ಮಡದಿಗೆ ತಪ್ಪದೇ ಮುತ್ತಿಟ್ಟರೆ ಹೆಚ್ಚುತ್ತಾ ಆಯಸ್ಸು?
ಕಿಸ್, ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಿಧಾನ. ಅನೇಕರು ತಮ್ಮ ಭಾವನೆಯನ್ನು ಮುತ್ತಿನ ಮೂಲಕ ವ್ಯಕ್ತಪಡಿಸ್ತಾರೆ. ಕಿಸ್ ಕೇವಲ ಪ್ರೀತಿ ತೋರಿಸುವ ವಿಧಾನ ಅಂದುಕೊಂಡ್ರೆ ತಪ್ಪು. ಮುತ್ತಿನಲ್ಲಿ ವಯಸ್ಸು ಹಾಗೂ ಐಶ್ವರ್ಯದ ಗುಟ್ಟಿದೆ.
ಪತಿ-ಪತ್ನಿ (Husband-Wife) ಮಧ್ಯೆ ಪ್ರೀತಿ (Love) ಇದ್ದರೆ ಆ ಮನೆಯಲ್ಲಿ ಸಂತೋಷ (Happiness), ಸಮೃದ್ಧಿ ಸದಾ ಇರುತ್ತದೆ. ಪತಿ –ಪತ್ನಿ ಬಗ್ಗೆ ಜ್ಯೋತಿಷ್ಯ (Astrology ) ಶಾಸ್ತ್ರದಲ್ಲೂ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಶಾಸ್ತ್ರಗಳಲ್ಲಿ ಪತ್ನಿಗೆ ಲಕ್ಷ್ಮಿಯ ಸ್ಥಾನವನ್ನು ನೀಡಲಾಗಿದೆ. ಲಕ್ಷ್ಮಿ (Laxmi) ರೂಪವಾಗಿರುವ ಪತ್ನಿಗೆ ಗೌರವ (Respect), ಪ್ರೀತಿ ಸಿಗುವ ಜಾಗದಲ್ಲಿ ಸದಾ ಐಶ್ವರ್ಯ, ಸಂತೋಷ ನೆಲೆಸಿರುತ್ತದೆ ಎಂದು ನಂಬಲಾಗಿದೆ. ಪತ್ನಿಯನ್ನು ಪ್ರೀತಿಸುವ ಹಾಗೂ ಆಕೆ ಗೌರವ, ಆತ್ಮವಿಶ್ವಾಸಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳುವ ಪತಿ ಪ್ರತಿ ದಿನ ಪ್ರಗತಿ ಸಾಧಿಸುತ್ತಾನೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಪತಿ ಮತ್ತು ಪತ್ನಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವರು ನೆಚ್ಚಿನ ಖಾದ್ಯವನ್ನು ತಯಾರಿಸುತ್ತಾರೆ ಮತ್ತು ಕೆಲವರು ನೆಚ್ಚಿನ ಸ್ಥಳಕ್ಕೆ ಹೋಗಲು ಇಷ್ಟಪಡುತ್ತಾರೆ. ಇದು ಸಂಬಂಧವನ್ನು ಬಲಪಡಿಸುತ್ತದೆ. ಖಾದ್ಯ, ಪ್ರವಾಸವೆಲ್ಲ ಪ್ರತಿ ದಿನ ಸಾಧ್ಯವಿಲ್ಲ. ಆದ್ರೆ ಮುತ್ತ (Kiss) ನ್ನು ಪ್ರತಿ ದಿನ ನೀಡಬಹುದು. ಈ ಮುತ್ತಿಗೆ ಸಂಬಂಧಿಸಿದಂತೆ ಅಚ್ಚರಿಯ ವಿಷ್ಯವೊಂದು ಹೊರ ಬಿದ್ದಿದೆ. ನೀವೂ ಪ್ರತಿ ದಿನ ಪತ್ನಿಗೆ ಮುತ್ತು ನೀಡ್ತಿದ್ದರೆ ಈ ವಿಷ್ಯವನ್ನು ಸರಿಯಾಗಿ ಓದಿ. ಮುತ್ತು ನೀಡಲ್ಲ ಎನ್ನೋರು ಇಂದಿನಿಂದಲೇ ಮುತ್ತು ನೀಡಲು ಶುರು ಮಾಡಿ. ಯಾಕೆಂದ್ರೆ ಈ ಮುತ್ತಿನಲ್ಲಿ ಪತಿಯ ಆಯಸ್ಸು ಮತ್ತು ಐಶ್ವರ್ಯ ಅಡಗಿದೆ.
ದೇವರ ಪೂಜೆ ಹೆಚ್ಚು ಮಾಡ್ತಾರಂತೆ PORN ವೀಕ್ಷಿಸೋ ಜನ: ಏನಿದು ಕ್ರಾಸ್ ಕನೆಕ್ಷನ್?
ಹೆಂಡತಿಗೆ ಪ್ರತಿ ದಿನ ಕಿಸ್ ಕೊಟ್ಟರೆ ಏನು ಲಾಭ ಗೊತ್ತಾ ? : ಸಂಶೋಧನೆ (Research) ಯೊಂದು ಇದನ್ನು ಬಹಿರಂಗಪಡಿಸಿದೆ. ಹೆಂಡತಿಯನ್ನು ಚುಂಬಿಸುವುದರಿಂದ ವಯಸ್ಸು ವೃದ್ಧಿಯಾಗುತ್ತದೆಯಂತೆ. ಅಷ್ಟೇ ಅಲ್ಲ ಪತ್ನಿಯನ್ನು ಪ್ರತಿದಿನ ಚುಂಬಿಸುತ್ತಾರೋ ಅವರ ಆಯಸ್ಸಿನ ಜೊತೆಗೆ ಸಂಬಳ ಎರಡೂ ಹೆಚ್ಚಾಗಿದೆ ಎನ್ನುತ್ತದೆ ಸಂಶೋಧನೆ.
1980ರಲ್ಲಿಯೇ ನಡೆದಿತ್ತು ಸಂಶೋಧನೆ : ಈ ಅಧ್ಯಯನವನ್ನು 1980 ರಲ್ಲಿ ನಡೆಸಲಾಗಿತ್ತು. ಇದರಲ್ಲಿ ಪತ್ನಿಗೆ ಮುತ್ತು ಕೊಟ್ಟ ಪುರುಷರ ಪ್ರತ್ಯೇಕ ತಂಡವನ್ನು ಸಿದ್ಧಪಡಿಸಲಾಗಿತ್ತು. ಹಾಗೆಯೇ ಪತ್ನಿಗೆ ಪ್ರತಿ ದಿನ ಮುತ್ತು ನೀಡದ ಪುರುಷರ ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ಅವರ ಆಯಸ್ಸು, ದಿನಚರಿ, ಕೆಲಸದ ಬಗ್ಗೆ ಅಧ್ಯಯನ ನಡೆಸಲಾಯ್ತು.
ಪತ್ನಿಗೆ ಮುತ್ತಿಟ್ಟ ಪುರುಷರಿಗೆ ಹೆಚ್ಚು ಶಕ್ತಿ : ಸಂಶೋಧನೆಯಲ್ಲಿ ತಜ್ಞರು ಆಸಕ್ತಿದಾಯಕ ವಿಷ್ಯವನ್ನು ಪತ್ತೆ ಮಾಡಿದ್ರು. ತಮ್ಮ ಹೆಂಡತಿಯನ್ನು ಚುಂಬಿಸುವ ಪುರುಷರಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ ಎಂಬುದನ್ನು ಪತ್ತೆ ಮಾಡಿದ್ರು. ಅಲ್ಲದೆ ಅವರು ಶೇಕಡಾ 20 ರಿಂದ 25 ರಷ್ಟು ಹೆಚ್ಚು ಕೆಲಸ ಮಾಡುತ್ತಾರೆ ಎಂಬುದು ಕಂಡುಬಂದಿತ್ತು. ಹಾಗಾಗಿ ಅವರ ಆಯಸ್ಸಿನಲ್ಲೂ 5 ವರ್ಷ ಹೆಚ್ಚಳವಾಗಿದೆ ಎಂದು ತಜ್ಞರು ಹೇಳಿದ್ರು. ಜರ್ಮನಿಯ ಸೈಕಲಾಜಿಕಲ್ ರಿಸರ್ಚ್‌ನಲ್ಲಿ ಈ ಅಧ್ಯಯನವನ್ನು ಮಾಡಲಾಗಿತ್ತು.
ಯಪ್ಪಾ..ಮದ್ವೆಗೆ ಬಂದ ಅತಿಥಿಗಳಿಂದ್ಲೇ ಹನಿಮೂನ್ ಹೋಗೋಕೆ ದುಡ್ಡು ಕಲೆಕ್ಟ್ ಮಾಡಿದ ವಧು !
ಬೆಳಿಗ್ಗೆ ಹೆಂಡತಿಗೆ ಮುತ್ತು ನೀಡಿ : ಬೆಳಿಗ್ಗೆ ಹೆಂಡತಿಯನ್ನು ಚುಂಬಿಸಿದ ನಂತರ ಕೆಲಸಕ್ಕೆ ಹೊರಡುವ ಪುರುಷರಲ್ಲಿ ವಿಭಿನ್ನ ಶಕ್ತಿ ಇರುತ್ತದೆ ಎಂಬುದು ಪತ್ತೆಯಾಗಿತ್ತು. ಅಲ್ಲದೆ ಚುಂಬಿಸದೆ ಕೆಲಸಕ್ಕೆ ಹೋಗುವ ಪುರುಷರಿಗಿಂತ, ಪತ್ನಿಗೆ ಮುತ್ತಿಟ್ಟು ಬಂದ ಪುರುಷರು ಹೆಚ್ಚು ಕೆಲಸ ಮಾಡುತ್ತಾರೆ ಎಂಬುದು ಪತ್ತೆಯಾಗಿತ್ತು. ಉತ್ತಮವಾಗಿ ಕೆಲಸ ಮಾಡಿದ್ರೆ ಸಹಜವಾಗಿಯೇ ಸಂಬಳ ಹೆಚ್ಚಾಗುತ್ತದೆ. ಮುತ್ತಿಟ್ಟು ಕೆಲಸಕ್ಕೆ ಬಂದು, ಕೆಲಸದಲ್ಲಿ ಉತ್ಸಾಹ ತೋರಿದ ಪುರುಷರ ಸಂಬಳ ಹೆಚ್ಚಾಗಿತ್ತು.
ಆಯಸ್ಸು ವೃದ್ಧಿ : ಸಂತೋಷದಿಂದಿರುವ ವ್ಯಕ್ತಿ ಆಯಸ್ಸು ಯಾವಾಗ್ಲೂ ಹೆಚ್ಚು ಎಂದು ನಂಬಲಾಗಿದೆ. ಪತ್ನಿ ಪ್ರೀತಿ, ಕೆಲಸ ಮಾಡಲು ಶಕ್ತಿ, ಉತ್ತಮ ಸಂಬಳದಿಂದಾಗಿ ಖುಷಿಯಾಗುವ ವ್ಯಕ್ತಿ ಆರೋಗ್ಯವಾಗಿರ್ತಾನೆ. ಇದ್ರಿಂದ ಆತನ ಆಯಸ್ಸು ಹೆಚ್ಚಾಗಿದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ.