Asianet Suvarna News Asianet Suvarna News

Twitter CEO on trend: ಭಾರತೀಯ ಮೂಲದ ಟ್ವಿಟ್ಟರ್‌ನ ಹೊಸ ಸಿಇಒ ಬಗ್ಗೆ ನಿಮಗೆಷ್ಟು ಗೊತ್ತು?

ವಿದೇಶದ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಭಾರತೀಯರು ಸಿಇಒಗಳಾಗುತ್ತಿರುವುದು ಈಗ ಟ್ರೆಂಡ್‌ ಆಗಿದೆ.  ಗೂಗಲ್‌ ಸಿಇಒ ಸುಂದರ್ ಪಿಚೈ ಹಾಗೂ ಮೈಕ್ರೋಸಾಫ್ಟ್‌ ಸಿಇಒ ಸತ್ಯಾ ನಡೆಲ್ಲಾ ಬಳಿಕ ಈಗ ಪರಾಗ್‌ ಅಗರ್ವಾಲ್‌ ಅವರು, ಅಮೆರಿಕಾ ಮೂಲದ ದೈತ್ಯ ಸಂಸ್ಥೆಗಳ ಉನ್ನತ ಹುದ್ದೆಗಳಿಗೆ ಏರಿದ ಭಾರತೀಯ ಸಂಜಾತರಾಗಿದ್ದಾರೆ. 

How much do you know about the new CEO of Twitter akb
Author
San Francisco, First Published Nov 30, 2021, 5:32 PM IST
  • Facebook
  • Twitter
  • Whatsapp

ಸ್ಯಾನ್ ಫ್ರಾನ್ಸಿಸ್ಕೋ(ನ.30): ಸೋಮವಾರ ಟ್ವಿಟ್ಟರ್‌ನ ಹೊಸ ಸಿಇಒ ಆಗಿ ನೇಮಕಗೊಂಡ ಪರಾಗ್‌ ಅಗರ್ವಾಲ್‌, ಅಮೆರಿಕಾ ಮೂಲದ ತಂತ್ರಜ್ಞಾನ ಸಂಸ್ಥೆಯನ್ನು ಮುನ್ನಡೆಸಲು ಭಾರತದ ನೆಲದಿಂದ ಆಯ್ಕೆಯಾದ ಹೊಸ ಪ್ರತಿಭೆ. ಇವರಿಗಿಂತ ಮೊದಲು ಜಾಕ್‌ ಡೊರ್ಸಿ( Jack Dorsey) ಟ್ವಿಟ್ಟರ್‌ನ ಸಿಇಒ ಆಗಿದ್ದರು.  ಪರಾಗ್‌ ಅಗರ್ವಾಲ್‌  ಟ್ವಿಟ್ಟರ್ ಸಂಸ್ಥೆಯಲ್ಲೇ ಕೆಲಸದಲ್ಲಿದ್ದು ಜಾಕ್‌ ಡೋರ್ಸಿಯವರಿಗೆ ಹೋಲಿಸಿದರೆ ಕೇವಲ 24 ಸಾವಿರ ಫಾಲೋವರ್ಸ್‌ ಇರುವ ಸಣ್ಣ ಪ್ರೊಫೈಲ್‌ನ ವ್ಯಕ್ತಿ. ಡೋರ್ಸಿ  6 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.  ಸೋಮವಾರ ಪರಾಗ್‌ ಅಗರ್ವಾಲ್‌, ತಮಗೆ ಟ್ವಿಟ್ಟರ್‌ ಹುದ್ದೆ ನೀಡಿದ್ದಕ್ಕೆ ಧನ್ಯವಾದ ಜಾಕ್‌, ನಾನು ಗೌರವದ ಜೊತೆ ವಿನಮ್ರನಾಗಿರುವೆ ಎಂದು ಟ್ವಿಟ್‌ ಮಾಡುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿರುವ ಸಂಸ್ಥೆಯೊಂದರ ಉನ್ನತ ಹುದ್ದೆ ಅಲಂಕರಿಸಿದರು.

ಗೂಗಲ್‌ ಸಿಇಒ ಸುಂದರ್ ಪಿಚೈ(Sundar Pichai) ಹಾಗೂ ಮೈಕ್ರೋಸಾಫ್ಟ್‌ ಸಿಇಒ ಸತ್ಯಾ ನಡೆಲ್ಲಾ(Satya Nadella)ರಂತೆ ಅಗರ್ವಾಲ್‌, ಅಮೆರಿಕಾ ಮೂಲದ ದೈತ್ಯ ಸಂಸ್ಥೆಗಳ ಉನ್ನತ ಹುದ್ದೆಗಳಿಗೆ ಏರಿದ ಭಾರತೀಯ ಸಂಜಾತರ ಪೈಕಿ ಇತ್ತೀಚಿನವರು.  ಟ್ವಿಟ್ಟರ್‌ ಸಿಇಒ ಹುದ್ದೆಯನ್ನು ಪರಾಗ್ ಹೆಗಲಿಗೇರಿಸಿದ ಡೋರ್ಸಿ.  'ಟ್ವಿಟ್ಟರ್‌(Twitter) ಕಂಪನಿಯ ಪ್ರತಿಯೊಂದು ಮಹತ್ವದ ನಿರ್ಧಾರದ ಹಿಂದೆ ಇವರಿದ್ದರು, ಹೀಗಾಗಿ ಸಂಸ್ಥೆ ಮತ್ತಷ್ಟು ಬೆಳೆಯಲು ಸಾಧ್ಯವಾಯಿತು' ಎಂದು ಅಗರ್‌ವಾಲ್‌ ಬಗ್ಗೆ ಟ್ವಿಟ್ಟರ್ ಸಂಸ್ಥೆಯ ಸಿಂಬ್ಬಂದಿಗೆ ಬರೆದ ಸಂದೇಶದಲ್ಲಿ ತಿಳಿಸಿದ್ದಾರೆ. ಅವರು ಆತ್ಮ ಹಾಗೂ ಹೃದಯದಿಂದ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಹಾಗೂ ನಾನು ದಿನವೂ ಇವರಿಂದ ಕಲಿಯಲು ಬಯಸುವಂತಹ ಒಬ್ಬ ವ್ಯಕ್ತಿ ಇವರಾಗಿದ್ದಾರೆ. ನಮ್ಮ ಸಂಸ್ಥೆಯ ಸಿಇಒ ಆಗಿ ಇವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಆಳವಾದ ನಂಬಿಕೆ ನನಗಿದೆ ಎಂದು ಜಾಕ್‌ ಡೋರ್ಸಿ  ಹೇಳಿದ್ದಾರೆ.  

Twitterಗೆ ಭಾರತೀಯ ಮೂಲದ ಪರಾಗ್‌ ಮುಖ್ಯಸ್ಥ, ಡೋರ್ಸಿಗೆ ಬಲವಂತದ ನಿವೃತ್ತಿ!

ಕಂಪ್ಯೂಟರ್‌ ಸೈನ್ಸ್ ವಿಷಯಯದಲ್ಲಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಪ್‌ ಬಾಂಬೆಯಿಂದ ಇಂಜಿನಿಯರಿಂಗ್‌ ಪದವಿ ಪಡೆದಿರುವ ಅಗರ್ವಾಲ್‌, ಕ್ಯಾಲಿಫೋರ್ನಿಯಾದ  ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯ(Stanford University)ದಿಂದ  ಪಿಹೆಚ್‌ಡಿ ಪದವಿ ಕೂಡ ಪಡೆದಿದ್ದಾರೆ. 2011ರಲ್ಲಿ ಟ್ವಿಟ್ಟರ್‌ಗೆ ಸೇರಿದ ಅಗರ್ವಾಲ್‌ 2017ರ ವೇಳೆಗೆ ಅದರ ಸಿಟಿಒ ಹುದ್ದೆಗೇರಿದರು. ಸಂಸ್ಥೆಯೊಂದರ ತಂತ್ರಜ್ಞಾನದ ಮುಖ್ಯಸ್ಥರಾಗಿ ಅವರು, ಮೆಷಿನ್‌ ಲರ್ನಿಂಗ್‌(Machine Learning) ಹಾಗೂ ಕೃತಕ ಇಂಟೆಲಿಜೆನ್ಸ್‌ (Artificial Intelligence) ಹಾಗೂ ಸಂಸ್ಥೆಯ ವಿಶಾಲವಾದ ತಾಂತ್ರಿಕ ಕಾರ್ಯತಂತ್ರಗಳ ಮೇಲ್ವಿಚಾರಣೆ ನಡೆಸಿದರು. ಇವರ ಈ ವಿಶೇಷತೆಗಳು ಇವರನ್ನು ಡೊರ್ಸಿಯವರ ಸ್ಥಾನಕ್ಕೆ ಆಯ್ಕೆಯಾಗುವಂತೆ ಮಾಡಿತ್ತು ಎಂದು ಕ್ರಿಯೇಟಿವ್‌ ಸ್ಟ್ರಾಟಜಿ ಅನಾಲಿಸ್ಟ್ (Creative Strategy Analyst)ಆಗಿರುವ ಕೆರೊಲಿನಾ ಮಿಲನೆಸಿ ಹೇಳಿದ್ದಾರೆ.  

ಮುಂದೆ ಹೋದಂತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಹಾಗೂ ಮೆಷಿನ್‌ ಲರ್ನಿಂಗ್‌ ಆರೋಗ್ಯಯುತ ಪ್ಲಾಟ್‌ಫಾರ್ಮ್‌ ನೀಡುವಲ್ಲಿ ತುಂಬಾ ತುಂಬಾ ಕಠಿಣವಾದುದು. ಗ್ರಾಹಕರ ಜೊತೆ ಹೆಚ್ಚು ತೊಡಗಿಕೊಂಡಷ್ಟು ಸಂಸ್ಥೆಗೆ ಹೆಚ್ಚು ಲಾಭ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಾವು ಇನ್ನಷ್ಟು ಕಠಿಣವಾಗಿರುವುದನ್ನು ನೋಡಬಹುದು ಎಂದು ಕೆರೊಲಿನಾ  ಹೇಳಿದರು.  

ಅಗರ್ವಾಲ್‌ ಅವರು ಬ್ಲೂಸ್ಕೈ(Bluesky) ಎಂಬ ಸಂಸ್ಥೆಯ ಮುಖ್ಯಸ್ಥರು ಕೂಡ ಆಗಿದ್ದು ಇದು ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಮುಕ್ತ ಮತ್ತು ವಿಕೇಂದ್ರೀಕೃತ ಮಾನದಂಡವನ್ನು ರಚಿಸಲು ಈ ಸಂಸ್ಥೆ ಪೂರಕವಾಗಿದೆ. ಸಿಇಒ ಆದ ಬಳಿಕ ಅಗರ್ವಾಲ್‌,  ನಿಮ್ಮಲ್ಲಿ ಕೆಲವರಿಗೆ ನಾನು ಗೊತ್ತು ಎಂಬುದನ್ನು ಗಮನಿಸಿದ್ದೇನೆ. ಮತ್ತೆ ಕೆಲವರಿಗೆ ಸ್ವಲ್ಪ ಗೊತ್ತು, ಇನ್ನು ಕೆಲವರಿಗೆ ಗೊತ್ತೇ ಇಲ್ಲ ಎಂದು ಸ್ಯಾನ್‌ ಫ್ರಾನ್ಸಿಸ್ಕೋದ ಟ್ವಿಟ್ಟರ್‌ನ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುವ 5,500 ಉದ್ಯೋಗಿಗಳಿಗೆ  ಇ ಮೇಲ್‌ ಮಾಡಿದ್ದರು. 2020ರ ಎಂಐಟಿ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಅಗರ್ವಾಲ್‌, ಅಮೆರಿಕಾದ ಆಗಿನ ಅಧ್ಯಕ್ಷರಾಗಿದ್ದ ಟ್ರಂಪ್‌ ಅವರನ್ನು ಟ್ವಿಟ್ಟರ್‌ನಿಂದ ತೆಗೆದು ಹಾಕಿದ ನಂತರ ಟ್ವಿಟ್ಟರ್‌ ಸಂಸ್ಥೆಯೂ ಅಮೆರಿಕಾದಲ್ಲಿ ಸಂಪ್ರದಾಯವಾದಿಗಳ ಕೋಪಕ್ಕೆ ತುತ್ತಾಯಿತು, ಹೀಗಾಗಿ ವಾಕ್‌ ಸ್ವಾತಂತ್ರದ ಬಗ್ಗೆ ಕಡಿಮೆ ಗಮನಹರಿಸಬೇಕು ಎಂದಿದ್ದರು. ಆರೋಗ್ಯಯುತವಾದ ಸಾರ್ವಜನಿಕ ಸಂವಹನ ಸೇವೆ ನಮ್ಮ ಗುರಿಯಾಗಿದೆ. ಹಾಗೂ ನಮ್ಮ ನಡೆಗಳು, ನಾವು ನಂಬುವ ವಿಷಯಗಳು ಆರೋಗ್ಯಕರ ಸಾರ್ವಜನಿಕ ಸಂಭಾಷಣೆಗೆ ಕಾರಣವಾಗುತ್ತವೆ ಎಂಬುದನ್ನು ಪ್ರತಿಬಿಂಬಿಸುತ್ತವೆ" ಎಂದು ಅವರು ಹೇಳಿದರು.

Twitter CEO ಪರಾಗ್ ಅಗರ್ವಾಲ್ ಸ್ಯಾಲರಿ ಎಷ್ಟು?, ಸಖತ್ ಟ್ರೆಂಡಿಂಗ್‌ನಲ್ಲಿ ಟ್ವಿಟರ್ CEO

ಟ್ವಿಟ್ಟರ್‌ ತನ್ನ ಸಿಲಿಕಾಲ್‌ ವ್ಯಾಲಿ ನೇಬರ್ ಆದತಂಹ ಡಿಜಿಟಲ್‌ ಜಾಹೀರಾತಿನ ಎರಡು  ದೈತ್ಯ ಸಂಸ್ಥೆಗಳಾದ ಗೂಗಲ್‌ ಹಾಗೂ ಫೇಸ್‌ಬುಕ್‌ಗೆ ಹೋಲಿಸಿದರೆ ಟ್ವಿಟ್ಟರ್‌ನ ಬೆಳವಣಿಗೆ ಕಡಿಮೆ. 2017ರಲ್ಲಿ ಲಾಭದಾಯಕವೆನಿಸಿದ ಇದು ತುಂಬಾ ಏಳು ಬೀಳು ಕಂಡಿದೆ. ಇದರ ಹಿಂದಿನ ಸಿಇಒ ಡೋರ್ಸಿ ಬಹುತೇಕರಿಗೆ ಚಿರಪರಿಚಿತ,  ಇವರು ಡೊನಾಲ್ಡ್‌ ಟ್ರಂಪ್‌ನ್ನು ಟ್ವಿಟ್ಟರ್‌ನಿಂದ ಕಿತ್ತು ಹಾಕುವ ಮೂಲಕ ದೊಡ್ಡ ಸುದ್ದಿಯಾಗಿದ್ದರು.  

ಇತ್ತ ಯಾವಾಗ ಡೊರ್ಸಿ ಪರಾಗ ಅವರ ಹೆಸರನ್ನು ಉಲ್ಲೇಖಿಸಿದರೋ ಆವಾಗಿನಿಂದ ಎಲ್ಲೆಡೆ ಪರಾಗ್‌ದೇ ಹವಾ. ಗೂಗಲ್‌ನಲ್ಲಿ (Google) ಆತನ ಬಗೆಗೇ ಸರ್ಚ್. ಪರಾಗ್‌ ಹೊಸ ಸಂಬಳ ಎಷ್ಟು, ಆತನ ಪತ್ನಿ ಯಾರು, ಅವರ ಮನೆ ಎಲ್ಲಿರೋದು, ಆತ ಓದಿದ್ದೆಲ್ಲ ಇತ್ಯಾದಿ ವಿವರಗಳನ್ನು ಜನ ಬಹಳ ಕುತೂಹಲದಿಂದ ಸರ್ಚ್ ಮಾಡುತ್ತಿದ್ದರು. ಜೊತೆಗೆ ಪರಾಗ್‌ ಪತ್ನಿ ವಿನೀತಾಗೆ ಸಂದೇಶ ರವಾನಿಸುತ್ತಿದ್ದರು. ಇನ್ನೂ ಕೆಲವು ಭಾರತೀಯರು ಪರಾಗ್‌ ಇನ್ನೂ ಸಾಕಷ್ಟು ಭಾರತೀಯರನ್ನು ಟ್ವಿಟರ್‌ನಲ್ಲಿ ಪಾಲೋ ಮಾಡಬೇಕು ಅಂತೆಲ್ಲ ತಲೆಹರಟೆ ಶುರು ಮಾಡಿದರು. ಒಟ್ಟಾರೆ ಟ್ವಿಟರ್ ಗೆ ಭಾರತೀಯನೊಬ್ಬ ಬಾಸ್ ಆಗಿ ಆಯ್ಕೆಯಾದದ್ದು ಆ ಬಾಸ್‌ ಫ್ಯಾಮಿಲಿಯಲ್ಲಿ ಎಷ್ಟು ಸಂಭ್ರಮ ಸೃಷ್ಟಿಸಿತ್ತೋ ಅಷ್ಟೇ ಸಂಭ್ರಮ ನಮ್ಮ ಇಂಡಿಯನ್‌ ನೆಟಿಜನ್ಸ್ ಗೂ ಇದ್ದಂತಿತ್ತು. 
 

Follow Us:
Download App:
  • android
  • ios