ಕಾರ್ಖಾನೆಯ ರಾಸಾಯನಿಕಗಳಿಂದ ಮೊಡವೆ ಉಂಟಾಗಿದೆ ಎಂದು ಆರೋಪಿಸಿ ಉದ್ಯೋಗಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ಸೌಂದರ್ಯಕ್ಕೆ ಆದ್ಯತೆ ನೀಡುವ ಈಕೆ, ರೆಡ್ಡಿಟ್‌ನಲ್ಲಿ ವಿಷಯ ಹಂಚಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಕಂಪನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿರುವುದಾಗಿ ಹೇಳಿದೆ. ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲ್ಸ (work) ಬಿಡೋಕೆ ಜನರಿಗೆ ನಾನಾ ಕಾರಣವಿರುತ್ತೆ. ಕೆಲ್ಸ ಹೆಚ್ಚಾಯ್ತು, ಬಾಸ್ ಕಾಟಕೊಡ್ತಾನೆ, ಸಂಬಳ (salary) ಏರಿಕೆಯಾಗಿಲ್ಲ ಎಂಬೆಲ್ಲ ಕಾರಣಕ್ಕೆ ಜನರು ಕೆಲಸ ತೊರೆದು ಬೇರೆ ಕೆಲ್ಸ ಹುಡುಕಿಕೊಳ್ತಾರೆ. ಆದ್ರೆ ಈ ಹುಡುಗಿ ವಿಚಿತ್ರ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ. ಕಾರ್ಖಾನೆ ಕೆಲಸಕ್ಕೆ ಸೇರಿ ಒಂದು ತಿಂಗಳ ನಂತರ ತನ್ನ ಕೆಲಸವನ್ನು ತೊರೆದಿರುವ ಉದ್ಯೋಗಿ, ಮೊಡವೆ (acne) ಕಾರಣ ನೀಡಿದ್ದಾಳೆ. ಆರೋಗ್ಯ ಹಾಗೂ ಸೌಂದರ್ಯಕ್ಕೆ ಆದ್ಯತೆ ನೀಡುವ ಆಕೆ, ಕೆಲಸ ತೊರೆಯುವ ಮಹತ್ವದ ನಿರ್ಧಾರ ಮಾಡಿದ್ದಲ್ಲದೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. 

Add Asianetnews Kannada as a Preferred SourcegooglePreferred

ಕಾಂತಿಯುತ ಚರ್ಮ (skin), ಸುಂದರ ಮುಖ, ಆರೋಗ್ಯಕರ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಹಾಗಂತ ಇದನ್ನೇ ಕೆಲಸ ಬಿಡಲು ಕಾರಣ ಮಾಡಿಕೊಳ್ಳೋರು ಬಹಳ ಅಪರೂಪ. ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದವರಿಗೆ ಕೆಲಸ ಬಿಡೋದು ಅನಿವಾರ್ಯವಾಗುತ್ತದೆ. ಆದ್ರೆ ಈ ಉದ್ಯೋಗಿ ತನ್ನ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ತಿದೆ ಎಂಬ ಕಾರಣಕ್ಕೆ ಕೆಲಸ ಬಿಟ್ಟಿದ್ದಾಳೆ. ಎಥೆನಾಲ್ ಬಳಸಿ ಶುಚಿಗೊಳಿಸುವ ಯಂತ್ರಗಳಿಂದ ಆಕೆಗೆ ಮೊಡವೆ ಕಾಣಿಸಿಕೊಂಡಿದೆ. ಆರೋಗ್ಯ ತುರ್ತುಸ್ಥಿತಿ ಎಂಬ ಕಾರಣ ನೀಡಿ ತನ್ನ ಹುದ್ದೆಗೆ ಆಕೆ ರಾಜೀನಾಮೆ ನೀಡಿದ್ದಾಳೆ. 

500 ಕೋಟಿ ರೂ ಲಾಟರಿ ಹೊಡೆದ ಖುಷಿಯಲ್ಲಿ ಆಕಾಶದಲ್ಲೇ ರಾಜೀನಾ

ರೆಡ್ಡಿಟ್ (Reddit) ನಲ್ಲಿ ಪೋಸ್ಟ್ ವೈರಲ್ ಆಗಿದೆ. ನನ್ನ ಆರೋಗ್ಯ ಹಾಗೂ ಸೌಂದರ್ಯದ ಬಗ್ಗೆ ನಾನು ಹೆಚ್ಚು ಕಾಳಜಿ ವಹಿಸುತ್ತೇನೆ. ಈವರೆಗೆ ನನ್ನ ಮುಖದಲ್ಲಿ ಯಾವುದೇ ಮೊಡವೆಯಾಗ್ಲಿ, ಕಲೆಯಾಗ್ಲಿ ಇರಲಿಲ್ಲ. ನಾನು ಕಾರ್ಖಾನೆಗೆ ಸೇರಿದ ಮೇಲೆ ಮುಖದ ಮೇಲೆ ಮೊಡವೆ ಕಾಣಿಸಿಕೊಂಡಿದೆ. ಕಾರ್ಖಾನೆಯಲ್ಲಿ ಬಳಸುವ ರಾಸಾಯನಿಕ ಇದಕ್ಕೆ ಕಾರಣ. ಇದ್ರಿಂದ ಮುಖದ ಮೇಲೆ ಕಲೆಗಳಾಗಿದ್ದು, ಇದನ್ನು ಸಹಿಸಲು ನನ್ನಿಂದ ಸಾಧ್ಯವಿಲ್ಲ. ಕಾರ್ಖಾನೆ ಕೆಲಸವನ್ನು ತೊರೆದಲ್ಲಿ ಮಾತ್ರ ನನ್ನ ಮುಖ ಮೊದಲಿನಂತೆ ಆಗಲು ಸಾಧ್ಯವೆಂದು ನಾನು ಭಾವಿಸಿದ್ದೇನೆ. ಹಾಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಹಿಳೆ ಪೋಸ್ಟ್ ಹಾಕಿದ್ದಾಳೆ. ಅದಕ್ಕೆ ಕಾರ್ಖಾನೆ ಕೂಡ ಸಮಜಾಯಿಸಿ ನೀಡಿದೆ. 

ನಮ್ಮ ಕಾರ್ಖಾನೆಯಲ್ಲಿ ಎಲ್ಲ ಸುರಕ್ಷಿತ ಮಾನದಂಡಗಳನ್ನು ನಾವು ಪಾಲಿಸುತ್ತೇವೆ. ಯಾವುದೇ ರಾಸಾಯನಿಕ ವಸ್ತು ಬಳಕೆ ವೇಳೆ ಸಿಬ್ಬಂದಿ ಸುರಕ್ಷತೆಗೆ ಆದ್ಯತೆ ನೀಡ್ತೇವೆ. ಮೊಡವೆಗೆ ಕಾರಣ ಪ್ರತ್ಯೇಕವಾಗಿದೆ. ಕಾರ್ಖಾನೆಯ ಕೆಲಸದ ಸ್ಥಳದಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆಯಾಗಿಲ್ಲ. ಈವರೆಗೆ ಯಾವುದೇ ಉದ್ಯೋಗಿ ಇಂಥ ಆರೋಪಗಳನ್ನು ಮಾಡಿಲ್ಲ ಎಂದು ಕಂಪನಿ ಹೇಳಿದೆ.

ಹಣವೇ ಹೊರೆಯಾಯ್ತು ! 2.5 ಕೋಟಿ ಆಸ್ತಿ ಇದ್ರೂ ಈತನನ್ನು ಕಾಡ್ತಿದೆ ಈ

ಕಂಪನಿಯ ನಿಲುವು ಏನೇ ಇರಲಿ, ಈ ಘಟನೆ ಉದ್ಯೋಗಿಗಳ ಯೋಗಕ್ಷೇಮ, ಕೆಲಸದ ಸ್ಥಳದ ಸುರಕ್ಷತೆ ಮತ್ತು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ರೆಡ್ಡಿಟ್ ನ ಈ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು ರಾಜೀನಾಮೆ ಉತ್ಪ್ರೇಕ್ಷೆ ಎಂದಿದ್ದಾರೆ. ಮತ್ತೆ ಕೆಲವರು ಇಂತಹ ಘಟನೆಯಿಂದ ಕಾರ್ಖಾನೆ, ಕಂಪನಿಗಳು ಪಾಠ ಕಲಿಯಬೇಕು. ಸಿಬ್ಬಂದಿ ಆರೋಗ್ಯದ ಬಗ್ಗೆ ನಿರಂತರ ಮೇಲ್ವಿಚಾರಣೆ ಮಾಡ್ಬೇಕು, ಅದ್ರಲ್ಲೂ ರಾಸಾಯನಿಕ ಬಳಕೆಯಾಗುವ ಪ್ರದೇಶದಲ್ಲಿ ಎಚ್ಚರಿಕೆ ಎರಡುಪಟ್ಟು ಹೆಚ್ಚಿರಬೇಕು ಎಂದಿದ್ದಾರೆ. ಉದ್ಯೋಗಿಯ ಬಗ್ಗೆ ಬಳಕೆದಾರರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯ ಆರೋಗ್ಯ ಮತ್ತು ವೈಯಕ್ತಿಕ ಯೋಗಕ್ಷೇಮವನ್ನು ರಕ್ಷಿಸುವುದು ಎಲ್ಲಕ್ಕಿಂತ ಮುಖ್ಯ ಎಂದಿದ್ದಾರೆ. ಮೊಡವೆ ಕಾರಣಕ್ಕೆ ಕೆಲಸಬಿಟ್ಟ ಘಟನೆಯನ್ನು ಕೆಲವರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಇಷ್ಟು ಚಿಕ್ಕ ವಿಷ್ಯಕ್ಕೆ ಕೆಲಸ ಬಿಡುವ ಬಗ್ಗೆ ಆಲೋಚಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.