ನೀವು ಮಾಡಿದ ಕೆಲಸಕ್ಕೆ ಮತ್ತೊಬ್ಬರು ಕ್ರೆಡಿಟ್ ತಗೋತಾರಾ ? ಆದರೆ, ಅವರು ನಿಮ್ಮನ್ನು ಮಿಸ್ಯೂಸ್ ಮಾಡಲು ಬಿಟ್ಟುಕೊಟ್ಟಿದ್ದು ನಿಮ್ಮದೇ ತಪ್ಪಲ್ಲವೇ? ಇನ್ನು ಮುಂದೆ ಇಂಥವಕ್ಕೆಲ್ಲ ಅವಕಾಶ ನೀಡಬೇಡಿ. ಕಚೇರಿ ರಾಜಕೀಯಕ್ಕೆ ಬಲಿಪಶುವಾಗದಿರಲು ಸ್ವಲ್ಪ ಸ್ಮಾರ್ಟ್ ಆಗಿ. ಎಲ್ಲಕ್ಕಿಂತ ಮುಂಚೆ ನೀವು ರಾಜಕೀಯದ ದಾಳವಾಗುತ್ತಿದ್ದೀರಿ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಆಗ ಮಾತ್ರ ಅದರಿಂದ ಹೊರಗುಳಿಯಬಹುದು. 

ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರಾ?

ಎಲ್ಲಕ್ಕಿಂತ ಮೊದಲು ನೀವಿದನ್ನು ತಿಳಿದುಕೊಳ್ಳಬೇಕು. ಸಿನಿಕರಾಗಬೇಡಿ ಅಥವಾ ಏನೂ ತಿಳಿಯದೆ ಮೂರ್ಖರೂ ಆಗಬೇಡಿ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲ ಸಿಗುತ್ತಿಲ್ಲವೆಂದಾಗ, ಅದಕ್ಕೆ ನೀವು ಕಾರಣಗಳನ್ನು ಹುಡುಕಬೇಕು. ಯಾರನ್ನೂ ದೂರುತ್ತಾ ಕೂರಬೇಡಿ. ಬದಲಿಗೆ ಕುತೂಹಲದಿಂದ ಮೌನವಾಗಿಯೇ ಕಾರಣ ಹುಡುಕಿ. ನಿಮ್ಮ ಟೀಂನಲ್ಲಿ ನಿಮಗೆ ಮಾತ್ರ ಕೆಲಸದ ಹೊರೆ ಬೀಳುತ್ತದೆಯೇ? ಇತರೆ ಸದಸ್ಯರು ತೆಗೆದುಕೊಳ್ಳಲೊಪ್ಪದ ಪ್ರಾಜೆಕ್ಟ್‌ಗಳನ್ನು ನಿಮಗೆ ನೀಡಲಾಗುತ್ತದೆಯೇ? ಏನಾದರೂ ತಪ್ಪಾದರೆ ಅದಕ್ಕೆಲ್ಲ ನಿಮ್ಮನ್ನೇ ಹೊಣೆ ಮಾಡಲಾಗುತ್ತದೆಯೇ? ಮೇಲಿನವರಿಗೆ ನಿಮ್ಮ ಕೆಲಸದ ಬಗ್ಗೆ ಮಾಹಿತಿ ಇದೆಯೇ? ಹೀಗೆ- ನೀವು ಬೇಕೆಂತಲೇ ಟಾರ್ಗೆಟ್ ಆಗುತ್ತಿದ್ದೀರೋ ಇಳ್ಲವೋ ಎಂಬುದನ್ನು ನೀವೇ ನಿರ್ಧರಿಸಬೇಕು.

ಮನೆ ಒಳಗೂ ಹೊರಗೂ ದುಡಿಯುವ ಹೆಣ್ಣಿನ ವ್ಯಥೆಯಿದು!

ಯಾರನ್ನೂ ನಂಬಬೇಡಿ

ಕಚೇರಿಯಲ್ಲಿ ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಯಾರನ್ನೂ ಕುರುಡರಂತೆ ನಂಬಬೇಡಿ. ನಿಮ್ಮ ಬೆಸ್ಟ್ ಫ್ರೆಂಡ್‌ಗೆ ಕೂಡಾ ಪೂರ್ತಿ ನಿಮ್ಮ ಮೇಲಿನ ಹಿಡಿತ ನೀಡಬೇಡಿ. ನೀವು ನೇರವಾಗಿ ಕೆಲಸ ಮಾಡದವರ ಬಗ್ಗೆ ಮತ್ತೊಬ್ಬರು ಬಂದು ಹೇಳಿದರೆ ಅದನ್ನು ಪೂರ್ತಿ ನಂಬಬೇಡಿ. ನಿಮ್ಮ ಬೆಸ್ಟ್ ಫ್ರೆಂಡ್‌ನ ಶತ್ರು ನಿಮ್ಮ ಶತ್ರುವೂ ಆಗಿರಬೇಕೆಂದೇನಿಲ್ಲ. ಹೀಗಾಗಿ, ಎಲ್ಲರೊಂದಿಗೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿ. ಅದರಲ್ಲೂ ಮೇಲಿನವರೊಂಂದಿಗೆ ಮುಖ ಕೆಡಿಸಿಕೊಳ್ಳಬೇಡಿ. 

ನಿಮ್ಮ ಲಿಖಿತ ಹಾಗೂ ಮಾತಿನ ಸಂವಹನ 

ಆಫೀಸ್ ಪೊಲಿಟಿಕ್ಸ್ ವಿಷಯಕ್ಕೆ ಬಂದರೆ ಕಮ್ಯೂನಿಕೇಶನನ್ನು ನೀವು ನಿಮ್ಮ ಪರವಾಗಿಯೂ, ವಿರೋಧವಾಗಿಯೂ ಬಳಸಿಕೊಳ್ಳಬಹುದು ಎಂಬುದು ನೆನಪಿರಲಿ. ನಿಮ್ಮ ಬರಹ ಹಾಗೂ ಮಾತುಗಾರಿಕೆ ಸಂವಹನ ಕೌಶಲ್ಯ ಉತ್ತಮಗೊಳಿಸಿಕೊಳ್ಳಲು ಕೋರ್ಸ್‌ ಮಾಡಿಕೊಳ್ಳಿ. ಸ್ಮಾರ್ಟ್ ಉದ್ಯೋಗಿಗಳಿಗೆ ಟೈಮಿಂಗ್, ವಿಷಯ ಹಾಗೂ ಹೇಗೆ ಸಮವಹನ ನಡೆಸಬೇಕೆಂಬುದು ಗೊತ್ತಿರುತ್ತದೆ. ಕೆಲವೊಂದು ವಿಷಯಗಳನ್ನು ಬರಹಗಳಲ್ಲಿ ಡಾಕ್ಯುಮೆಂಟ್ ಮಾಡಬಾರದು. ಮತ್ತೆ ಕೆಲವನ್ನು ಮಾಡಬೇಕು. ನಿಮ್ಮ ಕಮ್ಯೂನಿಕೇಶನ್‌ನಲ್ಲಿ ಪ್ರಮುಖ ವ್ಯಕ್ತಿಗಳನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳಿ. 

ಕಚೇರಿಯ ಕೆಟ್ಟ ಪರಿಸರದಿಂದ ಕೆಟ್ಟವರಾಗುವ ತಾಯಂದಿರು!

ರಹಸ್ಯ ಕಾಪಾಡಿಕೊಳ್ಳಿ

ಗುಟ್ಟುಗಳನ್ನು ಗುಟ್ಟಾಗಿಯೇ ಇಟ್ಟುಕೊಳ್ಳಲು ಕಲಿಯಿರಿ. ನಿಮ್ಮ ಗುಟ್ಟುಗಳನ್ನು ನೀವೇ ಇಟ್ಟುಕೊಳ್ಳಲು ಸಾಧ್ಯವಿಲ್ಲವಾದರೆ, ಇತರರು ನಿಮ್ಮ ಸೀಕ್ರೆಟ್ ಕಾಪಾಡಬೇಕು ಎಂದು ನಿರೀಕ್ಷಿಸಬೇಡಿ. ಪ್ರೊಫೆಷನಲ್ ಸೀಕ್ರೆಟ್‌ಗಳನ್ನು ಬಿಟ್ಟುಕೊಡುವುದರಿಂದ ಮೇಲಿನವರ ನಂಬಿಕೆ ಕಳೆದುಕೊಳ್ಳುವಿರಿ. ನಿಮ್ಮದು ರೇಡಿಯೋ ಸ್ಟೇಶನ್ ಎಂದು ತಿಳಿದರೆ ಸಹೋದ್ಯೋಗಿಗಳು ಗೌರವ ಕೊಡುವುದಿಲ್ಲ. 

ಗಾಡ್‌ಫಾದರ್ ಹೊಂದಲು ಯತ್ನಿಸಿ

ಆಫೀಸ್ ಪೊಲಿಟಿಕ್ಸ್ ಯಾವಾಗಲೂ ಯಾರು ಅತಿ ವೀಕ್ ಎನಿಸುತ್ತಾರೋ ಅವರ ವಿರುದ್ಧವೇ ನಡೆಯುವುದು. ನಿಮ್ಮೊಂದಿಗೆ ಗಲಾಟೆ ಮಾಡಿಕೊಳ್ಳುವ ಮುನ್ನ ಜನ ನಿಮ್ಮ ಗಾಡ್‌ಫಾದರ್ ಯಾರೆಂದು ನೋಡಿಕೊಳ್ಳುತ್ತಾರೆ. ಯಾರೂ ಇಲ್ಲವಾದಲ್ಲಿ ಆರಾಮಾಗಿ ನಿಮ್ಮನ್ನು ಹರಾಸ್ ಮಾಡಬಲ್ಲರು. ಹೀಗಾಗಿ, ಸಾಧ್ಯವಾದಷ್ಟು ಲೀಡರ್‌ಗಳ ನೆಟ್ವರ್ಕ್‌ನಲ್ಲಿರಿ. ಸುಮ್ಮನೇ ಬಕೆಟ್ ಹಿಡಿದು ಅಲ್ಲ, ಕೆಲಸ ಮಾಡಿ ತೋರಿಸಿ. 

ಅತ್ಯುತ್ತಮವಾಗಿ ಕೆಲಸ ಮಾಡಿ

ಯಾವುದೂ ಬಿಟ್ಟಿಯಾಗಿ ಬರುವುದಿಲ್ಲ. ಮೇಲೆ ಹೇಳಿದ ಎಲ್ಲ ಟ್ಯಾಕ್ಟಿಕ್ಸ್ ನಿಮ್ಮನ್ನು ಕಂಫರ್ಟ್ ಆಗಿಡುತ್ತವೆ. ಆದರೆ, ನೀವು ಉದ್ಯೋಗದಲ್ಲಿ ಮೇಲೇರಬೇಕೆಂದರೆ ಹಾರ್ಡ್ ವರ್ಕ್ ಬೇಕೇಬೇಕು. ನೀವು ಲೀಡ್ ಮಾಡುವ ಪ್ರಾಜೆಕ್ಟ್ ವಿಷಯಗಳಲ್ಲಿ ಎಕ್ಸ್‌ಪರ್ಟ್ ಆಗಿ. ಎಕ್ಸ್‌ಪರ್ಟೈಸ್ ಜೊತೆ ಸ್ಮಾರ್ಟ್‌ನೆಸ್ ಕೂಡಾ ಇದ್ದರೆ ನೀವು     ಔದ್ಯೋಗಿಕ ಜೀವನದಲ್ಲಿ ಹಿಂದೆ ಬೀಳುವ ಮಾತೇ ಇಲ್ಲ.

ಧೈರ್ಯವಾಗಿರಿ, ಕೃತಜ್ಞತೆಯಿಂದಿರಿ

ಯಾವಾಗಲೂ ಧೈರ್ಯದಿಂದ ಮುನ್ನುಗ್ಗಿ. ಎಲ್ಲದಕ್ಕೂ ಅತಿಯಾಗಿ ಭಯ ಬೀಳುವುದು ಅಥವಾ ಅತಿಯಾಗಿ ಪ್ರತಿಕ್ರಿಯಿಸಬೇಡಿ. ಪಾಸಿಟಿವ್ ಹಾಗೂ ಫ್ರೆಂಡ್ಲಿ ಸಹೋದ್ಯೋಗಿಗಳಿಗೆ ಹೆಚ್ಚು ಬೆಲೆ ಕೊಡಿ. ನೆಗೆಟಿವ್ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಡಿ. ಯಾರೂ ನಿಮ್ಮ ಶಾಂತಿ ಕದಡಲಾಗದಷ್ಟು ಸ್ಟ್ರಾಂಗ್ ಆಗುವತ್ತ ಗಮನ ಹರಿಸಿ.