ಬೆಂಗಳೂರು, (ಡಿ.11): ಬೈ ಎಲೆಕ್ಷನ್‌ನಲ್ಲಿ ಬಿಜೆಪಿ 15ರ ಪೈಕಿ 12ರಲ್ಲಿ ಗೆದ್ದು ಬೀಗಿದೆ. ಆದ್ರೆ, ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಹಾಗೂ ಹುಣಸೂರಿನಲ್ಲಿ ಎಚ್.ವಿಶ್ವನಾಥ್‌ಗೆ ಸೋಲಾಗಿದೆ. ಇದು ಬಿಎಸ್‌ವೈಗೆ ಕೊಂಚ ಬೇಸರತರಿಸಿದೆ.

ಮೈತ್ರಿ ಸರ್ಕಾರದಿಂದ ಹೊರಬಂದು ಯಡಿಯೂರಪ್ಪ ಸಿಎಂ ಆಗಲು ಕಾರಣವಾಗಿರುವ ಈ ಇಬ್ಬರನ್ನೂ ಕೊಟ್ಟ ಮಾತಿನಂತೆ ಸಚಿವರನ್ನಾಗಿ ಮಾಡಲೇಕೆಂದು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಗೆಲುವಿನೊಂದಿಗೆ ಸವದಿ ರಾಜಕೀಯ ಹಾದಿ ಸುಗಮ..?

ಈ ಹಿನ್ನೆಲೆಯಲ್ಲಿ ಸೋತಿರುವ ಇಬ್ಬರನ್ನೂ ಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಭಾಗ್ಯ ಕಲ್ಪಿಸಲು ಬಿಎಸ್‌ವೈ ಚಿಂತನೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.  ಈ ಬಗ್ಗೆ ಬಿಎಸ್‌ವೈ, ಎಂಟಿಬಿ ಜತೆ ಚರ್ಚೆ ಮಾಡಿದ್ದು, ಯಾವುದೇ ಕಾರಣಕ್ಕೂ ನಿಮ್ಮನ್ನ ಕೈಬಿಡಲ್ಲ ಎಂದು ಭರವಸೆ ನೀಡಿದ್ದಾರೆ.

ಮತ್ತೊಂದೆಡೆ ವಿಧಾನಪರಿಷತ್ ಹುದ್ದೆ ಒಂದೂ ಖಾಲಿ ಇಲ್ಲ. ಇದರ ನಡುವೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೂ ಕೂಡ ವಿಧಾನಪರಿಷತ್‌ ಮೂಲಕ ಡಿಸಿಎಂ ಹುದ್ದೆಯಲ್ಲಿ ಮುಂದುವರಿಸುವಂತೆ ದುಂಬಾಲು ಬಿದ್ದಿದ್ದಾರೆ. 

ಸಂಪುಟ ವಿಸ್ತರಣೆ : ಮೂವರು ಬಿಜೆಪಿ ಹಿರಿಯರಿಗೂ ಸಚಿವ ಸ್ಥಾನ

ಇನ್ನು ರಾಣೇಬೆನ್ನೂರು ಕ್ಷೇತ್ರವನ್ನು ತ್ಯಾಗ ಮಾಡಿರುವ ಆರ್.ಶಂಕರ್‌ಗೂ ಕೂಡ ವಿಧಾನ ಪರಿಷತ್‌ ಮೂಲಕ ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಈಗಾಗಲೇ ಘೋಷಿಸಿದ್ದಾರೆ. ಇದರಿಂದ ಯಡಿಯೂರಪ್ಪ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ.

ಇಬ್ಬರು ಪರಿಷತ್‌ ಸದಸ್ಯರ ತಲೆದಂಡ
ಹೌದು...ಇಬ್ಬರು ಹಾಲಿ ಸದಸ್ಯರಿಂದ ರಾಜೀನಾಮೆ ಕೊಡಿಸಿ ಎಂಟಿಬಿ-ವಿಶ್ವನಾಥ್‌ ಅವರನ್ನ ವಿಧಾನಸೌಧಕ್ಕೆ ಕರೆತರಲು ಯಡಿಯೂರಪ್ಪ ನಿಶ್ಚಯಿಸಿದ್ದಾರೆ.

ಸೋತ MTB ಮನೆಗೆ BSY: BJP ನಾಯಕನ ವಿರುದ್ಧ ಕ್ರಮಕ್ಕೆ ಮಹತ್ವದ ಚರ್ಚೆ

ಈ ಬಗ್ಗೆ ಕೆಲ ಪರಿಷತ್ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಒಂದು ವೇಳೆ ಇಬ್ಬರು ವಿಧಾನಪರಿಷತ್ ಸದಸ್ಯರು ರಾಜೀನಾಮೆ ನೀಡಿದ್ರೆ, ಆ ಸ್ಥಾನಕ್ಕೆ ಎಂಟಿಬಿ ಹಾಗೂ ವಿಶ್ವನಾಥ್‌ಗ್ ಫಿಕ್ಸ್. ಆದ್ರೆ,  ಇನ್ನುಳಿದ ಶಂಕರ್‌ ಮತ್ತು ಲಕ್ಷ್ಮಣ ಸವದಿ ಕಥೆ...?

ಬಿಎಸ್‌ವೈ ಪ್ಲಾನ್ ಸಕ್ಸಸ್ 
ಮೂಲಗಳಿಂದ ತಿಳಿದುಬಂದ ಮಾಹಿತಿಯಂತೆ ತೇಜಸ್ವಿನಿಗೌಡ ಮತ್ತು ಎನ್‌.ರವಿಕುಮಾರ್‌ ಅವರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಬಿಎಸ್‌ವೈ ಅವರ ಮನವಿಗೆ ಇವರಿಬ್ಬರು ತಮ್ಮ ಸ್ಥಾನವನ್ನು ತ್ಯಜಿಸಲು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.

ಒಂದು ವೇಳೆ ಬಿಎಸ್‌ವೈ ಅಂದುಕೊಂಡಿದೆಲ್ಲ ಆದರೆ, ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ವಿಧಾನಪರಿಷತ್ ಮೂಲಕ ನೂತನ ಶಾಸಕರ ಜತೆಯಲ್ಲಿ ಮಿನಿಸ್ಟರ್‌ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಶೀಘ್ರ ಸಂಪುಟ ವಿಸ್ತರಣೆ : ಯಾರಿಗೆ ಒಲಿಯುತ್ತೆ ಯಾವ ಖಾತೆ?

ಬಿಜೆಪಿಗೊಂದು ಬೋನಸ್ ಪಾಯಿಂಟ್
ಬೈ ಎಲೆಕ್ಷನ್‌ನಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದು ಬೀಗಿರುವ ಬಿಜೆಪಿ ಒಂದು ಬೋನಸ್ ಸ್ಥಾನ ಸಿಕ್ಕಿದೆ. ಶಿವಾಜಿನಗರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದು, ಅವರು ಇದೀಗ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಬೇಕಿದೆ. ಇದರಿಂದ ರಿಜ್ವಾನ್‌ ಅವರಿಂದ ಖಾಲಿಯಾಗುವ ಸ್ಥಾನವೂ ಸಹ ಸಂಖ್ಯಾಬಲದಲ್ಲಿ ಬಿಜೆಪಿಗೆ ಒಲಿಯಲಿದೆ. ಈ ಒಂದು ಸ್ಥಾನಕ್ಕೆ ಆರ್.ಶಂಕರ್‌ ಅವರನ್ನು ನೇಮಿಸಿ ಸಂಪುಟಕ್ಕೆ ಸೇರಿಸಿಕೊಳ್ಳುವ ಚಿಂತನೆಯಲ್ಲಿ ಬಿಎಸ್‌ವೈ ಇದ್ದಾರೆ. 

ಲಕ್ಷ್ಮಣ ಸವದಿ ಅತಂತ್ರ
ನಿಜಕ್ಕೂ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಹುದ್ದೆ ಸಿಕ್ಕಾಗಿನಿಂದಲೂ ಅವರು ಅತಂತ್ರದಲ್ಲಿಯೇ ಕಾಲಕಳೆಯುವಂತಾಗಿದೆ. ಡಿಸಿಎಂ ಹುದ್ದೆಯಲ್ಲಿ ಮುಂದುವರಿಯಲು 6 ತಿಂಗಳೊಳಗೆ ಪರಿಷತ್‌ಗೆ ಆಯ್ಕೆಯಾಗಬೇಕಿದೆ. ಆದ್ರೆ, ಈಗಾಗಲೇ ಎಲ್ಲಾ ಪರಿಷತ್ ಸ್ಥಾನಗಳ ಮೂವರು ಅನರ್ಹರಿಗೆ ಫಿಕ್ಸ್ ಅಂತ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿಗೆ ಸಂಕಷ್ಟ ಶುರುವಾಗಿದ್ದು, ಉಪಮುಖ್ಯಮಂತ್ರಿ ಹುದ್ದೆಗೆ ಯಾವಾಗ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತೋ ಗೊತ್ತಿಲ್ಲ.

ನೂತನ ಶಾಸಕರಿಗೆ ಸಚಿವ ಸಂಪುಟದಲ್ಲಿ ಮಣೆ, ಉಳಿದವರಿಗೆ ಬೇರೆ ಹೊಣೆ?

ಹನುಮನ ಬಾಲದಂತೆ ಬೆಳೆದ ಆಕಾಂಕ್ಷಿಗಳ ಪಟ್ಟಿ
ಮಾತುಕೊಟ್ಟಂತೆ ಇಷ್ಟಕ್ಕೆ ಯಡಿಯೂರಪ್ಪನವರ ಒಂದು ಅಧ್ಯಾಯ ಮುಗಿದಂತೆ. ಆದ್ರೆ, ಒಂದು ಹೆಜ್ಜೆ ಮುಂದೆ ಹೋಗಿ ನೋಡಿದ್ರೆ, ಮಂತ್ರಿ ಸ್ಥಾನಕ್ಕಾಗಿ ಮೂಲ ಬಿಜೆಪಿ ಶಾಸಕರು ಫುಲ್‌ ರೇಸ್‌ನಲ್ಲಿದ್ದಾರೆ. ಹಿರಿಯ ಶಾಸಕ ಉಮೇಶ್ ಕತ್ತಿ, ರಾಮನಾಥ್, ಎಂ.ಪಿ.ರೇಣುಕಾಚಾರ್ಯ, ನಡಹಳ್ಳಿ, ಅರವಿಂದ್ ಲಿಂಬಾವಳಿ, ಗೂಳಿಹಟ್ಟಿ ಶೇಖರ್  ನಮಗೂ ಮಿನಿಸ್ಟರ್ ಬೇಕೆಂದು ಮೊದಲ ಸಾಲಿನಲ್ಲಿ ನಿಂತಿದ್ದಾರೆ.

ಒಟ್ಟಿನಲ್ಲಿ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಗೆದ್ದಾಯ್ತು. ಯಡಿಯೂರಪ್ಪನವರ ಕುರ್ಚಿ ಸಹ ಸೇಫ್‌ ಆಯ್ತು. ಆದ್ರೆ, ಮತ್ತೊಮ್ಮೆ ಸಂಪುಟ ವಿಸ್ತರಣೆಯಲ್ಲಿ ಯಾರನ್ನ ಸೇರಿಸಿಕೊಳ್ಳಬೇಕು..? ಯಾರನ್ನ ಬಿಡಬೇಕು..? ಎನ್ನುವುದು ಮಾತ್ರ ಬಿಎಸ್‌ವೈಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.