Asianet Suvarna News Asianet Suvarna News

ಯತ್ನಾಳ, ನಿರಾಣಿ ಪರಸ್ಪರ ಟೀಕೆಯಿಂದ ಪಕ್ಷಕ್ಕೆ ಹಿನ್ನಡೆ; ಅರವಿಂದ ಬೆಲ್ಲದ್

ಪಂಚಮಸಾಲಿ ಸಮಾಜದ ಮುಖಂಡರಾದ ಸಚಿವ ಮುರಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಣ ಪರಸ್ಪರ ಟೀಕೆ, ಟಿಪ್ಪಣೆ, ನಿಂದನೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದ್ದು, ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

Yatnala Nirani criticize each other its not rightsays bellad rav
Author
First Published Jan 18, 2023, 7:23 AM IST

ಹುಬ್ಬಳ್ಳಿ (ಜ.18) : ಪಂಚಮಸಾಲಿ ಸಮಾಜದ ಮುಖಂಡರಾದ ಸಚಿವ ಮುರಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಣ ಪರಸ್ಪರ ಟೀಕೆ, ಟಿಪ್ಪಣೆ, ನಿಂದನೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದ್ದು, ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ- ಸಚಿವರ ಹೇಳಿಕೆಗಳು ಪಂಚಮಸಾಲಿ ಹೋರಾಟದ ಮೇಲೆಯೂ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೇ ಮೀಸಲಾತಿ ವಿಚಾರ ವಿಷಯಾಂತರವಾಗಲಿದೆ. ಹಾಗಾಗಿ ಅವರಿಬ್ಬರೂ ಸ್ವಯಂ ನಿಯಂತ್ರಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಯತ್ನಾಳ್ V/s ನಿರಾಣಿ: ಇಬ್ಬರು ಬಿಜೆಪಿ ನಾಯಕರ ವಾಕ್ಸಮರಕ್ಕೆ ಸಿಎಂ ಗರಂ

ಹರಿಹರ ಸ್ವಾಮೀಜಿ ಮತ್ತು ಜಯಮೃತ್ಯುಂಜಯ ಸ್ವಾಮೀಜಿ ಮಧ್ಯ ಭಿನ್ನಾಭಿಪ್ರಾಯ ಇರುವುದು ಎಲ್ಲರಿಗೂ ಗೊತ್ತಿದೆ. ಪಂಚಮಸಾಲಿ ಸಮಾಜಕ್ಕೆ ಮೀಸಲು ಹೋರಾಟದ ಕ್ರೆಡಿಟ್‌ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸಲ್ಲಬೇಕು. 4ರಿಂದ 5 ವರ್ಷಗಳ ಹಿಂದೆ ಪಂಚಮಸಾಲಿ ಶಬ್ದವೇ ಗೊತ್ತಿರಲಿಲ್ಲ. ಪ್ರಸ್ತುತ ಇಡೀ ದೇಶಕ್ಕೆ ಪಂಚಮಸಾಲಿ ಯಾರು ಎನ್ನುವುದು ಗೊತ್ತಾಗಿದೆ ಎಂದರು.

ಮೀಸಲು ಪ್ರಮಾಣ ಪ್ರಕಟಿಸಲು ಸರ್ಕಾರಕ್ಕೆ ಗಡುವು ವಿಧಿಸುವುದು ಸರಿಯಲ್ಲ. ಇದು ದಿಢೀರ್‌ ನಿರ್ಧಾರ ತೆಗೆದುಕೊಳ್ಳುವುದರಿಂದ ದೂರಗಾಮಿ ಪರಿಣಾಮ ಬೀರುತ್ತದೆ. ಹಾಗಾಗಿ ತಾಳ್ಮೆ ಬೇಕು. ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಾನು ಮುಸ್ಲಿಂ, ದಲಿತರ ವಿರೋಧಿ ಎಂಬುದು ಶುದ್ಧ ಸುಳ್ಳು. ಕೆಲವರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ನಾನು ಮುಸ್ಲಿಂರಲ್ಲಿನ ಬಡವರ ಪರವಾಗಿದ್ದೇನೆ. ಅಂಥವರಿಗೆ ಪ್ರತ್ಯೇಕ ಅನುದಾನ ಒದಗಿಸುವ ಕುರಿತಂತೆ ಮುಸ್ಲಿಂ ಮುಖಂಡರ ನಿಯೋಗದ ಜತೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿದ್ದೇನೆ. ಪಶ್ಚಿಮ ಕ್ಷೇತ್ರದಲ್ಲಿ ನಿರ್ಮಿಸಿರುವ ಮನೆಗಳನ್ನು ದಲಿತರಿಗೆ ನೀಡಲಾಗಿದೆ ಎಂದರು.

ರಾಜಕೀಯದಲ್ಲಿ ಆಯಾ ಪಕ್ಷದವರೇ ಕಾಲೆಳೆಯುವ ಪ್ರವೃತ್ತಿ ಇದೆ. ಹಾಗೆಯೇ ಪಕ್ಷದಲ್ಲಿನ ಹಿತಶತ್ರುಗಳಿಂದ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಪರೋಕ್ಷ ಅಸಮಧಾನ ವ್ಯಕ್ತಪಡಿಸಿದರು. ಕಮಿಷನ್‌ ವಿಚಾರವಾಗಿ ತಿಪ್ಪಾರೆಡ್ಡಿ ಆಡಿಯೋ ಕೇಳಿಲ್ಲ. ರೆಕಾರ್ಡಿಂಗ್‌ ಈಗಷ್ಟೇ ಅಲ್ಲ, ಎಲ್ಲ ಸರ್ಕಾರದಲ್ಲೂ ಇದೆ. ಈವಾಗ ರೆಕಾರ್ಡ್‌ ಮಾಡುವುದು ಹೆಚ್ಚಾಗಿದೆ. ಹಾಗಾಗಿ ವೈರಲ್‌ ಆಗುತ್ತಿವೆ ಎಂದರು.

ಭೈರಿದೇವರಕೊಪ್ಪ ದರ್ಗಾ ಭೂಸ್ವಾಧೀನಕ್ಕೆ ಒಳಪಡುತ್ತದೆ ಎಂದು ಅದಕ್ಕೆ ಪರಿಹಾರ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ. ಅದನ್ನು ತೆರವು ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಪರಿಹಾರ ನೀಡಲಾಗಿದೆ. ಆದರೆ, ಇದೀಗ ಸಿದ್ದರಾಮಯ್ಯ ಎಲೆಕ್ಷನ್‌ ವಿಚಾರವಾಗಿ ನಾಟಕ ಮಾಡುತ್ತಿದ್ದಾರೆ ಎಂದು ಬೆಲ್ಲದ ಕಿಡಿಕಾರಿದರು.

ಚಿಲ್ಲರೆ ವ್ಯಕ್ತಿಗಳ ಬಗ್ಗೆ ಇಂದು ಮಾತನಾಡಲ್ಲಾ, ಮುರುಗೇಶ ನಿರಾಣಿಗೆ ಟಾಂಗ್ ಕೊಟ್ಟ ಬಸನಗೌಡ ಯತ್ನಾಳ

ಮುಖ್ಯಮಂತ್ರಿ ದರ್ಗಾಕ್ಕೆ ಭೇಟಿ ನೀಡಿದ್ದರ ಬಗ್ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರ ಕುರಿತು ಕೇಳಲಾದ ಪ್ರಶ್ನೆಗೆ, ಒಂದು ಸಮಾಜದಲ್ಲಿ ತಪ್ಪು ಭಾವನೆ ಇತ್ತು, ಹಾಗಾಗಿ ಮುಖ್ಯಮಂತ್ರಿಗಳು ಅಲ್ಲಿ ಭೇಟಿ ನೀಡಿದ್ದರು ಎಂದು ಪ್ರತಿಕ್ರಿಯಿಸಿದರು.

26ನೇ ರಾಷ್ಟ್ರೀಯ ಯುವಜನೋತ್ಸವ ಬಹಳ ಯಶಸ್ಸಾಗಿದೆ. ಯಾವ ತೊಂದರೆ ಇಲ್ಲದೆ, ಅಸಮಾಧಾನ ಇಲ್ಲದೆ ಯುವಜನೋತ್ಸವ ಮುಗಿದಿದೆ. ಯುವಜನೋತ್ಸವ ಸಕ್ಸಸ್‌ ಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

Follow Us:
Download App:
  • android
  • ios