5:58 PM IST
ಶಿವಮೊಗ್ಗ ಗಲಾಟೆ: ಆರೋಪಿಗಳು ಕೋರ್ಟಿಗೆ ಹಾಜರು
ಶಿವಮೊಗ್ಗ: ಆರೋಪಿಗಳನ್ನು ಕೋರ್ಟಿಗೆ ಹಾಜರು ಪಡಿಸಿದ ದೊಡ್ಡಪೇಟೆ ಪೊಲೀಸರು. ಮತ್ತೇ ಮೂರು ಜನರನ್ನು ಬಂಧಿಸಿ ಕೋರ್ಟಗೆ ಹಾಜರು. ಶಿವಮೊಗ್ಗ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರು ಪಡಿಸಿದ ಪೊಲೀಸರು. ರೆಹಮಾನ್, ನದೀಮ್, ತನ್ವೀರ್ ಅವರನ್ನು ಕೋರ್ಟ್‌ಗೆ ಹಾಜರು ಪಡಿಸಿದ ದೊಡ್ಡಪೇಟೆ ಪೊಲೀಸರು.
5:43 PM IST
ಉಡುಪಿಯಲ್ಲಿಯೂ ಸಾವರ್ಕರ್ ಬ್ಯಾನರ್ ವಿವಾದ
ಶಿವಮೊಗ್ಗ ಮತ್ತು ಮಂಗಳೂರುಗಳ ನಂತರ, ಇದೀಗ ಉಡುಪಿಯಲ್ಲಿಯೂ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವೀರ ಸಾವರ್ಕರ್ ಅವರು ಫೋಟೋಗಳ ಪ್ರದರ್ಶನದ ವಿವಾದ ಹುಟ್ಟಿ ಕೊಂಡಿದೆ. ನಗರದ ಬ್ರಹ್ಮಗಿರಿ ವೃತ್ತದಲ್ಲಿ ಸಾರ್ವಕರ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರ ಇರುವ ಬ್ಯಾನರ್ ಅಳವಡಿಸಲಾಗಿದ್ದು, ಇದೀಗ ಪರ ವಿರೋಧ ವಾದವಿವಾದಕ್ಕೆ ಕಾರಣವಾಗಿದೆ. ಸಾವರ್ಕರ್ ಇರುವ ಬ್ಯಾನರನ್ನು ತೆರವುಗೊಳಿಸುವಂತೆ ಪಿ.ಎಫ್.ಐ. ಸಂಘಟನೆ ಆಗ್ರಹಿಸಿದೆ. ಆದರೇ ಹಿಂದೂ ಸಂಘಟನೆಗಳು ಬ್ಯಾನರ್ ತೆರವುಗೊಳಿಸುವುದನ್ನು ವಿರೋಧಿಸಿವೆ.
ಈ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಬ್ರಹ್ಮಗಿರಿ ವೃತ್ತದಲ್ಲಿರುವ ಬ್ಯಾನರ್ ಬಳಿ ವಿಶೇಷ ನಾಕಬಂದಿ ನಿಯೋಜಿಸಿದ್ದು, ಈ ಪರಿಸರದಲ್ಲಿ ತಿರುಗಾಡುವವರ ಮೇಲೆ ಕಣ್ಣಿಟ್ಟಿದ್ದಾರೆ ಮತ್ತು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಪ್ರಮೋದ್ ಉಚ್ಚಿಲ, ಯೋಗಿಶ್ ಕುತ್ಪಾಡಿ, ಶೈಲೇಶ್ ದೇವಾಡಿಗ ಎಂಬವರು ಈ ಬ್ಯಾನರ್ ಅಳವಡಿಸಿದ್ದು, ಬ್ಯಾನರ್ ಹಾಕುವುದಕ್ಕೆ ಉಡುಪಿ ನಗರಸಭೆಯಿಂದ 15 ದಿನಗಳ ಅವಧಿಗೆ ಅಧಿಕೃತ ಪರವಾನಿಗೆಯನ್ನು ಪಡೆದಿದ್ದಾರೆ.
4:51 PM IST
ಸ್ವಾತಂತ್ರ್ಯೋತ್ಸವದ ಸಂಭ್ರಮ: RSSಗೆ ತಲೆ ಬಾಗುವ ಎಂದ ಬೊಮ್ಮಾಯಿ
ನಿನ್ನೆ ಕಂಠೀರವದಲ್ಲಿ ನಡೆದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತಲೆ ಬಾಗುವೆ ಎಂಬುದಾಗಿ ಹೇಳಿದ್ದರು.
4:45 PM IST
ರಾಜಿನಾಮೆ ಕೊಡೋಕು ರೆಡಿ ಇದಿನಿ: ಸಚಿವ ಮಾಧುಸ್ವಾಮಿ
ರಾಜಿನಾಮೆ ಕೊಡೋಕು ರೆಡಿ ಇದೀನಿ. ನಾನು ಕಟ್ಟ ಕಡೆಯ ಮನುಷ್ಯ, ಅಧಿಕಾರಕ್ಕಾಗಿ ಅಂಟಿಕೊಂಡವನಲ್ಲ. ನನ್ನನ್ನ ಸಿಗಾಕಿಸೋ ಅವಶ್ಯಕತೆಯೂ ಇಲ್ಲ. ಸಿಎಂ ಕರೆದು ರಾಜೀನಾಮೆ ಕೊಡು ಅಂದ್ರೆ ನಾನು ರೆಡಿ ಇದೀನಿ. ಹಿಂಗೆಲ್ಲಾ ಸುತ್ತಿ ಸುದ್ದಿ ಮಾಡೋ ಅವಶ್ಯಕತೆ ಇಲ್ಲ. ನಾನು ಜೆಸಿ ಪುರದಲ್ಲಿ ಆರಾಮಗಿ ಇದೀನಿ. ಪ್ರವೈಟ್ ಆಗಿ ಇಬ್ಬರೂ ವೈಯಕ್ತಿಕವಾಗಿ ಮಾತಾನಡೊದು ತಪ್ಪು. ಅವನು ಅನುಮತಿ ಇಲ್ಲದೆ ತಪ್ಪು ಮಾಡಿದ್ದಾನೆ.ಮೂರನೇ ಅವನು ಬೇನಾಮಿ ಅವ್ನು ಮಾತಾಡ್ತಾನೆ. ಇಷ್ಟು ದೊಡ್ಡದು ಮಾಡ್ಬಾರ್ದ. ನೋವು ನನಗೂ ಆಗುತ್ತೆ. ರಾಜಕಾರಣಿಗಳಿಗೆ ಹೃದಯ ಇಲ್ಲ ಅನ್ಕೋಳೊದು ತಪ್ಪು, ಎಂದಿದ್ದಾರೆ ಮಾಧುಸ್ವಾಮಿ.
4:02 PM IST
ಸಿದ್ದರಾಮಯ್ಯನವರು ವೋಟಿಗಾಗಿ ಸಾವರ್ಕರ್ ಅವಹೇಳನ ಮಾಡುತ್ತಿದ್ದಾರೆ: ಜ್ಞಾನೇಂದ್ರ
ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ವಿಚಾರ, ಸಿದ್ದರಾಮಯ್ಯನವರು ವೋಟಿಗಾಗಿ ಓಲೈಕೆ ಮಾಡಿ ವಿ.ಡಿ.ಸಾವರ್ಕರ್ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಸಾವರ್ಕರ್ ಬ್ರಿಟಿಷರ ಬೂಟು ನೆಕ್ಕಿದರು ಎಂಬ ಹೇಳಿಕೆ ಕೆಲವರ ಪ್ರಚೋದನೆ ನೀಡಿದೆ. ಹಿರಿಯ ರಾಜಕಾರಣಿಯಾಗಿ ಅವರ ನೀಡಿದ ಹೇಳಿಕೆ ಸಮುದಾಯವನ್ನು ಎತ್ತಿ ಕಟ್ಟಿದೆ. ಘಟನೆ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದ ಗೃಹ ಸಚಿವರು. ಯಾವ ಯಾವ ಸಂಘಟನೆ ಹಿನ್ನಲೆ ಇದೆ ಯಾರು ಯಾರು ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣ ತಾರ್ಕಿಕ ಅಂತ್ಯದವರೆಗೂ ಕೊಂಡೋಯ್ಯುತ್ತೇವೆ, ಎಂದಿದ್ದಾರೆ.
3:39 PM IST
ಸಾವರ್ಕರ್ ಫೋಟೋ ಕಿತ್ತಿದ್ದು ಮಹಾ ಅಪರಾಧ: ಗೋವಿಂದ ಕಾರಜೋಳ
ಬೆಳಗಾವಿ: ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ಇದ್ದ ಫ್ಲೆಕ್ಸ್ ಕಿತ್ತು ಹಾಕಿದ ಪ್ರಕರಣ. ಸಾವರ್ಕರ್ ಫೋಟೋ ಕಿತ್ತಿದ್ದು ಮಹಾ ಅಪರಾಧ. ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ. ಸಾವರ್ಕರ್ ಕೂಡ ದೇಶಕ್ಕಾಗಿ ಹೋರಾಟ ಮಾಡಿದಂತವರು. ಅವರ ಬಗ್ಗೆ ತಿಳಿದುಕೊಳ್ಳದೇ ಕೆಲ ಕಿಡಿಗೇಡಿಗಳು ಫೋಟೋ ಹರಿದು ಹಾಕೋದು, ಬೋರ್ಡ್ ತಗೆಯುವುದು ಮಾಡಿದ್ದು ಸರಿಯಲ್ಲ. ಆ ರೀತಿ ಯಾರೂ ಕೂಡ ಮಾಡಬಾರದು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕಬೇಕಾದ ದೇಶ ಇದು. ನಿನ್ನೆ ಪ್ರಧಾನಿ ಭಾಷಣ ನೋಡಿದ್ರೆ ಸಾಕು, ಪ್ರಧಾನಮಂತ್ರಿಯವರೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಎಲ್ಲರೂ ಶಾಂತಿಯುತದಿಂದ ಬಾಳಬೇಕು ಅಂತಾ ಅಷ್ಟೇ ಹೇಳ್ತೀನಿ. ಕಾಂಗ್ರೆಸ್‌ನವರು ಇಂತಹ ಕೀಳು ಮಟ್ಟದ ರಾಜಕಾರಣ ಮಾಡಿದ್ದಕ್ಕೆ ಮೂಲೆ ಗುಂಪು ಆಗಿದ್ದಾರೆ. ಇನ್ನೂ ಅದನ್ನ ಮುಂದುವರಿಸಿದ್ರೆ ಸ್ವಚ್ಛ ಆಗಿ ಹೋಗ್ತಾರೆ, ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ದೀಪಕ್ಕ ದಿಕ್ಕಿಲ್ಲದ ಮನೆ ಹಾಗೇ ಆಗುತ್ತೆ. ಸಾವರ್ಕರ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಲಿಲ್ಲ ಗೋವಿಂದ ಕಾರಜೋಳ. ಸಿದ್ದರಾಮಯ್ಯ ಬೆಳಗಾವಿಗೆ ಬರ್ತಾರೆ ಆಗ ಅವರನ್ನೇ ಕೇಳಿ ಎಂದ ಗೋವಿಂದ ಕಾರಜೋಳ.
2:59 PM IST
ಮನೆ ಮನೆಯಲ್ಲೂ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ: ಸಿ.ಟಿ.ರವಿ
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ವಾತಂತ್ರ್ಯ ಅಮೃತಮಹೋತ್ಸವದ ಆಚರಣೆಯೊಂದಿಗೆ ಮನೆಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ರಾಷ್ಟ್ರ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ ಭಾರತೀಯರು. ಮುಂದಿನ 25 ವರ್ಷದ ಗುರಿಯನ್ನು ಹಾಕಿಕೊಂಡು ಕೆಲಸ ಮಾಡಲು ಮುಂದಾಗಿ ರುವ ಪ್ರಧಾನಿ ಕಾರ್ಯವನ್ನು ನಾನು ಸ್ವಾಗತಿಸುತ್ತೇನೆ. ರಾಷ್ಟ್ರ ಭಾವನೆ ಮಾತ್ರ ರಾಷ್ಟ್ರ ಉಳಿಸಬಲ್ಲದು. ಅದು ಈಗ ಜಾಸ್ತಿ ಆಗಿದೆ. ಬ್ರಿಟಿಷರ ವಿರುದ್ಧ ಕೇವಲ ಸಿಪಾಯಿ ದಂಗೆ ಎಂದು ನಮುದಾಗಿದ್ದ 1947ರ ಸ್ವಾತಂತ್ರ್ಯ ಸಂಗ್ರಾಮವನ್ನು ಕೃತಿಗೆ ಇಳಿಸಿ, ಮದನ್ ಲಾಲ್ ದಿಂಗ್ರಾರಂತ ಶೋಕಿಲಾಲ ಆಗಿದ್ದ ನವಯುವಕನನ್ನು ರಾಷ್ಟ್ರ ಭಕ್ತನಾಗಿ ಬದಲಾಯಿಸಿ, ಅಭಿನವ ಭಾರತ ಕಟ್ಟಿ, ಬ್ರಿಟಿಷ್ ಗೆ ಸಿಂಹ ಸ್ವಪ್ನ ಆಗಿ, 50 ವರ್ಷಗಳ ಕರಿ ನೀರಿನ ಶಿಕ್ಷೆ ಅನುಭವಿಸಿ ಅಂಡಮಾನ್ ಸೆರಮನೆಯಲ್ಲಿ ನರಕಯಾತನೆ ಅನುಭವಿಸಿ, ಬೇಡಿಯನ್ನೆ ಲೇಖನಿಯಾಗಿಸಿ, ಗೋಡೆಯನ್ನೇ ಹಾಳೆಯಾಗಿಸಿ, ದೇಶ ಭಕ್ತಿ ಗೀತೆ ರಚಿಸಿದವ ವೀರ್ ಸಾವರ್ಕರ್. ಆದ್ರೆ ಕೆಲವು ಮತಿಯ ಸಂಘಟನೆಗಳು
ರಾಜಕೀಯ ಲಾಭವೇ ಸಿದ್ಧಾಂತ ಎಂದು ನಂಬಿ ಸಾವರ್ಕರ್ ಅಪಾಮಾನ ಮಾಡಿದವರನ್ನು ನಾನು ಖಂಡಿಸ್ತೇನೆ, ಎಂದಿದ್ದಾರೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ.
1:55 PM IST
ಶಾಂತ ಸ್ಥಿತಿಯತ್ತ ಶಿವಮೊಗ್ಗ
ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದ ವಿಶೇಷ ಪೊಲೀಸ್ ಪಡೆ. ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆಯ ಸರ್ಪಗಾವಲು. ಸೋಮವಾರ ನಡೆದ ಚೂರಿ ಇರಿತದ ಪ್ರಕರಣಕ್ಕೆ ಸಂಬಂದಿಸಿದಂತೆ 3 ನೇ ಆರೋಪಿಯ ಬಂಧನದ ವೇಳೆ ಪೊಲೀಸರಿಂದ ಗುಂಡು. ಆರೋಪಿ ಮೊಹಮದ್ ಜಬಿ ಎಂಬಾತನನ್ನು ಬಂಧಿಸಲು ಮಂಗಳವಾರ ಮುಂಜಾನೆ ವಿನೋಬನಗರ ಪಿಎಸ್ ಐ ಮಂಜುನಾಥ ತಮ್ಮ ಸಿಬ್ಬಂದಿ ಜೊತೆ ಮುಂದಾದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ. ಈ ವೇಳೆಯಲ್ಲಿ ಮಂಜುನಾಥ ಅತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದರು.ಗಾಯಗೊಂಡ ಆರೋಪಿಯನ್ನು ಬಂಧಿಸಿ ಚಿಕಿತ್ಸೆಗಾಗಿ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೇಮ್ ಸಿಂಗ್ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಆರೋಪಿತರಾದ ನದೀಮ್ ಮತ್ತು ಅಬ್ದುಲ್ ರೆಹಮಾನ್ ರವರುಗಳನ್ನು ದಸ್ತಗಿರಿ ಮಾಡಲಾಗಿತ್ತು.
1:27 PM IST
ತಿರಂಗ ಧ್ವಜ ಇಟ್ಟುಕೊಂಡು ಓಡಾಡಿದರೆ ಏನೂ ಆಗಲ್ಲ: ಎಚ್ಡಿಕೆ
ರಾಮನಗರ; ಎರಡು ರಾಷ್ಟ್ರೀಯ ಪಕ್ಷಗಳ ತಿರಂಗ ಧ್ವಜ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದ ವಳಗೆರೆದೊಡ್ಡಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ತಿರಂಗ ಧ್ವಜ ಇಟ್ಟುಕೊಂಡು ಓಡಾಡಿದರೆ ಏನೂ ಆಗೋಲ್ಲ. ತಿರಂಗ ಧ್ವಜಕ್ಕೆ ಗೌರವ ಸಲ್ಲಿಸಬೇಕು ಅಂತಿದ್ದರೆ ಹೃದಯಗಳಲ್ಲಿ ಗೌರವದ ಭಾವನೆಗಳು ಇರಬೇಕು. ಅದಿದ್ದರೆ ಮೊದಲು ದೇಶದಲ್ಲಿ ಅಶಾಂತಿಯ ವಾತಾವರಣ ಹೋಗಬೇಕು. ಜೊತೆಗೆ ನಮ್ಮ ದೇಶದಲ್ಲಿ ಶಿಶುಗಳ ಮರಣ ದರ ಏನಿದೆ? ಸುಮಾರು 17 ಲಕ್ಷ ಜನನ ಶಿಶುವಿನ ಸಾವು ಕಾಣುತ್ತಿದ್ದೇವೆ. ಪ್ರತಿವರ್ಷ 17 ಲಕ್ಷ ನವಜಾತ ಶಿಶುಗಳು ಮೃತಪಡುತ್ತಿವೆ. ಇಂತಹ ಗಂಭೀರ ಸಮಸ್ಯೆಗಳಿಗೆ ಸೂಕ್ತ ಪರಿಹಾರದ ಅಗತ್ಯವಿದೆ ಸರಿಯಾದ ರೀತಿಯಲ್ಲಿ ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡುತ್ತೀವಿ ಅಂತಾರೆ. ದೇಶದಲ್ಲಿ ಇನ್ನು ಲಕ್ಷಾಂತರ ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕೂ ಪರಿತಪಿಸುವ ದುಸ್ಥಿತಿ ಇದೆ. ರೈತರ ಪರಿಸ್ಥಿತಿ ಏನಾಗಿದೆ ಎಂಬುದನ್ನ ನೋಡುತ್ತಿದ್ದೇವೆ. ನರೇಂದ್ರ ಮೋದಿ ಹೇಳಿದ್ದರು ನಮ್ಮ ರೈತರು ಬೆಳೆಯುವ ಬೆಳೆಯ ಬೆಲೆ ದ್ವಿಗುಣವಾಗುತ್ತದೆ ಎಂದು. ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ರೈತರ ಪರಿಸ್ಥಿತಿಯನ್ನ ಅದೆಂತಹದ್ದೋ ಭ್ರಷ್ಟಾಚಾರ ನಿಲ್ಲಿಸುತ್ತೀವಿ ಅಂತಾ ಹೇಳ್ತಾರೆ . ಈಗೇನೋ ಪಂಚಪ್ರಾಣ ಪ್ರತಿಜ್ಞೆ ಕಾರ್ಯಕ್ರಮವಂತೆ! ಯಾವ ಪಂಚಪ್ರಾಣ, ಯಾವ ಪಂಚಪ್ರಾಣದ ಕಾರ್ಯಕ್ರಮ. ಕಳೆದ ಎಂಟು ವರ್ಷಗಳಲ್ಲಿ ಏನು ಮಾಡಿದ್ದಾರೆ? ಬರಿ ಭಾಷಣಕ್ಕೆ ಮಾತ್ರ ಇವರು ಸೀಮಿತ. ಇವರ ನಡವಳಿಕೆಗಳೇ ದೇಶದಲ್ಲಿ ಅಶಾಂತಿ ವಾತಾವರಣ ಮೂಡಲು ಕಾರಣ, ಎಂದಿದ್ದಾರೆ.
1:23 PM IST
ನಮ್ಮ ಮೆಟ್ರೋ: ಒಂದೇ ದಿನಕ್ಕೆ ಕೋಟಿ ಕೋಟಿ ಆದಾಯ
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ರಜತ ಮಹೋತ್ಸವ ಹಿನ್ನಲೆ ಮೆಟ್ರೋದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ಮಾಡಿದ್ರು. ಒಂದೆಡೆ ಬಿಎಂಟಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ರೆ ಇತ್ತ ನಮ್ಮ ಮೆಟ್ರೋದಲ್ಲೂ ಎಂದಿಗಿಂತ ಅಧಿಕ ಸಂಖ್ಯೆಯಲ್ಲಿ ಜನ ಸಂಚಾರ ಮಾಡಿದ್ರು. ಒಂದೇ ದಿನ ಬರೋಬ್ಬರಿ 5.74 ಲಕ್ಷ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಇತಿಹಾಸ ಸೃಷ್ಟಿಯಾಗಿದೆ.
1:03 PM IST
ನಿರಂತರ ಮಳೆಗೆ ನೆನೆದಿದ್ದ ಶಾಲಾ ಕಟ್ಟಡ ಕುಸಿತ- ತಪ್ಪಿದ ಭಾರೀ ಅನಾಹುತ
ಕಾರವಾರ (ಉತ್ತರಕನ್ನಡ): ನಿರಂತರ ಮಳೆಗೆ ನೆನೆದಿದ್ದ ಶಾಲಾ ಕಟ್ಟಡ ಕುಸಿತ- ತಪ್ಪಿದ ಭಾರೀ ಅನಾಹುತ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮೂಡಸಾಲಿ ಗ್ರಾಮದಲ್ಲಿ ಘಟನೆ. ತಡರಾತ್ರಿ ಸಂಪೂರ್ಣವಾಗಿ ಕುಸಿದು ಬಿದ್ದಿರುವ ಶಾಲಾ ಕಟ್ಟಡ. ಈ ಶಾಲಾ ಕಟ್ಟಡದಲ್ಲಿ 4 ಮತ್ತು 5 ನೇ ತರಗತಿಯ 30 ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದರು. ಶಿಥಿಲವಾಗಿದ್ದ ಈ ಕಟ್ಟಡದಲ್ಲೇ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುತ್ತಿದ್ದರು. ನಿನ್ನೆ ಧ್ವಜಾರೋಹಣದ ಬಳಿಕ ಮನೆಗೆ ತೆರಳಿದ್ದ ಮಕ್ಕಳು. ಶಾಲಾ ಕಟ್ಟಡ ರಾತ್ರಿ ಕುಸಿತವಾಗಿದ್ದರಿಂದ ತಪ್ಪಿದ ಅನಾಹುತ ಶೀಘ್ರದಲ್ಲೇ ಶಾಲಾ ಕಟ್ಟಡ ದುರಸ್ತಿಗೊಳಿಸುವಂತೆ ಪೋಷಕರ ಒತ್ತಾಯ.
12:59 PM IST
ಮಣ್ಣೂರ ಗ್ರಾಮದ ಯಲ್ಲಮ್ಮ ದೇವಸ್ಥಾನ ಜಲಾವೃತ
ಮಹಾರಾಷ್ಟ್ರದಿಂದ ಭಾರಿ ನೀರು ಬಿಡುಗಡೆ ಹಿನ್ನಲೆ/ndnf ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದ ಯಲ್ಲಮ್ಮ ದೇವಸ್ಥಾನ ಜಲಾವೃತ. ಭೀಮಾ ನದಿಯಲ್ಲಿರುವ ಶ್ರೀ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಹೋಗುವ ಸಂಪರ್ಕ ಸೇತುವೆ ಮೇಲೆ ನೀರು. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ದೇವಿಯ ದರ್ಶನ ಭಾಗ್ಯ ಬಂದ್. ಬರುವ ಭಕ್ತರಿಗೆ ಸಂಪರ್ಕ ಸೇತುವೆಯ ಬಾಗಿಲು ಬಂದ್ ಮಾಡಿರುವ ಆಡಳಿತ ಮಂಡಳಿ.
12:48 PM IST
ಭದ್ರಾವತಿ: ಯುವಕನ ಮೇಲೆ ಹಲ್ಲೆ
ಭದ್ರಾವತಿಯಲ್ಲಿ ಎಸ್ಪಿ ಲಕ್ಷ್ಮಿ ಪ್ರಸಾದ್ ಹೇಳಿಕೆ. ಭದ್ರಾವತಿಯ ನೆಹರು ನಗರದಲ್ಲಿ ಸುನೀಲ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಭದ್ರಾವತಿಯ ನೆಹರು ನಗರದಲ್ಲಿ ಬೆಳಿಗ್ಗೆ 9.30 ಸುಮಾರಿಗೆ ನಡೆದ ಹಲ್ಲೆ. ಮುಬಾರಕ್ ಎಂಬಾತ ಮುಖಕ್ಕೆ ತಲೆ ಮತ್ತು ಕೈಯಿಂದ ಹೊಡೆದು ಹಲ್ಲೆ. ಭದ್ರಾವತಿ ನಗರದಾದ್ಯಂತ ಸೆಕ್ಷನ್ 144 ಜಾರಿಯಲ್ಲಿದೆ. ನಗರದಾದ್ಯಂತ ಸೆಕ್ಷನ್ ಜಾರಿ ಹಿನ್ನೆಲೆ ಅಂಗಡಿ ಮುಗ್ಗಟ್ಟು ಬಂದ್ ಮಾಡಲಾಗಿದೆ. ಹಳೆನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರವೇ ಆರೋಪಿ ಮುಬಾರಕ್ ನನ್ನ ಬಂಧಿಸಲಾಗುವುದೆಂದಿದ್ದಾರೆ.
11:43 AM IST
ಶಿವಮೊಗ್ಗದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ, ಯುವಕರು ವೆಪನ್ ಇಟ್ಕೊಬೇಕು: ಸಂತೋಶ್ ಗುರೂಜಿ
ಶಿವಮೊಗದಲ್ಲಿ ಮಾತನಾಡಿದ ಸಂತೋಶ್ ಗೂರೂಜಿ ಅವರು ಹಿಂದೂ ಯುವಕರು ಇನ್ನು ಮುಂದೆ ವೆಪನ್ ಗಳನ್ನು ಇಟ್ಟುಕೊಂಡು ಓಡಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗ ದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಮಂಗಳೂರು ಮಾದರಿಯನ್ನು ಶಿವಮೊಗ್ಗ ಯುವಕರು ಅನುಸರಿಸಬೇಕಾದ ಅನಿವಾರ್ಯತೆ ಇದೆ. ಬಾವುಟ ಕಟ್ಟೋದು, ಪ್ಲೆಕ್ಸ್ ಹಾಕುವುದು ನಂತರ ಸಾಯೋದು ತಪ್ಪಬೇಕಿದೆ. ಆತ್ಮ ರಕ್ಷಣೆಗಾಗಿ ಸರ್ಕಾರಗಳನ್ನು ಕಾಯುವುದು ತರವಲ್ಲ. ಸಂವಿಧಾನವೇ ಹೇಳಿದೆ ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂದು. ಯಾವುದೇ ಸರ್ಕಾರವಾದ್ರು ಹಿಂದೂಗಳ ರಕ್ಷಣೆ ಮಾಡುವವರನ್ನು ಬೆಂಬಲಿಸಿ ಎಂದ ಸ್ವಾಮೀಜಿ. ಈ ಪ್ರಕರಣದಲ್ಲಿ ಶಿವಮೊಗ್ಗದ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ದಕ್ಷ ಎಸ್ಪಿ ಮತ್ತು ಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿದ್ದಾರೆ. ಹಿಂದೂಗಳು ಅನಿವಾರ್ಯವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಶಸ್ತ್ರಗಳನ್ನು ಓಡಾಟ ಮಾಡುವುದು ಅನಿವಾರ್ಯ. ಶಿವಮೊಗ್ಗ ದಲ್ಲಿ ಮುಂದೆ 10 ವರ್ಷದ ನಂತರ ಹಿಂದೂಗಳ ಪರಿಸ್ಥಿತಿ ಗಂಭೀರವಾಗಲಿದೆ.
11:08 AM IST
ಬೊಮ್ಮಾಯಿ ಆರ್‌ಎಸ್‌ಎಸ್ ಕೈಗೊಂಬೆ; ಸಿದ್ದರಾಮಯ್ಯ ಕಿಡಿ
ಮಾಜಿ ಸಿಎಂ ಸಿದ್ದರಾಮಯ್ಯ ಶಿವಮೊಗ್ಗ ಹಲ್ಲೆ ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದು, ಬಿಜೆಪಿ ಅವರಿಗೆ ಕಾಮಾಲೆ ರೋಗ ಬಂದಿದೆ, ಸುಳ್ಳನ್ನ ಹೇಳುವುದು ಅದನ್ನು ಕಾಂಗ್ರೆಸ್ ಮೇಲೆ ಹಾಕುವುದನ್ನು ವ್ಯವಸ್ಥಿತವಾಗಿ ಮಾಡ್ತಿದಾರೆ ಎಂದಿದ್ದಾರೆ. ಸಾವರ್ಕರ್ ಫೋಟೋ ಹಾಕಿರೋದು ಮುಸಲ್ಮಾನ ಏರಿಯಾದಲ್ಲಿ, ಮುಸ್ಲಿಂ ಏರಿಯಾದಲ್ಲಿ ಯಾಕೆ ಹಾಕೋಕೆ ಹೋಗಬೇಕಿತ್ತು. ಸಾವರ್ಕರ್ ಫೋಟೋ ಹಾಕೋಕೆ ಹೋದವರು ಟಿಪ್ಪು ಫೋಟೋ ಹಾಕೋಕೆ ಬಿಡಬೇಕಿತ್ತು. ಕಿತಾಪತಿ ಮಾಡೋಕೆ ಹೋದವರು ಇವ್ರು. ಎಸ್ ಡಿಪಿಐ, PFI ಅವ್ರು ಸಾಮರಸ್ಯ ಹಾಳು ಮಾಡ್ತಿದಾರೆ ಅಂದ್ರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಅವರು ಸಾಮರಸ್ಯ, ಸ್ವಾಸ್ಥ್ಯ ಹಾಳು ಮಾಡ್ತಿದ್ದಾರೆ ಅಂತ ದಾಖಲೆ ಇದ್ರೆ ಕ್ರಮ ಕೈಗೊಳ್ಳಿ. ನಿಮ್ಮ ಇಬ್ಬಗೆ ನೀತಿಯನ್ನ ಇವರು ಬಿಡಿ. ಮಗುವನ್ನೂ ಚಿವುಟುವುದು ಇವರೇ ತೊಟ್ಟಿಲ ತೂಗುವುದು ಇವರೇ. ಈ ಕೆಲಸ ಮಾಡೋಕೆ ಹೋಗಬೇಡಿ. ಕ್ರಮ ತೆಗೆದುಕೊಳ್ಳೋದಕ್ಕೆ ಯಾಕೆ ಮುಂದಾಗಲ್ಲ. ಮುಖ್ಯಮಂತ್ರಿ ಕೇವಲ ಪ್ರವೀಣ್ ಮನೆಗೆ ಮಾತ್ರ ಹೋಗ್ತಾರೆ. ಇನ್ನಿಬ್ಬರು ಮುಸ್ಲಿಂರ ಮನೆಗೆ ಯಾಕೆ ಹೋಗಲ್ಲ. ಇವತ್ತಿನ ತನಕ ಹೋಗಿಲ್ಲ, ಪರಿಹಾರ ಕೊಟ್ಟಿಲ್ಲ. ನೆಹರು ಫೋಟೋನೇ ಹಾಕಿಲ್ಲ ಇವ್ರು. ನರೇಂದ್ರ ಮೋದಿ ನೆಹರು ಸ್ಮರಣೆ ಮಾಡ್ತಾರೆ. ಇವರಿಗೆ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಮುಚ್ಚಳಿಕೆ ಬರೆದು ಕೊಟ್ಟು ಬಂದ ಮೇಲೆ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರು. ಬಿಜೆಪಿ ಅವ್ರುದ್ದು ನಕಲಿ ದೇಶಭಕ್ತಿ. ಇವ್ರು ಆರ್ ಎಸ್ ಎಸ್ ಕೈಗೊಂಬೆ ಆಗಿರೋರು ಮತ್ತೇನು ಹೇಳ್ತಾರೆ. ಬೊಮ್ಮಾಯಿ ಅವರನ್ನು ಮತ್ತೊಮ್ಮೆ ಆರ್‌ಎಸ್‌ಎಸ್ ಕೈಗೊಂಬೆ ಎಂದ ಸಿದ್ದರಾಮಯ್ಯ.
10:55 AM IST
ನಮ್ಮ ಸರ್ಕಾರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ: ಈಶ್ವರಪ್ಪ
ಶಿವಮೊಗ್ಗದಲ್ಲಿ ಚಾಕು ಇರಿತದ ಪ್ರಕರಣ ಘಟಿಸಿದ ತಕ್ಷಣವೇ ಆರೋಪಿಗಳನ್ನು ಬಂಧಿಸಿದ ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕೃತ್ಯ ಎಸೆದರರನ್ನ ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಿದೆ. ಮುಸಲ್ಮಾನ ಗುಂಡಾಗಳಿಗೆ ನಾನ್ ಹೇಳ್ತೀನಿ, ಯಾರು ಗುಂಡಾಗಳಿದ್ದಾರೆ ಅವರಿಗೆ ಕರೆದು ಮುಸ್ಲಿ ನಾಯಕರು ಬುದ್ದಿವಾದ ಹೇಳಬೇಕು. ಇಲ್ಲ ಅಂದ್ರೆ ಅಂತ ಗುಂಡಾಗಳನ್ನ ಸರ್ಕಾರ ನೋಡಿಕೊಳ್ಳುತ್ತೆ. ಈ ಘಟನೆಗೆ ಎಸ್‌ಡಿಪಿಐ ಕಾರ್ಯಕರ್ತನೇ ಕಾರಣ. ಅವನ ಹೆಂಡ್ತಿ ಕಾಂಗ್ರೆಸ್ ಪಾಲಿಕೆ ಸದಸ್ಯರು. SDPI ಬ್ಯಾನ್ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ. ನಿನ್ನೆ ಸ್ಯಾಂಪಲ್ ತೋರಿಸಿದ್ದಾರೆ ಪೊಲೀಸರು. ಮುಸ್ಲಾಂನ್ ಶಾಂತಿ ಕಾಪಾಡಲು ಮುಂಚೆಯಿಂದಲೂ ಕೆಲವು ಹಿರಿಯ ಮುಸಲ್ಮಾನರು ಮಾಡುತ್ತಿದ್ದಾರೆ. ಯುವಕರಿಗೆ ಬುದ್ದಿಹೇಳಿ. ಯಾರು ಗುಂಡಾಗಳಿದ್ದಾರೆ ಅವರಿಗೆ ಬುದ್ದಿ ಹೇಳಿ. ಇಲ್ಲ ಅಂದ್ರೆ ಹಿಂದು ಸಮಾಜ ನೋಡಿಕೊಳ್ಳುತ್ತೆ,, ಸರ್ಕಾರ ಬುದ್ದಿ ಕಲಿಸಲಿದೆ. SDPI ಮನಸ್ಥಿತಿ ಬದಲಾಗೋಲ್ಲ. ಹಿಂದೂಗಳನ್ನ ಕೊಲೆ ಮಾಡುವ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದಲೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗ್ತಿದೆ. ನಮ್ಮ ಶಿವಮೊಗ್ಗದವರು ಶಾಂತಿಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆ ಇರಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ, ಎಂದ ಕೆ.ಎಸ್.ಈಶ್ವರಪ್ಪ.
10:17 AM IST
ಸಿದ್ದರಾಮಯ್ಯ ಸಿಎಂ ಆಗಬೇಕು: ಶ್ರೀರಾಮುಲು ಹೀಗೆ ಹೇಳಿದ್ಯಾಕೆ?
ಬಳ್ಳಾರಿ: ಸದಾ ಸಿದ್ದರಾಮಯ್ಯ ವಿರುದ್ಧ ಟಿಕೆ ಮಾಡೋ ಶ್ರೀರಾಮುಲು ಇದೀಗ ಸಿದ್ದರಾಮಯ್ಯ ಸಿಎಂ ಆಗಬೇಕೆಂದಿದ್ದಾರೆ. ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಶ್ರೀರಾಮುಲು.ಮಾಜಿ ಸಿಎಂ ಸಿದ್ದರಾಮಯ್ಯ ಪರ ಸಚಿವ ಶ್ರೀರಾಮುಲು ಬ್ಯಾಟಿಂಗ್. ಶ್ರೀರಾಮುಲು ಕುರುಬ ಸಮುದಾಯ. ಸಿದ್ದರಾಮಯ್ಯ ವಿರೋಧಿಯಲ್ಲ. ಅವಕಾಶ ಬಂದ್ರೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ನನಗೂ ಇದೆ..ನಾನು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನ ಸಿದ್ದರಾಮಯ್ಯ ಕೂಡಾ ಒಪ್ಪುತ್ತಾರೆ..ದೊಡ್ಡ ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ತಂತ್ರಗಳನ್ನ ಮಾಡಲೇಬೇಕು. ಮುಂದೊಂದು ದಿನ ನಾನು ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಒಂದೇ ವೇದಿಕೆಯಲ್ಲಿ ಬರುವವರು. ಹಿಂದುಳಿದ ಜಾತಿಗಳನ್ನ ಒಂದು ಮಾಡುವ ಪ್ರಯತ್ನವನ್ನ ನಾನು ಮತ್ತು ಸಿದ್ದರಾಮಯ್ಯ ಮಾಡುತ್ತಿದ್ದೇವೆ. ನಾನು ಮತ್ತ ಸಿದ್ದರಾಮಯ್ಯ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ವಿ. ನಾವಿಬ್ಬರು ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಹೇಗೆ ಅನ್ನೋದನ್ನ ಮುಂದೊಂದು ದಿನ ಹೇಳುವೆ. ಸಿದ್ದರಾಮಯ್ಯ ಬದಾಮಿ ಕ್ಷೇತ್ರದಲ್ಲಿ ಹೇಗೆ ಗೆದ್ರು ಅನ್ನೋದನ್ನ ಹೋಗಿ ಅವರನ್ನ ಕೇಳಿ ಪರೋಕ್ಷವಾಗಿ ಸಿದ್ದರಾಮಯ್ಯ ಗೆಲ್ಲಲು ಶ್ರೀರಾಮುಲು ಸಹಕಾರ ಮಾಡಿದ್ರಂತೆ. ನಾನು ಸಿದ್ದರಾಮಯ್ಯ ವಿರೋಧಿಯಲ್ಲ. ನೋಡೋಕೆ ಮಾತ್ರ ನಾವೂ ವಿರುದ್ಧ. ನಮ್ಮ ದೋಸ್ತಿ ಬೇರೇನೆ ಇದೆ.. ಒಳಗೊಳಗೆ ನಾವೂ ಎನೋ ಮಾಡಿಕೊಳ್ಳುತ್ತೇವೆ. ಅದೆಲ್ಲಾ ನಿಮ್ಮಗ್ಯಾಕೆ..? ನಿಮಗೆ ಗೊತ್ತಗಲ್ಲ ಎಂದ ಶ್ರೀರಾಮುಲು.
ನಾವಿಬ್ಬರೂ ರಾಜಕಾರಣದಲ್ಲಿ ಇರಬೇಕು.ನಾವಿಬ್ಬರೂ ವಿಧಾನಸೌಧದ ಒಳಗೆ ಇರಬೇಕು. ಸಿದ್ದರಾಮಯ್ಯಗೆ ಭಗವಂತ ಆರ್ಶಿವಾದ ಮಾಡಿದ್ರೆ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ. ಹಿಂದುಳಿದ ವರ್ಗದಿಂದ ಅವಕಾಶ ಸಿಕ್ಕರೇ ನಾನು ಮುಖ್ಯಮಂತ್ರಿ ಆಗುವೆ. ಪರೋಕ್ಷವಾಗಿ ಮುಖ್ಯಮಂತ್ರಿ ಕುರ್ಚಿ ಎರುವ ಆಸೆ ಹೊರಹಾಕಿದ ಸಚಿವ ಶ್ರೀರಾಮುಲು. ಬಳ್ಳಾರಿ ಜಿಲ್ಲಾ ಕುರುಬ ಸಂಘದ ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀರಾಮುಲು ಹೇಳಿಕೆ.
10:09 AM IST
ಅಂತೂ ಕೊನೆಗೂ ಶಿವಾನಂದ ಫ್ಲೈ ಓವರ್ ಓಪನ್
ಅಂತೂ ಕೊನೆಗೂ ಶಿವಾನಂದ ಫ್ಲೈ ಓವರ್ ಓಪನ್. ಕಳೆದ ಐದು ವರ್ಷಗಳಿಂದ ಕುಂಟುತ್ತಾ ಸಾಗಿದ ಕಾಮಗಾರಿ. ಕೊನೆಗೂ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಈ ತಿಂಗಳ ಅಂತ್ಯಕ್ಕೆ ಶಿವಾನಂದ ಸರ್ಕಲ್ ಫ್ಲೈ ಓವರ್ ಉದ್ಘಾಟನೆ. ಈಗಾಗಲೇ ಫ್ಲೈ ಓವರ್ ನ ಒಂದು ಬದಿಯಲ್ಲಿ ಪ್ರಾಯೋಗಿಕ ಸಂಚಾರ ಪ್ರಾರಂಭ. ಪ್ರಾಯೋಗಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬಿಬಿಎಂಪಿ. ತಿಂಗಳಾಂತ್ಯಕ್ಕೆ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತ. ನಿನ್ನೆ ಯಿಂದ ಪ್ರಾರಂಭವಾಗಿರುವ ಪ್ರಾಯೋಗಿಕ ಸಂಚಾರ. ಇನ್ನೊಂದು ಬದಿಯ ರಸ್ತೆಯಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ಇನ್ನೂ 10 ರಿಂದ 12 ದಿನಗಳಲ್ಲಿ ಕಾಮಗಾರಿ ಕೆಲಸ ಸಂಪೂರ್ಣ ಮುಗಿಯಲಿದೆ. ಕಾಮಗಾರಿ ಮುಗಿದ ಬಳಿಕ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
10:07 AM IST
Tumkuru: ಬೈಕಿನಲ್ಲಿ ಸೇರಿ ಕೊಂಡಿದ್ದ ಹಾವು ನೋಡಿ ಬೆಚ್ಚಿಬಿದ್ದ ಬೈಕ್ ಮಾಲೀಕ
ತುಮಕೂರು: ಬೈಕ್ ನಲ್ಲಿ ಸೇರಿಕೊಂಡಿದ್ದ ಹಾವು ನೋಡಿ ಬೆಚ್ಚಿಬಿದ್ದ ಬೈಕ್ ಮಾಲೀಕ. ತುಮಕೂರು ನಗರದ ರಂಗಾಪುರದಲ್ಲಿ ಘಟನೆ.ರಂಗಾಪುರ ಗ್ರಾಮದ ಶರತ್ ಎಂಬುವರಿಗೆ ಸೇರಿದ ಬೈಕ್. ಮನೆ ಬಳಿ ನಿಲ್ಲಿಸಿದ್ದ ವೇಳೆ ಬೈಕ್ ಒಳಗೆ ಸೇರಿಕೊಂಡಿದ್ದ ನಾಗರಹಾವು. ನಾಗರ ಹಾವು ನೋಡಿದ ತಕ್ಷಣ ಗಾಬರಿಗೊಂಡ ಬೈಕ್ ಮಾಲೀಕ ಶರತ್. ಕೂಡಲೇ ಉರಗ ತಜ್ಞ ದಿಲೀಪ್‌ಗೆ ಕರೆ ಮಾಡಿ ಮಾಹಿತಿ. ಬೈಕ್ ಗ್ಯಾರೇಜ್‌ಗೆ ಕೊಂಡೊಯ್ದು ಬೈಕ್‌ನಲ್ಲಿದ್ದ ನಾಗರಹಾವು ರಕ್ಷಣೆ. ಉರಗ ತಜ್ಞ ದಿಲೀಪ್ ರಿಂದ ನಾಗರಹಾವು ರಕ್ಷಣೆ. ತುಮಕೂರು ಹೊರವಲಯದ ಅರಣ್ಯ ಪ್ರದೇಶಕ್ಕೆ ನಾಗರಹಾವು ಬಿಟ್ಟು ರಕ್ಷಣೆ.
10:03 AM IST
ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ : ಬೆಂಗಳೂರು ತುಂಬಾ ಕಸ
ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಹಿನ್ನೆಲೆಯಲ್ಲಿ ಪಾದಯಾತ್ರೆ ಸಾಗಿ ಬಂದ ದಾರಿಯುದ್ದಕ್ಕೂ ಗಲೀಜೋ ಗಲೀಜು. ನಗರದ ಕೆಆರ್ ಸರ್ಕಲ್ ನಲ್ಲಿ ಕಲ್ಲಂಗಡಿ ಹಣ್ಣಿನ ಸಿಪ್ಪೆಗಳ ರಾಶಿ. ಪಾದಯಾತ್ರೆ ಮುಗಿದು ಗಂಟೆ ಹಲವಾದರು ಕ್ಲೀನ್ ಮಾಡದೆ ಹಾಗೇ ಬಿಟ್ಟಿರುವ ಬಿಬಿಎಂಪಿ. ಕಲ್ಲಂಗಡಿ ಹಣ್ಣಿನ ಸಿಪ್ಪೆಗಳಿಂದ ಗಬ್ಬೆದ್ದು ಹೋಗಿರುವ ಕೆಆರ್ ಸರ್ಕಲ್ ಬಸ್ ನಿಲ್ದಾಣ. ಬಸ್ ನಿಲ್ದಾಣದಲ್ಲೇ ರಾಶಿ ರಾಶಿ ಬಿದ್ದಿರುವ ಕಲ್ಲಂಗಡಿ ಸಿಪ್ಪೆ. ನಿನ್ನೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಹಣ್ಣು ಹಂಚಿದ್ದ ಕಾಂಗ್ರೆಸ್ ನಾಯಕರು.
9:51 AM IST
ರಾಜ್ಯಾದ್ಯಂತ ಇಂದಿನಿಂದ ಬಿಸಿಯೂಟ ಬಂದ್ ಆಗುತ್ತಾ?
ಬಿಸಿಯೂಟ ಯೋಜನೆ ಬಂದ್ ಮಾಡಿ ಬೀದಿಗೆ ಇಳಿಯಲಿದ್ದಾರೆ ಬಿಸಿಯೂಟ ಕಾರ್ಯಕರ್ತರು. ಒಂದು ಲಕ್ಷದ 19 ಸಾವಿರ ಬಿಸಿಯೂಟ ನೌಕರರು ಕೆಲಸ ಬಹಿಷ್ಕರಿಸಿ ಪ್ರತಿಭಟನೆ. ಇಂದು ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ ಬಿಸಿಯೂಟ ನೌಕರರು ಬೃಹತ್ ಪ್ರತಿಭಟನೆ. 2001ರಲ್ಲಿ ಪ್ರಾರಂಭವಾದ ಬಿಸಿಯೂಟ ಯೋಜನೆ. 1 ಲಕ್ಷದ 19 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ 50 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲಾಗುತ್ತೆ. 2500 ಸಾವಿರ ರೂಪಾಯಿಗೆ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರು. ಬಿಸಿಯೂಟ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯ. 60 ವರ್ಷ ತುಂಬಿದ 6 ಸಾವಿರ ಬಿಸಿಯೂಟ ನೌಕರರನ್ನ ವಜಾ ಮಾಡಲಾಗಿದೆ. ಯಾವುದೇ ಪರಿಹಾರ ಕೊಡದೇ ಸರ್ಕಾರ ಇವರನ್ನ ಕೆಲಸದಿಂದ ವಜಾಗೊಳಿಸಲಾಗಿದೆ. ಪರಿಹಾರಕ್ಕಾಗಿ ಬೀದಿಗೆ ಇಳಿಯಲಿರುವ ಬಿಸಿಯೂಟ ನೌಕರರು. ಏಕಾಏಕಿ ಕೆಲಸದಿಂದ ತೆಗೆದಿರುವ ನೌಕರರಿಗೆ ಪರಿಹಾರ ಕೊಡಬೇಕು. ಶಿಕ್ಷಣ ಸಚಿವ ಬಿಸಿ ನಾಗೇಶ್ ಮನವಿ ಮಾಡಿದ್ದೇವೆ. ಆದ್ರೆ ಯಾವುದೇ ಪರಿಹಾರ ನೀಡದೇ ಕೆಲಸದಿಂದ ಸರ್ಕಾರ ವಜಾ ಮಾಡಿದೆ. 19 ವರ್ಷಗಳಿಂದ ದುಡಿಸಿಕೊಂಡು ಇದೀಗ ಯಾವುದೇ ಪರಿಹಾರ ಇಲ್ಲದೆ ಕೆಲಸದಿಂದ ಕೈ ಬಿಟ್ಟಿದ್ದಾರೆ. ನಮ್ಮ ಬೇಡಿಕೆ ಸರ್ಕಾರದ ಮುಂದೆ ಇಟ್ಟಿದ್ದೇವೆ. ಯಾರು ಕೂಡ ನಮ್ಮ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿಲ್ಲ. ಅಂತಿಮವಾಗಿ ನಾವು ಬಿಸಿಯೂಟ ಬಂದ್ ಮಾಡಿ ಪ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸಿಐಟಿಐಯು ರಾಜ್ಯಾಧ್ಯಕ್ಷೆ ವರಲಕ್ಷೀ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
9:46 AM IST
ಮೆಟ್ರೋದಲ್ಲಿ ವೀರ ಸಾವರ್ಕರ್ ಫೋಟೋ ಗಲಾಟೆ
ಮೆಟ್ರೋದಲ್ಲಿ ವೀರ ಸಾವರ್ಕರ್ ಫೋಟೋ ವಿವಾದ. ಮೆಜೆಸ್ಟಿಕ್ ಮೆಟ್ರೋನಲ್ಲಿ ಸಾವರ್ಕರ್ ಫೋಟೋ ಹಾಕಿರೋ BMRCL. ಸ್ವಾತಂತ್ರ್ಯ ವೀರರ ಫೋಟೋ ಜೊತೆಗೆ ಸಾವರ್ಕರ್ ಫೋಟೋ. ಇದಕ್ಕೆ ಕೆಲವರಿಂದ ಅಪಸ್ವರ. ಸಾವರ್ಕರ್ ಯಾರು? ಅವರ ಕೊಡುಗೆ ಏನು? ಬ್ರಿಟಿಷರ ಕ್ಷಮೆ ಕೇಳಿದ ಸಾವರ್ಕರ್‌ಗೆ ನಾವೇಕೆ ಗೌರವ ಕೊಡಬೇಕೆಂದು ವಾದ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ ಸಾವರ್ಕರ್ ಫೋಟೋ. ಇತ್ತ ಸಾವರ್ಕರ್ ಫೋಟೋ ಬದಲಿಗೆ ಜಿನ್ನಾ ಫೋಟೋ ಹಾಕ್ಬೇಕಿತ್ತಾ? ಸಂಸತ್ ಭವನದಲ್ಲೂ ಸಾವರ್ಕರ್ ಫೋಟೋ ಇದೆ. ನಿಮಗೆ ತೆಗಿಸೋ ತಾಕತ್ತಿದ್ಯಾ ಎಂದು ಕೌಂಟರ್. ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಸಾವರ್ಕರ್ ಫೋಟೋ ಬಗ್ಗೆ ಪರ ವಿರೋಧ ಭಾರೀ ಚರ್ಚೆ ಆರಂಭವಾಗಿದೆ.
5:58 PM IST:
ಶಿವಮೊಗ್ಗ: ಆರೋಪಿಗಳನ್ನು ಕೋರ್ಟಿಗೆ ಹಾಜರು ಪಡಿಸಿದ ದೊಡ್ಡಪೇಟೆ ಪೊಲೀಸರು. ಮತ್ತೇ ಮೂರು ಜನರನ್ನು ಬಂಧಿಸಿ ಕೋರ್ಟಗೆ ಹಾಜರು. ಶಿವಮೊಗ್ಗ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರು ಪಡಿಸಿದ ಪೊಲೀಸರು. ರೆಹಮಾನ್, ನದೀಮ್, ತನ್ವೀರ್ ಅವರನ್ನು ಕೋರ್ಟ್‌ಗೆ ಹಾಜರು ಪಡಿಸಿದ ದೊಡ್ಡಪೇಟೆ ಪೊಲೀಸರು.
5:43 PM IST:
ಶಿವಮೊಗ್ಗ ಮತ್ತು ಮಂಗಳೂರುಗಳ ನಂತರ, ಇದೀಗ ಉಡುಪಿಯಲ್ಲಿಯೂ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವೀರ ಸಾವರ್ಕರ್ ಅವರು ಫೋಟೋಗಳ ಪ್ರದರ್ಶನದ ವಿವಾದ ಹುಟ್ಟಿ ಕೊಂಡಿದೆ. ನಗರದ ಬ್ರಹ್ಮಗಿರಿ ವೃತ್ತದಲ್ಲಿ ಸಾರ್ವಕರ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರ ಇರುವ ಬ್ಯಾನರ್ ಅಳವಡಿಸಲಾಗಿದ್ದು, ಇದೀಗ ಪರ ವಿರೋಧ ವಾದವಿವಾದಕ್ಕೆ ಕಾರಣವಾಗಿದೆ. ಸಾವರ್ಕರ್ ಇರುವ ಬ್ಯಾನರನ್ನು ತೆರವುಗೊಳಿಸುವಂತೆ ಪಿ.ಎಫ್.ಐ. ಸಂಘಟನೆ ಆಗ್ರಹಿಸಿದೆ. ಆದರೇ ಹಿಂದೂ ಸಂಘಟನೆಗಳು ಬ್ಯಾನರ್ ತೆರವುಗೊಳಿಸುವುದನ್ನು ವಿರೋಧಿಸಿವೆ.
ಈ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಬ್ರಹ್ಮಗಿರಿ ವೃತ್ತದಲ್ಲಿರುವ ಬ್ಯಾನರ್ ಬಳಿ ವಿಶೇಷ ನಾಕಬಂದಿ ನಿಯೋಜಿಸಿದ್ದು, ಈ ಪರಿಸರದಲ್ಲಿ ತಿರುಗಾಡುವವರ ಮೇಲೆ ಕಣ್ಣಿಟ್ಟಿದ್ದಾರೆ ಮತ್ತು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಪ್ರಮೋದ್ ಉಚ್ಚಿಲ, ಯೋಗಿಶ್ ಕುತ್ಪಾಡಿ, ಶೈಲೇಶ್ ದೇವಾಡಿಗ ಎಂಬವರು ಈ ಬ್ಯಾನರ್ ಅಳವಡಿಸಿದ್ದು, ಬ್ಯಾನರ್ ಹಾಕುವುದಕ್ಕೆ ಉಡುಪಿ ನಗರಸಭೆಯಿಂದ 15 ದಿನಗಳ ಅವಧಿಗೆ ಅಧಿಕೃತ ಪರವಾನಿಗೆಯನ್ನು ಪಡೆದಿದ್ದಾರೆ.
4:51 PM IST:
ನಿನ್ನೆ ಕಂಠೀರವದಲ್ಲಿ ನಡೆದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತಲೆ ಬಾಗುವೆ ಎಂಬುದಾಗಿ ಹೇಳಿದ್ದರು.
4:45 PM IST:
ರಾಜಿನಾಮೆ ಕೊಡೋಕು ರೆಡಿ ಇದೀನಿ. ನಾನು ಕಟ್ಟ ಕಡೆಯ ಮನುಷ್ಯ, ಅಧಿಕಾರಕ್ಕಾಗಿ ಅಂಟಿಕೊಂಡವನಲ್ಲ. ನನ್ನನ್ನ ಸಿಗಾಕಿಸೋ ಅವಶ್ಯಕತೆಯೂ ಇಲ್ಲ. ಸಿಎಂ ಕರೆದು ರಾಜೀನಾಮೆ ಕೊಡು ಅಂದ್ರೆ ನಾನು ರೆಡಿ ಇದೀನಿ. ಹಿಂಗೆಲ್ಲಾ ಸುತ್ತಿ ಸುದ್ದಿ ಮಾಡೋ ಅವಶ್ಯಕತೆ ಇಲ್ಲ. ನಾನು ಜೆಸಿ ಪುರದಲ್ಲಿ ಆರಾಮಗಿ ಇದೀನಿ. ಪ್ರವೈಟ್ ಆಗಿ ಇಬ್ಬರೂ ವೈಯಕ್ತಿಕವಾಗಿ ಮಾತಾನಡೊದು ತಪ್ಪು. ಅವನು ಅನುಮತಿ ಇಲ್ಲದೆ ತಪ್ಪು ಮಾಡಿದ್ದಾನೆ.ಮೂರನೇ ಅವನು ಬೇನಾಮಿ ಅವ್ನು ಮಾತಾಡ್ತಾನೆ. ಇಷ್ಟು ದೊಡ್ಡದು ಮಾಡ್ಬಾರ್ದ. ನೋವು ನನಗೂ ಆಗುತ್ತೆ. ರಾಜಕಾರಣಿಗಳಿಗೆ ಹೃದಯ ಇಲ್ಲ ಅನ್ಕೋಳೊದು ತಪ್ಪು, ಎಂದಿದ್ದಾರೆ ಮಾಧುಸ್ವಾಮಿ.
4:02 PM IST:
ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ವಿಚಾರ, ಸಿದ್ದರಾಮಯ್ಯನವರು ವೋಟಿಗಾಗಿ ಓಲೈಕೆ ಮಾಡಿ ವಿ.ಡಿ.ಸಾವರ್ಕರ್ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಸಾವರ್ಕರ್ ಬ್ರಿಟಿಷರ ಬೂಟು ನೆಕ್ಕಿದರು ಎಂಬ ಹೇಳಿಕೆ ಕೆಲವರ ಪ್ರಚೋದನೆ ನೀಡಿದೆ. ಹಿರಿಯ ರಾಜಕಾರಣಿಯಾಗಿ ಅವರ ನೀಡಿದ ಹೇಳಿಕೆ ಸಮುದಾಯವನ್ನು ಎತ್ತಿ ಕಟ್ಟಿದೆ. ಘಟನೆ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದ ಗೃಹ ಸಚಿವರು. ಯಾವ ಯಾವ ಸಂಘಟನೆ ಹಿನ್ನಲೆ ಇದೆ ಯಾರು ಯಾರು ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣ ತಾರ್ಕಿಕ ಅಂತ್ಯದವರೆಗೂ ಕೊಂಡೋಯ್ಯುತ್ತೇವೆ, ಎಂದಿದ್ದಾರೆ.
3:39 PM IST:
ಬೆಳಗಾವಿ: ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ಇದ್ದ ಫ್ಲೆಕ್ಸ್ ಕಿತ್ತು ಹಾಕಿದ ಪ್ರಕರಣ. ಸಾವರ್ಕರ್ ಫೋಟೋ ಕಿತ್ತಿದ್ದು ಮಹಾ ಅಪರಾಧ. ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ. ಸಾವರ್ಕರ್ ಕೂಡ ದೇಶಕ್ಕಾಗಿ ಹೋರಾಟ ಮಾಡಿದಂತವರು. ಅವರ ಬಗ್ಗೆ ತಿಳಿದುಕೊಳ್ಳದೇ ಕೆಲ ಕಿಡಿಗೇಡಿಗಳು ಫೋಟೋ ಹರಿದು ಹಾಕೋದು, ಬೋರ್ಡ್ ತಗೆಯುವುದು ಮಾಡಿದ್ದು ಸರಿಯಲ್ಲ. ಆ ರೀತಿ ಯಾರೂ ಕೂಡ ಮಾಡಬಾರದು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕಬೇಕಾದ ದೇಶ ಇದು. ನಿನ್ನೆ ಪ್ರಧಾನಿ ಭಾಷಣ ನೋಡಿದ್ರೆ ಸಾಕು, ಪ್ರಧಾನಮಂತ್ರಿಯವರೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಎಲ್ಲರೂ ಶಾಂತಿಯುತದಿಂದ ಬಾಳಬೇಕು ಅಂತಾ ಅಷ್ಟೇ ಹೇಳ್ತೀನಿ. ಕಾಂಗ್ರೆಸ್‌ನವರು ಇಂತಹ ಕೀಳು ಮಟ್ಟದ ರಾಜಕಾರಣ ಮಾಡಿದ್ದಕ್ಕೆ ಮೂಲೆ ಗುಂಪು ಆಗಿದ್ದಾರೆ. ಇನ್ನೂ ಅದನ್ನ ಮುಂದುವರಿಸಿದ್ರೆ ಸ್ವಚ್ಛ ಆಗಿ ಹೋಗ್ತಾರೆ, ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ದೀಪಕ್ಕ ದಿಕ್ಕಿಲ್ಲದ ಮನೆ ಹಾಗೇ ಆಗುತ್ತೆ. ಸಾವರ್ಕರ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಲಿಲ್ಲ ಗೋವಿಂದ ಕಾರಜೋಳ. ಸಿದ್ದರಾಮಯ್ಯ ಬೆಳಗಾವಿಗೆ ಬರ್ತಾರೆ ಆಗ ಅವರನ್ನೇ ಕೇಳಿ ಎಂದ ಗೋವಿಂದ ಕಾರಜೋಳ.
2:59 PM IST:
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ವಾತಂತ್ರ್ಯ ಅಮೃತಮಹೋತ್ಸವದ ಆಚರಣೆಯೊಂದಿಗೆ ಮನೆಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ರಾಷ್ಟ್ರ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ ಭಾರತೀಯರು. ಮುಂದಿನ 25 ವರ್ಷದ ಗುರಿಯನ್ನು ಹಾಕಿಕೊಂಡು ಕೆಲಸ ಮಾಡಲು ಮುಂದಾಗಿ ರುವ ಪ್ರಧಾನಿ ಕಾರ್ಯವನ್ನು ನಾನು ಸ್ವಾಗತಿಸುತ್ತೇನೆ. ರಾಷ್ಟ್ರ ಭಾವನೆ ಮಾತ್ರ ರಾಷ್ಟ್ರ ಉಳಿಸಬಲ್ಲದು. ಅದು ಈಗ ಜಾಸ್ತಿ ಆಗಿದೆ. ಬ್ರಿಟಿಷರ ವಿರುದ್ಧ ಕೇವಲ ಸಿಪಾಯಿ ದಂಗೆ ಎಂದು ನಮುದಾಗಿದ್ದ 1947ರ ಸ್ವಾತಂತ್ರ್ಯ ಸಂಗ್ರಾಮವನ್ನು ಕೃತಿಗೆ ಇಳಿಸಿ, ಮದನ್ ಲಾಲ್ ದಿಂಗ್ರಾರಂತ ಶೋಕಿಲಾಲ ಆಗಿದ್ದ ನವಯುವಕನನ್ನು ರಾಷ್ಟ್ರ ಭಕ್ತನಾಗಿ ಬದಲಾಯಿಸಿ, ಅಭಿನವ ಭಾರತ ಕಟ್ಟಿ, ಬ್ರಿಟಿಷ್ ಗೆ ಸಿಂಹ ಸ್ವಪ್ನ ಆಗಿ, 50 ವರ್ಷಗಳ ಕರಿ ನೀರಿನ ಶಿಕ್ಷೆ ಅನುಭವಿಸಿ ಅಂಡಮಾನ್ ಸೆರಮನೆಯಲ್ಲಿ ನರಕಯಾತನೆ ಅನುಭವಿಸಿ, ಬೇಡಿಯನ್ನೆ ಲೇಖನಿಯಾಗಿಸಿ, ಗೋಡೆಯನ್ನೇ ಹಾಳೆಯಾಗಿಸಿ, ದೇಶ ಭಕ್ತಿ ಗೀತೆ ರಚಿಸಿದವ ವೀರ್ ಸಾವರ್ಕರ್. ಆದ್ರೆ ಕೆಲವು ಮತಿಯ ಸಂಘಟನೆಗಳು
ರಾಜಕೀಯ ಲಾಭವೇ ಸಿದ್ಧಾಂತ ಎಂದು ನಂಬಿ ಸಾವರ್ಕರ್ ಅಪಾಮಾನ ಮಾಡಿದವರನ್ನು ನಾನು ಖಂಡಿಸ್ತೇನೆ, ಎಂದಿದ್ದಾರೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ.
1:55 PM IST:
ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದ ವಿಶೇಷ ಪೊಲೀಸ್ ಪಡೆ. ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆಯ ಸರ್ಪಗಾವಲು. ಸೋಮವಾರ ನಡೆದ ಚೂರಿ ಇರಿತದ ಪ್ರಕರಣಕ್ಕೆ ಸಂಬಂದಿಸಿದಂತೆ 3 ನೇ ಆರೋಪಿಯ ಬಂಧನದ ವೇಳೆ ಪೊಲೀಸರಿಂದ ಗುಂಡು. ಆರೋಪಿ ಮೊಹಮದ್ ಜಬಿ ಎಂಬಾತನನ್ನು ಬಂಧಿಸಲು ಮಂಗಳವಾರ ಮುಂಜಾನೆ ವಿನೋಬನಗರ ಪಿಎಸ್ ಐ ಮಂಜುನಾಥ ತಮ್ಮ ಸಿಬ್ಬಂದಿ ಜೊತೆ ಮುಂದಾದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ. ಈ ವೇಳೆಯಲ್ಲಿ ಮಂಜುನಾಥ ಅತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದರು.ಗಾಯಗೊಂಡ ಆರೋಪಿಯನ್ನು ಬಂಧಿಸಿ ಚಿಕಿತ್ಸೆಗಾಗಿ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೇಮ್ ಸಿಂಗ್ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಆರೋಪಿತರಾದ ನದೀಮ್ ಮತ್ತು ಅಬ್ದುಲ್ ರೆಹಮಾನ್ ರವರುಗಳನ್ನು ದಸ್ತಗಿರಿ ಮಾಡಲಾಗಿತ್ತು.
1:27 PM IST:
ರಾಮನಗರ; ಎರಡು ರಾಷ್ಟ್ರೀಯ ಪಕ್ಷಗಳ ತಿರಂಗ ಧ್ವಜ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದ ವಳಗೆರೆದೊಡ್ಡಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ತಿರಂಗ ಧ್ವಜ ಇಟ್ಟುಕೊಂಡು ಓಡಾಡಿದರೆ ಏನೂ ಆಗೋಲ್ಲ. ತಿರಂಗ ಧ್ವಜಕ್ಕೆ ಗೌರವ ಸಲ್ಲಿಸಬೇಕು ಅಂತಿದ್ದರೆ ಹೃದಯಗಳಲ್ಲಿ ಗೌರವದ ಭಾವನೆಗಳು ಇರಬೇಕು. ಅದಿದ್ದರೆ ಮೊದಲು ದೇಶದಲ್ಲಿ ಅಶಾಂತಿಯ ವಾತಾವರಣ ಹೋಗಬೇಕು. ಜೊತೆಗೆ ನಮ್ಮ ದೇಶದಲ್ಲಿ ಶಿಶುಗಳ ಮರಣ ದರ ಏನಿದೆ? ಸುಮಾರು 17 ಲಕ್ಷ ಜನನ ಶಿಶುವಿನ ಸಾವು ಕಾಣುತ್ತಿದ್ದೇವೆ. ಪ್ರತಿವರ್ಷ 17 ಲಕ್ಷ ನವಜಾತ ಶಿಶುಗಳು ಮೃತಪಡುತ್ತಿವೆ. ಇಂತಹ ಗಂಭೀರ ಸಮಸ್ಯೆಗಳಿಗೆ ಸೂಕ್ತ ಪರಿಹಾರದ ಅಗತ್ಯವಿದೆ ಸರಿಯಾದ ರೀತಿಯಲ್ಲಿ ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡುತ್ತೀವಿ ಅಂತಾರೆ. ದೇಶದಲ್ಲಿ ಇನ್ನು ಲಕ್ಷಾಂತರ ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕೂ ಪರಿತಪಿಸುವ ದುಸ್ಥಿತಿ ಇದೆ. ರೈತರ ಪರಿಸ್ಥಿತಿ ಏನಾಗಿದೆ ಎಂಬುದನ್ನ ನೋಡುತ್ತಿದ್ದೇವೆ. ನರೇಂದ್ರ ಮೋದಿ ಹೇಳಿದ್ದರು ನಮ್ಮ ರೈತರು ಬೆಳೆಯುವ ಬೆಳೆಯ ಬೆಲೆ ದ್ವಿಗುಣವಾಗುತ್ತದೆ ಎಂದು. ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ರೈತರ ಪರಿಸ್ಥಿತಿಯನ್ನ ಅದೆಂತಹದ್ದೋ ಭ್ರಷ್ಟಾಚಾರ ನಿಲ್ಲಿಸುತ್ತೀವಿ ಅಂತಾ ಹೇಳ್ತಾರೆ . ಈಗೇನೋ ಪಂಚಪ್ರಾಣ ಪ್ರತಿಜ್ಞೆ ಕಾರ್ಯಕ್ರಮವಂತೆ! ಯಾವ ಪಂಚಪ್ರಾಣ, ಯಾವ ಪಂಚಪ್ರಾಣದ ಕಾರ್ಯಕ್ರಮ. ಕಳೆದ ಎಂಟು ವರ್ಷಗಳಲ್ಲಿ ಏನು ಮಾಡಿದ್ದಾರೆ? ಬರಿ ಭಾಷಣಕ್ಕೆ ಮಾತ್ರ ಇವರು ಸೀಮಿತ. ಇವರ ನಡವಳಿಕೆಗಳೇ ದೇಶದಲ್ಲಿ ಅಶಾಂತಿ ವಾತಾವರಣ ಮೂಡಲು ಕಾರಣ, ಎಂದಿದ್ದಾರೆ.
1:23 PM IST:
ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ರಜತ ಮಹೋತ್ಸವ ಹಿನ್ನಲೆ ಮೆಟ್ರೋದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ಮಾಡಿದ್ರು. ಒಂದೆಡೆ ಬಿಎಂಟಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ರೆ ಇತ್ತ ನಮ್ಮ ಮೆಟ್ರೋದಲ್ಲೂ ಎಂದಿಗಿಂತ ಅಧಿಕ ಸಂಖ್ಯೆಯಲ್ಲಿ ಜನ ಸಂಚಾರ ಮಾಡಿದ್ರು. ಒಂದೇ ದಿನ ಬರೋಬ್ಬರಿ 5.74 ಲಕ್ಷ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಇತಿಹಾಸ ಸೃಷ್ಟಿಯಾಗಿದೆ.
1:03 PM IST:
ಕಾರವಾರ (ಉತ್ತರಕನ್ನಡ): ನಿರಂತರ ಮಳೆಗೆ ನೆನೆದಿದ್ದ ಶಾಲಾ ಕಟ್ಟಡ ಕುಸಿತ- ತಪ್ಪಿದ ಭಾರೀ ಅನಾಹುತ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮೂಡಸಾಲಿ ಗ್ರಾಮದಲ್ಲಿ ಘಟನೆ. ತಡರಾತ್ರಿ ಸಂಪೂರ್ಣವಾಗಿ ಕುಸಿದು ಬಿದ್ದಿರುವ ಶಾಲಾ ಕಟ್ಟಡ. ಈ ಶಾಲಾ ಕಟ್ಟಡದಲ್ಲಿ 4 ಮತ್ತು 5 ನೇ ತರಗತಿಯ 30 ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದರು. ಶಿಥಿಲವಾಗಿದ್ದ ಈ ಕಟ್ಟಡದಲ್ಲೇ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುತ್ತಿದ್ದರು. ನಿನ್ನೆ ಧ್ವಜಾರೋಹಣದ ಬಳಿಕ ಮನೆಗೆ ತೆರಳಿದ್ದ ಮಕ್ಕಳು. ಶಾಲಾ ಕಟ್ಟಡ ರಾತ್ರಿ ಕುಸಿತವಾಗಿದ್ದರಿಂದ ತಪ್ಪಿದ ಅನಾಹುತ ಶೀಘ್ರದಲ್ಲೇ ಶಾಲಾ ಕಟ್ಟಡ ದುರಸ್ತಿಗೊಳಿಸುವಂತೆ ಪೋಷಕರ ಒತ್ತಾಯ.
12:59 PM IST:
ಮಹಾರಾಷ್ಟ್ರದಿಂದ ಭಾರಿ ನೀರು ಬಿಡುಗಡೆ ಹಿನ್ನಲೆ/ndnf ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದ ಯಲ್ಲಮ್ಮ ದೇವಸ್ಥಾನ ಜಲಾವೃತ. ಭೀಮಾ ನದಿಯಲ್ಲಿರುವ ಶ್ರೀ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಹೋಗುವ ಸಂಪರ್ಕ ಸೇತುವೆ ಮೇಲೆ ನೀರು. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ದೇವಿಯ ದರ್ಶನ ಭಾಗ್ಯ ಬಂದ್. ಬರುವ ಭಕ್ತರಿಗೆ ಸಂಪರ್ಕ ಸೇತುವೆಯ ಬಾಗಿಲು ಬಂದ್ ಮಾಡಿರುವ ಆಡಳಿತ ಮಂಡಳಿ.
12:48 PM IST:
ಭದ್ರಾವತಿಯಲ್ಲಿ ಎಸ್ಪಿ ಲಕ್ಷ್ಮಿ ಪ್ರಸಾದ್ ಹೇಳಿಕೆ. ಭದ್ರಾವತಿಯ ನೆಹರು ನಗರದಲ್ಲಿ ಸುನೀಲ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಭದ್ರಾವತಿಯ ನೆಹರು ನಗರದಲ್ಲಿ ಬೆಳಿಗ್ಗೆ 9.30 ಸುಮಾರಿಗೆ ನಡೆದ ಹಲ್ಲೆ. ಮುಬಾರಕ್ ಎಂಬಾತ ಮುಖಕ್ಕೆ ತಲೆ ಮತ್ತು ಕೈಯಿಂದ ಹೊಡೆದು ಹಲ್ಲೆ. ಭದ್ರಾವತಿ ನಗರದಾದ್ಯಂತ ಸೆಕ್ಷನ್ 144 ಜಾರಿಯಲ್ಲಿದೆ. ನಗರದಾದ್ಯಂತ ಸೆಕ್ಷನ್ ಜಾರಿ ಹಿನ್ನೆಲೆ ಅಂಗಡಿ ಮುಗ್ಗಟ್ಟು ಬಂದ್ ಮಾಡಲಾಗಿದೆ. ಹಳೆನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರವೇ ಆರೋಪಿ ಮುಬಾರಕ್ ನನ್ನ ಬಂಧಿಸಲಾಗುವುದೆಂದಿದ್ದಾರೆ.
11:43 AM IST:
ಶಿವಮೊಗದಲ್ಲಿ ಮಾತನಾಡಿದ ಸಂತೋಶ್ ಗೂರೂಜಿ ಅವರು ಹಿಂದೂ ಯುವಕರು ಇನ್ನು ಮುಂದೆ ವೆಪನ್ ಗಳನ್ನು ಇಟ್ಟುಕೊಂಡು ಓಡಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗ ದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಮಂಗಳೂರು ಮಾದರಿಯನ್ನು ಶಿವಮೊಗ್ಗ ಯುವಕರು ಅನುಸರಿಸಬೇಕಾದ ಅನಿವಾರ್ಯತೆ ಇದೆ. ಬಾವುಟ ಕಟ್ಟೋದು, ಪ್ಲೆಕ್ಸ್ ಹಾಕುವುದು ನಂತರ ಸಾಯೋದು ತಪ್ಪಬೇಕಿದೆ. ಆತ್ಮ ರಕ್ಷಣೆಗಾಗಿ ಸರ್ಕಾರಗಳನ್ನು ಕಾಯುವುದು ತರವಲ್ಲ. ಸಂವಿಧಾನವೇ ಹೇಳಿದೆ ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂದು. ಯಾವುದೇ ಸರ್ಕಾರವಾದ್ರು ಹಿಂದೂಗಳ ರಕ್ಷಣೆ ಮಾಡುವವರನ್ನು ಬೆಂಬಲಿಸಿ ಎಂದ ಸ್ವಾಮೀಜಿ. ಈ ಪ್ರಕರಣದಲ್ಲಿ ಶಿವಮೊಗ್ಗದ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ದಕ್ಷ ಎಸ್ಪಿ ಮತ್ತು ಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿದ್ದಾರೆ. ಹಿಂದೂಗಳು ಅನಿವಾರ್ಯವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಶಸ್ತ್ರಗಳನ್ನು ಓಡಾಟ ಮಾಡುವುದು ಅನಿವಾರ್ಯ. ಶಿವಮೊಗ್ಗ ದಲ್ಲಿ ಮುಂದೆ 10 ವರ್ಷದ ನಂತರ ಹಿಂದೂಗಳ ಪರಿಸ್ಥಿತಿ ಗಂಭೀರವಾಗಲಿದೆ.
11:08 AM IST:
ಮಾಜಿ ಸಿಎಂ ಸಿದ್ದರಾಮಯ್ಯ ಶಿವಮೊಗ್ಗ ಹಲ್ಲೆ ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದು, ಬಿಜೆಪಿ ಅವರಿಗೆ ಕಾಮಾಲೆ ರೋಗ ಬಂದಿದೆ, ಸುಳ್ಳನ್ನ ಹೇಳುವುದು ಅದನ್ನು ಕಾಂಗ್ರೆಸ್ ಮೇಲೆ ಹಾಕುವುದನ್ನು ವ್ಯವಸ್ಥಿತವಾಗಿ ಮಾಡ್ತಿದಾರೆ ಎಂದಿದ್ದಾರೆ. ಸಾವರ್ಕರ್ ಫೋಟೋ ಹಾಕಿರೋದು ಮುಸಲ್ಮಾನ ಏರಿಯಾದಲ್ಲಿ, ಮುಸ್ಲಿಂ ಏರಿಯಾದಲ್ಲಿ ಯಾಕೆ ಹಾಕೋಕೆ ಹೋಗಬೇಕಿತ್ತು. ಸಾವರ್ಕರ್ ಫೋಟೋ ಹಾಕೋಕೆ ಹೋದವರು ಟಿಪ್ಪು ಫೋಟೋ ಹಾಕೋಕೆ ಬಿಡಬೇಕಿತ್ತು. ಕಿತಾಪತಿ ಮಾಡೋಕೆ ಹೋದವರು ಇವ್ರು. ಎಸ್ ಡಿಪಿಐ, PFI ಅವ್ರು ಸಾಮರಸ್ಯ ಹಾಳು ಮಾಡ್ತಿದಾರೆ ಅಂದ್ರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಅವರು ಸಾಮರಸ್ಯ, ಸ್ವಾಸ್ಥ್ಯ ಹಾಳು ಮಾಡ್ತಿದ್ದಾರೆ ಅಂತ ದಾಖಲೆ ಇದ್ರೆ ಕ್ರಮ ಕೈಗೊಳ್ಳಿ. ನಿಮ್ಮ ಇಬ್ಬಗೆ ನೀತಿಯನ್ನ ಇವರು ಬಿಡಿ. ಮಗುವನ್ನೂ ಚಿವುಟುವುದು ಇವರೇ ತೊಟ್ಟಿಲ ತೂಗುವುದು ಇವರೇ. ಈ ಕೆಲಸ ಮಾಡೋಕೆ ಹೋಗಬೇಡಿ. ಕ್ರಮ ತೆಗೆದುಕೊಳ್ಳೋದಕ್ಕೆ ಯಾಕೆ ಮುಂದಾಗಲ್ಲ. ಮುಖ್ಯಮಂತ್ರಿ ಕೇವಲ ಪ್ರವೀಣ್ ಮನೆಗೆ ಮಾತ್ರ ಹೋಗ್ತಾರೆ. ಇನ್ನಿಬ್ಬರು ಮುಸ್ಲಿಂರ ಮನೆಗೆ ಯಾಕೆ ಹೋಗಲ್ಲ. ಇವತ್ತಿನ ತನಕ ಹೋಗಿಲ್ಲ, ಪರಿಹಾರ ಕೊಟ್ಟಿಲ್ಲ. ನೆಹರು ಫೋಟೋನೇ ಹಾಕಿಲ್ಲ ಇವ್ರು. ನರೇಂದ್ರ ಮೋದಿ ನೆಹರು ಸ್ಮರಣೆ ಮಾಡ್ತಾರೆ. ಇವರಿಗೆ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಮುಚ್ಚಳಿಕೆ ಬರೆದು ಕೊಟ್ಟು ಬಂದ ಮೇಲೆ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರು. ಬಿಜೆಪಿ ಅವ್ರುದ್ದು ನಕಲಿ ದೇಶಭಕ್ತಿ. ಇವ್ರು ಆರ್ ಎಸ್ ಎಸ್ ಕೈಗೊಂಬೆ ಆಗಿರೋರು ಮತ್ತೇನು ಹೇಳ್ತಾರೆ. ಬೊಮ್ಮಾಯಿ ಅವರನ್ನು ಮತ್ತೊಮ್ಮೆ ಆರ್‌ಎಸ್‌ಎಸ್ ಕೈಗೊಂಬೆ ಎಂದ ಸಿದ್ದರಾಮಯ್ಯ.
10:55 AM IST:
ಶಿವಮೊಗ್ಗದಲ್ಲಿ ಚಾಕು ಇರಿತದ ಪ್ರಕರಣ ಘಟಿಸಿದ ತಕ್ಷಣವೇ ಆರೋಪಿಗಳನ್ನು ಬಂಧಿಸಿದ ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕೃತ್ಯ ಎಸೆದರರನ್ನ ಬಂಧಿಸುವ ಕೆಲಸ ಸರ್ಕಾರ ಮಾಡಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡುತ್ತಿದೆ. ಮುಸಲ್ಮಾನ ಗುಂಡಾಗಳಿಗೆ ನಾನ್ ಹೇಳ್ತೀನಿ, ಯಾರು ಗುಂಡಾಗಳಿದ್ದಾರೆ ಅವರಿಗೆ ಕರೆದು ಮುಸ್ಲಿ ನಾಯಕರು ಬುದ್ದಿವಾದ ಹೇಳಬೇಕು. ಇಲ್ಲ ಅಂದ್ರೆ ಅಂತ ಗುಂಡಾಗಳನ್ನ ಸರ್ಕಾರ ನೋಡಿಕೊಳ್ಳುತ್ತೆ. ಈ ಘಟನೆಗೆ ಎಸ್‌ಡಿಪಿಐ ಕಾರ್ಯಕರ್ತನೇ ಕಾರಣ. ಅವನ ಹೆಂಡ್ತಿ ಕಾಂಗ್ರೆಸ್ ಪಾಲಿಕೆ ಸದಸ್ಯರು. SDPI ಬ್ಯಾನ್ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ. ನಿನ್ನೆ ಸ್ಯಾಂಪಲ್ ತೋರಿಸಿದ್ದಾರೆ ಪೊಲೀಸರು. ಮುಸ್ಲಾಂನ್ ಶಾಂತಿ ಕಾಪಾಡಲು ಮುಂಚೆಯಿಂದಲೂ ಕೆಲವು ಹಿರಿಯ ಮುಸಲ್ಮಾನರು ಮಾಡುತ್ತಿದ್ದಾರೆ. ಯುವಕರಿಗೆ ಬುದ್ದಿಹೇಳಿ. ಯಾರು ಗುಂಡಾಗಳಿದ್ದಾರೆ ಅವರಿಗೆ ಬುದ್ದಿ ಹೇಳಿ. ಇಲ್ಲ ಅಂದ್ರೆ ಹಿಂದು ಸಮಾಜ ನೋಡಿಕೊಳ್ಳುತ್ತೆ,, ಸರ್ಕಾರ ಬುದ್ದಿ ಕಲಿಸಲಿದೆ. SDPI ಮನಸ್ಥಿತಿ ಬದಲಾಗೋಲ್ಲ. ಹಿಂದೂಗಳನ್ನ ಕೊಲೆ ಮಾಡುವ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದಲೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗ್ತಿದೆ. ನಮ್ಮ ಶಿವಮೊಗ್ಗದವರು ಶಾಂತಿಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆ ಇರಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ, ಎಂದ ಕೆ.ಎಸ್.ಈಶ್ವರಪ್ಪ.
10:45 AM IST:
ಬಳ್ಳಾರಿ: ಸದಾ ಸಿದ್ದರಾಮಯ್ಯ ವಿರುದ್ಧ ಟಿಕೆ ಮಾಡೋ ಶ್ರೀರಾಮುಲು ಇದೀಗ ಸಿದ್ದರಾಮಯ್ಯ ಸಿಎಂ ಆಗಬೇಕೆಂದಿದ್ದಾರೆ. ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಶ್ರೀರಾಮುಲು.ಮಾಜಿ ಸಿಎಂ ಸಿದ್ದರಾಮಯ್ಯ ಪರ ಸಚಿವ ಶ್ರೀರಾಮುಲು ಬ್ಯಾಟಿಂಗ್. ಶ್ರೀರಾಮುಲು ಕುರುಬ ಸಮುದಾಯ. ಸಿದ್ದರಾಮಯ್ಯ ವಿರೋಧಿಯಲ್ಲ. ಅವಕಾಶ ಬಂದ್ರೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ನನಗೂ ಇದೆ..ನಾನು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನ ಸಿದ್ದರಾಮಯ್ಯ ಕೂಡಾ ಒಪ್ಪುತ್ತಾರೆ..ದೊಡ್ಡ ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ತಂತ್ರಗಳನ್ನ ಮಾಡಲೇಬೇಕು. ಮುಂದೊಂದು ದಿನ ನಾನು ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಒಂದೇ ವೇದಿಕೆಯಲ್ಲಿ ಬರುವವರು. ಹಿಂದುಳಿದ ಜಾತಿಗಳನ್ನ ಒಂದು ಮಾಡುವ ಪ್ರಯತ್ನವನ್ನ ನಾನು ಮತ್ತು ಸಿದ್ದರಾಮಯ್ಯ ಮಾಡುತ್ತಿದ್ದೇವೆ. ನಾನು ಮತ್ತ ಸಿದ್ದರಾಮಯ್ಯ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ವಿ. ನಾವಿಬ್ಬರು ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಹೇಗೆ ಅನ್ನೋದನ್ನ ಮುಂದೊಂದು ದಿನ ಹೇಳುವೆ. ಸಿದ್ದರಾಮಯ್ಯ ಬದಾಮಿ ಕ್ಷೇತ್ರದಲ್ಲಿ ಹೇಗೆ ಗೆದ್ರು ಅನ್ನೋದನ್ನ ಹೋಗಿ ಅವರನ್ನ ಕೇಳಿ ಪರೋಕ್ಷವಾಗಿ ಸಿದ್ದರಾಮಯ್ಯ ಗೆಲ್ಲಲು ಶ್ರೀರಾಮುಲು ಸಹಕಾರ ಮಾಡಿದ್ರಂತೆ. ನಾನು ಸಿದ್ದರಾಮಯ್ಯ ವಿರೋಧಿಯಲ್ಲ. ನೋಡೋಕೆ ಮಾತ್ರ ನಾವೂ ವಿರುದ್ಧ. ನಮ್ಮ ದೋಸ್ತಿ ಬೇರೇನೆ ಇದೆ.. ಒಳಗೊಳಗೆ ನಾವೂ ಎನೋ ಮಾಡಿಕೊಳ್ಳುತ್ತೇವೆ. ಅದೆಲ್ಲಾ ನಿಮ್ಮಗ್ಯಾಕೆ..? ನಿಮಗೆ ಗೊತ್ತಗಲ್ಲ ಎಂದ ಶ್ರೀರಾಮುಲು.
ನಾವಿಬ್ಬರೂ ರಾಜಕಾರಣದಲ್ಲಿ ಇರಬೇಕು.ನಾವಿಬ್ಬರೂ ವಿಧಾನಸೌಧದ ಒಳಗೆ ಇರಬೇಕು. ಸಿದ್ದರಾಮಯ್ಯಗೆ ಭಗವಂತ ಆರ್ಶಿವಾದ ಮಾಡಿದ್ರೆ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ. ಹಿಂದುಳಿದ ವರ್ಗದಿಂದ ಅವಕಾಶ ಸಿಕ್ಕರೇ ನಾನು ಮುಖ್ಯಮಂತ್ರಿ ಆಗುವೆ. ಪರೋಕ್ಷವಾಗಿ ಮುಖ್ಯಮಂತ್ರಿ ಕುರ್ಚಿ ಎರುವ ಆಸೆ ಹೊರಹಾಕಿದ ಸಚಿವ ಶ್ರೀರಾಮುಲು. ಬಳ್ಳಾರಿ ಜಿಲ್ಲಾ ಕುರುಬ ಸಂಘದ ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀರಾಮುಲು ಹೇಳಿಕೆ.
10:09 AM IST:
ಅಂತೂ ಕೊನೆಗೂ ಶಿವಾನಂದ ಫ್ಲೈ ಓವರ್ ಓಪನ್. ಕಳೆದ ಐದು ವರ್ಷಗಳಿಂದ ಕುಂಟುತ್ತಾ ಸಾಗಿದ ಕಾಮಗಾರಿ. ಕೊನೆಗೂ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಈ ತಿಂಗಳ ಅಂತ್ಯಕ್ಕೆ ಶಿವಾನಂದ ಸರ್ಕಲ್ ಫ್ಲೈ ಓವರ್ ಉದ್ಘಾಟನೆ. ಈಗಾಗಲೇ ಫ್ಲೈ ಓವರ್ ನ ಒಂದು ಬದಿಯಲ್ಲಿ ಪ್ರಾಯೋಗಿಕ ಸಂಚಾರ ಪ್ರಾರಂಭ. ಪ್ರಾಯೋಗಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬಿಬಿಎಂಪಿ. ತಿಂಗಳಾಂತ್ಯಕ್ಕೆ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತ. ನಿನ್ನೆ ಯಿಂದ ಪ್ರಾರಂಭವಾಗಿರುವ ಪ್ರಾಯೋಗಿಕ ಸಂಚಾರ. ಇನ್ನೊಂದು ಬದಿಯ ರಸ್ತೆಯಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ಇನ್ನೂ 10 ರಿಂದ 12 ದಿನಗಳಲ್ಲಿ ಕಾಮಗಾರಿ ಕೆಲಸ ಸಂಪೂರ್ಣ ಮುಗಿಯಲಿದೆ. ಕಾಮಗಾರಿ ಮುಗಿದ ಬಳಿಕ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
10:07 AM IST:
ತುಮಕೂರು: ಬೈಕ್ ನಲ್ಲಿ ಸೇರಿಕೊಂಡಿದ್ದ ಹಾವು ನೋಡಿ ಬೆಚ್ಚಿಬಿದ್ದ ಬೈಕ್ ಮಾಲೀಕ. ತುಮಕೂರು ನಗರದ ರಂಗಾಪುರದಲ್ಲಿ ಘಟನೆ.ರಂಗಾಪುರ ಗ್ರಾಮದ ಶರತ್ ಎಂಬುವರಿಗೆ ಸೇರಿದ ಬೈಕ್. ಮನೆ ಬಳಿ ನಿಲ್ಲಿಸಿದ್ದ ವೇಳೆ ಬೈಕ್ ಒಳಗೆ ಸೇರಿಕೊಂಡಿದ್ದ ನಾಗರಹಾವು. ನಾಗರ ಹಾವು ನೋಡಿದ ತಕ್ಷಣ ಗಾಬರಿಗೊಂಡ ಬೈಕ್ ಮಾಲೀಕ ಶರತ್. ಕೂಡಲೇ ಉರಗ ತಜ್ಞ ದಿಲೀಪ್‌ಗೆ ಕರೆ ಮಾಡಿ ಮಾಹಿತಿ. ಬೈಕ್ ಗ್ಯಾರೇಜ್‌ಗೆ ಕೊಂಡೊಯ್ದು ಬೈಕ್‌ನಲ್ಲಿದ್ದ ನಾಗರಹಾವು ರಕ್ಷಣೆ. ಉರಗ ತಜ್ಞ ದಿಲೀಪ್ ರಿಂದ ನಾಗರಹಾವು ರಕ್ಷಣೆ. ತುಮಕೂರು ಹೊರವಲಯದ ಅರಣ್ಯ ಪ್ರದೇಶಕ್ಕೆ ನಾಗರಹಾವು ಬಿಟ್ಟು ರಕ್ಷಣೆ.
10:03 AM IST:
ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಹಿನ್ನೆಲೆಯಲ್ಲಿ ಪಾದಯಾತ್ರೆ ಸಾಗಿ ಬಂದ ದಾರಿಯುದ್ದಕ್ಕೂ ಗಲೀಜೋ ಗಲೀಜು. ನಗರದ ಕೆಆರ್ ಸರ್ಕಲ್ ನಲ್ಲಿ ಕಲ್ಲಂಗಡಿ ಹಣ್ಣಿನ ಸಿಪ್ಪೆಗಳ ರಾಶಿ. ಪಾದಯಾತ್ರೆ ಮುಗಿದು ಗಂಟೆ ಹಲವಾದರು ಕ್ಲೀನ್ ಮಾಡದೆ ಹಾಗೇ ಬಿಟ್ಟಿರುವ ಬಿಬಿಎಂಪಿ. ಕಲ್ಲಂಗಡಿ ಹಣ್ಣಿನ ಸಿಪ್ಪೆಗಳಿಂದ ಗಬ್ಬೆದ್ದು ಹೋಗಿರುವ ಕೆಆರ್ ಸರ್ಕಲ್ ಬಸ್ ನಿಲ್ದಾಣ. ಬಸ್ ನಿಲ್ದಾಣದಲ್ಲೇ ರಾಶಿ ರಾಶಿ ಬಿದ್ದಿರುವ ಕಲ್ಲಂಗಡಿ ಸಿಪ್ಪೆ. ನಿನ್ನೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಹಣ್ಣು ಹಂಚಿದ್ದ ಕಾಂಗ್ರೆಸ್ ನಾಯಕರು.
9:51 AM IST:
ಬಿಸಿಯೂಟ ಯೋಜನೆ ಬಂದ್ ಮಾಡಿ ಬೀದಿಗೆ ಇಳಿಯಲಿದ್ದಾರೆ ಬಿಸಿಯೂಟ ಕಾರ್ಯಕರ್ತರು. ಒಂದು ಲಕ್ಷದ 19 ಸಾವಿರ ಬಿಸಿಯೂಟ ನೌಕರರು ಕೆಲಸ ಬಹಿಷ್ಕರಿಸಿ ಪ್ರತಿಭಟನೆ. ಇಂದು ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ ಬಿಸಿಯೂಟ ನೌಕರರು ಬೃಹತ್ ಪ್ರತಿಭಟನೆ. 2001ರಲ್ಲಿ ಪ್ರಾರಂಭವಾದ ಬಿಸಿಯೂಟ ಯೋಜನೆ. 1 ಲಕ್ಷದ 19 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ 50 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲಾಗುತ್ತೆ. 2500 ಸಾವಿರ ರೂಪಾಯಿಗೆ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರು. ಬಿಸಿಯೂಟ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯ. 60 ವರ್ಷ ತುಂಬಿದ 6 ಸಾವಿರ ಬಿಸಿಯೂಟ ನೌಕರರನ್ನ ವಜಾ ಮಾಡಲಾಗಿದೆ. ಯಾವುದೇ ಪರಿಹಾರ ಕೊಡದೇ ಸರ್ಕಾರ ಇವರನ್ನ ಕೆಲಸದಿಂದ ವಜಾಗೊಳಿಸಲಾಗಿದೆ. ಪರಿಹಾರಕ್ಕಾಗಿ ಬೀದಿಗೆ ಇಳಿಯಲಿರುವ ಬಿಸಿಯೂಟ ನೌಕರರು. ಏಕಾಏಕಿ ಕೆಲಸದಿಂದ ತೆಗೆದಿರುವ ನೌಕರರಿಗೆ ಪರಿಹಾರ ಕೊಡಬೇಕು. ಶಿಕ್ಷಣ ಸಚಿವ ಬಿಸಿ ನಾಗೇಶ್ ಮನವಿ ಮಾಡಿದ್ದೇವೆ. ಆದ್ರೆ ಯಾವುದೇ ಪರಿಹಾರ ನೀಡದೇ ಕೆಲಸದಿಂದ ಸರ್ಕಾರ ವಜಾ ಮಾಡಿದೆ. 19 ವರ್ಷಗಳಿಂದ ದುಡಿಸಿಕೊಂಡು ಇದೀಗ ಯಾವುದೇ ಪರಿಹಾರ ಇಲ್ಲದೆ ಕೆಲಸದಿಂದ ಕೈ ಬಿಟ್ಟಿದ್ದಾರೆ. ನಮ್ಮ ಬೇಡಿಕೆ ಸರ್ಕಾರದ ಮುಂದೆ ಇಟ್ಟಿದ್ದೇವೆ. ಯಾರು ಕೂಡ ನಮ್ಮ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿಲ್ಲ. ಅಂತಿಮವಾಗಿ ನಾವು ಬಿಸಿಯೂಟ ಬಂದ್ ಮಾಡಿ ಪ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸಿಐಟಿಐಯು ರಾಜ್ಯಾಧ್ಯಕ್ಷೆ ವರಲಕ್ಷೀ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
9:46 AM IST: