IIT Bombay alumni: ಟಿಟ್ಟರ್ ಸಿಇಓನಿಂದ ಹಿಡಿದು ಇಸ್ರೋ ಅಧ್ಯಕ್ಷರ ತನಕ, ಐಐಟಿ ಹೆಮ್ಮೆಯ 11 ಸಾಧಕರು
ದೇಶ ಕಂಡ ಐಐಟಿ ಹೆಮ್ಮೆಯ 11 ಸಾಧಕರು
ವಿಶ್ವದಾಧ್ಯಂತ ಹಬ್ಬಿದೆ ಐಐಟಿ ಬಾಂಬೆ ಸಾಧನೆ
ಐಐಟಿ ಬಾಂಬೆ ಕಲಿತ ರಾಜ್ಯ ಸಾಧಕರು ಎಷ್ಟು ಗೊತ್ತಾ?
ಬೆಂಗಳೂರು(ಡಿ.7): ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institutes of Technology) ಒಂದು ಪ್ರತಿಷ್ಠಿತ ಸಂಸ್ಥೆಯಾಗಿದೆ. ಅನೇಕ ವಿದ್ಯಾರ್ಥಿಗಳಿಗೆ ಐಐಟಿಗೆ ಪ್ರವೇಶ ಪಡೆಯುವುದು ಒಂದು ಕನಸಾಗಿರುತ್ತದೆ. ಇಲ್ಲಿಯ ವಿದ್ಯಾರ್ಥಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ವಿಶ್ವದ ಪ್ರಮುಖ ಕಂಪನಿಗಳು ಮತ್ತು ಸಂಸ್ಥೆಗಳು ಸಾಲಾಗಿ ನಿಂತಿರುತ್ತವೆ.ತಾವು ಆಯ್ದುಕೊಂಡ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಿ ಭಾರತವನ್ನು ವಿಶ್ವಮಟ್ಟದಲ್ಲಿ ಹೆಮ್ಮೆ ಪಡುವಂತೆ ಮಾಡಿದ ಬಹಳಷ್ಟು ವಿದ್ಯಾರ್ಥಿಗಳು ಐಐಟಿಯಲ್ಲಿ ಓದಿದವರು ಎಂಬುದರಲ್ಲಿ ಸಂದೇಹವಿಲ್ಲ. ಉನ್ನತ ದರ್ಜೆಯ ಸಿಇಒಗಳಿಂದ ಹಿಡಿದು ಪ್ರಸಿದ್ಧ ವಿಜ್ಞಾನಿಗಳವರೆಗೆ, ಯುವ ಉದ್ಯಮಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಐಐಟಿ ಹಳೆಯ ವಿದ್ಯಾರ್ಥಿಗಳು ಅನೇಕ ತಲೆಮಾರುಗಳ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಎನಿಸಿಕೊಂಡಿದ್ದಾರೆ. ವಿಶ್ವವನ್ನು ಆಳುತ್ತಿರುವ ಐಐಟಿ ಬಾಂಬೆ ಹೆಮ್ಮೆ ಪಡುವಂತೆ ಮಾಡಿದ ಸಾಧಕರ ಬಗ್ಗೆ ವಿವರಣೆ ಇಲ್ಲಿದೆ.
1. ಟ್ವಿಟ್ಟರ್ ಸಿಇಓ ಪರಾಗ್ ಅಗರವಾಲ್:
ಟ್ವಿಟ್ಟರ್ ನ ಹೊಸ ಸಿಇಓ ಪರಾಗ್ ಅಗರವಾಲ್ (Parag Agrawal) ಅವರು IIT-ಬಾಂಬೆಯಲ್ಲಿ ಅಧ್ಯಯನ ಮಾಡಿದರು ನಂತರ ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ PhD ಪಡೆಯಲು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿದರು. 2011 ರಲ್ಲಿ, ಅವರು ಟ್ವಿಟರ್‌ಗೆ ವಿಶಿಷ್ಟ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇರಿಕೊಂಡರು. ಹಂತ ಹಂತವಾಗಿ ಬೆಳೆದ ಪರಾಗ್ ಅವರು ಹತ್ತು ವರ್ಷಗಳ ಸಂಸ್ಥೆಯ ಸಿಇಒ ಆಗಿ ಹೊರ ಹೊಮ್ಮಿದ್ದಾರೆ. ಟ್ವಿಟ್ಟರ್‌ಗೆ ಸೇರುವ ಮೊದಲು, ಅಗರವಾಲ್ ಮೈಕ್ರೋಸಾಫ್ಟ್ ರಿಸರ್ಚ್ ಮತ್ತು Yahooನಲ್ಲಿ ಸಂಶೋಧನೆ ವಿಭಾಗದಲ್ಲಿದ್ದರು.
MOE imposition quota: ಮೀಸಲಾತಿ ಆಧಾರದಲ್ಲಿ ಹಿರಿಯ ಅಧ್ಯಾಪಕರ ಹುದ್ದೆಗಳ ಭರ್ತಿಗೆ ಮುಂದಾದ ಐಐಟಿ
2.ಇಸ್ರೋ ಅಧ್ಯಕ್ಷ - ಕೆ. ಶಿವನ್:
ಡಾ. ಕೆ. ಶಿವನ್ 1980 ರಲ್ಲಿ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಡಾ. ಕೆ. ಶಿವನ್ (K Sivan)1982 ರಲ್ಲಿ ಬೆಂಗಳೂರಿನ IISc ನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ತಮ್ಮ ME ಪದವಿ ಪಡೆದರು. ತರುವಾಯ, ಅವರು 2006 ರಲ್ಲಿ IIT, ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಪಿಎಚ್‌ಡಿ ಪೂರ್ಣಗೊಳಿಸಿದರು. ಪ್ರಸ್ತುತ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಮತ್ತು ಇಸ್ರೋ (ISRO) ಅಧ್ಯಕ್ಷ. ಡಾ. ಶಿವನ್ ಅವರು ಚಂದ್ರಯಾನ 2 ಮಿಷನ್ ನೇತೃತ್ವದ ತಮಿಳುನಾಡಿನ ಪ್ರಸಿದ್ಧ ವಿಜ್ಞಾನಿ. ಅವರು PSLV, GSLV ಮತ್ತು GSLV Mk-Ill ವಾಹಕ ವಿನ್ಯಾಸದಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ. ಪ್ರಮುಖ ವೈವಿಧ್ಯಮಯ ಯೋಜನಾ ತಂಡಗಳ ಬಾಹ್ಯಾಕಾಶ ಸಾರಿಗೆ ವ್ಯವಸ್ಥೆಗಳ ಸಿಸ್ಟಮ್ಸ್ ಎಂಜಿನಿಯರಿಂಗ್‌ನಲ್ಲಿ 30 ವರ್ಷಗಳಿಗಿಂತ ಹೆಚ್ಚು ಅನುಭವವನ್ನು ಹೊಂದಿದ್ದಾರೆ.
Twitter CEO on trend: ಭಾರತೀಯ ಮೂಲದ ಟ್ವಿಟ್ಟರ್‌ನ ಹೊಸ ಸಿಇಒ ಬಗ್ಗೆ ನಿಮಗೆಷ್ಟು ಗೊತ್ತು?
3.ಇನ್ಫೋಸಿಸ್ ಸಂಸ್ಥೆಯ ನಂದನ್ ನಿಲೇಕಣಿ: ಭಾರತದ ಉದ್ಯಮಿಗಳಲ್ಲಿ ಪ್ರಮುಖ ಹೆಸರಾಗಿರುವ ನಂದನ್ ನಿಲೇಕಣಿ (Nandan Nilekani) ರಾಜಕಾರಣಿ ಕೂಡ. ಜನಿಸಿದ್ದು ಬೆಂಗಳೂರು. ಧಾರವಾಡದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ನಡೆಸಿದ ನಂದನ್ ಐಐಟಿ-ಬಾಂಬೆಯ ಅತ್ಯಂತ ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಐಐಟಿಯಿಂದ ಪಡೆದರು. 1981 ರಲ್ಲಿ ಸ್ಥಾಪನೆಯಾದ ಇನ್ಫೋಸಿಸ್ (Infosys) ಸಂಸ್ಥಾಪಕರಲ್ಲಿ ಒಬ್ಬರು. ಪ್ರಸ್ತುತ ಪ್ರಮುಖ ಐಟಿ ಸಂಸ್ಥೆಯ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದಾರೆ. 2009-13 ರ ನಡುವೆ ಆಧಾರ್ ನೀಡುವ ಪ್ರಾಧಿಕಾರವಾದ UIDAI ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
Twitter CEO Parag Agrawal: ಬಾಲ್ಯದ ಗೆಳೆಯನ ಬಗ್ಗೆ ಶ್ರೇಯಾ ಘೋಷಾಲ್ ಸಂಭ್ರಮ
4.ಓಲಾ ಕ್ಯಾಬ್ಸ್, ಸಹ-ಸಂಸ್ಥಾಪಕ - ಭಾವಿಶ್ ಅಗರ್ವಾಲ್:
ಬೆಂಗಳೂರು ಮೂಲದ ಓಲಾ (Ola Cabs) ಕಂಪನಿಯ ಮಾಲೀಕ ಭಾವಿಶ್ ಅಗರ್ವಾಲ್ (Bhavish Aggarwal) ಬಹಳ ಕ್ರಿಯಾಶೀಲ ಮತ್ತು ಸೃಜನಶೀಲ ವ್ಯಕ್ತಿ. ವಾಣಿಜ್ಯೋದ್ಯಮಿ ಕೂಡ ಟೈಮ್ ಮ್ಯಾಗಜೀನ್‌ನ 2018 ರ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಅಗರ್ವಾಲ್ ಕೂಡ ಒಬ್ಬರು. 2008 ರಲ್ಲಿ ಐಐಟಿ ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಭಾವಿಶ್ ಅಗರ್ವಾಲ್ ಪದವಿ ಪಡೆದಿದ್ದಾರೆ. ಭವಿಶ್ ಮೈಕ್ರೋಸಾಫ್ಟ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಜನವರಿ 2011 ರಲ್ಲಿ, ಅವರು ಅಂಕಿತ್ ಭಾಟಿ ಅವರೊಂದಿಗೆ ಬೆಂಗಳೂರಿನಲ್ಲಿ ಓಲಾ ಕ್ಯಾಬ್ಸ್ ಅನ್ನು ಸಹ-ಸ್ಥಾಪಿಸಿದರು.
Vineeta Agarwal: ಟ್ವಿಟ್ಟರ್ ಸಿಇಒ ಪರಾಗ್ ಪತ್ನಿ ವಿನೀತಾ ಅಗರ್ವಾಲ್ ಯಾರು ಗೊತ್ತಾ?
5.ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ - ಸಲೀಲ್ ಪರೇಖ್:
ಸಲೀಲ್ ಪರೇಖ್(Salil Parekh) ಪ್ರಸ್ತುತ ಜನವರಿ 2, 2018 ರಿಂದ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿದ್ದಾರೆ. ಸಲೀಲ್ ಪರೇಖ್ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (IIT ಬಾಂಬೆ) ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. 2000ನೇ ಇಸವಿಯಲ್ಲಿ ಕ್ಯಾಪ್‌ಜೆಮಿನಿಯ ಮ್ಯಾನೇಜ್‌ಮೆಂಟ್‌ನ ಮಂಡಳಿಯ ಸದಸ್ಯರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
Twitterನಲ್ಲಿ ಕ್ಷಣಾರ್ಧದಲ್ಲಿ ಮಾಯವಾದ್ರು ಲಕ್ಷಾಂತರ ಫಾಲೋವರ್ಸ್, CEO ಪರಾಗ್ ಮೇಲೆ ಬಳಕೆದಾರ ಗರಂ!
6. ಭಾರತದ ಮಾಜಿ ರಕ್ಷಣಾ ಸಚಿವ - ದಿ.ಮನೋಹರ್ ಪರಿಕ್ಕರ್:
ಮಾಜಿ ರಕ್ಷಣಾ ಸಚಿವರಾಗಿದ್ದ ದಿವಗಂತ ಮನೋಹರ್ ಪರಿಕ್ಕರ್ (Manohar Parrikar) ನಾಲ್ಕು ಬಾರಿ ಗೋವಾ ಮುಖ್ಯಮಂತ್ರಿ, ಐಐಟಿ-ಬಾಂಬೆಯ ಹಳೆಯ ವಿದ್ಯಾರ್ಥಿಯಾಗಿದ್ದರು. ಅವರು 1978 ರಲ್ಲಿ ಸಂಸ್ಥೆಯಿಂದ ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ರಾಜ್ಯದ ಶಾಸಕರಾಗಿ ಮತ್ತು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮೊದಲ ಐಐಟಿ ಹಳೆಯ ವಿದ್ಯಾರ್ಥಿ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಈ ವರ್ಷದ ಮಾರ್ಚ್‌ನಲ್ಲಿ 63 ನೇ ವಯಸ್ಸಿನಲ್ಲಿ ನಿಧನರಾದರು.
Twitterಗೆ ಭಾರತೀಯ ಮೂಲದ ಪರಾಗ್ ಮುಖ್ಯಸ್ಥ, ಡೋರ್ಸಿಗೆ ಬಲವಂತದ ನಿವೃತ್ತಿ!
7. ಇಲಿನಾಯ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ - ಸರಿತಾ ಅಡ್ವೆ:
ಸರಿತಾ ಅಡ್ವೆ 1987 ರಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಬಿಟೆಕ್ ಮಾಡಿರುವ ಐಐಟಿ-ಬಾಂಬೆಯ ಹಳೆಯ ವಿದ್ಯಾರ್ಥಿ. ಸರಿತಾ ಅಡ್ವೆ (Sarita Adve) ಅವರು ಮಲ್ಟಿಪ್ರೊಸೆಸರ್‌ಗಳಿಗಾಗಿ ಮೆಮೊರಿ ಕಂಸಿಸ್ಟೆನ್ಸಿ ಮಾದರಿಗಳು, ಮೆಮೊರಿ ಸಿಸ್ಟಮ್ ಪರ್ಫಾಮೆನ್ಸ್, ಹಾರ್ಡ್‌ವೇರ್ ರಿಯಾಬಿಲಿಟಿ ಮತ್ತು ಪವರ್ ಮ್ಯಾನೇಜ್‌ಮೆಂಟ್ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿ ಹೆಸರುವಾಸಿಯಾಗಿದ್ದಾರೆ. ಸರಿತಾ ಅಡ್ವೆ ಅವರು ಯುಎಸ್‌ನ ಅರ್ಬಾನಾ-ಕ್ಯಾಂಪೇನ್‌ನಲ್ಲಿರುವ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾಗಿದ್ದಾರೆ.
8.ರಾಜ್ಯಸಭಾ ಸದಸ್ಯ - ಜೈರಾಮ್ ರಮೇಶ್:
ಜೈರಾಮ್ ರಮೇಶ್ (Jairam Ramesh) ಇವರು ವೃತ್ತಿಯಿಂದ ಅರ್ಥಶಾಸ್ತ್ರಜ್ಞ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸುವ ಸಕ್ರಿಯ ರಾಜಕಾರಣಿ. ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಸಂಸದ. ಏಪ್ರಿಲ್ 9, 1954 ರಂದು ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಜನಿಸಿದ ರಮೇಶ್ ಐಐಟಿ ಬಾಂಬೆಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪದವೀಧರರಾಗಿದ್ದಾರೆ. ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರು.
9.ಸ್ಪ್ರಿಂಗ್‌ಬೋರ್ಡ್‌ನ ಸಹ-ಸ್ಥಾಪಕರು ಮತ್ತು ಅಧ್ಯಕ್ಷರು - ಪಾರುಲ್ ಗುಪ್ತಾ:
ಸ್ಪ್ರಿಂಗ್‌ಬೋರ್ಡ್‌ನ ಸಹ-ಸ್ಥಾಪಕ ಮತ್ತು ಅಧ್ಯಕ್ಷ ಪಾರುಲ್ ಗುಪ್ತಾ (Parul Gupta) ಐಐಟಿ-ಬಾಂಬೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಐಐಟಿ ಬಾಂಬೆ ಹಳೆ ವಿದ್ಯಾರ್ಥಿ ಅಸೋಸಿಯೇಷನ್‌ನ ಕಾರ್ಯಕಾರಿ ಮಂಡಳಿಯಾಗಿ ಕೆಲಸ ಮಾಡಿದ್ದಾರೆ. ಇವರು ಕಲಿಕೆಯನ್ನು ಉತ್ತೇಜಿಸುವ ಮತ್ತು ಶಿಕ್ಷಣ ವ್ಯವಸ್ಥೆಗೆ ಪರ್ಯಾಯವನ್ನು ಒದಗಿಸುವ ವೇದಿಕೆಯನ್ನು ಸ್ಥಾಪಿಸಿದ್ದಾರೆ.
10. ಅರ್ಥಶಾಸ್ತ್ರದ ಪ್ರಾಧ್ಯಾಪಕ - ವಿರಲ್ ಆಚಾರ್ಯ:
ವೈರಲ್ ವಿ. ಆಚಾರ್ಯ (Viral Acharya)ಅವರು ಭಾರತೀಯ ಅರ್ಥಶಾಸ್ತ್ರಜ್ಞರಾಗಿದ್ದು, ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಆಗಿ ನೇಮಕಗೊಂಡಿದ್ದಾರೆ. ಪ್ರೊ. ಆಚಾರ್ಯ ಅವರು 1995 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ತಮ್ಮ ಬ್ಯಾಚುಲರ್ ಆಫ್ ಟೆಕ್ನಾಲಜಿಯನ್ನು ಪೂರ್ಣಗೊಳಿಸಿದರು ಮತ್ತು 2001 ರಲ್ಲಿ NYU-Stern ನಿಂದ ಹಣಕಾಸು ವಿಷಯದಲ್ಲಿ PhD ಅನ್ನು ಪಡೆದುಕೊಂಡಿದದ್ದಾರೆ.
11. ವಿನ್ಯಾಸಕಾರ - ಉದಯ ಕುಮಾರ್:
ಉದಯ ಕುಮಾರ್ ಧರ್ಮಲಿಂಗಂ (Udaya Kumar Dharmalingam) ಅವರು ಭಾರತೀಯ ಶೈಕ್ಷಣಿಕ ಮತ್ತು ವಿನ್ಯಾಸಕಾರರಾಗಿದ್ದು, ಭಾರತೀಯ ರೂಪಾಯಿ ಚಿಹ್ನೆಯ ವಿನ್ಯಾಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಉದಯ ಕುಮಾರ್ ಐಐಟಿ ಗುವಾಹಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಡಿ.ಉದಯ ಕುಮಾರ್ ತಮ್ಮ ಡಾಕ್ಟರೇಟ್ ಅಧ್ಯಯನವನ್ನು IDC, IIT ಬಾಂಬೆಯಲ್ಲಿ 2010 ಮಾಡಿದ್ದಾರೆ. ಭಾರತೀಯ ರೂಪಾಯಿ ಚಿಹ್ನೆ ಮಾತ್ರವಲ್ಲದೆ, ಪ್ರೊ. ಜಿ.ವಿ. ಶ್ರೀಕುಮಾರ್ ಅವರ ಮಾರ್ಗದರ್ಶನದಲ್ಲಿ ಐಡಿಸಿಯ ಕೈಗಾರಿಕಾ ವಿನ್ಯಾಸ ಕೇಂದ್ರದಲ್ಲಿ ಮಿನಿ ಯೋಜನೆಯಾಗಿ "ಪರಾಶಕ್ತಿ" ಹೆಸರಿನ ತಮಿಳು ಫಾಂಟ್ ಅನ್ನು ಸಹ ಉದಯ ಅವರು ವಿನ್ಯಾಸಗೊಳಿಸಿದ್ದಾರೆ.