ED raid on I-PAC Kolkata : ತೃಣಮೂಲ ಕಾಂಗ್ರೆಸ್‌ನ ಸಲಹಾ ಸಂಸ್ಥೆ ಐ-ಪ್ಯಾಕ್ ಮೇಲಿನ ಇ.ಡಿ. ದಾಳಿಗೆ ಅಡ್ಡಿಪಡಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ

ನವದೆಹಲಿ: ತೃಣಮೂಲ ಕಾಂಗ್ರೆಸ್‌ನ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿದಾಗ ಮಧ್ಯಪ್ರವೇಶಿಸಿ, ದಾಳಿಗೆ ಅಡ್ಡಿ ಮಾಡಿದ್ದ ಪಕ್ಷದ ನಾಯಕಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇ.ಡಿ. ದಾಖಲಿಸಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ಪೀಠ, 'ಒಂದು ವೇಳೆ ನೀವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಬೇರಿನ್ಯಾವುದೋ ಪಕ್ಷದ ಸರ್ಕಾರ ರಾಜ್ಯದಲ್ಲಿದ್ದರೆ ಅವರು ಕೂಡ ನಿಮ್ಮಂತೆಯೇ ವರ್ತಿಸಿದರೆ ಏನಾಗಬಹುದು? ಎಂದು ಖಾರವಾಗಿ ಪ್ರಶ್ನಿಸಿದೆ.

ಇದನ್ನೂ ಓದಿ: ಇರಾನ್ ತನಗೆ ದುಬಾರಿ ಮೊತ್ತದ ಹರ್ಮುಜ್ ಉಡುಗೊರೆ ನೀಡಿದೆ ಎಂದ ಟ್ರಂಪ್

ಅಲ್ಲದೆ, ಇ.ಡಿ.ಅಧಿಕಾರಿಗಳಿಗೆ ದಾಳಿ ನಡೆಸುವ ಅಧಿಕಾರ ಇಲ್ಲವೇ? ಇ.ಡಿ. ಅಧಿಕಾರಿಗಳು ಎಂబ ಮಾತ್ರಕ್ಕೆ ಅವರು ಭಾರತೀಯ ಪ್ರಜೆಗಳಾಗುವ ಹಕ್ಕು ಕಳೆದುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದೆ. ಅಕ್ರಮ ಹಣ ವರ್ಗಾವಣೆ ಆರೋಪ ಮೇರೆಗೆ ಐಪ್ಯಾಕ್ ಸಂಸ್ಥೆಯ ಕೋಲ್ಕತಾ ಕಚೇರಿ ಮೇಲೆ ಜನವರಿಯಲ್ಲಿ ಇ.ಡಿ. ನಡೆಸಿದ ದಾಳಿ ವೇಳೆ ಮಮತಾ ಬ್ಯಾನರ್ಜಿ ಹಾಗೂ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆಂದು ಜಾರಿ ನಿರ್ದೇಶನಾಲಯವು ಆರೋಪಿಸಿತ್ತು. ಈ ಪ್ರಕರಣದಲ್ಲಿ ಕೆಲ ಇ.ಡಿ. ಅಧಿಕಾರಿಗಳು ವೈಯಕ್ತಿಕವಾಗಿಯೂ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ಮಮತಾ ಬ್ಯಾನರ್ಜಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: ಟ್ರಂಪ್ 5 ದಿನಗಳ ಕದನ ವಿರಾಮ ಘೋಷಣೆ ಬೆನ್ನಲ್ಲೇ ಅವರು ಕಣ್ಣು ತೆಗೆದರೆ ನಾವು ತಲೆ ತೆಗೀತೀವಿ ಎಂದ ಇರಾನ್