Asianet Suvarna News Asianet Suvarna News

ಸಾವರ್ಕರ್‌ ಬಗ್ಗೆ ಕೆಟ್ಟದಾಗಿ ಮಾತನಾಡಿರೋ ಸಿದ್ದು ಗೋಮೂತ್ರ ಕುಡಿದು ಪ್ರಾಯಶ್ಚಿತ್ತ ಮಾಡಿಕೊಳ್ಳಲಿ: ಚಕ್ರವರ್ತಿ ಸೂಲಿಬೆಲೆ

ಸ್ವಾತಂತ್ರ್ಯ ವೀರ ವಿನಾಯಕ ಆಮೋದರ ಸಾವರ್ಕರ್‌ ಭಾರತ ಕಂಡ ಪ್ರತಿಮ ದೇಶಭಕ್ತ. ಆದರೆ ವಿರೋಧ ಪಕ್ಷದ ನಾಯರ ಸಿದ್ದರಾಮಯ್ಯ ಸೇರಿದಂತೆ ಅನೇಕರು ಈ ಕ್ರಾಂತಿಕಾರಿಯ ವಿಚಾರ ಅರಿಯದೆ ಬಾಯಿಗೆ ಬಂದದ್ದು ಕೆಟ್ಟದಾಗಿ ಮಾತನಾಡಿ ಪಾಪ ಕಟ್ಟಿಕೊಂಡಿದ್ದಾರೆ.

Chakravarthy Sulibele slams on Siddaramaiah in Kalaburagi gvd
Author
First Published Sep 20, 2022, 3:15 AM IST

ಕಲಬುರಗಿ (ಸೆ.20): ಸ್ವಾತಂತ್ರ್ಯ ವೀರ ವಿನಾಯಕ ಆಮೋದರ ಸಾವರ್ಕರ್‌ ಭಾರತ ಕಂಡ ಪ್ರತಿಮ ದೇಶಭಕ್ತ. ಆದರೆ ವಿರೋಧ ಪಕ್ಷದ ನಾಯರ ಸಿದ್ದರಾಮಯ್ಯ ಸೇರಿದಂತೆ ಅನೇಕರು ಈ ಕ್ರಾಂತಿಕಾರಿಯ ವಿಚಾರ ಅರಿಯದೆ ಬಾಯಿಗೆ ಬಂದದ್ದು ಕೆಟ್ಟದಾಗಿ ಮಾತನಾಡಿ ಪಾಪ ಕಟ್ಟಿಕೊಂಡಿದ್ದಾರೆ. ಗೋಮೂತ್ರ ಕುಡಿದು ಇವರೆಲ್ಲರೂ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ವಾಗ್ಮಿ, ಯುವ ಬ್ರಿಗೇಡ್‌ ಮುಖಂಡ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಹಂದು ಜಾಗರಣ ವೇದಿಕೆ ಹಾಗೂ ಹಿಂದು ಮಹಾ ಗಣಪತಿ ಸಮೀತಿ ಆಸೆಯಲ್ಲಿ ನಡೆದ ಸಾವಿರದ ಸಾವರ್ಕರ್‌ ಸಮಾವೇಶದಲ್ಲಿ ಚಿಕ್ಸೂಚಿ ಭಾಷಣ ಮಾಡಿದ ಸೂಲಿಬೆಲೆ ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್‌ ಪಕ್ಷದ ಜಾತಕ ಜಾಲಾಡಿದರಲ್ಲದೆ ಕಾಂಗ್ರೆಸ್‌ ಮುಖಂಡರನ್ನು ಮಾತಿನಲ್ಲೇ ತಿವಿಯುವ ಮೂಲಕ ಲೇವಡಿ ಮಾಡಿದರು. ಸಾವರ್ಕರ್‌ ಯಾರೆಂದು ಇವರಿಗೇನ್‌ ಗೊತ್ತಾಗಬೇಕ್ರಿ? ಆ ಮಹಾನ್‌ ಕ್ರಾಂತಿಕಾರಿ ಬಗ್ಗೆ ತಿಳಿಯಲು ಇವರು ಅಯೋಗ್ಯರು. ಕಾಂಗ್ರೆಸ್ಸಿಗರೆಲ್ಲರೂ ಇಂದು ಸಿದ್ಧರಾಮಯ್ಯ ಮಾತು ಕೇಳಿ ದೇಶಭಕ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂದು ಜರಿದರು.

ಎಲ್ಲಾ ಟ್ರಸ್ಟ್‌, ಪ್ರತಿಷ್ಠಾನಗಳ ನೇಮಕಾತಿ ರದ್ದುಗೊಳಿಸಿದ ರಾಜ್ಯ ಸರ್ಕಾರ

ಸಾವರ್ಕರ್‌ ಕುರಿತಂತೆ ಅವರ ಬದುಕು, ಬರಹ, ಜೀವನ ವೃತ್ತಾಂತ, ದೇಶಪ್ರೇಮ, ಅವರ ಕುಟುಂಬ ಎಲ್ಲ ವಿಚಾರಗಳನ್ನು ಸುದೀರ್ಘವಾಗಿ ಸೇರಿದ್ದ ಸಾವಿರಾರು ಜನರ ಮುಂಜೆ ಬಿಟ್ಟಿಚ್ಚ ಸೂಲಿಬೆಲೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್‌ ಮೇಧಾವಿ ಬಗ್ಗೆ ಕಾಂಗ್ರೆಸ್ಸಿಗರು ಸಲ್ಲದ ಮಾತನ್ನಾಡುತ್ತಿದ್ದಾರೆ. ಸಿದ್ದರಾಮಯ್ಯ ಒಬ್ಬರೆ ಅಲ್ಲ, ಮಣಿ ಶಂಕರ್‌ ಅಯ್ಯರ್‌ರಿಂದ್‌, ನೆಹರು ಸೋನಿಯಾರಿಂದಲೇ ಈ ಪರಂಪರೆ ಶುರುವಾಗಿದ್ದು ಇದೀಗ ಅದರ ಉತ್ತರಾಧಿಕಾರಿಯಾಗಿ ಸಿದ್ದರಾಮಯ್ಯ ಕಂಡಿದ್ದಾರೆ. ಇವರಿಗೆಲ್ಲರಿಗೂ ತಕ್ಕ ಉತ್ತರ ನೀಡದೆ ಹೋದಲ್ಲಿ ಇವರ ಕೆಟ್ಟಚಾಳಿ ಹಾಗೇ ಮುಂದುವರಿಯುತ್ತದೆ ಎಂದರು.

ಸಿದ್ರಾಮಯ್ಯಗೆ ಥ್ಯಾಂಕ್ಸ್‌ ಹಳಬೇಕ್ರಿ ನಾವೆಲ್ಲರು!: ಸಿದ್ದರಾಮಯ್ಯ ಸಾರ್ವಕರ್‌ ಫೋಟೋ ಮುಸ್ಲಿಂ ಸಮುದಾಯ ವಾಸವಿರುವ ಪ್ರದೇಶಲ್ಯಾಕೆ ಇಟ್ಟಿದ್ದೀರಿ? ಎಂದು ಕೇಳಿ ನಿಂದಿಸಲು ಶುರು ಮಾಡಿದ್ದಕ್ಕೆ ಅವರಿಗೆ ಥ್ಯಾಂಕ್ಸ್‌ ಹೇಳಬೇಕು. ಆಗಲೇ ನೋಡಿ ಹಿಂದುಗಳು ಒಗ್ಗಟ್ಟಾಗಿದ್ದು, ದೇಶದ ಮೂಲೆ ಮೂಲೆಯಲ್ಲಿ ಗಣಪತಿ ಪೆಂಡಾಲ್‌ನಲ್ಲಿ ಸಾವರ್ಕರ್‌ ರಾರಾಜಿಸಿದ್ದು, ಗಣಪನ ಹಬ್ಬಕ್ಕೆ ತಿಲಕರ ಕಾಲದ ಸಂಭ್ರಮ ಮೂಡಿದ್ದು ಸಿದ್ದರಾಮಯ್ಯ ಧೋರಣೆಯಿಂದಲೇ. ಅದಕ್ಕೇ ಹಿಂದುಗಳು ನಾವು ಸಿದ್ದುಗೆ ಧನ್ಯವಾದ ಹೇಳದೆ ಇನ್ಯಾರಿಗೆ ಹೇಳಬೇಕು? ಎಂದು ಪ್ರಶ್ನಿಸಿದರು.

ಅಂಡಮಾನ್‌ ಜೈಲಲ್ಲಿ ಸಾವರ್ಕರ್‌ ಕಾಲಾಪಾನಿ ಶಿಕ್ಷೆ ಪಡೆದು ನರಳಿದ ಪ್ರಸಂಗ ಕಣ್ಣಿಗೆ ಕಟ್ಟುವಂತೆ ವಿವರಿಸಿದ ಅವರು ಬ್ರಿಟೀಶರ ವಿರುದ್ಧ ಕ್ರಾಂತಿಕಾರಿ ಪಡೆಯನ್ನೇ ಬೆಳೆಸಿದ ಧೀರ ಸಾವರ್ಕರ್‌, ಇವರ ಗರಡಿಯಲ್ಲಿ ಬೆಳೆದ ಮದನ್‌ ಲಾಲ್‌ ದಿಂಗ್ರಾ, ಗೋವಿಂದ ಧರೆ, ಒಬ್ಬರೆ ಇಬ್ಬರೆ, ಸಾಲುಸಾಲು ಕ್ರಾಂತಿಕಾರಿಗಳು ಹುಟ್ಟಿಬಂದು ಭಾರತಮ್ಮನ್ನ ಸೇವೆ ಮಾಡಿದ್ದಾರೆ. ಅದಕ್ಕೆಲ್ಲ ಸಾವರ್ಕರ್‌ ಕಾರಣರು. ದೇಶ ಸಾವರ್ಕರ ಬಗ್ಗೆ ಮಿಡಿಯುವಾಗ ಕಾಂಗ್ರೆಸ್ಸಿಗರು ಹುಚ್ಚು ಹೇಳಿಕೆ ಕೊಡೋದನ್ನ ನಿಲ್ಲಿಸಿಲ್ಲ. ಇವರಿಗೆ ಇನ್ನೂ ಜ್ಞಾನೋದಯವಾಗಿಲ್ಲ ಎಂದು ತಿವಿದರು.

ಸಾವರ್ಕರ್‌ ತಾವೇ ತಾವಾಗಿ ಸ್ವಾತಂತ್ರ್ಯ ವೀರ ಎಂಬ ಬಿರುದು ಇಟುಕೊಂಡಿದ್ದಾರೆಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಅವರಲ್ಲ ಇಟ್ಟುಕೊಂಡಿದ್ದು. ಅತ್ರೆ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ದೇಶದ ಜನತೆ ಅವರಿಗೆ ಈ ವೀರ ಬಿರುದು ಪ್ರದಾನ ಮಾಡಿದರು. ಹಂಗೇನಾದರೂ ತಾವೇ ಬಿರುದು ಇಟ್ಟುಕೊಂಡವರು ಈ ದೇಶದಲ್ಲಿ ಒಬ್ಬರೆ ಅವರು ನೆಹರು. ಹೆಸರಿನ ಜೊತೆಗೇ ತಾವೇ ಚಾಚಾ ಅಂತ ಸೇರಿಸಿಕೊಂಡವರು ಎಂದು ಗೇಲಿ ಮಾಡಿದರು.

ಈಗಿನ ಕಾಂಗ್ರೆಸ್‌ ಮೂಲ ಕಾಂಗ್ರೆಸ್‌ ಅಲ್ಲ, ಇಂದಿರಾ ಕಾಂಗ್ರೆಸ್‌, ಐಎನ್‌ಸಿ ಎಂದು ಆಗಿ ಕುಂತಿದೆ. ಹ್ಯೂಮ್‌ ಎಂಬ ಬ್ರಿಟೀಷ ಅದಿಕಾರಿ ಸ್ಥಾಪಿಸಿದ ಪಕ್ಷವೇ ಈ ಗತಿಗೆ ಬಂದಿದೆ. ಇವರನ್ನು ಹೀಗೆ ಮುಂಜುವರಿಯಲು ಬಿಟ್ಟರೆ ದೇಶವನ್ನೇ ಅಧೋಗತಿಗೆ ತಳ್ಳೋದು ನಿಸ್ಚಿತ ಎಂದ ಸೂಲಿಬೆಲೆ ಸಾವರ್ಕರ್‌ ಅವರಂತಹ ಮಹಾನ್‌ ದೇಶಭಕ್ತರಿಂದಲೇ ಭಾರತ ಇಹಂದು ದಶವಾಗಿ ಉಳಿಯಿತು. ಸ್ವಾತಂತ್ರ್ಯ ಪಡೆಯಿತು. ಹಿಂದು ಸಮಾಜದ ಉನ್ನತ ಮೌಲ್ಯ ಎತ್ತಿ ಹಿಡಿದ ಸಾವರ್ಕರ್‌ ಬಗ್ಗೆ ಕೆಟ್ಟದಾಗಿ ಯಾರಾದರೂ ಮಾತನಾಡಿದರೆ ಸಹಿಸೋಉ ಸಾಧ್ಯವೇ ಇಲ್ಲ ಎಂದರು.

ವಿವಿಧ ಟ್ರೆಸ್ಟ್,ಪ್ರತಿಷ್ಠಾನಗಳಿಗೆ ಅಧ್ಯಕ್ಷ- ಸದಸ್ಯರನ್ನ ನೇಮಿಸಿದ ಸರ್ಕಾರ, ಸೂಲಿಬೆಲೆ ತಿರಸ್ಕಾರ

ಇಲ್ಲಿನ ಬಹಮನಿ ಕೋಟೆ ಪಕ್ಕವೇ ಬೃಹತ್‌ ಪೆಂಡಾಲ್‌ ಹಾಕಿ ಸಮಾರಂಭ ಆಯೋಜಿಸಲಾಗಿತ್ತು. ಬಿಗಿ ಪೊಲೀಸ್‌ ಬಂದೋಬಸ್‌್ತ ಇತ್ತು. 21 ದಿನಗಳ ಗಣಪತಿ ವಿಸರ್ಜನೆ ಮಂಗಳವಾರ ನಡೆಯಲಿದೆ. ವೇದಿಕೆಯಲ್ಲಿ ನಾಗೇಂದ್ರ ಕಬಾಡೆ, ಚಂದು ಪಾಟೀಲ್‌, ನಿತಿನ್‌ ಗುತ್ತೇದಾರ್‌, ಜಗದೀಶ ಕಟ್ಟೀಮನಿ, ರಾಮು ರೆಡ್ಡಿ, ಅಶೋಕ ಮಾನ್ಕರ್‌, ಶಿವರಾಜ, ಶ್ವಿನ ಉಆರ್‌, ಪ್ರಶಾಂತ ಗುಡ್ಡಾ, ಸತೀಶ ಮಾಹೂರ್‌, ಉಮೇಶ, ಮಹಾದೇವ ಬೆಳಮಗಿ, ವಿಶ್ವನಾಥ, ಶ್ರೀಶೈಲ, ಭಾರ್ಗವಿ ಇದ್ದರು.

Follow Us:
Download App:
  • android
  • ios