ಎಷ್ಟಕ್ಕೆ ಬರ್ತಿಯಾ ಎಂದು ಕೇಳಿದವನಿಗೆ ಸಿಕ್ಕಿದ್ದು ಮಾತ್ರ ನಿರೀಕ್ಷೆಗೂ ಮೀರಿದ್ದಾಗಿತ್ತು.

ಅಂದರೆ, ವಿಮಾನದಲ್ಲಿ ಬರುವಾಗ ಚೆಂದವಾಗಿ ಸಿಂಗರಿಸಿಕೊಂಡು ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುವ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಮಾಲ್ಡೀವ್ಸ್ ನಿಂದ ಬೆಂಗಳೂರು ಬರ್ತಿದ್ದ ವಿಮಾನದಲ್ಲಿ ಗಗನ ಸಖಿಗೆ ನೀನ್ನ ರೇಟ್ ಎಷ್ಟು? ಎಷ್ಟಕ್ಕೆ ಬರ್ತಿಯಾ.? ಎಷ್ಟು ಡಾಲರ್ ಕೊಟ್ರೆ ಬರ್ತಿಯಾ? ಎಂದು ಕೇಳಿದ್ದಾನೆ. 100 ಡಾಲರ್ ಕೊಟ್ರೆ ಸಾಕಾ? ಅಥವಾ ಇನ್ನೂ ಬೇಕೆ ಎಂದೆಲ್ಲಾ ಕೇಳಿದ್ದಾನೆ, ಇಷ್ಟಕ್ಕೇ ತನ್ನ ಕಿರುಕುಳವನ್ನು ನಿಲ್ಲಿಸದೇ ಗಗನಸಖಿ ತನ್ನ ಸೀಟಿನ ಬಳಿ ಹೋಗುವಾಗ ಆಕೆಯ ದೇಹದ ಅಂಗಾಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾನೆ.

Viral video: ಪತಿಯಿಂದ ಜೀವ ಬೆದರಿಕೆ; ವಿಡಿಯೋ ಮಾಡಿ ಸಿಎಂಗೆ ಟ್ಯಾಗ್‌!

ಪೊಲೀಸರಿಗೆ ದೂರು ನೀಡಿದ ಗಗನಸಖಿ: ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡವುದಕ್ಕೆ ವಿರೋಧಿಸಿದರೂ ತನ್ನ ಹುಚ್ಚಾಟ ಮುಂದುವರೆಸಿದ್ದಾನೆ. ಇದನ್ನು ಸಹಿಸಿಕೊಂಡು ಬೆಂಗಳೂರಿಗೆ ಬಂದ ನಂತರ ಗಗನಸಖಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಇದಾದ ನಂತರ, ದೂರನ್ನು ಆಧರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸಿದ್ದಾರೆ. ಈಗ ಗಗನಸಖಿಗೆ ಎಷ್ಟು ರೇಟ್‌ ಎಂದು ಕೇಳಿದ ಲೈಂಗಿಕ ಕಿರುಕುಳ ನೀಡಿದ್ದ ವಿದೇಶಿ ಪ್ರಜೆ ಅರೆಸ್ಟ್ ಆಗಿದ್ದಾನೆ. ಬಂಧಿತ ಆರೋಪಿ ಅಕ್ರಂ ಅಹಮದ್ ಆಗಿದ್ದಾನೆ. ಬಿಜಿನೆಸ್ ವೀಸಾದಲ್ಲಿ  ಅರೋಪಿ ಅಕ್ರಂ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದಾಗ ಹೀಗೆ ಕಿರುಕುಳ ನೀಡಿದ್ದಾನೆ. 

ವಿಮಾನದಲ್ಲಿ ನಡೆದಿದ್ದಾದರೂ ಏನು?  ಆರೋಪಿ ಅಕ್ರಮ್ ಗಗನಸಖಿಗೆ I have been looking for a girl like you , how much you charge for service and when will you be free  ಎಂದು ಕೇಳಿದ್ದಾನೆ. ನಂತ್ರ  ಕ್ರೂ ಸರ್ವಿಸ್ ಗೆ 10 ಡಾಲರ್ ಬದಲಾಗಿ 100 ಡಾಲರ್ ನೀಡ್ತಿನಿ. ಅದನ್ನು ನೀನೆ ಇಟ್ಟಿಕೋ ಎಂದು ಹೇಳಿದ್ದಾನೆ.. ನಂತ್ರ ಗಗನ ಸಖಿಯ ದೇಹವನ್ನು ಅಸಭ್ಯವಾಗಿ ಮುಟ್ಟಿದ್ದಾನೆ. ಇಷ್ಟಕ್ಕೇ ಸುಮ್ಮನಾಗದೇ, ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ  ಮೇಲೆ ಎದ್ದು ನಿಲ್ಲುತಿದ್ದನು. ಈ ವೇಳೆ ಕುಳಿತುಕೊಳ್ಳಿ ಎಂದು ತಿಳಿಸಿದಾಗ ಮತ್ತೊರ್ವ ಗಗನ ಸಖಿಗೆ  I love rough things and you are very rough ಎಂದು ಹೇಳಿ ಮುಜುಗರ ಉಂಟು ಮಾಡಿದ್ದನು.

70ರ ಅಜ್ಜ ಮದುವೆಯಾಗೋದಾಗಿ ಲವ್‌ ಮಾಡಿ ಕೈಕೊಟ್ಟ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಜ್ಜಿ

63 ವರ್ಷದ ವೃದ್ಧೆಯನ್ನು ಲವ್‌ ಮಾಡಿ ಕೈಕೊಟ್ಟ ಅಜ್ಜ: ಪ್ರೀತಿಗೆ ವಯಸ್ಸಿನ ಮಿತಿಯೂ ಇಲ್ಲ ಎನ್ನುವದನ್ನು ನಾವು ಹಲವು, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನೋಡಿದ್ದೇವೆ. ಆದರೆ, ಬೆಂಗಳೂರಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, 70 ವಯಸ್ಸಿನ ಅಜ್ಜ ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆಂದು 63 ವಯಸ್ಸಿನ ಅಜ್ಜಿ ಪೊಲೀಸ್‌ ಠಾಣೆಯ ಮೆಟ್ಟಿಲನ್ನೇರಿದ್ದಾರೆ. 70ರ ಅಜ್ಜ ಮೋಸ ಮಾಡಿದಾನೆಂದು 63 ವರ್ಷದ ವೃದ್ಧೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನನ್ನು ಪ್ರೀತಿಸಿ ಮದ್ವೆಯಾಗೋದಾಗಿ ವಂಚಿಸಿದ್ದಾನೆಂದು ಅಜ್ಜಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow Us:
Download App:
  • android
  • ios