ಇಂದಿನಿಂದ  ಮೆಟ್ರೋ ನಿಲ್ದಾಣದಲ್ಲಿ ಎನ್‌ಸಿಎಂಸಿ ಕಾರ್ಡ್‌  ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶಾಪಿಂಗ್‌ ಹಾಗೂ ಪ್ರಯಾಣಕ್ಕೆ ಪ್ರತ್ಯೇಕ ಕಾರ್ಡ್‌ಗಳ ಬಳಕೆಯನ್ನು ಕಡಿಮೆ ಮಾಡಲು ಇದು ಅನುಕೂಲವಾಗಲಿದೆ.

ಬೆಂಗಳೂರು (ಆ.21): ನಗರದ ಎಲ್ಲ ಮೆಟ್ರೋ ನಿಲ್ದಾಣದಲ್ಲಿ ನ್ಯಾಷನಲ್‌ ಕಾಮನ್‌ ಮೊಬಿಲಿಟಿ (ಎನ್‌ಸಿಎಂಸಿ) ಕಾರ್ಡ್‌ ಆ.21ರಿಂದ ಅಂದರೆ ಇಂದಿನಿಂದ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶಾಪಿಂಗ್‌ ಹಾಗೂ ಪ್ರಯಾಣಕ್ಕೆ ಪ್ರತ್ಯೇಕ ಕಾರ್ಡ್‌ಗಳ ಬಳಕೆಯನ್ನು ಕಡಿಮೆ ಮಾಡಲು ಇದು ಅನುಕೂಲವಾಗಲಿದೆ.

ಎನ್‌ಸಿಎಂಸಿ ಕಾರ್ಡ್‌ಗೂ .50 ದರವಿದ್ದು, ಸ್ಮಾರ್ಟ್‌ಕಾರ್ಡ್‌ನಂತೆ ಪ್ರಯಾಣದ ಶೇ.5ರಷ್ಟು ರಿಯಾಯಿತಿ ಅನ್ವಯವಾಗಲಿದೆ. ಪ್ರಯಾಣಿಕರು ಇದನ್ನು ಪಡೆಯಲು NAMMAMETROAGSINDI.COM ವೆಬ್‌ಸೈಟ್‌ ಅಥವಾ BMRCL RBL Bank NCMC ಮೊಬೈಲ್‌ ಆ್ಯಪ್‌ನಲ್ಲಿ ಸ್ವಯಂ ನೋಂದಣಿ ಮಾಡಿಕೊಂಡು ನೋಂದಣಿ ಸಂಖ್ಯೆಯನ್ನು ಮೆಟ್ರೋ ಟಿಕೆಟ್‌ ಕೌಂಟರ್‌ನಲ್ಲಿ ತಿಳಿಸಬೇಕು. ಎನ್‌ಸಿಎಂಸಿ ಕಾರ್ಡ್‌ ಆರ್‌ಬಿಎಲ್‌ ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲೂ ಲಭ್ಯವಾಗಲಿದೆ.

ಈ ಕಾರ್ಡನ್ನು ದೇಶದ ಎಲ್ಲ ಸಾರಿಗೆ ವ್ಯವಸ್ಥೆಯಲ್ಲಿ, ಪೆಟ್ರೋಲ್‌ ಬಂಕ್‌ , ಶಾಪಿಂಗ್‌ ಮಾಲ್‌, ದಿನಸಿ ಮಳಿಗೆಗಳಲ್ಲೂ ಬಳಸಬಹುದು. ಮೆಟ್ರೋ ನಿಲ್ದಾಣದಲ್ಲಿ ಕಾರ್ಯಾಚರಣೆಯ ಸಂದರ್ಭದಲ್ಲಿ ಹಾಗೂ ಕಾಂಟಾಕ್ಟ್ ಲೆಸ್‌ ಸ್ಮಾರ್ಟ್‌ಕಾರ್ಡ್‌ಗಳು ಬೆಳಗ್ಗೆ 8ರಿಂದ 11ಗಂಟೆವರೆಗೆ ಮತ್ತು ಸಂಜೆ 5ರಿಂದ 8ಗಂಟೆವರೆಗೆ ಮಾತ್ರ ಪಡೆದುಕೊಳ್ಳಲು ಅವಕಾಶವಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

Viral video: ತನ್ನ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಆಟೋ ಚಾಲಕ ಮೇಲೆ ಹಲ್ಲೆ!

NCMC ಕಾರ್ಡ್ ಪಡೆಯುವುದು ಹೇಗೆ?
1. ಪ್ರಯಾಣಿಕರು NAMMAMETROAGSINDI.COM ವೆಬ್ ಸೈಟ್ ನಲ್ಲಿ ನೋಂದಾಯಿಸಬೇಕು
2. BMRCL RBL Bank NCMC ಮೊಬೈಲ್ ಅಪ್ಲಿಕೇಶನ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು
3. ಗ್ರಾಹಕರು ನೋಂದಾಯಿತ ಸಂಖ್ಯೆಯನ್ನು ಟಿಕೆಟ್ ಕೌಂಟರ್ ನಿರ್ವಾಹಕರಿಗೆ ತಿಳಿಸಬೇಕು
4. ಪ್ರತಿ ಕಾರ್ಡ್ ಗೆ 50 ರೂಪಾಯಿ ಚಾರ್ಜ್ ಮಾಡಲು ನಿರ್ಧಾರ
5. ರೂಪೇ ಕಾಮನ್ ಮೊಬಿಲಿಟಿ ಕಾರ್ಡ್ ಗಳು ಎಲ್ಲಾ RBL ಬ್ಯಾಂಕ್ ಶಾಖೆಗಳಲ್ಲೂ ತೆಗೆದುಕೊಳ್ಳಬಹುದು

ಎನ್‍ಸಿಎಂಸಿಯಲ್ಲಿ ಯಾವೆಲ್ಲ ಸೇವೆ ಲಭ್ಯ?
1. ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್ ರೀತಿಯೇ ಈ ಎನ್‍ಸಿಎಂಸಿ ಇರುತ್ತದೆ
2. ಇದರಿಂದ ಮೆಟ್ರೊ, ಬಸ್, ರೈಲ್ವೆ ಮತ್ತಿತರ ಸೇವೆ ಪಡೆಯಬಹುದು
3. ಟೋಲ್ ಗೇಟ್‍ಗಳಲ್ಲಿ ಮತ್ತು ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಕಟ್ಟಲು ಆಗುತ್ತೆ
4. ಬಿಲ್ ಪೇಮೆಂಟ್ ಅಲ್ಲದೆ ಇದರಲ್ಲಿ ಕ್ಯಾಶ್‍ಬ್ಯಾಕ್ ಆಫರ್ ಲಭ್ಯವಿದ್ದು, ಸಾವಿರಕ್ಕೂ ಅಧಿಕ ಸೇವೆ ಪಡೆಯಬಹುದು
5. ಈ ಕಾರ್ಡ್ ಬಳಕೆದಾರರು ಎಟಿಎಂಗಳಲ್ಲಿ ಶೇ.5ರಷ್ಟು ಕ್ಯಾಶ್‍ಬ್ಯಾಕ್ ಪಡೆಯಬಹುದು
6. ವಿವಿಧ ರಾಜ್ಯಗಳ ಸಾರಿಗೆ ನಿಗಮ,‌ಮೆಟ್ರೋದಲ್ಲಿ ಈ ಕಾರ್ಡ್​ಗಳನ್ನು ಬಳಸಬಹುದು

ಲಡಾಖ್‌ ಗೋಮಾಳ ಚೀನಾ ವಶಕ್ಕೆ, ಒಂದಿಂಚೂ ವಶವಾಗಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು:ರಾಹುಲ್‌

ಮೆಟ್ರೋ ಕೋಚ್‌: ಬೆಮೆಲ್‌ ಜೊತೆ ಒಡಂಬಡಿಕೆ
ನಮ್ಮ ಮೆಟ್ರೋದ 2ನೇ ಹಂತದ ಯೋಜನೆಗಳಿಗೆ 318 ಕೋಚ್‌ಗಳ ಪೂರೈಕೆಗಾಗಿ ಶನಿವಾರ ಬೆಂಗಳೂರು ಮೆಟ್ರೋ ರೈಲ್ವೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಹಾಗೂ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ ಅಧ್ಯಕ್ಷ ಶಾಂತನು ರಾಯ್‌ ಅವರು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು.

ನಮ್ಮ ಮೆಟ್ರೋದ ಹಂತ-2, 2ಎ ಮತ್ತು 2ಬಿ ಯೋಜನೆಗಳಿಗೆ .3177 ಕೋಟಿ ಮೊತ್ತದಲ್ಲಿ 318 ಬೋಗಿಗಳನ್ನು ಪೂರೈಸುವ ಗುತ್ತಿಗೆಯನ್ನು ಬಿಇಎಂಎಲ್‌ ಪಡೆದಿದೆ. ಬೋಗಿಗಳನ್ನು ಪೂರೈಸುವ ಜೊತೆಗೆ ಇದೇ ಮೊದಲ ಬಾರಿಗೆ ಹದಿನೈದು ವರ್ಷಗಳ ನಿರ್ವಹಣೆ ಹೊಣೆಯನ್ನೂ ಬಿಇಎಂಎಲ್‌ ನಿಭಾಯಿಸಬೇಕಿದೆ.

126 ಬೋಗಿಗಳನ್ನು ಮುಂಬರುವ ನೀಲಿ ಮಾರ್ಗದ 37 ಕಿ.ಮೀ. ಕೆ.ಆರ್‌.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರಿಡಾರ್‌ (2ಬಿ ಹಂತ), 96 ಬೋಗಿಗಳನ್ನು 18.2 ಕಿ.ಮೀ. ರೇಷ್ಮೆ ಕೇಂದ್ರ-ಕೆ.ಆರ್‌.ಪುರಕ್ಕೆ (2-ಎ) ಪೂರೈಸಲಾಗುತ್ತಿದೆ. 21.3 ಕಿ.ಮೀ. ಉದ್ದದ ಕಾಳೇನ ಅಗ್ರಹಾರ-ನಾಗವಾರ ಮಾರ್ಗ (2ನೇ ಹಂತ) ಗುಲಾಬಿ ಕಾರಿಡಾರ್‌ಗೆ 96 ಬೋಗಿಗಳನ್ನು ಒದಗಿಸಲು ನಿರ್ಧರಿಸಲಾಗಿದೆ.

ಸದ್ಯ ಬಿಎಂಎಂಎಲ್‌ 10 ವಂದೇ ಭಾರತ್‌ ರೈಲುಗಳ ಸ್ಲೀಪರ್‌ ಕೋಚ್‌ಗಳ ನಿರ್ಮಾಣದಲ್ಲಿ ಸಂಪೂರ್ಣವಾಗಿ ತೊಡಗಿದೆ. ಹೀಗಾಗಿ ಮುಂದಿನ ವರ್ಷಾರಂಭದಿಂದ ಈ ಬೋಗಿಗಳ ಪೂರ್ಣ ಪ್ರಮಾಣದ ನಿರ್ಮಾಣ ಕಾರ್ಯ ಆರಂಭವಾಗಲಿದೆ. 2025ಕ್ಕೆ ಈ ಬೋಗಿಗಳು ನಮ್ಮ ಮೆಟ್ರೋಗೆ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.