ನಟ ದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಂತೆ ಅವರ ಪ್ರಾಣಕ್ಕೆ ಬೆದರಿಕೆ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಡಿಜಿಪಿಗೆ ಪತ್ರ ಬರೆದಿದ್ದಾರೆ. ಆದರೆ, ತಾನು ಸರಳ ರಾಜಕಾರಣಿ ಎಂದು ಹೇಳಿಕೊಂಡಿರುವ ವಿಜಯ್, ತಮಗೆ ನೀಡಲಾಗಿದ್ದ ಹೆಚ್ಚುವರಿ ಭದ್ರತೆಯನ್ನು ನಿರಾಕರಿಸಿದ್ದಾರೆ. ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ದಳಪತಿ ವಿಜಯ್ ತಮಿಳುನಾಡು ಪಟ್ಟಾಭಿಶೇಷಕಕ್ಕೆ ಹೊಸ ಬಟ್ಟೆ ಸಿದ್ಧಮಾಡ್ಕೊಂಡು ಕಾಯ್ತಾ ಇದ್ದಾರೆ. ಆದ್ರೆ ಅದ್ಯಾವ ಗ್ರಹಚಾರವೋ ಏನೋ..? ವಿಜಯ್ ಕನಸು ಇನ್ನು ನನಸಾಗಿಲ್ಲ. ಅಷ್ಟರಲ್ಲಾಗಲೇ ದಳಪತಿ ದೇಹಕ್ಕೆ ಕುತ್ತು ಬಂದೊದಗಿದೆ. ಹಾಗಾದ್ರೆ ಕಾಲಿವುಡ್ ಮಾಸ್ಟರ್ ವಿಜಯ್ಗಿರೋ ಆ ಕಂಠಕ ಏನು?

ಪಟ್ಟಾಭಿಷೇಕ ಮೊದಲೇ ದಳಪತಿ ಪ್ರಾಣಕ್ಕೆ ಬಂದಿದೆಯಾ ಆಪತ್ತು?
ತಮಿಳುನಾಡು ಈಗ ರಾಜಕೀಯ ರಣರಂಗ ಆಗಿದೆ. ಇಷ್ಟು ದಿನ ಎಲೆಕ್ಷನ್ ಗೆಲ್ಲೋಕೆ ಮೇಲಾಟ ಆಡುತ್ತಿದ್ದವರೆಲ್ಲಾ ಈಗ ಅಧಿಕಾರಕ್ಕೇರಲು ಚೆಲ್ಲಾಟವಾಡುತ್ತಿದ್ದಾರೆ. ಹೊಸ ಬಿಲ್ಲು ಬಾಣ ರೆಡಿ ಮಾಡ್ಕೊಂಡು ಯಾವಾಗ ಯಾರಿಗೆ ಬಿಡೋದು ಅಂತ ಕಾಯ್ತಾ ಇದ್ದಾರೆ. ಆದ್ರೆ ಆಗಿದ್ದಾಗ್ಲಿ ನಾನೇ ಸರ್ಕಾರ ರಚನೆ ಮಾಡುತ್ತೇನೆ ಅಂತ ವಿಜಯ್ ಮುನ್ನುಗ್ಗಿದ್ದಾರೆ. ಅಷ್ಟರಲ್ಲಾಗಲೇ ದಳಪತಿ ಫ್ಯಾನ್ಸ್ ದಂಗಾಗೋ ವಿಷ್ಯವೊಂದು ಹೊರ ಜಗತ್ತಿಗೆ ಬಿಕರಿ ಆಗಿದೆ. ಅದೇ ವಿಜಯ್ ಪ್ರಾಣಕ್ಕೆ ಆಪತ್ತಿದೆ ಅನ್ನೋ ವಿಚಾರ.
ಹೌದು, ನಟ ವಿಜಯ್ ಈಗ ಟಿವಿಕೆ ಪಕ್ಷದ ಜನನಾಯಕ. ಜನ ಮೆಚ್ಚಿದ ರಾಜಕಾರಣಿ ಆಗಿರೋ ವಿಜಯ್ ಆ್ಯಕ್ಟರ್ ಆಗಿದ್ದಾಗ ಇಷ್ಟು ತ್ರಟ್ ಇತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ರಾಜಕಾರಣಿ ಆದ್ಮೇಲೆ ವಿಜಯ್ ಪ್ರಾಣಕ್ಕೇ ಕುತ್ತು ಬರುತ್ತೆ ಅನ್ನೋ ಮಾತುಗಳು ತಮಿಳು ನಾಡಿನಾಧ್ಯಂತೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದು ಗೊತ್ತಾಗಿದ್ದು ತಮಿಳು ನಾಡು ಕಾಂಗ್ರೇಸ್ ಮುಖಂಡ ಡಿಜಿಪಿಗೆ ಬರೆದ ಪತ್ರದಿಂದ.
ದಳಪತಿ ವಿಜಯ್ಗೆ ರಕ್ಷಣೆ ಕೊಡಿ. ಡಿಜಿಪಿಗೆ ಪತ್ರ ಬರೆದ ಕಾಂಗ್ರೇಸ್!
ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೆ ಎಲ್ಲಾ ತಯಾರಿ ಮಾಡಿದ್ದಾರೆ. ಆದ್ರೆ 118 ಕಂಠಕ ವಿಜಯ್ರನ್ನ ಕಾಡುತ್ತಿದೆ. ಆದರೆ .. ಇದೇ ಸಮಯದಲ್ಲಿ ವಿಜಯ್ ಪ್ರಾಣಕ್ಕೆ ಬೆದರಿಕೆ ಇದೆ ಅಂತ ಕಾಂಗ್ರೆಸ್ ಪಾಳಯಯಕ್ಕೆ ಕಾಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮಿಳುನಾಡಿನ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ವಿಜಯ್ ಪ್ರಾಣಕ್ಕೆ ಭಯ ಇದೆ ರಕ್ಷಣೆ ಕೊಡಿ ಎಂದು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.
ನನಗೆ ಭದ್ರತೆ ಬೇಡ , ನಾನು ಸರಳ ರಾಜಕಾರಣಿ-ವಿಜಯ್
ದಳಪತಿ ವಿಜಯ್ ಪ್ರಚಾರಕ್ಕೆ ಹೋದಾಗ ಸೆಕ್ಯೂರಿಟಿ ಹೆಚ್ಚಿಸಿಕೊಂಡಿದ್ರು. ವಿಜಯ್ ಅಕ್ಕ ಪಕ್ಕ 25 ಜನ ಸೆಕ್ಯೂರಿಟಿ ಗಾರ್ಡ್ಗಳಿದ್ರು. ವಿಜಯ್ ಎಲೆಕ್ಷನ್ ಗೆದ್ದ ಮೇಲೆ ಶಿಷ್ಟಾಚಾರದ ಪ್ರಕಾರ ಭದ್ರತೆ ಕೊಡಲಾಗಿತ್ತು. ಆದ್ರೆ ವಿಜಯ್ ಸ್ವಯಂ ಪ್ರೇರಿತವಾಗಿ ಭದ್ರತೆ ನಿರಾಕರಿಸಿದ್ದಾರೆ. ನಾಲ್ಕು ಬೆಂಗಾವಲು ವಾಹನ ಬೇಡ ಎಂದಿದ್ದಾರಂತೆ ವಿಜಯ್. ಹೀಗಾಗಿ ಪೊಲೀಸ್ ಇಲಾಖೆ ಸೆಕ್ಯುರಿಟಿಯನ್ನ ಹಿಂಪಡೆಯಲಾಗಿದೆ.
ದಳಪತಿ ವಿಜಯ್ ತಮಿಳು ಸಿನಿಮಾ ಜನರ ಆರಾಧ್ಯ ದೈವ ಆಗಿದ್ದಾರೆ. ವಿಜಯ್ಗೆ ಕೋಟ್ಯಾನು ಕೋಟಿ ಅಭಿಮಾನಿ ಬಳಗ ಇದೆ. ಸೆಲೆಬ್ರಿಟಿ ಆಗಿರೋ ಕಾರಣ ವಿಜಯ್ರನ್ನ ಅಪ್ಪಿ ಮುದ್ದಾಡೋಕೆ ಮುನ್ನುಗ್ಗೋರು ಲಕ್ಷಾಂತರ ಜನ. ಆದ್ರೆ ವಿಜಯ್ ಇನ್ನು ಸರ್ಕಾರ ರಚನೆ ಮಾಡಿಲ್ಲ. ಅದಾದ ನಂತರ ಭಧ್ರತೆ ಬಗ್ಗೆ ವಿಜಯ್ ಹೇಳುತ್ತಾರೆ ಅಂತ ಟಿವಿಕೆ ಹೇಳಿಕೊಂಡಿದೆ. ಒಟ್ನಲ್ಲಿ ದಳಪತಿ ವಿಜಯ್ ಸರಳ ರಾಜಕಾರಣಿ ಅಂತ ತೋರಿಸಿಕೊಳ್ಳೋ ಮಾರ್ಗ ಹಿಡಿದಂತೆ ಕಾಣುತ್ತಿದೆ.


