ತಮಿಳುನಾಡಿಗೆ ನೀರು ಕೊಡಲಾಗದು ಎಂದು ಹೇಳಿ: ರಾಜ್ಯ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಆಗ್ರಹ
ಪ್ರಸಕ್ತ ಸಾಲಿನಲ್ಲಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹರಿಸಬೇಕಿರುವ ನೀರು ಕೊಡಲು ಸಾಧ್ಯವಾಗಿಲ್ಲ ಎಂದು ಕಾವೇರಿ ನ್ಯಾಯ ಮಂಡಳಿ ಮುಂದೆ ರಾಜ್ಯ ಸರ್ಕಾರ ನಿರೀಕ್ಷಾ ಅರ್ಜಿ ಸಲ್ಲಿಸಲಿ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.
ಮೈಸೂರು (ಜು.06): ಪ್ರಸಕ್ತ ಸಾಲಿನಲ್ಲಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹರಿಸಬೇಕಿರುವ ನೀರು ಕೊಡಲು ಸಾಧ್ಯವಾಗಿಲ್ಲ ಎಂದು ಕಾವೇರಿ ನ್ಯಾಯ ಮಂಡಳಿ ಮುಂದೆ ರಾಜ್ಯ ಸರ್ಕಾರ ನಿರೀಕ್ಷಾ ಅರ್ಜಿ ಸಲ್ಲಿಸಲಿ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದ್ದು, ಜಲಾಶಯದಲ್ಲಿ ನೀರು ಖಾಲಿ ಆಗುತ್ತಿದೆ. ಆದ್ದರಿಂದ ತಮಿಳುನಾಡಿಗೆ ನೀರು ಹರಿಸಲು ಆಗುವುದಿಲ್ಲ. ತಮಿಳುನಾಡು ಕ್ಯಾತೆ ತೆಗೆದ ಮೇಲೆ ರಾಜ್ಯ ಸರ್ಕಾರ ಗಲಾಟೆ ಮಾಡುವುದು ಬೇಡ ಎಂದರು. ಈಗಲೇ ನೀರು ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ. ಜನ ನಿಮಗೆ ಪೂರ್ಣ ಬಹುಮತ ಕೊಟ್ಟಿದ್ದಾರೆ. ಇನ್ನು ಐದು ವರ್ಷ ನಿಮ್ಮದೇ ರಾಜ್ಯಭಾರ. ಎಲ್ಲದರಲ್ಲೂ ರಾಜಕೀಯ ಮಾಡಬೇಡಿ ಎಂದರು.
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾರಿನ ವೇಗ ನೋಡಿಕೊಂಡು ಚಾಲನೆ ಮಾಡಬೇಕು. ಅದು ಹೆದ್ದಾರಿಯೇ ಹೊರತು ರೇಸಿಂಗ್ ಟ್ರ್ಯಾಕ್ ಅಲ್ಲ. ರಸ್ತೆ ಚೆನ್ನಾಗಿದೆ ಎಂದು ರೇಸ್ ಮಾಡಬೇಡಿ. ಹೆಚ್ಚಿನ ವೇಗದಿಂದ ಅಪಘಾತ ಸಂಭವಿಸುತ್ತದೆಯೇ ಹೊರತು, ರಸ್ತೆಯಿಂದಲ್ಲ ಎಂದರು. ಕಿಯಾ, ನಿಸ್ಸಾನ್ ಕಾರು ಪ್ಲಾಸ್ಟಿಕ್‌ನಿಂದ ಇರುತ್ತದೆ. ಯದ್ವಾತದ್ವಾ ವೇಗವಾಗಿ ಹೋದರೆ ಅಪಘಾತ ಆಗದೆ ಇರುವುದಿಲ್ಲ. ಗೂಡ್ಸ್ ವಾಹನಗಳು ಸೈಡಲ್ಲಿ ಹೋಗಬೇಕು. ಬದಲಿಗೆ ರಸ್ತೆ ಮಧ್ಯದಲ್ಲಿಯೇ ಹೊಗುತ್ತಾರೆ. ಹಿಂದಿನ ಗಾಡಿ ಬಂದು ಹೊಡೆದರೆ ಉಳಿಯುತ್ತಾರಾ? ರಸ್ತೆ ವಿಭಜಕ ಎತ್ತರಿಸುವುದು, ಸ್ಪೀಡ್ ಲಿಮಿಟ್, ಆಂಬುಲೆನ್ಸ್ ಸೇವೆ ಎಲ್ಲವನ್ನೂ 6 ತಿಂಗಳ ಒಳಗೆ ಮಾಡುತ್ತೇವೆ. ಅಲ್ಲಿವರೆಗೂ ನಮಗೆ ಸಹಕಾರ ಕೊಡಿ ಎಂದರು.
ಭ್ರಷ್ಟಾಚಾರವನ್ನೇ ಸಾಂಸ್ಥಿಕವಾಗಿ ಮಾಡಿದ್ದ ಕುಖ್ಯಾತಿ ಬಿಜೆಪಿಗರದ್ದು: ಶಾಸಕ ಟಿ.ಬಿ.ಜಯಚಂದ್ರ
ಒಂದು ವಾರದಲ್ಲಿ ಕಾಮಗಾರಿ ಪೂರ್ಣ: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶಿಂಷಾನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಪ್ರಗತಿ ಕುರಿತಂತೆ ಸಂಸದ ಪ್ರತಾಪ್‌ಸಿಂಹ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಶಪಥ ಹೆದ್ದಾರಿ ನಿರ್ಮಾಣದಲ್ಲಿ ಉಂಟಾಗಿರುವ ಲೋಪ ದೋಷಗಳ ದೂರಿನ ಮೇರೆಗೆ ಸಂಸದ ಪ್ರತಾಪ್ ಸಿಂಹ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ದೈವಿಕ್‌ರೊಂದಿಗೆ ಪರಿಶೀಲನೆ ನಡೆಸಿದ ನಂತರ ಪಟ್ಟಣದ ಕೊಲ್ಲಿ ವೃತ್ತದಿಂದ ಕೆ.ಕೋಡಿಹಳ್ಳಿವರೆಗಿನ ಸರ್ವಿಸ್ ರಸ್ತೆಯಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಸೇತುವೆ ಮೇಲಿನ ರಸ್ತೆ, ತಡೆಗೋಡೆ, ಪಾದಚಾರಿ ಮಾರ್ಗದ ಕಾಮಗಾರಿ ಪ್ರಗತಿ ಮತ್ತು ಗುಣಮಟ್ಟದ ಬಗ್ಗೆ ಖುದ್ದು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಹುತೇಕ ಭಾಗಶಃ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಇನ್ನೊಂದು ವಾರದಲ್ಲಿ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.
ಮತ್ತೊಂದು ಸೇತುವೆ ನಿರ್ಮಾಣ: ಕೆ.ಕೋಡಿಹಳ್ಳಿ ಸಮೀಪದ ಅಂಡರ್‌ಪಾಸ್ ಬಳಿಯಿಂದ ಕೊಲ್ಲಿ ವೃತ್ತದವರೆಗೆ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ವರ್ಷದ ಏಪ್ರಿಲ, ಮೇ ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿರುವುದರಿಂದ ಮದ್ದೂರು ಪಟ್ಟಣದಿಂದ ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಹುಣಸೇಮರದದೊಡ್ಡಿ, ರುದ್ರಾಕ್ಷಿಪುರ, ನಿಡಘಟ್ಟಹಾಗೂ ವಿವಿಧ ಗ್ರಾಮಗಳ ಜನರು ಬಳಸು ದಾರಿಯನ್ನು ಬಿಟ್ಟು ಸರ್ವಿಸ್ ರಸ್ತೆ ಮೂಲಕ ಕಡಿಮೆ ವೆಚ್ಚದಲ್ಲಿ ತಮ್ಮ ಗ್ರಾಮಗಳಿಗೆ ಪ್ರಯಾಣ ಮಾಡಬಹುದಾಗಿದೆ ಎಂದರು.
ರೈತರು ಆಮಿಷಕ್ಕೆ ಬಲಿಯಾಗಬೇಡಿ: ಬೆಂಗಳೂರು - ಮೈಸೂರು ದಶಪಥ ರಸ್ತೆ ಪಕ್ಕದ ಜಮೀನುಗಳ ರೈತರು ರಿಯಲ ಎಸ್ಟೇಚ್ ಉದ್ಯಮಿಗಳ ಆಮಿಷಕ್ಕೆ ಬಲಿಯಾಗಿ ಜಮೀನುಗಳನ್ನು ಮಾರಾಟ ಮಾಡದಂತೆ ಸಂಸದ ಪ್ರತಾಪ್‌ಸಿಂಹ ಎಚ್ಚರಿಸಿದರು. ತಾಲೂಕಿನ ಕೆ.ಕೋಡಿಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಉಂಟಾಗಿರುವ ಲೋಪ ದೋಷಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ನಂತರ ರೈತರೊಂದಿಗೆ ಮಾತುಕತೆ ನಡೆಸಿದರು. ದಶಪಥ ಹೆದ್ದಾರಿ ನಿರ್ಮಾಣದಿಂದ ಅಕ್ಕ ಪಕ್ಕದ ಜಮೀನುಗಳಿಗೆ ಚಿನ್ನದ ಬೆಲೆ ಬಂದಿದೆ.
ಕರ್ನಾಟಕದಲ್ಲೂ ಮಹಾ ಕ್ರಾಂತಿ, 3 ತಿಂಗಳು ಕಾದು ನೋಡಿ: ಹೊಸ ಬಾಂಬ್ ಸಿಡಿಸಿದ ಕೆ.ಎಸ್.ಈಶ್ವರಪ್ಪ
ಇಂತಹ ಜಮೀನುಗಳ ಮೇಲೆ ಈಗಾಗಲೇ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಚ್ ಉದ್ಯಮಿಗಳ ಕಣ್ಣು ಬಿದ್ದಿದೆ. ಹೀಗಾಗಿ ರಿಯಲ ಎಸ್ಟೇಚ್ ದಂಧೆಕೋರರು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ರೈತರು ತಮ್ಮ ಮೌಲ್ಯಯುತ ಜಮೀನುಗಳನ್ನು ಎಷ್ಟೇ ಕಷ್ಟವಾದರೂ ಸರಿ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾರಾಟ ಮಾಡಿಕೊಳ್ಳದೇ ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ರೈತರು ನೇರವಾಗಿ ಉದ್ಯಮಿಗಳು ಅಥವಾ ಕಂಪನಿಗಳನ್ನು ಸಂಪರ್ಕಿಸಿ ಕನಿ