ಅದೆಷ್ಟೋ ಹೃದಯಗಳಲ್ಲಿ ಬೆಚ್ಚನೆ ಕುಳಿತ ಪ್ರೀತಿ ಮಾತುಗಳು ಹೊರಬರಲು ಎಷ್ಟು ತವಕಿಸುತ್ತಿವೆಯೋ ಏನೋ! ಅಂಜಿಕೆ,ಅಳುಕು,ಕಳವಳ,ಗೊಂದಲ,ಆತಂಕ.....ಇವೆಲ್ಲವೂ ಒಂದಾಗಿ ಗಂಟಲಿನ ತನಕ ಬಂದ ಪ್ರೀತಿ ಮಾತನ್ನು ಕಟ್ಟಿ ಹಾಕುತ್ತಿರಬಹುದು.ಪ್ರೀತಿ ನಿರಾಕರಣೆ,ದೂರವಾಗುವ ಭಯ ಹೃದಯದ ಮಾತನ್ನು ಮುಚ್ಚಿಡುವಂತೆ ಮಾಡಿರಬಹುದು.ಆದರೆ,ಅದೆಷ್ಟು ದಿನ ಎದೆಗೂಡಲ್ಲಿ ಪ್ರೀತಿಯನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯ ಅಲ್ಲವೆ? ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೇಮಿಗಳ ದಿನಕ್ಕಿಂತ ಉತ್ತಮ ವೇದಿಕೆ ಇನ್ನೊಂದಿಲ್ಲ.ಇನ್ಯಾಕೆ ತಡ, ಫೆಬ್ರವರಿ 14 ರಂದು ನಿಮ್ಮ ಹೃದಯದ ಮಾತಿನ ಡೆಲಿವರಿಗೆ ಮುಹೂರ್ತ ಫಿಕ್ಸ್ ಮಾಡಿ.ಒಂದೊಂದೇ ಬಚ್ಚಿಟ್ಟ ಮಾತು, ಒಂದೊಂದಾಗಿ ಕೂಡಿಟ್ಟ ಕವನ ಎಲ್ಲವೂ ಅಂದೇ ಹೊರಬರಲಿ. ಅದೆಲ್ಲ ಸರಿ, ನನ್ನ ಪ್ರೀತಿಯನ್ನು ವ್ಯಕ್ತಪಡಿಸುವುದು ಹೇಗಪ್ಪ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿರಬಹುದು. ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ,ಹೇಗೆ ಹೇಳಲಿ ನನ್ನ ಮನದ ಹಂಬಲ,ಮಾತನಾಡಲಾ ಇಲ್ಲ ಹಾಡು ಹಾಡಲಾ ಹೇಗೆ ತಿಳಿಸಲಿ ನನ್ನ ಎದೆಯ ತಳಮಳ ಎಂಬ ಹಾಡು ಗುನುಗುತ್ತ ಮನಸ್ಸಿನ ಮಾತಿನ ಅಭಿವ್ಯಕ್ತಿಗೆ ದಾರಿ ಹುಡುತ್ತಿರುವವರಿಗೆ ಇಲ್ಲೊಂದಿಷ್ಟು ಐಡಿಯಾಗಳಿವೆ. 

ಪ್ರೀತಿಸುತ್ತಾನೋ ಇಲ್ಲವೋ? ಗೊಂದಲ ದೂರ ಮಾಡ್ಕೊಳ್ಳಿ

  • ಕೃಷ್ಣ-ರಾಧೆ ಪ್ರೀತಿಯ ಸಂಕೇತ: ನಿಷ್ಕಲ್ಮಶವಾದ,ಶುದ್ಧ ಪ್ರೀತಿಗೆ ಕೃಷ್ಣ-ರಾಧೆಗಿಂತ ಅತ್ಯುತ್ತಮವಾದ ಜೋಡಿ ಇನ್ನೊಂದಿಲ್ಲ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಈ ಜೋಡಿಯ ಪ್ರೀತಿ ಅಂದು, ಇಂದು ಮತ್ತು ಮುಂದೆಂದೂ ಪ್ರೇಮಿಗಳಿಗೆ ಮಾದರಿ. ಹೀಗಿರುವಾಗ ಕೃಷ್ಣ-ರಾಧೆ ಜೊತೆಗಿರುವ ಸುಂದರವಾದ ಮೂರ್ತಿಯೊಂದನ್ನು ವ್ಯಾಲೆಂಟೆನ್ಸ್ ಡೇ ದಿನ ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಕೈಗಿಟ್ಟರೆ ನಿಮ್ಮ ಮನಸ್ಸಿನ ಮಾತು ಅವರಿಗೆ ಅರ್ಥವಾಗುವುದರಲ್ಲಿ ಸಂದೇಹವೇ ಇಲ್ಲ. ಮೂರ್ತಿಯ ಜೊತೆಗೆ ನಿಮ್ಮ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿದ ಗ್ರೀಟಿಂಗ್ ಕಾರ್ಡ್‍ವೊಂದನ್ನು ನೀಡಿದರೆ ಇಷ್ಟು ದಿನ ಎದೆಗೂಡಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯ ಚಿಟ್ಟೆ ಆಕಾಶದಲ್ಲಿ ಹಾರುವುದು ಪಕ್ಕಾ.
     
  • ಹೃದಯವೇ ಅಂಗೈಯಲ್ಲಿ: ಲವ್ ಅಂದ ತಕ್ಷಣ ನೆನಪಿಗೆ ಬರುವುದು ಹಾರ್ಟ್. ಹೌದು,ಹೃದಯ ಪ್ರೀತಿಯ ಸಂಕೇತ. ಹೀಗಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ಲವರ್ಸ್ ಹಾರ್ಟ್ ಶೇಪ್‍ನಲ್ಲಿರುವ ವಸ್ತುಗಳ ಮೊರೆ ಹೋಗುತ್ತಾರೆ.ನೀವು ಕೂಡ ಇದನ್ನು ಟ್ರೈ ಮಾಡಬಹುದು.ಹಾರ್ಟ್ ಶೇಪ್‍ನಲ್ಲಿರುವ ನಾನಾ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.ಇಂಥ ವಸ್ತುಗಳನ್ನು ವ್ಯಾಲೆಂಟೆನ್ಸ್ ಡೇ ದಿನ ಗಿಫ್ಟ್ ಮಾಡಿದ್ರೆ ನಿಮ್ಮ ಹೃದಯದ ಮಾತು ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಹೃದಯ ತಟ್ಟುತ್ತದೆ. 

ನನ್ನ ಇನ್ನೊಂದು ಕೆನ್ನೆ ಏನು ಪಾಪ ಮಾಡಿತ್ತು ಹುಡುಗಿ..?

  • ಈ ಗುಲಾಬಿ ನಿನಗಾಗಿ: ರೆಡ್ ರೋಸ್ ಅಂದ್ರೇನೆ ಪ್ರೀತಿ.ಕೆಂಪು ಗುಲಾಬಿ ನೀಡಿ ಪ್ರಪೋಸ್ ಮಾಡುವುದನ್ನು ಸಿನಿಮಾಗಳಲ್ಲಿ ನೋಡಿರುತ್ತೀರಿ.ರಿಯಲ್ ಲೈಫ್‍ನಲ್ಲೂ ಗುಲಾಬಿಗಳ ಬೊಕ್ಕೆಯೊಂದನ್ನು ನೀಡಿ ಪ್ರೀತಿ ಮಾತು ಹೇಳಬಹುದು.ಇನ್ನು ಫೆಬ್ರವರಿ 14ರಂದು ನಿಮ್ಮ ಕೈಯಲ್ಲಿ ಕೆಂಪು ಗುಲಾಬಿ ಇದೆ ಅಂತಂದ್ರೆ ನೀವು ಅದನ್ನು ನೀಡುವ ವ್ಯಕ್ತಿಗೆ ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳು ಅರ್ಥವಾಗಿ ಬಿಡುತ್ತವೆ.ಹೀಗಾಗಿ ಮಾತಿನ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕಾದ ಅಗತ್ಯವಿರುವುದಿಲ್ಲ.
     
  • ರೊಮ್ಯಾಂಟಿಕ್ ಜಾಗದಲ್ಲಿ ಮನಸ್ಸಿನ ಮಾತನ್ನು ಪಿಸುಗುಡಿ: ನೀವು ಪ್ರೀತಿಸುತ್ತಿರುವ ವ್ಯಕ್ತಿಯನ್ನು ಸುಂದರವಾದ ತಾಣವೊಂದಕ್ಕೆ ಕರೆದುಕೊಂಡು ಹೋಗಿ. ನಿಸರ್ಗ ಸೌಂದರ್ಯದಿಂದ ಕೂಡಿರುವ ಜಾಗವಂದ್ರೆ ಉತ್ತಮ. ಆ ಸ್ಥಳ ನೋಡಿದ ತಕ್ಷಣವೇ ಮನಸ್ಸು ಖುಷಿಯಿಂದ ಕುಣಿಯುವಂತಿರಬೇಕು. ನಿಮ್ಮ ಪ್ರೇಮಿ ಅಥವಾ ಪ್ರಿಯತಮೆ ಹೀಗೆ ಖುಷಿಯಿಂದಿರುವಾಗಲೇ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಅವರ ಮುಂದೆ ಮಂಡಿಯೂರಿ ಕುಳಿತು ಕೈ ಬೆರಳಿಗೆ ಗೋಲ್ಡ್ ಅಥವಾ ಪ್ಲಾಟಿನ್‍ಂ ರಿಂಗ್ ತೊಡಿಸಿ ಐ ಲವ್ ಯೂ ಎಂದು ಪಿಸುಗುಡಿ. 

ವ್ಯಾಲೆಂಟೈನ್ಸ್ ಡೇ ಆಚರಿಸೋಕೆ ಇಲ್ಲಿವೆ ಐಡಿಯಾಗಳು

  • ಪತ್ರ ಬರೆಯುವುದು ಓಲ್ಡ್ ಆದ್ರೂ ಗೋಲ್ಡ್: ಇನ್ನು ಪ್ರೀತಿಯನ್ನು ಎದುರಲ್ಲಿ ಹೇಳಿಕೊಳ್ಳಲು ಭಯ ಕಾಡುತ್ತಿದ್ರೆ,ಡೋಂಟ್ ವರಿ. ಓಲ್ಡ್ ಇಸ್ ಗೋಲ್ಡ್ ಎಂಬಂತೆ ಪತ್ರದಲ್ಲಿ ನಿಮ್ಮ ಮನಸ್ಸಿನ ಮಾತಿಗೆ ಅಕ್ಷರ ರೂಪ ನೀಡಿ ನೀವು ಪ್ರೀತಿಸುತ್ತಿರುವವರಿಗೆ ತಲುಪಿಸಿ. ಈ ಪತ್ರ ವ್ಯಾಲೆಂಟೆನ್ಸ್ ಡೇ ದಿನವೇ ಕೈಸೇರುವಂತೆ ಪ್ಲ್ಯಾನ್ ಮಾಡಿ.ಅಕ್ಷರಕ್ಕೆ ಅಗಾಧ ಶಕ್ತಿಯಿದೆ,ಮಾತಿಗಿಂತಲೂ ಪ್ರಬಲವಾಗಿ ಅದು ಭಾವನೆಗಳನ್ನು ವ್ಯಕ್ತಪಡಿಸಬಲ್ಲದು. 
  • ಮಸೇಜ್‍ನಲ್ಲೇ ತಿಳಿಸಿ ಹೃದಯದ ಮಾತು: ಪತ್ರ ಬರೆಯಲು ಸಾಧ್ಯವಾಗಿದ್ದರೆ ಈಗಂತೂ ಎಷ್ಟೊಂದು ಮಾರ್ಗಗಳಿವೆ,ವಾಟ್ಸ್ಆಪ್,ಮೆಸೆಂಜರ್,ಮೇಲ್...ಹೀಗೆ ನಿಮಗೆ ಯಾವುದು ಸೂಕ್ತವೆನಿಸಿತು ಅದರಲ್ಲಿ ನಿಮ್ಮ ಮನಸ್ಸಿನ ಮಾತುಗಳನ್ನು ಟೈಪ್ ಮಾಡಿ ನಿಮ್ಮ ಮನಸ್ಸು ಕದ್ದವರಿಗೆ ಕಳುಹಿಸಿ.