Asianet Suvarna News Asianet Suvarna News

ಸಾವರ್ಕರ್‌ ಕುರಿತು ಟೀಕೆ, ರಾಹುಲ್‌ ಗಾಂಧಿ ಚಿತ್ರಕ್ಕೆ ಚಪ್ಪಲಿ ಬಡಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ!

ವೀರ್‌ ಸಾವರ್ಕರ್‌ ವಿಚಾರವಾಗಿ ಅವಹೇಳನಕಾರಿಯಾಗಿ ಮಾತನಾಡಿದ ರಾಹುಲ್‌ ಗಾಂಧಿ ವಿರುದ್ಧ ಮುಂಬೈನಲ್ಲಿ ಬಿಜೆಪಿ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ರಾಹುಲ್‌ ಗಾಂಧಿ ಚಿತ್ರಕ್ಕೆ ಚಪ್ಪಲಿ ಬಡಿದು, ಕಪ್ಪು ಮಸಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Savarkar helped British remark BJP workers hurl shoes blacken Rahul Gandhi posters san
Author
First Published Oct 10, 2022, 1:30 PM IST | Last Updated Oct 10, 2022, 1:30 PM IST

ಮುಂಬೈ (ಅ.10): ವಿನಾಯಕ ದಾಮೋದರ್ ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದರು ಮತ್ತು ಅದಕ್ಕಾಗಿ ಸ್ಟೈಫಂಡ್ ಪಡೆದಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ ಒಂದು ದಿನದ ಬೆನ್ನಲ್ಲಿಯೇ, ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತರು ಮುಂಬೈನಲ್ಲಿ ದೊಡ್ಟ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ರಾಹುಲ್‌ ಗಾಂಧಿಯವರ ಚಿತ್ರಗಳಿಗೆ ಚಪ್ಪಲಿ ಬಡಿದು, ಕಪ್ಪು ಮಸಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ರಾಮ್ ಕದಂ ಅವರು ಭಾನುವಾರ ಬೆಳಗ್ಗೆ ಮುಂಬೈನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ 'ಜೂತಾ ಮಾರೋ ಆಂದೋಲನ' ಪ್ರತಿಭಟನೆ ನಡೆಸಿದರು. "ರಾಹುಲ್ ಗಾಂಧಿ ಮಾಡಿರುವ ಅವಹೇಳನಕಾರಿ ಹೇಳಿಕೆಗಳು ಖಂಡನೀಯ, ಭಯಾನಕವಾಗಿದೆ. ಅವರು ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು. ಅವರು ಮತ್ತೆ ಮತ್ತೆ ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ. ಅದು ಸ್ವೀಕಾರಾರ್ಹವಲ್ಲ" ಎಂದು ರಾಮ್ ಕದಮ್ ಹೇಳಿದ್ದಾರೆ. ಇದೇ ವೇಳೆ ತಾನು ಹಿಂದುತ್ವವಾದಿ ಎನ್ನುವ ಉದ್ದವ್‌ ಠಾಕ್ರೆ ಅವರ ಮೌನವನ್ನು ಕೂಡ ರಾಮ್‌ ಕದಂ ಪ್ರಶ್ನೆ ಮಾಡಿದ್ದಾರೆ. 

ಈ ವಿಚಾರದಲ್ಲಿ ಉದ್ಧವ್ ಠಾಕ್ರೆ (Uddhav Thackeray) ಅವರ ನಿಲುವು ಏನು ಎಂದು ಪ್ರಶ್ನಿಸಿದ ಕದಂ, "ಈ ವಿಷಯದಲ್ಲಿ ಉದ್ಧವ್ ಠಾಕ್ರೆ ಅವರ ನಿಲುವು ಏನು? ಅವರು ಏಕೆ ಏನನ್ನೂ ಹೇಳುತ್ತಿಲ್ಲ, ರಾಹುಲ್ ಗಾಂಧಿಯನ್ನು ಟೀಕಿಸುತ್ತಿಲ್ಲ? ಅವರು ಹಿಂದುತ್ವವನ್ನು ತೊರೆದು ಬಾಳಾಸಾಹೇಬ್ ಠಾಕ್ರೆ (Balasaheb Thackeray) ಅವರ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ" ಎಂದು (Ram Kadam) ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ (Rahul Gandhi), " ಬ್ರಿಟಿಷರ ವಿರುದ್ಧ ಹೋರಾಡಿದ ಕಾಂಗ್ರೆಸ್ ಪಕ್ಷದ ನಾಯಕರು ಜೈಲಿನಲ್ಲಿ ವರ್ಷಗಳನ್ನು ಕಳೆದರು ಎಂದು ನನಗೆ ನೆನಪಿದೆ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅವರೆಲ್ಲರೂ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ತಮ್ಮ ಜೀವವನ್ನು ನೀಡಿದ್ದಾರೆ' ಎಂದು ಹೇಳಿದ್ದರು.

ಇತಿಹಾಸವನ್ನು ನಾನು ಅಧ್ಯಯನ ಮಾಡಿರುವ ಪ್ರಕಾರ, ಆರೆಸ್ಸೆಸ್‌ ಬ್ರಿಟಿಷರಿಗೆ ಸಹಾಯ ಮಾಡುತ್ತಿತ್ತು. ಇನ್ನು ವೀರ್‌ ಸಾವರ್ಕರ್‌ ಬ್ರಿಟಿಷರಿಂದ ಸ್ಟೈಫಂಡ್‌ ಪಡೆಯುತ್ತಿದ್ದರು. ಇವೆಲ್ಲವೂ ಐತಿಹಾಸಿಕ ಸಂಗತಿಗಳು. ಇವುಗಳನ್ನು ಬಿಜೆಪಿ (BJP) ಕೂಡ ಮುಚ್ಚಿಡಲು ಸಾಧ್ಯವಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಬಿಜೆಪಿ ಕಾರ್ಯಕರ್ತರು 'ರಾಹುಲ್ ಗಾಂಧಿ ಕ್ಷಮೆ ಕೇಳಬೇಕು' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನೆ ಮಾಡಿದ್ದಾರೆ.. 'ಮಾತಾಡಿ, ಈಗ ಏಕೆ ಮೌನವಾಗಿದ್ದೀರಿ' ಎಂಬ ಶೀರ್ಷಿಕೆಯೊಂದಿಗೆ ಉದ್ಧವ್ ಠಾಕ್ರೆ ಅವರ ಪೋಸ್ಟರ್‌ಗಳನ್ನು ಸಹ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪ್ರದರ್ಶನ ಮಾಡಿದರು.

ಪಿಎಫ್‌ಐ ದಾಳಿ ವೇಳೆ ಸಾವರ್ಕರ್‌ ಸೇರಿ ಹಲವು ಪುಸ್ತಕ, ಹಣ ಪತ್ತೆ

ರಾಹುಲ್ ಗಾಂಧಿ ಹೇಳಿಕೆ ಖಂಡಿಸಿದ ಫಡ್ನವಿಸ್‌: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Maharashtra Deputy Chief Minister Devendra Fadnavis) ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಭಾರತೀಯ ಜನತಾ ಪಕ್ಷ ಮತ್ತು ಸ್ವಾತಂತ್ರ್ಯ ಹೋರಾಟಗಾರ ವಿ ಡಿ ಸಾವರ್ಕರ್ ವಿರುದ್ಧ ನೀಡಿದ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ರಾಹುಲ್ ಗಾಂಧಿಗೆ ಭಾರತ ಮತ್ತು ಕಾಂಗ್ರೆಸ್ ಇತಿಹಾಸ ತಿಳಿದಿಲ್ಲ ಎಂದಿದ್ದಾರೆ.

ಸಾವರ್ಕರ್‌ ಬಗ್ಗೆ ಕೆಟ್ಟದಾಗಿ ಮಾತನಾಡಿರೋ ಸಿದ್ದು ಗೋಮೂತ್ರ ಕುಡಿದು ಪ್ರಾಯಶ್ಚಿತ್ತ ಮಾಡಿಕೊಳ್ಳಲಿ: ಚಕ್ರವರ್ತಿ ಸೂಲಿಬೆಲೆ

ರಾಹುಲ್‌ ಗಾಂಧಿ ಮತ್ತೊಮ್ಮೆ ಸ್ವಾತಂತ್ರ್ಯವೀರ ಸಾವರ್ಕರ್‌ ಅವರನ್ನು ಅವಮಾನಿಸಿದ್ದಾರೆ. ಅವರ ಬ್ರಿಟಿಷರ ಏಜೆಂಟ್‌, ಅವರಿಂದ ಹಣ ತೆಗೆದುಕೊಂಡಿರುವುದಾಗಿ ನಿರಂತರವಾಗಿ ಹೇಳುತ್ತಲೇ ಬಂದಿದ್ದಾರೆ. ಅವರ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಫಡ್ನವೀಸ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios