Asianet Suvarna News Asianet Suvarna News

MOE imposition quota: ಮೀಸಲಾತಿ ಆಧಾರದಲ್ಲಿ ಹಿರಿಯ ಅಧ್ಯಾಪಕರ ಹುದ್ದೆಗಳ ಭರ್ತಿಗೆ ಮುಂದಾದ ಐಐಟಿ

  • ಆಗಸ್ಟ್ 2021 ರಲ್ಲಿ ಮೀಸಲಾತಿಯ ಮಾನದಂಡ ಅನುಸರಿಸಲು ನಿರ್ದೇಶನ ನೀಡಿದ ಶಿಕ್ಷಣ ಸಚಿವಾಲ
  • ಹಿರಿಯ ಅಧ್ಯಾಪಕರ ಹುದ್ದೆಗಳ ಜಾಹೀರಾತು ಪ್ರಾರಂಭಿದ ಐಐಟಿ
  • ಈವರಗೆ ಕಿರಿಯ ಹಂತದ ಅಧ್ಯಾಪಕರ ನೇಮಕಾತಿಯಲ್ಲಿ ಮಾತ್ರ ಕೋಟಾ ಪದ್ಧತಿ ಇತ್ತು
     
After the Ministry of Education directed the IITs  to follow the government norms of reservation in admission gow
Author
Bengaluru, First Published Dec 6, 2021, 5:48 PM IST

ನವದೆಹಲಿ(ಡಿ.6): ಶಿಕ್ಷಣ ಸಚಿವಾಲಯವು (Ministry of Education) ಆಗಸ್ಟ್ 2021 ರಲ್ಲಿ ಮೀಸಲಾತಿಯ ಸರ್ಕಾರಿ ಮಾನದಂಡಗಳನ್ನು ಅನುಸರಿಸಲು ನಿರ್ದೇಶನ ನೀಡಿದ ನಂತರ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (IIT), ಹೆಚ್ಚಿನ ಸಂಸ್ಥೆಗಳು ಕಾಯ್ದಿರಿಸಿದ ವರ್ಗದ ಮೀಸಲಾತಿಯ ಆಧಾರದಲ್ಲಿ ಹಿರಿಯ ಅಧ್ಯಾಪಕರ ಹುದ್ದೆಗಳ ಜಾಹೀರಾತುಗಳನ್ನು ಪ್ರಾರಂಭಿಸಿವೆ. ಇದುವರೆಗೆ ಸಹಾಯಕ ಪ್ರಾಧ್ಯಾಪಕರಂತಹ ಕಿರಿಯ ಹಂತದ ಅಧ್ಯಾಪಕರ ನೇಮಕಾತಿಯಲ್ಲಿ ಮಾತ್ರ ಕೋಟಾ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಸೆಪ್ಟೆಂಬರ್ 2021 ರಲ್ಲಿ, ಹಲವಾರು ಐಐಟಿಗಳು ಕಾಯ್ದಿರಿಸಿದ ವರ್ಗಗಳ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು 'ವಿಶೇಷ' ನೇಮಕಾತಿ ಡ್ರೈವ್‌ಗಳನ್ನು ಸಹ ಪ್ರಾರಂಭಿಸಿದ್ದವು.

ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಐಐಟಿಗಳಲ್ಲಿನ 6,043 ಅಧ್ಯಾಪಕರ ಪೈಕಿ ಸುಮಾರು 2.5 %ಎಸ್‌ಸಿ ಮತ್ತು 0.34 %  ಎಸ್‌ಟಿ ಸಮುದಾಯಗಳಿಂದ ಬಂದಿದೆ.

IIT BHU placement: ವಿದ್ಯಾರ್ಥಿಗೆ ವಾರ್ಷಿಕ 2 ಕೋಟಿ ರೂ. ವೇತನ ಪ್ಯಾಕೇಜ್!

ಐಐಟಿಗಳು ಮೀಸಲಾತಿಯ ಸರ್ಕಾರಿ ಮಾನದಂಡಗಳನ್ನು ಹೇರುವುದರಿಂದ ಹೆಚ್ಚಿನ ಖಾಲಿ ಹುದ್ದೆಗಳು ಸೃಷ್ಟಿಯಾಗಬಹುದು. ಅಭ್ಯರ್ಥಿಗಳ ಅಲಭ್ಯತೆಯ ಕಾರಣ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ. ನಾವು ಕೋಟಾದ ವಿರುದ್ಧ ಇಲ್ಲ. ಮೀಸಲು ವರ್ಗಗಳಿಗೆ ಸೇರಿದ ಪಿಎಚ್‌ಡಿ ಅಭ್ಯರ್ಥಿಗಳ ಕೊರತೆಯಿದೆ. ಹಾಗಾಗಿ ನಾವು ಎಷ್ಟೇ ಪ್ರಯತ್ನ ಪಟ್ಟರೂ ಹುದ್ದೆಗಳು ಭರ್ತಿಯಾಗಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

JEE ಪಾಸಾದರೂ ಶುಲ್ಕ ಕಟ್ಟಲು ಅಸಾಧ್ಯ : ದಲಿತ ವಿದ್ಯಾರ್ಥಿಯ ನೆರವಿಗೆ ಸುಪ್ರೀಂ ಕೋರ್ಟ್!

ಸಚಿವಾಲಯವು ಇತ್ತೀಚೆಗೆ ಎಲ್ಲಾ ಸಂಸ್ಥೆಗಳಾದ ಐಐಟಿಗಳು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಶಿಕ್ಷಕರ ದಿನಾಚರಣೆ 2022 ರ ಮೊದಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನಿರ್ದೇಶನ ನೀಡಿತ್ತು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ತೆಗೆದುಕೊಂಡ ಕ್ರಮಗಳ ಕುರಿತು ಮಾಸಿಕ ವರದಿ ನೀಡುವಂತೆ ಮತ್ತು ಪರಿಶೀಲಿಸಲು ಸಚಿವಾಲಯವು ಆದೇಶಿಸಿದೆ.

RRB NTPC RESULT DATE: ಜನವರಿ 15ರೊಳಗೆ ರೈಲ್ವೇ ನೇಮಕಾತಿ ಪರೀಕ್ಷಾ ಫಲಿತಾಂಶ ಪ್ರಕಟ

ಕೇಂದ್ರ ಕಾನೂನಿನ ಪ್ರಕಾರ, ಸರ್ಕಾರಿ ಸಂಸ್ಥೆಗಳು ಇತರೆ ಹಿಂದುಳಿದ ವರ್ಗದ (OBC) ಅಭ್ಯರ್ಥಿಗಳಿಗೆ ಬೋಧಕ ಸಿಬ್ಬಂದಿಯಲ್ಲಿ ಶೇ.27, ಪರಿಶಿಷ್ಟ ಜಾತಿ (ಎಸ್‌ಸಿ)ಗೆ ಶೇ.15 ಮತ್ತು ಪರಿಶಿಷ್ಟ ಪಂಗಡಗಳಿಗೆ (ST) ಶೇ.7.5 ಮೀಸಲಾತಿಯನ್ನು ಜಾರಿಗೊಳಿಸಬೇಕಾಗುತ್ತದೆ.

ಕೋವಿಡ್ ಭಯ: ಶೇ.90 ಜನರಿಗೆ ಇಷ್ಟವಿಲ್ಲದ ಉದ್ಯೋಗದಲ್ಲಿರಲು ಸಿದ್ಧರಿಲ್ಲ!

ಮೀಸಲಾತಿ ವರ್ಗದ ಅಭ್ಯರ್ಥಿಗಳ ಹುದ್ದೆ ಭರ್ತಿ ಮಾಡಲು ಸಾಧ್ಯವಾಗದಿದ್ದರೆ ಐಐಟಿಗಳು ಹುದ್ದೆಗಳನ್ನು ಡಿ-ರಿಸರ್ವ್ ಮಾಡಬಹುದಾದ ಆಯ್ಕೆ ಈ ಹಿಂದೆ ಇತ್ತು. ಆದರೆ ಈಗ ಐಐಟಿ ಮಂಡಳಿಗಳಿಗೆ ಈ ಸ್ವಾತಂತ್ರ್ಯವಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಹುದ್ದೆಗಳು ಭರ್ತಿಯಾಗದಿದ್ದರೆ, ಸೂಕ್ತ ಅಭ್ಯರ್ಥಿಯು ಅರ್ಜಿ ಸಲ್ಲಿಸಿ ಆಯ್ಕೆಯಾಗುವವರೆಗೆ ಆ ಹುದ್ದೆ ಖಾಲಿಯಾಗಿಯೇ ಉಳಿಯುತ್ತದೆ.

"ಐಐಟಿಗಳು (Indian Institute of Technology) ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಾಗಿವೆ ಮತ್ತು ಮೀಸಲಾತಿ ಕೋಟಾದಿಂದ ವಿನಾಯಿತಿ ಕೂಡ ನೀಡಬೇಕು. ಏಕೆಂದರೆ ಮೆರಿಟ್ ನಲ್ಲಿ ಬರುವವರಿಗೆ ಕೂಡ ಅವಕಾಶ ನೀಡಬೇಕು. IISc ಬೆಂಗಳೂರು ಕೂಡ ಇದೇ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಅದೇ ನಿಬಂಧನೆಯನ್ನು ಪ್ರಧಾನ ತಾಂತ್ರಿಕ ಸಂಸ್ಥೆಗಳಲ್ಲಿ ಸಹ ಅಳವಡಿಸಬಹುದಾಗಿದೆ. ಕಡ್ಡಾಯ ಕೋಟಾವು ಭರ್ತಿಯಾಗದ ಹುದ್ದೆಗಳನ್ನು ಹೆಚ್ಚಿಸಲಿದೆ ಎಂದು ನಿರ್ದೇಶಕರೊಬ್ಬರು ಹೇಳಿದ್ದಾರೆ.

2020ರಲ್ಲಿ,  23 ಐಐಟಿಗಳನ್ನು ಮೀಸಲಾತಿಯಿಂದ ವಿನಾಯಿತಿ ನೀಡಬೇಕು ಎಂದು ಕೇಂದ್ರ ಶಿಕ್ಷಣ ಸಂಸ್ಥೆಗಳ (CEI) ಕಾಯಿದೆ 2019 ರ ಅಡಿಯಲ್ಲಿ ಎಂಟು ಸದಸ್ಯರ ವಿಶೇಷ ಸಮಿತಿಯ ವರದಿಯು ಶಿಫಾರಸು ಮಾಡಿದೆ. ಐಐಟಿ ದೆಹಲಿ ನಿರ್ದೇಶಕ ವಿ ರಾಮಗೋಪಾಲ್ ರಾವ್ ಅವರ ಅಧ್ಯಕ್ಷರಾಗಿದ್ದ ಈ ಸಮಿತಿಯಲ್ಲಿ ಐಐಟಿ ಕಾನ್ಪುರದ ನಿರ್ದೇಶಕ ಅಭಯ್ ಕರಂಡಿಕರ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗಳ ಪ್ರತಿನಿಧಿಗಳು,  ಬುಡಕಟ್ಟು ವ್ಯವಹಾರಗಳ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗಳ ಪ್ರತಿನಿಧಿಗಳು, ವಿಕಲಚೇತನರು, ಐಐಟಿ ಬಾಂಬೆ ಮತ್ತು ಐಐಟಿ ಮದ್ರಾಸ್‌ನ ರಿಜಿಸ್ಟ್ರಾರ್‌ಗ ಮತ್ತು ಇತರ ಸದಸ್ಯರಿದ್ದರು.

Follow Us:
Download App:
  • android
  • ios