ಗಗನಸಖಿ ಪ್ರಿಯಾ ಶರ್ಮಾ, ಕ್ಯಾಸಿನೊ ಡೇಸ್ ಆನ್‌ಲೈನ್ ಗೇಮ್‌ನಲ್ಲಿ ₹21 ಕೋಟಿ ಗೆದ್ದು ಕೋಟ್ಯಾಧೀಶೆಯಾದರು. ₹500ಹೂಡಿಕೆ ಮಾಡಿ ಗಣೇಶ ಫಾರ್ಚೂನ್ ಆಟದಲ್ಲಿ ಅನಿರೀಕ್ಷಿತ ಲಾಭ ಗಳಿಸಿದರು. ಕೆಲಸಕ್ಕೆ ರಾಜೀನಾಮೆ ನೀಡಿ, ಕಾರು, ಮನೆ ಖರೀದಿಸಿ ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡರು. ಆದರೆ ಆನ್‌ಲೈನ್ ಗೇಮಿಂಗ್ ಅಪಾಯಕಾರಿ, ಎಚ್ಚರಿಕೆ ಅಗತ್ಯ.

ದೇವರು ಕೊಡೊವಾಗ ಕೈಬಿಚ್ಚಿ ಕೊಡ್ತಾನೆ ಅಂತಾರೆ. ಈ ಹುಡುಗಿಗೆ ದೇವರು ಒಂದು ಕೈನಲ್ಲಿ ಅಲ್ಲ ಎರಡೂ ಕೈನಲ್ಲಿ ಮಗೆದು, ಮಗೆದು ನೀಡಿದ್ದಾನೆ. ಅದಕ್ಕೆ ರಾತ್ರೋ ರಾತ್ರಿ ಹುಡುಗಿ ಅದೃಷ್ಟವೇ ಬದಲಾಗಿದೆ. ವಿಮಾನದಲ್ಲಿ ಗಗನಸಖಿ (air hostess) ಯಾಗಿ ಕೆಲ್ಸ ಮಾಡ್ತಿದ್ದ ಹುಡುಗಿ ಈಗ ಕೋಟ್ಯಾಧೀಶೆಯಾಗಿದ್ದಾಳೆ. ಬಹಳ ದಿನಗಳಿಂದ ಆರ್ಥಿಕ ಸಂಕಷ್ಟ ಅನುಭವಿಸ್ತಿದ್ದ ಹುಡುಗಿಗೆ ದೇವರು ಅತಿಯಾಗೆ ಕರುಣೆ ತೋರಿಸಿದ್ದಾನೆ. ಆನ್ಲೈನ್ ಕ್ಯಾಸಿನೋ ಆಟದಲ್ಲಿ ಚಾಲೆಂಜ್ ಮಾಡಿದ್ದ ಹುಡುಗಿಗೆ ಸಿಕ್ಕಿದ್ದು ಎಷ್ಟು ಗೊತ್ತಾ? 

ಹೆಸ್ರು ಪ್ರಿಯಾ ಶರ್ಮ. ಗಗನಸಖಿಯಾಗಿರುವ ಪ್ರಿಯಾ, ನಿತ್ಯದ ಖರ್ಚುಗಳನ್ನು ನಿಭಾಯಿಸಲು ಸಾಕಷ್ಟು ಕಷ್ಟಪಡುತ್ತಿದ್ದಳು. ಒಂದು ದಿನ ಇನ್ಸ್ಟಾಗ್ರಾಮ್ (Instagram) ನಲ್ಲಿ ಕ್ಯಾಸಿನೋ ಡೇಸ್ ಎಂಬ ವೇದಿಕೆ ನೋಡಿದ್ದಾಳೆ. ಆ ಟೈಂನಲ್ಲಿ ಕ್ಯಾಸಿನೊ ಡೇಸ್ ಆಫರ್ ನೀಡಿತ್ತು. 1 ಲಕ್ಷ ಹಣ ಜಮಾ ಮಾಡಿದ್ರೆ ಶೇಕಡಾ 150 ಬೋನಸ್ ನೀಡೋದಾಗಿ ಘೋಷಣೆ ಮಾಡಿತ್ತು. ಪ್ರಿಯಾ ಶರ್ಮಾ, ಇಂಥ ಕೆಲಸಗಳನ್ನು ಇಷ್ಟಪಡೋದಿಲ್ಲ. ಹಣ ಹಾಳುವ ಮಾಡುವ ಬುದ್ಧಿ ಆಕೆಗಿಲ್ಲ. ಆದ್ರೆ ಕ್ಯಾಸಿನೊ ಡೇಸ್ ವಿಷ್ಯದಲ್ಲಿ ಆಕೆ ಮನಸ್ಸು ಬದಲಾಗಿತ್ತು. ಹೋದ್ರೆ ಬರೀ 500 ರೂಪಾಯಿ ಹೋಗುತ್ತೆ ಎನ್ನುವ ಆಲೋಚನೆ ಮಾಡಿ, ಹಣವನ್ನು ಹೂಡಿಕೆ ಮಾಡಿದ್ದಳು. 

ಹಣವೇ ಹೊರೆಯಾಯ್ತು ! 2.5 ಕೋಟಿ ಆಸ್ತಿ ಇದ್ರೂ ಈತನನ್ನು ಕಾಡ್ತಿದೆ ಈ ನೋವು

ಆನ್ಲೈನ್ ಸ್ಲಾಟ್ ಆಗಿರುವ ಗಣೇಶ ಫಾರ್ಚೂನ್ ಎಂಬ ಆಟವನ್ನು ಪ್ರಿಯಾ ಆರಿಸಿಕೊಂಡಳು. ಈ ಆಟ ಸಾಧಾರಣ ಚಾಲೆಂಜ್ ಆಗಿ ಆರಂಭವಾಗಿತ್ತು. ಶೀಘ್ರದಲ್ಲೇ ಊಹಿಸಲಾಗದ ಅನಿರೀಕ್ಷಿತ ಲಾಭವಾಗಿ ಬದಲಾಯಿತು. ಮೊದಲು ಪ್ರಿಯಾ ಹಣ 1 ಲಕ್ಷ ದಾಟಿತ್ತು. ನಂತ್ರ 10 ಲಕ್ಷ ಕೊನೆಯಲ್ಲಿ 21,83,02,672 ಪ್ರಿಯಾ ಖಾತೆಗೆ ಬಂದಿತ್ತು. ಇದನ್ನು ಆರಂಭದಲ್ಲಿ ಪ್ರಿಯಾಗೆ ನಂಬಲು ಸಾಧ್ಯವಾಗ್ಲಿಲ್ಲ. ಪ್ರಿಯಾ, ಕ್ಯಾಸಿನೊ ಡೇಸ್ ಬೆಂಬಲ ತಂಡವನ್ನು ಸಂಪರ್ಕಿಸಿದ್ದಳು. ಅಲ್ಲಿ ಅವರು, ಪ್ರಿಯಾ 21 ಕೋಟಿ ಗೆದ್ದಿರೋದನ್ನು ದೃಢ ಪಡಿಸಿದ್ರು. ಇದ್ರಿಂದ ಪ್ರಿಯಾ ಖುಷಿಯಲ್ಲಿ ತೇಲಾಡಿದ್ದಳು. ಆ ಸಮಯದಲ್ಲಿ ವಿಮಾನ ಕೆಲಸದಲ್ಲಿದ್ದ ಪ್ರಿಯಾ, ವಿಮಾನ ಟೇಕ್ ಆಫ್ ಆಗ್ತಿದ್ದಂತೆ ಕ್ಯಾಬಿನ್ ಇಂಟರ್ಕಾಮ್ ನಲ್ಲಿ ತನ್ನ ರಾಜೀನಾಮೆ ವಿಷ್ಯವನ್ನು ತಿಳಿಸಿದ್ಲು. 

ಮಹಿಳೆಯರೇ ಮತ್ತು ಮಹನೀಯರೇ, ಇದು ನಿಮ್ಮ ಗಗನಸಖಿ ಮಾತನಾಡುತ್ತಿದ್ದಾರೆ... ಮತ್ತು ಇದು ನನ್ನ ಕೊನೆಯ ವಿಮಾನ ಹಾರಾಟ ಎಂದು ಅನಿರೀಕ್ಷಿತ ಘೋಷಣೆ ಮಾಡಿದ್ರು. ಇದನ್ನು ಕೇಳಿದ ಸಿಬ್ಬಂದಿಗೆ ಅಚ್ಚರಿಯಾದ್ರೂ ಅವರು ಖುಷಿಯಲ್ಲಿ ಕೇಕೆ ಹಾಕಿದ್ರು. ಪ್ರಿಯಾ ಹಾಗೂ ವಿಮಾನ ಸಿಬ್ಬಂದಿ ಖುಷಿಯಲ್ಲಿ ಪ್ರಯಾಣಿಕರು ಭಾಗಿಯಾದ್ರು. ನಂತ್ರ ಕೆಲಸಕ್ಕೆ ರಾಜೀನಾಮೆ ನೀಡಿದ ಪ್ರಿಯಾ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಬಿಎಂಡಬ್ಲ್ಯೂ ಕಾರ್ ಖರೀದಿ ಮಾಡಿರುವ ಪ್ರಿಯಾ, ಅಮ್ಮನಿಗೆ ಕನಸಿನ ಅಪಾರ್ಟ್ಮೆಂಟ್ ಗಿಫ್ಟ್ ಆಗಿ ನೀಡಿದ್ದಾಳೆ. ಮಾಲ್ಡೀವ್ ಪ್ರವಾಸ ಎಂಜಾಯ್ ಮಾಡಿದ್ದಾಳೆ. 

ಟಾಯ್ಲೆಟ್ ಪೇಪರ್‌ನಲ್ಲಿ ರಿಸಿಗ್ನೇಶನ್ ಲೆಟರ್, ಒಂದೇ ವಾಕ್ಯದಲ್ಲಿ ಕಂಪನಿ

ಕ್ಯಾಸಿನೊ ಡೇಸ್ ನಲ್ಲಿ ಹಣ ಹೂಡಿಕೆ ಮಾಡಿದ್ದ ಪ್ರಿಯಾ ಅದೃಷ್ಟ ಬದಲಾಗಿದೆ. ಆದ್ರೆ ಪ್ರಿಯಾ ಹಾಗೆ ನಿಮ್ಮ ಅದೃಷ್ಟವಿರುತ್ತೆ ಎನ್ನಲು ಸಾಧ್ಯವಿಲ್ಲ. ಆನ್ಲೈನ್ ಗೇಮ್ ನಲ್ಲಿ ಹಣ ಕಳೆದುಕೊಳ್ತಿರುವವರ ಸಂಖ್ಯೆಯೇ ಈಗಿನ ದಿನಗಳಲ್ಲಿ ಹೆಚ್ಚಿದೆ. ಕೋಟಿ ಕೋಟಿ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದವರಿದ್ದಾರೆ. ಅತಿ ಶೀಘ್ರದಲ್ಲಿ ಕೋಟ್ಯಾಧೀಶರಾಗ್ಬೇಕು ಎನ್ನುವ ಕನಸಿನಲ್ಲಿ ಹಣ ಕಳೆದುಕೊಂಡು ಸಾಲಗಾರರಾಗಬೇಡಿ. ಆನ್ಲೈನ್ ಗೇಮಿಂಗ್ ನಲ್ಲಿ ಹಣ ಹೂಡಿಕೆ ಮಾಡುವ ಮುನ್ನ ನೂರಾರು ಬಾರಿ ಆಲೋಚನೆ ಮಾಡಿ. ಕೈನಲ್ಲಿದ್ದ ಹಣ ಕಳೆದುಕೊಂಡು ಪರದಾಡುವ ಬದಲು ಇದ್ದ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಠೇವಣಿ ಮಾಡೋದು ಉತ್ತಮ.