Asianet Suvarna News Asianet Suvarna News

ಚಿಲ್ಲರೆ ವ್ಯಕ್ತಿಗಳ ಬಗ್ಗೆ ಇಂದು ಮಾತನಾಡಲ್ಲಾ, ಮುರುಗೇಶ ನಿರಾಣಿಗೆ ಟಾಂಗ್ ಕೊಟ್ಟ ಬಸನಗೌಡ ಯತ್ನಾಳ

ತನ್ನ ವಿರುದ್ದ ಸಚಿವ ನಿರಾಣಿ ವಾಗ್ದಾಳಿ ನಡೆಸಿದ ‌ ವಿಚಾರಕ್ಕೆ ಸಂಬಂಧಿಸಿದಂತೆ ಚಿಲ್ಲರೆ ವ್ಯಕ್ತಿಗಳ ಬಗ್ಗೆ ಸಂಸ್ಕಾರ ಇಲ್ಲದ ವ್ಯಕ್ತಿಗಳ ಬಗ್ಗೆ ಇಂದು ಮಾತನಾಡಲ್ಲಾ ಹಬ್ಬವಿರುವ ಕಾರಣ‌ ಒಳ್ಳೆಯದನ್ನು ಮಾತನಾಡೋಣ ಎಂದು ವಿಜಯಪುರ ‌ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿದ್ದಾರೆ.

Basanagouda patil Yatnal hit back to Murugesh Nirani gow
Author
First Published Jan 15, 2023, 4:23 PM IST

ವಿಜಯಪುರ (ಜ.15): ಜಿಲ್ಲೆಯ ಕಾರು ಚಾಲಕ ಸಾವಿನ ಬಗ್ಗೆ ಸಚಿವ ಮುರುಗೇಶ ನಿರಾಣಿ ಹೇಳಿಕೆ ಹಿನ್ನೆಲೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು  ಸಿಎಂ ಬಸವರಾಜ್ ಬೊಮ್ಮಾಯಿಗೆ ಭಾನುವಾರ ಪತ್ರ ಬರೆದಿದ್ದಾರೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಆರೋಪ ಮಾಡಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲಿ. ಇಂತಹ ಆರೋಪದಿಂದ ಸರಕಾರದ ಬಗ್ಗೆ ತಪ್ಪು ಸಂದೇಶ ಬರುತ್ತದೆ. ದೇಶದ ಜನತೆಗೆ ಇದರ ಬಗ್ಗೆ ಸತ್ಯಾಸತ್ಯತೇ ಗೊತ್ತಾಗಬೇಕಿದೆ. 24 ಗಂಟೆಯ ಒಳಗಾಗಿ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು. ಅಲ್ಲದೇ, ಸುಳ್ಳು ಆರೋಪ ಮಾಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

ನನ್ನ ಟಿಕೆಟ್‌ ಕೊಡೋದು ಸಿಎಂ ಬೊಮ್ಮಾಯಿ ಕೈಯಲ್ಲಿಲ್ಲ: ಶಾಸಕ ಯತ್ನಾಳ

ವಿಜಯಪುರ ‌ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ದ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದ ‌ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ‌ನಗರದಲ್ಲಿ‌ ಯತ್ನಾಳ ಪ್ರತಿಕ್ರಿಯೆ ನೀಡಿ ಸಂಕ್ರಮಣ ಹಬ್ಬದ ಸಂಭ್ರಮ ಇದೆ. ಇಂದು ಒಳ್ಳೆಯ ಸುದ್ದಿಗಳನ್ನು ಮಾತನಾಡುವ  ಸಂಕ್ರಮಣ ಬಹಳ ಸಂತೋಷವಾಗಿದೆ. ನಮ್ಮ ಪಕ್ಷದ ಹೈಕಮಾಂಡ್ ಬೆಳಗ್ಗೆ ಕರೆ ಮಾಡಿ ಮೀಸಲಾತಿ ವಿಚಾರದಲ್ಲಿ ಸಭೆ ಕರೆಯುವುದಾಗಿ ಹೇಳಿದ್ದಾರೆ. ನಿಮ್ಮ ಬೇಡಿಕೆ ಈಡೇರಿಸಲು ಹೈಕಮಾಂಡ್ ಅಸ್ತು ಎಂದಿದೆ ಎಂದ ಯತ್ನಾಳ ಕಳೆದ ಎರಡು ವರ್ಷಗಳಿಂದ ಕೂಡಲಸಂಗಮ ಶ್ರೀಗಳ ಪಾದಯಾತ್ರೆಯ ಪ್ರತಿಫಲ. ಮಕರ ಸಂಕ್ರಮಣದ ಉತ್ತರಾಯಣದ ಶುಭ ಪ್ರಸಂಗದಲ್ಲಿ ನಿಲುವು ತೆಗೆದುಕೊಂಡಿದೆ. ಆದಷ್ಟು ಬೇಗ ಕೂಡಲಸಂಗಮ ಶ್ರೀಗಳ  ನೇತೃತ್ವದಲ್ಲಿ ಕೇಂದ್ರ ನಾಯಕರ ಭೇಟಿಗಾಗಿ ಹೋಗುತ್ತಿದ್ದೇವೆ. ಶೀಘವೇ ಒಳ್ಳೆಯ ಸುದ್ದಿಯನ್ನು ಕೇಂದ್ರ ಕೊಡಲಿದೆ. ಕೆಲ ಚಿಲ್ಲರೆ ಹೇಳಿಕೆಗೆ  ಚಿಲ್ಲರೆ ವ್ಯಕ್ತಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದು ಎಂದು ಕೇಂದ್ರದ ನಾಯಕರು ಸೂಚನೆ ನೀಡಿದ್ದಾರೆ. ಎಲ್ಲ ಪಕ್ಷ ಗಮನಿಸಿದೆ ಎಂದು ಹೇಳಿದ್ದಾರೆ.

Panchamasali: ಕಾರ್‌ ಡ್ರೈವರ್‌ ಹತ್ಯೆ ಆರೋಪ: ಸಿಬಿಐ ತನಿಖೆಗೆ ವಹಿಸುವಂತೆ ಯತ್ನಾಳ್‌ ಸವಾಲು

ಚಿಲ್ಲರೆ ವ್ಯಕ್ತಿಗಳ ಬಗ್ಗೆ ಸಂಸ್ಕಾರ ಇಲ್ಲದ ವ್ಯಕ್ತಿಗಳ ಬಗ್ಗೆ ಇಂದು ಮಾತನಾಡಲ್ಲಾ ಎಂದ ಯತ್ನಾಳ, ಹಬ್ಬವಿರುವ ಕಾರಣ‌ ಒಳ್ಳೆಯದನ್ನು ಮಾತನಾಡೋಣ. ಒಳ್ಳೆ ಸುದ್ದಿ ಬಂದಿದೆ. ಮೀಸಲಾತಿ ವಿಚಾರದಲ್ಲಿ ಹೈಕಮಾಂಡ್ ಒಪ್ಪಿದೆ. ಮೀಸಲಾತಿ ವಿಚಾರದಲ್ಲಿ ಕೇಂದ್ರದ ಹೈಕಮಾಂಡ್ ಹಾಗೂ ಪಕ್ಷ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಹೇಳಿದ್ದಾರೆ ಎಂದು ಶಾಸಕ ಯತ್ನಾಳ ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios