Shivamogga Assault Case: ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ, ಎಚ್ಚರಿಕೆ ನೀಡಿದ ಈಶ್ವರಪ್ಪ
Shivamogga Prem Singh assault case updates: ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬಾತನ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ. ಇಡೀ ಹಿಂದೂ ಸಮಾಜ ತಿರುಗಿ ಬಿದ್ದರೆ ಪರಿಸ್ಥಿತಿ ಏನಾಗಬಹುದು. ಆದರೆ ಹಿಂದೂಗಳು ಶಾಂತಿ ಪ್ರಿಯರು ಎಂದು ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ: ರಾಜ್ಯದಲ್ಲಿ ಪದೇ ಪದೇ ಇಂತಹಾ ಘಟನೆಗಳು ಆಗ್ತಿರುವ ಹಿನ್ನಲೆ, ಕಾರ್ಯಕರ್ತರಿಗಷ್ಟೇ ಅಲ್ಲ, ನಮಗೂ ಬೇಸರವಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಮುವತ್ತೇಳು ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ. ಆಗಲೂ ಎಲ್ಲವನ್ನೂ ಹಿಂದೂ ಕಾರ್ಯಕರ್ತರ ತಲೆಗೇ ಕಟ್ಟಲಾಯಿತು. ಕಾಂಗ್ರೆಸ್ ನವರಿಗೆ ಇಂತಹಾ ಗಲಭೆಗಳಾಗಬೇಕು. ಮುಸಲ್ಮಾನರ ಓಟು ಬೀಳಬೇಕು. ಪ್ರೇಮ್ ಸಿಂಗ್ ಎಂಬ ಯುವಕ ಈಗ ಆಸ್ಪತ್ರೆ ಯಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಪ್ರೇಮ್ ಸಿಂಗ್ ಮೇಲೆ ಹಲ್ಲೆ ಮಾಡಿದವರನ್ನು ಪೋಲೀಸರು ಹುಡುಕಿ, ಬಂಧಿಸಿದ್ದಾರೆ. ಪೋಲೀಸ್ ಇಲಾಖೆ ವೈಫಲ್ಯ ಆಗಿಲ್ಲ. ಇವತ್ತೇ ಹುಡುಕಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಇದನ್ನು ಕಾಂಗ್ರೆಸ್ ನವರಾಗಲಿ, ಕುಮಾರಸ್ವಾಮಿ ಆಗಲಿ ಖಂಡಿಸಬೇಕಿತ್ತು. ಮೊನ್ನೆ ಕುಮಾರಸ್ವಾಮಿ ಕೂಡಾ ಎರಡೂ ಪಕ್ಷಗಳು ನಾಟಕ ಆಡ್ತಾ ಇವೆ ಅನ್ನೋ ಮಾತು ಹೇಳಿದಾರೆ. ನರೇಂದ್ರ ಮೋದಿ ಅವರ ಆಡಳಿತವನ್ನು ಇಡೀ ವಿಶ್ವ ಒಪ್ಪಿದೆ, ಆದರೆ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿ ಮಾತ್ರಾ ಒಪ್ತಾ ಇಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಮುಂದುವರೆದ ಅವರು ಒಪ್ಪಲಿ ಬಿಡಲಿ, ನಮಗೆ ಸಂಬಂಧ ಇಲ್ಲ. ಶಿವಮೊಗ್ಗದಲ್ಲಿ ಚಾಕು ಇರಿತದ ಪ್ರಕರಣ ಘಟಿಸಿದ ತಕ್ಷಣವೇ ಆರೋಪಿಗಳನ್ನು ಬಂಧಿಸಿದ ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕೃತ್ಯ ಎಸಗಿದವರನ್ನ ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡ್ತಿದ್ದಾರೆ. ಮುಸಲ್ಮಾನ ಗುಂಡಾಗಳಿಗೆ ನಾನ್ ಹೇಳ್ತೀನಿ. ಯಾರು ಗುಂಡಾಗಳಿದ್ದಾರೆ ಅವರಿಗೆ ಕರೆದು ಮುಸ್ಲಿ ನಾಯಕರು ಬುದ್ದಿವಾದ ಹೇಳಬೇಕು. ಇಲ್ಲ ಅಂದ್ರೆ ಅಂತ ಗುಂಡಾಗಳನ್ನ ಸರ್ಕಾರ ನೋಡಿಕೊಳ್ಳುತ್ತೆ.
ಈ ಘಟನೆ ಮಾಡಿದ್ದು ಎಸ್ ಡಿಪಿಐ ಕಾರ್ಯಕರ್ತ ಅವನ ಹೆಂಡ್ತಿ ಕಾಂಗ್ರೆಸ್ ಪಾಲಿಕೆ ಸದಸ್ಯರು. ಎಸ್ ಡಿ ಪಿಐ ಬ್ಯಾನ್ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ನಿನ್ನೆ ಸ್ಯಾಂಪಲ್ ತೋರಿಸಿದ್ದಾರೆ ಪೊಲೀಸರು. ಕೆಲ ಮುಸಲ್ಮಾನ ಸಮುದಾಯದ ಹಿರಿಯ ನಾಯಕರು ಮುಂಚಿನಿಂದಲೂ ಶಾಂತಿ ಕಾಪಾಡಲು ಯತ್ನಿಸುತ್ತಿದ್ದಾರೆ. ಅವರು ಯುವಕರಿಗೆ ಬುದ್ದಿಹೇಳಬೇಕು. ಯಾರು ಗುಂಡಾಗಳಿದ್ದಾರೆ ಅವರಿಗೆ ಬುದ್ದಿ ಹೇಳಬೇಕು. ಇಲ್ಲ ಅಂದ್ರೆ ಹಿಂದು ಸಮಾಜ ನೋಡಿಕೊಳ್ಳುತ್ತೆ , ಸರ್ಕಾರ ಬುದ್ದಿ ಕಲಿಸಲಿದೆ. ಎಸ್ ಡಿಪಿಐ ಮನಸ್ಥಿತಿ ಬದಲಾಗಿಲ್ಲ ಹಿಂದೂಗಳನ್ನ ಕೊಲೆ ಮಾಡುವ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದಲೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗ್ತಿದೆ. ನಮ್ಮ ಶಿವಮೊಗ್ಗದವರು ಶಾಂತಿಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆ ಇರಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: Karnataka Live News: ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೊ ಯಾಕೆ ಹಾಕಬೇಕಿತ್ತು; ಸಿದ್ದರಾಮಯ್ಯ
ಸರ್ಕಾರದಲ್ಲಿ ಮ್ಯಾನೇಜ್ ಮಾಡುವ ಬಗ್ಗೆ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಧುಸ್ವಾಮಿ ಈ ರೀತಿ ಹೇಳಿರೋದು ನಿಜಕ್ಕೂ ತಪ್ಪು. ಅವರು ಕಾನೂನನ್ನು ಚೆನ್ನಾಗಿ ಅರಿತಿರುವರು. ಅವರು ಈ ಮಾತನ್ನು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ನಾನು ಅವರ ಜೊತೆ ಈ ಬಗ್ಗೆ ಖಾಸಗಿ ಯಾಗಿ ಮಾತಾಡುತ್ತೇನೆ ಎಂದ ಈಶ್ವರಪ್ಪ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಾತಿ ಲೇಪನ ಹಚ್ಚಿದ್ದಾರೆ. ಅವರು ಜಾತಿವಾದಿಗಳು ಅನ್ನೋದು ಗೊತ್ತಾಗಿದೆ. ಜವಹರಲಾಲ್ ನೆಹರು ದೇಶ ವಿಭಜನೆ ಮಾಡಿದ್ರು, ಹೀಗಾಗಿ ತೆಗೆದಿದ್ದಾರೆ ಅಂತಾ ಸರ್ಕಾರದ ನಡೆಯನ್ನ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ. ಹಿಂದೂಗಳ ಗಣಪತಿ ಉತ್ಸವದ ಅಡ್ಡ ಬಂದ್ರೆ ಸರಿ ಇರಲ್ಲ. ನೀವು ನಿಮ್ ಹಬ್ಬ ಮಾಡಲ್ವ? ನಾವು ಬೆಂಬಲ ಕೊಡಲ್ವಾ?
ನಮ್ ಹಬ್ಬದ ತಂಟೆಗೆ ಬರಬೇಡಿ. ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಇಡೀ ಹಿಂದೂ ಸಮಾಜ ಎದ್ದರೆ ಎದ್ರೆ ಮುಸಲ್ಮಾನರು ಏನಾಗ್ತಾರೆ? ಆದ್ರೆ ಹಿಂದೂಗಳು ಶಾಂತಿಪ್ರಿಯರು ಎಂದು ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: Shivamogga Assault Case: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಫೈರಿಂಗ್, ಇಬ್ಬರ ಬಂಧನ
ನಮ್ಮ ಸರ್ಕಾರ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡ್ತಿದೆ. ಎಲ್ಲ ಮುಸ್ಲಿಮರ ಮೇಲೂ ನಾನು ಆರೋಪ ಮಾಡಲ್ಲ. ಆದ್ರೆ ಹಿಂದೂಗಳು ಅಶಕ್ತರಲ್ಲ. ಹಿಂದೂಗಳು ಎದ್ದರೆ ಮುಸಲ್ಮಾನ ಗೂಂಡಾಗಳು ಉಳಿಯಲ್ಲ. ಇದು ಕಾನೂನು ಸುವ್ಯವಸ್ಥೆಯ ವೈಪಲ್ಯ ಅಲ್ಲ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ವೈಫಲ್ಯ ಆಗಿಲ್ಲ. ಪದೇಪದೇ ಈ ತರದ ಘಟನೆ ಆಗ್ತಿದ್ರೂ ವೈಫಲ್ಯ ಆಗಿಲ್ಲ. ಸರ್ಕಾರ ಎಲ್ಲ ಕಠಿಣ ಕ್ರಮ ತಗೋತಿದೆ. ಸಾವರ್ಕರ್ ಬ್ಯಾನರ್ ಹರಿದು ಹಾಕಿದವನು ಕಾಂಗ್ರೆಸ್ ಕಾರ್ಪೋರೇಟರ್ ಗಂಡ. ಹೆಂಡತಿ ಕಾಂಗ್ರೆಸ್ ಪಾಲಿಕೆ ಸದಸ್ಯ, ಗಂಡ ಎಸ್ ಡಿ ಪಿ ಐ ಕಾರ್ಯಕರ್ತ. ಕಾಂಗ್ರೆಸ್‌ನವರು ಬಿಜೆಪಿಯವರು ಕೋಮುಗಲಭೆ ಸೃಷ್ಟಿಸುತ್ತಾರೆ ಎಂದು ಆರೋಪ ಮಾಡ್ತಾರೆ. ಆದರೆ ಕೋಮು ಗಲಭೆ ಸೃಷ್ಟಿಸುತ್ತಿರುವವರು ಕಾಂಗ್ರೆಸ್ ಕಾರ್ಪೋರೇಟರ್ ಗಂಡ. ಅವನ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಿ. ಆದರೆ ನೀವು ಕ್ರಮ ತೆಗೆದುಕೊಳ್ಳಲ್ಲ ಎಂದು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ್ದಾರೆ.