ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಅಮೆರಿಕ ಪ್ರವಾಸ, ಸಿಎಂ ಬದಲಾವಣೆ, ಮತ್ತು ಸಂಪುಟ ಪುನರ್‌ರಚನೆ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮತ್ತೆ ಮಾತನಾಡಿದ್, ಡಾ.ಜಿ. ಪರಮೇಶ್ವರ್ ಸಿಎಂ ಆಗಬೇಕೆಂಬ ತಮ್ಮ ಅಭಿಪ್ರಾಯಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. 

ಬೆಂಗಳೂರು ಮೇ.26): 'ನಾನು ದೆಹಲಿಗೆ ಹೋಗಲ್ಲ, ಅಮೆರಿಕಕ್ಕೆ ಹೋಗ್ತಾ ಇದ್ದೇನೆ' ಎಂದು ಹೇಳುವ ಮೂಲಕ ಮಾಜಿ ಸಚಿವ ಕೆಎನ್ ರಾಜಣ್ಣ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದಾರೆ. ರಾಜ್ಯ ರಾಜಕೀಯದ ಗೊಂದಲ, ಸಿಎಂ ಬದಲಾವಣೆ, ಸಂಪುಟ ರಚನೆ ಚರ್ಚೆ ನಡುವೆ ರಾಜಣ್ಣ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಸ್ಯೆಗಳು ಇದ್ದೇ ಇರುತ್ತವೆ

ಎಲ್ಲಾ ಸಮಸ್ಯೆಗಳು ಪರಿಹಾರ ಆದರೆ ಜೀವನಪೂರ್ತಿ ಇರಲ್ಲ. ಸಮಸ್ಯೆಗಳು ಬರುತ್ತಾನೇ ಇರುತ್ತವೆ, ಅದಕ್ಕೆ ಪರಿಹಾರ ಹುಡುಕಬೇಕು ಎಂದು ರಾಜಣ್ಣ ಹೇಳಿದರು. ರಾಜ್ಯಸಭೆ ಹಾಗೂ ಪರಿಷತ್ ಸ್ಥಾನಗಳ ಬಗ್ಗೆ ಇವತ್ತು ಚರ್ಚೆ ಆಗಬಹುದು ಎಂದೂ ತಿಳಿಸಿದರು.

ಸಂಪುಟ ಪುನರ್‌ರಚನೆ ಬಗ್ಗೆ ಸುಳಿವು

ಸಿಎಂ ಸಂಪುಟ ಪುನರ್‌ರಚನೆ ಬಗ್ಗೆ ಹಲವರು ಬೇಡಿಕೆ ಇಟ್ಟಿದ್ದಾರೆ. ಬಹಳ ಮಂತ್ರಿಗಳು ತಮ್ಮ ಆಕಾಂಕ್ಷೆ ಹೇಳಿದ್ದಾರೆ. ಆದರೆ ನನಗೆ ಮಂತ್ರಿ ಆಗಬೇಕು ಅನ್ನೋ ಆಸೆ ಇಲ್ಲ. ಆಗಿದ್ದೂ ಆಯ್ತು, ಬಿಟ್ಟಿದ್ದೂ ಆಯ್ತು ಎಂದು ರಾಜಣ್ಣ ಸ್ಪಷ್ಟಪಡಿಸಿದರು.

ಗೊಂದಲ ಬೇಗ ಕ್ಲಿಯರ್ ಆಗಬೇಕು

ಸಿಎಂ ಬದಲಾವಣೆ ಆಗಲಿ, ಸಂಪುಟ ಪುನರ್‌ರಚನೆ ಆಗಲಿ, ಏನೇ ಇದ್ದರೂ ಬೇಗ ನಿರ್ಧಾರ ಆಗಬೇಕು ಎಂದು ರಾಜಣ್ಣ ಒತ್ತಾಯಿಸಿದರು. ಅಧಿಕಾರ ಹಸ್ತಾಂತರದ ಬಗ್ಗೆ ಒಂದು ಇತ್ಯರ್ಥ ಆಗಬೇಕು. ಇಲ್ಲ ಅಂದ್ರೆ ಅಧಿಕಾರಿಗಳು ಹಿಡಿತಕ್ಕೆ ಸಿಗಲ್ಲ ಎಂದು ಹೇಳಿದರು.

ಸೆಪ್ಟೆಂಬರ್ ಕ್ರಾಂತಿ ಹೇಳಿಕೆಗೆ ಮತ್ತೆ ಸ್ಟ್ಯಾಂಡ್

ಸೆಪ್ಟೆಂಬರ್ ಕ್ರಾಂತಿ ಅಂತ ಮೊದಲು ಹೇಳಿದ್ದು ನಾನು. ರಾಜಕಾರಣ ನಿಂತ ನೀರಲ್ಲ. ಕ್ರಾಂತಿ ಬಿಜೆಪಿಯಲ್ಲೂ ಆಗಬಹುದು ಎಂದು ರಾಜಣ್ಣ ಮತ್ತೆ ತಮ್ಮ ಹೇಳಿಕೆಗೆ ಬದ್ದರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಮಾತ್ರವಲ್ಲ, ರಾಜ್ಯ ರಾಜಕೀಯದಲ್ಲೇ ದೊಡ್ಡ ಬದಲಾವಣೆಗಳ ಸುಳಿವು ನೀಡಿದರು.

ಪರಮೇಶ್ವರ್ ಸಿಎಂ ಆಗಬೇಕು ಅನ್ನೋ ಅಭಿಪ್ರಾಯ ನನ್ನದೇ

ಸಿಎಂ ಬದಲಾವಣೆ ಆದರೆ ಡಾ.ಜಿ. ಪರಮೇಶ್ವರ್ ಸಿಎಂ ಆಗಬೇಕು ಎಂಬ ತಮ್ಮ ಹಿಂದಿನ ಹೇಳಿಕೆಗೆ ಈಗಲೂ ಬದ್ದ ಎಂದು ರಾಜಣ್ಣ ಹೇಳಿದರು. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಅಂತಿಮ ನಿರ್ಧಾರ ಹೈಕಮಾಂಡ್‌ದ್ದು ಎಂದು ಸ್ಪಷ್ಟಪಡಿಸಿದರು. ಜೊತೆಗೆ, ರಾಹುಲ್ ಗಾಂಧಿ ರಾಜೀನಾಮೆ ಕೊಡಿ ಅಂದ್ರೆ ಸಿದ್ದರಾಮಯ್ಯ ಒಂದು ಕ್ಷಣವೂ ವಿಳಂಬ ಮಾಡಲ್ಲ ಅಂತ ಹೇಳಿದ್ದಾರೆ. ಅಷ್ಟು ಹೇಳಿದ ಮೇಲೆ ಗೊಂದಲ ಇರಬಾರದು ಎಂದರು.