Kannada

ರಾಹುಲ್ ಗಾಂಧಿ ಆಸ್ತಿ ಎಷ್ಟು? ಆದಾಯದ ಮೂಲ ಯಾವುದು?

Kannada

ರಾಹುಲ್ ಗಾಂಧಿ ಒಟ್ಟು ಆಸ್ತಿ ಎಷ್ಟಿದೆ?

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮ ರಾಜಕೀಯದ ಜೊತೆಗೆ ಆಸ್ತಿ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಅವರ ನಿವ್ವಳ ಆಸ್ತಿ ಮೌಲ್ಯ ಎಷ್ಟು ಅಂತ ತಿಳಿಯೋಣ.
Image credits: Getty
Kannada

ಚುನಾವಣಾ ಅಫಿಡವಿಟ್ ಪ್ರಕಾರ ರಾಹುಲ್ ಆಸ್ತಿ 20.39 ಕೋಟಿ ರೂ.

2024ರ ಲೋಕಸಭಾ ಚುನಾವಣಾ ಅಫಿಡವಿಟ್ ಪ್ರಕಾರ, ರಾಹುಲ್ ಗಾಂಧಿ ಸುಮಾರು 20.39 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇದು 2019ಕ್ಕೆ ಹೋಲಿಸಿದರೆ ಸುಮಾರು 5 ಕೋಟಿ ರೂಪಾಯಿ ಹೆಚ್ಚು.
Image credits: Getty
Kannada

ಐದು ವರ್ಷಗಳಲ್ಲಿ ಆಸ್ತಿ ಎಷ್ಟು ಹೆಚ್ಚಾಯ್ತು?

2019ರಲ್ಲಿ ರಾಹುಲ್ ಗಾಂಧಿ ಅವರ ಒಟ್ಟು ಆಸ್ತಿ 15.88 ಕೋಟಿ ರೂಪಾಯಿ ಇತ್ತು. ಅಂದರೆ, ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿಯಲ್ಲಿ ಗಣನೀಯ ಏರಿಕೆ ಕಂಡಿದೆ.
Image credits: X
Kannada

ರಾಹುಲ್ ಬಳಿ ನಗದು, ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ?

ಕುತೂಹಲಕಾರಿ ವಿಷಯ ಅಂದ್ರೆ, ರಾಹುಲ್ ಗಾಂಧಿ ಕೈಯಲ್ಲಿ ಕೇವಲ 55 ಸಾವಿರ ರೂಪಾಯಿ ನಗದು ಇದೆ ಎಂದು ಘೋಷಿಸಿದ್ದಾರೆ. ಇನ್ನು, ಎರಡು ಬ್ಯಾಂಕ್ ಖಾತೆಗಳಲ್ಲಿ ಸುಮಾರು 26.25 ಲಕ್ಷ ರೂಪಾಯಿ ಠೇವಣಿ ಇದೆ.
Image credits: Getty
Kannada

ರಾಹುಲ್ ಗಾಂಧಿಗೆ ಸಿಗುವ ಸಂಬಳ ಎಷ್ಟು?

ಸಂಸದರಾಗಿ ರಾಹುಲ್ ಗಾಂಧಿಗೆ ಸಂಬಳ, ಕ್ಷೇತ್ರ ಭತ್ಯೆ ಹಾಗೂ ಇತರೆ ಸೌಲಭ್ಯಗಳೆಲ್ಲ ಸೇರಿ ಪ್ರತಿ ತಿಂಗಳು ಸುಮಾರು 3.30 ಲಕ್ಷ ರೂ. ಸಿಗುತ್ತದೆ. ಅಂದರೆ, ವಾರ್ಷಿಕವಾಗಿ ಸುಮಾರು 39.60 ಲಕ್ಷ ರೂಪಾಯಿ ಆದಾಯ.
Image credits: Getty
Kannada

ಶೇರು, ಮ್ಯೂಚುವಲ್ ಫಂಡ್‌ನಲ್ಲೂ ಭರ್ಜರಿ ಹೂಡಿಕೆ

ರಾಹುಲ್ ಗಾಂಧಿ 25 ಕಂಪನಿಗಳಲ್ಲಿ ಸುಮಾರು 4.33 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. 7 ಮ್ಯೂಚುವಲ್ ಫಂಡ್‌ಗಳಲ್ಲಿ ಅವರ ಹೂಡಿಕೆ ಸುಮಾರು 3.81 ಕೋಟಿ ರೂಪಾಯಿ. 15 ಲಕ್ಷ ಮೌಲ್ಯದ ಗೋಲ್ಡ್ ಬಾಂಡ್‌ ಇದೆ.

Image credits: Getty
Kannada

ವಿಮೆ, ಚಿನ್ನಾಭರಣ ಹಾಗೂ ಇತರೆ ಹೂಡಿಕೆಗಳು

ವಿಮಾ ಪಾಲಿಸಿಗಳಲ್ಲಿ ಸುಮಾರು 61.52 ಲಕ್ಷ ರೂಪಾಯಿ ಜಮೆ ಮಾಡಿದ್ದಾರೆ. ಇನ್ನು, ಚಿನ್ನ ಮತ್ತು ಆಭರಣಗಳ ಮೌಲ್ಯ ಸುಮಾರು 4.20 ಲಕ್ಷ ರೂಪಾಯಿ ಎಂದು ತಿಳಿಸಿದ್ದಾರೆ. ಒಟ್ಟಾರೆ ಚರಾಸ್ತಿ ಮೌಲ್ಯ ಸುಮಾರು 9.24 ಕೋಟಿ ರೂಪಾಯಿ.
Image credits: Getty
Kannada

11.15 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಎಲ್ಲೆಲ್ಲಿದೆ?

ದೆಹಲಿಯ ಮೆಹ್ರೌಲಿಯಲ್ಲಿರುವ ಸುಲ್ತಾನ್‌ಪುರ ಗ್ರಾಮದಲ್ಲಿ ಕೃಷಿ ಭೂಮಿ ಹೊಂದಿದ್ದಾರೆ. ಇದನ್ನು ಅವರು ಪ್ರಿಯಾಂಕಾ ಗಾಂಧಿ ಜೊತೆ ಸೇರಿ ಖರೀದಿಸಿದ್ದಾರೆ. ಗುರುಗ್ರಾಮದಲ್ಲಿ 9 ಕೋಟಿ ರೂ. ಮೌಲ್ಯದ ಕಚೇರಿ ಸ್ಥಳವಿದೆ.

Image credits: Getty
Kannada

ರಾಹುಲ್ ಗಾಂಧಿ ಬಳಿ ಸ್ವಂತ ಕಾರು ಇದೆಯೇ?

ಅಫಿಡವಿಟ್ ಪ್ರಕಾರ, ರಾಹುಲ್ ಗಾಂಧಿ ಹೆಸರಲ್ಲಿ ಯಾವುದೇ ಕಾರು ಇಲ್ಲ. ಒಟ್ಟಾರೆಯಾಗಿ, ಅವರ ಅಂದಾಜು ನಿವ್ವಳ ಆಸ್ತಿ ಮೌಲ್ಯ ಸುಮಾರು 25 ಕೋಟಿ ರೂಪಾಯಿ. ಇದರಲ್ಲಿ ಹೆಚ್ಚಿನ ಪಾಲು ಹೂಡಿಕೆ ಮತ್ತು ಆಸ್ತಿಗಳಿಂದಲೇ ಬರುತ್ತದೆ.
Image credits: Getty

'ಬೈಗನ್' ಅಂದ್ರೆ ಬದನೇಕಾಯಿ ಅಲ್ಲ! ಏನಿದು ಹೈದರಾಬಾದಿ ಭಾಷೆಯ ವಿಶಿಷ್ಟ ಶೈಲಿ?

ಯುಪಿ ಸಿಎಂ ಯೋಗಿಯ ನೆಚ್ಚಿನ ಸಂತ ಸತುವಾ ಬಾಬಾ ಯಾರು? ₹3 ಕೋಟಿ ಕಾರಲ್ಲಿ ಪ್ರಯಾಣ!

ಗಾಂಧಿ ಕುಟುಂಬಕ್ಕೆ ಸೇರ್ಪಡೆಯಾಗಲಿರೋ Aviva Baig ಯಾರು? ಸಾಧನೆ ಏನು?

ವಿದೇಶದಲ್ಲಿ ಪಾಸ್‌ಪೋರ್ಟ್ ಕಳೆದುಹೋದರೆ ತಕ್ಷಣ ಮಾಡಬೇಕಾದ ಕೆಲಸವಿದು, ತಿಳ್ಕೊಳ್ಳಿ!