ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಪರದಾಡಿ, ಕೊನೆಗೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ.
ದಳಪತಿ ವಿಜಯ್ ಇತಿಹಾಸ ಸೃಷ್ಟಿಸಿದ್ದಾರೆ. ಎರಡು ವರ್ಷ ಕಂಡ ಕನಸು ಈಗ ನೆರವೇರಿದೆ. ಜನ ನಾಯಗನ್ ವಿಜಯ್ ತಮಿಳುನಾಡು ದಂಡ ನಾಯಕ ಆಗಿದ್ದಾರೆ. ಈ ಬಗೆಗಿನ ಒಂದು ವರದಿ ಇಲ್ಲಿದೆ ನೋಡಿ.

ಅಂತು ಇಂತು ನೆರವೇರಿತು ದಳಪತಿ ವಿಜಯ್ ದೊಡ್ಡ ಆಸೆ!
ತಮಿಳುನಾಡಿಗೆ ಕೊನೆಗೂ ದಂಡನಾಯಕ ನಾಮಕರಣ ಆಗುತ್ತಿದೆ. ಬಹುಮತ ಪಡೆದ ದೊಡ್ಡ ಪಾರ್ಟಿ ಅನ್ನೋ ಹೆಗ್ಗಳಿಕೆ ಪಡೆದಿದ್ದ ನಟ ವಿಜಯ್ರ ಟಿವಿಕೆ ಅಧಿಕಾರದ ಗದ್ಧುಗೆ ಏರೋ ಸಮಯ ಮಂದಿದೆ. ಮತ ಎಣಿಕೆ ಮುಗಿದು ನಾಲ್ಕು ದಿನ ಕಳೆದಿದ್ರು ಸರ್ಜಾರ ರಚನೆಗೆ ಒದ್ದಾಡುತ್ತಿದ್ದ ವಿಜಯ್ ಈಗ ಎದ್ದು ಬಿದ್ದು ಹಂಗು ಹಿಂಹು ಹೆಂಗೋ ಮಾಡಿ ಮ್ಯಾಜಿಕ್ ನಂಬರ್ನ ತಂದು ತಮಿಳುನಾಡು ಗವರ್ನರ್ ಎದುರಿಟ್ಟು ಮೀಸೆ ತಿರುವಿದ್ದಾರೆ.
118 ನಂಬರ್ ಗೇಮ್ ರಹಸ್ಯ ಭೇದಿಸಿದ್ದು ಹೇಗೆ ವಿಜಯ್?
ಸೋಮವಾರದ ದಿನ ಪಂಚರಾಜ್ಯ ಚುನಾವಣೆಯ ಫಲಿತಾಂಶ ಬಂದಿದ್ದು, ತಮಿಳುನಾಡಿನಲ್ಲಿ ವಿಜಯ್ ನಾಯಕತ್ವದ ಟಿವಿಕೆ ದಿಗ್ವಿಜಯ ಸಾಧಿಸಿದ್ದು ಗೊತ್ತೇ ಇದೆ. ಅದ್ರಲ್ಲೂ ದಶಕಗಳ ಕಾಲ ನಿರಂತರವಾಗಿ ತಮಿಳುನಾಡನ್ನ ಆಳ್ತಾ ಬಂದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳ್ಳಿ, ಟಿವಿಕೆ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮಿತ್ತು.
ವಿಜಯ್ , ಟಿವಿಕೆ ಪಕ್ಷವನ್ನ ಹುಟ್ಟಿಹಾಕಿದ್ದೇ ಜಸ್ಟ್ ಎರಡು ವರ್ಷಗಳ ಹಿಂದೆ. ಹೀಗೆ ಬರೀ ಎರಡು ವರ್ಷಗಳ ಹಿಂದೆ ಹುಟ್ಟಿದ ಪಕ್ಷ, ಮೊದಲ ಚುನಾವಣೆ ಎದುರಿಸಿದ ಪಕ್ಷ. ದಶಕಗಳ ಇತಿಹಾಸವುಳ್ಳ ದ್ರಾವಿಡ ಪಕ್ಷಗಳನ್ನ ಮಣಿಸಿದ್ದು ರಾಜಕೀಯ ಪಂಡಿತರನ್ನೂ ಶಾಕ್ ಆಗುವಂತೆ ಮಾಡಿತ್ತು. ಈಗ ಸಿಎಂ ಪಟ್ಟಕ್ಕೇ ಏರಿದ್ದಾರೆ ವಿಜಯ್.
ಟಿವಿಕೆಯ ಈ ಅಮೋಘ ವಿಜಯದ ಹಿಂದೆ ಇದ್ದಿದ್ದು ಒನ್ ಌಂಡ್ ಓನ್ಲಿ ವಿಜಯ್... ಹೌದು ದಳಪತಿ ವಿಜಯ್ ನಾಮಬಲ ಮತ್ತು ತಾರಾಬಲವೇ ಟಿವಿಕೆಯ ವಿಜಯಕ್ಕೆ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸೇಮ್ ಸಿನಿಮಾ ಸ್ಟೈಲ್ನಲ್ಲೇ ಡೈಲಾಗ್ ಹೊಡೆದೇ ತಮಿಳುನಾಡನ್ನ ಗೆದ್ರು ವಿಜಯ್.
ವಿಜಯ್ ಚುನಾವಣೆಯನ್ನೇನೋ ಫಿಲ್ಮಿ ಸ್ಟೈಲ್ನಲ್ಲಿ ಗೆದ್ದುಬಿಟ್ರು. ಆದ್ರೆ ವಿಜಯ್ ಪಕ್ಷ ಗೆದ್ದಿದ್ದು 108 ಸ್ಥಾನಗಳಲ್ಲಿ. ಅದ್ರಲ್ಲಿ ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರಿಂದ ಅವರ ಬಳಿಯ ಶಾಸಕರ ಸಂಖ್ಯೆ 107. ಆದ್ರೆ ತಮಿಳುನಾಡಿನಲ್ಲಿ ಸರ್ಕಾರ ರಚಿಸೋದಕ್ಕೆ ಬೇಕಿದ್ದ ಮ್ಯಾಜಿಕ್ 118. ಇದನ್ನ ಗಳಿಸೋಕೆ ವಿಜಯ್ ಅಕ್ಷರಶಃ ಪರದಾಡಿ ಹೋಗಿದ್ದು ಸುಳ್ಳಲ್ಲ.
ಮೊದಲಿಗೆ ಕಾಂಗ್ರೆಸ್ , ಡಿಎಂಕೆ ಮೈತ್ರಿಯಿಂದ ಹೊರಬಂದು ಟಿವಿಕೆ ಬೆಂಬಲಿಸೋದಾಗಿ ಘೋಷಿಸಿತು. ಕಾಂಗ್ರೆಸ್‌ನ ಐದು ಸದಸ್ಯರ ಬೆಂಬಲ ಪತ್ರ ಸಿಕ್ತಾನೆ , ವಿಜಯ್ ರಾಜ್ಯಪಾಲರನ್ನ ಭೇಟಿ ಮಾಡಿ ಸರ್ಕಾರ ರಚಿಸೋಕೆ ಅವಕಾಶ ಕೇಳಿದ್ರು. ರಾಜ್ಯಪಾಲರು ಆಹ್ವಾನ ಕೊಡ್ತಾರೆ ಗುರುವಾರವೇ ಪ್ರಮಾಣ ವಚನ ಸ್ವೀಕರಿಸಬೇಕು ಅಂತ ವಿಜಯ್ ಸಜ್ಜಾಗಿ ನಿಂತಿದ್ರು, ಆದ್ರೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ದಳಪತಿಯ ಪತ್ರವನ್ನ ರಿಜೆಕ್ಟ್ ಮಾಡಿದ್ರು. ಕೊನೆಗೆ ಹಂಗೋ ಹಿಂಗೋ ಹೆಂಗೋ ಒಂದ್ ಮಾಡಿ ವಿಜಯ್ ಮ್ಯಾಜಿಗ್ ನಂಬರ್ ತಂದೇ ಬಿಟ್ರು. ಕಾಂಗ್ರೇಸ್, ವಿಸಿಕೆ, ಎಡಪಕ್ಷಗಳು ಸೇರಿ 120 ಸಂಖ್ಯಾಬಲ ತೋರಿಸಿದ್ರು.


